Seetharama ; ಸಿಹಿ ಕಿಡ್ನ್ಯಾಪ್ ಪ್ಲಾನ್ : ಮತ್ತೆ ಭೇಟಿಯಾದ ಪ್ರೇಮಿಗಳು..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ತನ್ನ ತಂದೆ ತಾಯಿಯ ಸುಖ ಮತ್ತು ಖುಷಿಯನ್ನು ಬಯಸುತ್ತಿದ್ದಾಳೆ. ಅವರಿಬ್ಬರು ಚೆನ್ನಾಗಿರಬೇಕು ಎಂದು ಪ್ಲಾನ್ ಮಾಡುತ್ತಿದ್ದಾಳೆ. ಈಗ ಶಾಲೆ ಬಿಟ್ಟ ಕೂಡಲೇ ಮನೆಯಿಂದ ದೂರ ಎಲ್ಲಿಗಾದರೂ ಹೋಗಬೇಕು ಎಂದುಕೊಂಡಿರುವ ಸಿಹಿ ತನ್ನ ಪಾಡಿಗೆ ತಾನು ದಾರಿಯಲ್ಲಿ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದಾಳೆ.ಅದೇ ದಾರಿಯಲ್ಲಿ ಮೂರ್ತಿ ತಾತ ಆಗಮಿಸಿದ್ದು ಸಿಹಿಯನ್ನು ತಮ್ಮ ವಠಾರಕ್ಕೆ ಕರೆದುಕೊಂಡು ಹೋಗಿದ್ದಾನೆ. ಇತ್ತ ಸಿಹಿಯನ್ನು ಹುಡುಕುತ್ತಿದ್ದ ಸೀತಾ-ರಾಮ್ ಗೆ ಫೋನ್ ಮಾಡಿ ಸಿಹಿ ತಮ್ಮ ವಠಾರದಲ್ಲಿರುವ ಬಗ್ಗೆ ಹೇಳಿದ್ದಾರೆ.

ಅಜ್ಜಿ ಮನೆಯಲ್ಲಿ ಉಳಿದ ಸಿಹಿ

ಸಿಹಿ ಮೌನವಾಗಿ ಅಜ್ಜಿ ಮನೆಯಲ್ಲಿರುತ್ತಾಳೆ. ಅಜ್ಜಿ ಚಿತ್ರಾನ್ನ ಮಾಡಿ ತಿನ್ನಿಸಿದರೂ ಸ್ವಲ್ಪವೇ ಸ್ವಲ್ಪ ತಿಂದು ಸಾಕು ಎಂದಿದ್ದಾಳೆ. ಸಿಹಿ ಮೌನವಾಗಿರಲು ಕಾರಣ ತಿಳಿಯದ ಅಜ್ಜಿ-ತಾತ ಒಂದೆರಡು ಬಾರಿ ಪ್ರಶ್ನೆ ಮಾಡಿ ಸುಮ್ಮನಾಗಿದ್ದಾರೆ. ಇನ್ನು ಸಿಹಿಗೆ ಶ್ರೇಯಸ್ ಏನಾಯ್ತು. ಯಾಕೆ ಒಬ್ಬಳೇ ಇಲ್ಲಿಗೆ ಬಂದೆ ಎಂದು ಕಾರಣ ಕೇಳುತ್ತಾನೆ. ಆದರೆ ಸಿಹಿ ಯಾವ ಸತ್ಯವನ್ನೂ ಬಾಯಿ ಬಿಡದೇ ಏನೂ ಇಲ್ಲ ಕಣೋ ಸುಮ್ಮನೆ ಎಂದು ನೆಪ ಹೇಳಿ ಸುಮ್ಮನಾಗುತ್ತಾಳೆ. ಇನ್ನು ಶಾಂತಜ್ಜಿ ಮತ್ತು ಮೂರ್ತಿ ತಾತ ಸಿಹಿಯನ್ನು ಅವರ ಮನೆಗೆ ಬಿಡಲು ಆಟೋದಲ್ಲಿ ಕರೆದುಕೊಂಡು ಬರುತ್ತಾರೆ. ಅಜ್ಜಿ ತಾತ ಬಂದಿದ್ದಕ್ಕೆ ಸೂರಿಗೂ ಖುಷಿಯಾಗುತ್ತದೆ.

seetharama-serial-02-august-episode-written-update

ಕೋಪ ಮಾಡಿಕೊಂಡಿರುವ ವಿಶ್ವ

ಆಫೀಸಿನಲ್ಲಿ ಸೀತಾಳಿಗೆ ಕಂಪನಿಯ ಬೋರ್ಡ್ ಮೆಂಬರ್‌ನಾಗಿ ಮಾಡಿರುವ ವಿಚಾರವನ್ನು ರಾಮ್ ಹೇಳುತ್ತಾನೆ. ಈ ವಿಚಾರ ಕೇಳಿದಾಗ ಸೂರಿ ಮಾತ್ರವೇ ಖುಷಿ ಪಟ್ಟಿದ್ದು, ಮತ್ತೆಲ್ಲರೂ ಮನದೊಳಗೆ ಸಿಟ್ಟು ಮಾಡಿಕೊಳ್ಳುತ್ತಾರೆ. ಇದೇನು ಹೀಗಾಯ್ತು ಎಂದು ವಿಶ್ವನಿಗೆ ಕೋಪ ಬರುತ್ತದೆ. ತಾನು ಇಷ್ಟು ವರ್ಷದಿಂದ ಈ ಮನೆಯಲ್ಲಿದ್ದರೂ, ಈ ಮನೆಯ ಮಗನಾಗಿದ್ದರೂ ಸಿಗದ ಅಧಿಕಾರ, ನಿನ್ನೆ ಮೊನ್ನೆ ಬಂದು ಸೀತಾಳಿಗೆ ಸಿಕ್ಕಿದೆ ಎಂದು ಬೇಸರಗೊಳ್ಳುತ್ತಾನೆ. ಕೇಕ್ ಕಟ್ ಮಾಡಿ ಸೀತಾಳಿಗೆ ಸಿಕ್ಕ ಪ್ರಮೋಷನ್ ನ ಎಂಜಾಯ್ ಮಾಡುತ್ತಾರೆ.

ಸಿಹಿ ಕಿಡ್ನ್ಯಾಪ್ ಗೆ ಪ್ಲಾನ್

ವಿಶ್ವನಿಗೆ ಭಾರ್ಗವಿ ಚಾಡಿ ಹೇಳುತ್ತಾಳೆ. ನಿನ್ನ ಮಗ ತಿರಪೆ ಎತ್ತಬಾರದು ಅಂತ ಇದ್ದರೆ ಈಗಲಾದರೂ ಬುದ್ಧಿ ಕಲಿ. ಅಪ್ಪ ಇಲ್ಲದ ಆ ಸಿಹಿಗೆ ಇಡೀ ಮನೆಯ ಆಸ್ತಿ ಹೋಗಲು ಬಿಡಬೇಡ. ಅವಳನ್ನು ಕಿಡ್ನ್ಯಾಪ್ ಮಾಡಿ ಬಿಡು. ಆಗ ಸಿಹಿಗೆ ಇಲ್ಲಿ ಸೇಫ್ ಅಲ್ಲ ಎಂದು ಬೋರ್ಡಿಂಗ್ ಶಾಲೆಗೆ ಹಾಕುತ್ತಾರೆ. ಸಿಹಿ ರಾಮ್ ನಿಂದ ದೂರ ಇದ್ದರೆ, ಆಸ್ತಿ ನಮಗೆ ಉಳಿದುಕೊಳ್ಳುತ್ತೆ. ಇದೇ ಸಂದರ್ಭದಲ್ಲಿ ಸಿಹಿ ತಂದೆಯನ್ನು ಹುಡುಕಿದರೆ ರಾಮ್ ಕೂಡ ಎಲ್ಲವನ್ನೂ ಕೈ ಬಿಡುತ್ತಾನೆ. ಆಗ ಆಸ್ತಿಯನ್ನು ನಾವೇ ಅನುಭವಿಸಬಹುದು ಎಂದು ಹೇಳಿಕೊಡುತ್ತಾಳೆ. ವಿಶ್ವನಿಗೂ ಭಾರ್ಗವಿ ಹೇಳಿದ್ದು ಸರಿ ಎನಿಸುತ್ತದೆ.

seetharama-serial-02-august-episode-written-update

ಮತ್ತೆ ಅಂಜಲಿ ಬಾಳಲ್ಲಿ ಆರ್ ಪಿ ಎಂಟ್ರಿ

ಇನ್ನು ಅಶೋಕ್ ಮತ್ತು ಪ್ರಿಯಾ ಅಂಜಲಿ ಬಗ್ಗೆ ಯೋಚಿಸುತ್ತಿರುತ್ತಾರೆ. ಅಂಜಲಿ ಕೂಡ ಮನೆಗೆ ಹೋಗಿ ಬರಬೇಕು ಎಂದುಕೊಳ್ಳುತ್ತಾಳೆ. ಆದರೆ, ಹೊಸ ರೋಗಿಗೆ ಅಂಜಲಿ ಚಿಕಿತ್ಸೆ ನೀಡಬೇಕಿರುತ್ತದೆ. ಫೈಲ್ ತೆಗೆದು ನೋಡಿದರೆ ಅದು ಬೇರೆಯಾರೂ ಅಲ್ಲ. ರಾಮು ಹೆಸರಲ್ಲಿ ಅಂಜಲಿಗೆ ಮೋಸ ಮಾಡಿದ ರುದ್ರಪ್ರತಾಪ್. ಇದನ್ನು ನೋಡಿ ಅಂಜಲಿ ಶಾಕ್ ಆಗುತ್ತಾಳೆ. ರುದ್ರಪ್ರತಾಪ್ ನನ್ನು ಭೇಟಿ ಆಗಿ ಹೇಗಿದ್ದೀರಾ. ಯಾಕೆ ಹೀಗೆ ಮಾಡಿದ್ದು ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ ಆರ್ ಪಿ ತನ್ನನ್ನು ಒಂಟಿಯಾಗಿ ಬದುಕಲು ಬಿಡಿ ಎನ್ನುತ್ತಾನೆ. ಈಗ ಅಂಜಲಿ ಮತ್ತು ಆರ್ ಪಿ ಭೇಟಿಯಾಗಿದ್ದು ಇಬ್ಬರೂ ಮದುವೆಯಾಗುತ್ತಾರಾ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X