Seetharama: ಭಾರ್ಗವಿ ಕುದಿಯುತ್ತಿರುವ ಮನದಲ್ಲಿದ್ದ ಕೋಪ ಸತ್ಯಜಿತ್ ಎದುರು ಸ್ಫೋಟ

By Poorva

ಅಶೋಕ ಸಿಇಒ ಪಟ್ಟ ಸ್ವೀಕಾರ ಮಾಡಿದ್ದಾನೆ. ಸ್ವತಃ ರಾಮನೇ ಅಶೋಕನಿಗೆ ಸಿಇಓ ಪಟ್ಟವನ್ನು ಭಾರ್ಗವಿ ಹಾಗೂ ವಿಶ್ವದ ಎದುರೇ ನೀಡುತ್ತಾನೆ. ಭಾರ್ಗವಿ ಈ ಬಾರಿ ನನಗೆ ಆಫೀಸಿನ ಎಲ್ಲಾ ಜವಾಬ್ದಾರಿ ಸಿಕ್ಕಿಬಿಡುತ್ತದೆ ಎನ್ನುವ ಖುಷಿಯಲ್ಲಿ ಇರುತ್ತಾಳೆ. ಹಾಗೆಯೇ ನನಗೆ ಈ ಬಾರಿ ಸಿಇಓ ಪಟ್ಟವನ ಸ್ವತಃ ರಾಮನೆ ನೀಡುತ್ತಾನೆ ಎನ್ನುವ ಭರವಸೆಯಲ್ಲಿ ಇರುತ್ತಾಳೆ. ಆದರೆ ಭಾರ್ಗವಿಯ ಭರವಸೆ ಹುಸಿಯಾಗಿದೆ.

ಆಕೆಯ ವೈರಿಯಾಗಿರುವಂತಹ ಅಶೋಕನಿಗೆ ಆ ಜವಾಬ್ದಾರಿ ಸ್ವತಃ ಆತನ ಗೆಳೆಯ ರಾಮನೇ ನೀಡುತ್ತಾನೆ. ಭಾರ್ಗವಿಗೆ ಇದು ಬಿಸಿ ತುಪ್ಪದ ಹಾಗೆ ಆಗುತ್ತದೆ. ಇನ್ನು ಮೇಲೆ ನನ್ನನ್ನೇ ಭಾರ್ಗವಿ ಟಾರ್ಗೆಟ್ ಮಾಡುತ್ತಾಳೆ ಎನ್ನುವುದು ಅಶೋಕನಿಗೆ ತಿಳಿದಿರುತ್ತದೆ. ರಾಮನ ಚಿಕ್ಕ ವಯಸ್ಸಿನಿಂದಲೂ ಚೆನ್ನಾಗಿ ಬಲ್ಲವನು ಅಶೋಕ . ಈ ವಿಚಾರ ಭಾರ್ಗವಿಗೂ ಕೂಡ ತಿಳಿದಿರುತ್ತದೆ ರಾಮನಿಂದ ಅಶೋಕನನ್ನು ಹೇಗಾದರೂ ಮಾಡಿ ದೂರ ಮಾಡಬೇಕು ಎನ್ನುವುದು ಭಾರ್ಗವಿಯ ಯೋಚನೆಯಾಗಿತ್ತು.

Seetharama kannada serial Written Update on january 24th episode

ಆದರೆ ಆ ಯೋಚನೆಯು ಇದೀಗ ತಲೆಕೆಳಗಾಗಿದೆ. ಆಫೀಸ್‌ನಲ್ಲಿರುವ ಕೆಲಸದವರಿಗೆ ಅಶೋಕನೇ ಇನ್ನು ಮೇಲೆ ಬಾಸ್ ಎನ್ನುವ ಹಾಗೆ ರಾಮ ಅನೌನ್ಸ್ ಮಾಡುತ್ತಾನೆ. ಇದನ್ನು ಕೇಳಿದ ಪ್ರಿಯಾಗೆ ಬಹಳ ಖುಷಿಯಾಗುತ್ತದೆ. ಇನ್ನು ಅಶೋಕನಿಗೆ ಸೀತಾ ಕೂಡ ಶುಭಾಶಯವನ್ನೂ ಹೇಳುತ್ತಾಳೆ. ಆದರೆ ರಾಮನ ಮುಖ ನೋಡಿದ ಸೀತಾ ಸುಮ್ಮನಾಗಿ ಬಿಡುತ್ತಾಳೆ ರಾಮ ಮನದಲ್ಲಿ ಅಂದುಕೊಳ್ಳುತ್ತಾರೆ. ಸೀತಾ ನೀವು ನನ್ನನ್ನ ಅರ್ಥ ಮಾಡಿಕೊಳ್ಳುವುದಾದರೂ ಯಾವಾಗ ಎಂದು ಮನದಲ್ಲಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಿದ್ದಾನೆ.

ಮನದಲ್ಲಿ ಕೋಪವಿದ್ದರು, ನಗು ಮುಖದ ನಾಟಕ ಆಡುತ್ತಿರುವ ಭಾರ್ಗವಿ

ಇನ್ನು ಭಾರ್ಗವಿ ಮನೆಗೆ ಹೋಗಿ ಎಲ್ಲರಿಗೂ ಅಶೋಕನಿಗೆ ಸಿಕ್ಕಂತಹ ಹೊಸ ಜವಾಬ್ದಾರಿಯ ಬಗ್ಗೆ ಅಶೋಕನಿಗೆ ಶುಭಾಶಯಗಳು ಹೇಳುತ್ತಾಳೆ ಇದನ್ನೆಲ್ಲ ನೋಡಿದ ಸತ್ಯಜಿತ್‌ಗೆ ಬಹಳ ಜೋರಾಗಿ ನಗು ಬರುತ್ತಿದೆ.. ಸತ್ಯಜಿತ್ ವಿಶ್ವನ ಬಳಿ ಮೆತ್ತಗೆ ಕೇಳುತ್ತಾನೆ ನಿನ್ನ ಹೆಂಡತಿಗೆ ಯಾವಾಗ ಇಂತಹ ಒಳ್ಳೆಯ ಬುದ್ಧಿ ಬಂದಿರುವುದು ಎಂದು ಕೇಳಿದಾಗ ಅದೇ ನನಗೆ ತಿಳಿಯುತ್ತಿಲ್ಲ ಎಂದು ವಿಶ್ವ ಹೇಳುತ್ತಾನೆ. ಇನ್ನು ಸತ್ಯಜಿತ್ ಮಾತ್ರ ಭಾರ್ಗವಿಗೆ ಸರಿಯಾಗಿಯೇ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾನೆ.

ವಿಶ್ವಜಿತ್ ಮಾತಿಗೆ ಭಾರ್ಗವಿ ಕಣ್ಣಲ್ಲೇ ನೀರು

ಹಾಗೆಯೇ ಭಾರ್ಗವಿಯ ಮುಖಕ್ಕೆ ಹೊಡೆದ ಹಾಗೆ ಮಾತನಾಡುತ್ತಾನೆ. ಸತ್ಯಜಿತ್ ಹೇಳುತ್ತಾರೆ. ಭಾರ್ಗವಿ ನೀನು ಸುಳ್ಳಿನ ಕೋಟೆಯನ್ನೇ ಕಟ್ಟಿದಿಯ ಆದರೆ ಆ ಸುಳ್ಳಿನ ಕೋಟೆ ಯಾವಾಗ ಬಿದ್ದು ಹೋಗುತ್ತದೆ ಎಂದು ಹೇಳಲು ಸಾಧ್ಯವಾಗದು.ಆದಷ್ಟು ಬೇಗ ಆ ದಿನಗಳು ಹತ್ತಿರ ಕೂಡ ಬರ್ತಾ ಇದೆ ರಾಮನಿಗೆ ನಿನ್ನ ನಿಜ ಬಣ್ಣ ತಿಳಿಯಲು ದಿನ ಹತ್ತಿರ ಬರುತ್ತಿದೆ. ಕೋಪದಿಂದ ಕೊತ ಕೊತ ಅಂತ ಕುದಿಯುತ್ತ ಇದ್ದೀರಾ.. ಅಲ್ಲಿ ಆದಂತಹ ಎನೌನ್ಸ್ ಮೆಂಟ್ ನೋಡಿ ನಿಮ್ಮ ರೋಷ ದ್ವೇಷ ಎಲ್ಲಾ ಡಬಲ್ ಆಗಿ ಬಿಟ್ಟಿದೆ.

Seetharama kannada serial Written Update on january 24th episode

ರಾಮನ ನಿರ್ಧಾರವನ್ನು ಹಾಡಿ ಹೊಗಳಿದ ಸತ್ಯಜಿತ್

ರಾಮ ಇವತ್ತು ಬೆಸ್ಟ್ ಡಿಸಿಷನ್ ತೆಗೆದುಕೊಂಡು ಇದ್ದಾನೆ. ನಮ್ಮ ಅಶೋಕ ಇದೀಗ ದೇಸಾಯಿ ಗ್ರೂಪ್ ಆಫ್ ಕಂಪನಿಯ ಸಿಇಓ ಆಗಿರುವುದು, ನನಗೆ ಬಹಳ ಖುಷಿ ಆಗಿದೆ ಎಂದು ಹೇಳುತ್ತಾರೆ . ನಿನ್ನ ಸುಳ್ಳಿನ ಮೇಲೆ ನಿಂತಿರುವ ಗೋಪುರ ನುಚ್ಚು ನೂರಾಗುವ ದಿನ ಹತ್ತಿರದಲ್ಲಿ ಇದೆ ಎಂದು ಭಾರ್ಗವಿ ಗೆ ಬುದ್ದಿ ಮಾತು ಹೇಳುತ್ತಾನೆ.

More from Filmibeat

English summary
Seetharama serial january 24th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X