Seetharama ; ಭಾರ್ಗವಿ ಮಾಡಿದ ಪ್ಲಾನ್‌ಳೆಲ್ಲವೂ ಉಲ್ಟಾ : ಸಿಹಿ ಸಾವಿಗೆ ಕಾದು ಕುಳಿತ ರುದ್ರಪ್ರತಾಪ್..!
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಬೇಕು ಎಂದು ಈಗಾಗಲೇ ಶ್ಯಾಮ್ ಮತ್ತು ಶಾಲಿನಿ ಹೋರಾಡಿ ಸೋತಿದ್ದಾರೆ. ಬಾಡಿಗೆ ತಾಯಿ ಆದರೂ ಕೂಡ ಸಿಹಿಗೆ ಸೀತಾಳೇ ಸರಿ ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ಸಿಹಿ ಕೂಡ ಸೀತಮ್ಮ ಬೇಕು ಎಂದು ಹಠ ಹಿಡಿದು ಸೀತಾ-ರಾಮನ ಮಡಿಲು ಸೇರಿದ್ದಾಳೆ. ಆದರೆ, ಈಗ ಭಾರ್ಗವಿಗೆ ಎಲ್ಲಿ ಆಸ್ತಿಯೆಲ್ಲಾ ಸಿಹಿ ಪಾಲಾಗುತ್ತೋ ಎಂದು ಗಾಬರಿಯಾಗಿದ್ದಾಳೆ. ಇದೇ ಸಂದರ್ಭದಲ್ಲಿ ಸಿಹಿ ವಿಚಾರದಲ್ಲಿ ಮತ್ತೆ ಸಮಸ್ಯೆ ಆಗಬಾರದು ಎಂದು ಸೂರಿ ಮೊಮ್ಮಗಳನ್ನು ದತ್ತು ಪಡೆಯುವ ಐಡಿಯಾ ಕೊಟ್ಟಿದ್ದಾನೆ. ರಾಮ್ ಇದೇ ಸರಿ ಎಂದು ಸಿಹಿಯನ್ನು ದತ್ತು ಪಡೆಯಲು ಮುಂದಾಗಿದ್ದಾನೆ.
ದತ್ತು ಪತ್ರಕ್ಕೆ ಸಹಿ ಹಾಕಿದ ಶ್ಯಾಮ್-ಶಾಲಿನಿ
ಸೀತಾಳ ಹುಟ್ಟು ಹಬ್ಬದ ದಿನವೇ ಸಿಹಿಯನ್ನು ದತ್ತು ಪಡೆಯುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಸೀತಾ ಸಿಹಿಯನ್ನು ದತ್ತು ಪಡೆಯುವ ಕೆಲಸ ಸುಸೂತ್ರವಾಗಿ ನಡೆಯಬೇಕು. ಇದಕ್ಕೆ ಯಾವುದೇ ರೀತಿಯ ಅಡ್ಡಿಯಾಗಬಾರದು ಎಂದು ಬೆಳಗ್ಗೆ ಎದ್ದು, ಹುಟ್ಟು ಹಬ್ಬ ಆಚರಿಸಿಕೊಳ್ಳದೇ ಲಾಯರ್ ಆಫೀಸಿಗೆ ತೆರಳಿದ್ದಾಳೆ. ಲಾಯರ್ ಕಚೇರಿಗೆ ಶ್ಯಾಮ್ ಮತ್ತು ಶಾಲಿನಿ ಕೂಡ ಬಂದಿದ್ದಾರೆ. ದತ್ತು ಪತ್ರಗಳಿಗೆ ಸಹಿ ಹಾಕಿದ್ದು, ಯಾವತ್ತೂ ಸಿಹಿಗಾಗಲೀ ನಿಮಗಾಗಲೀ ತೊಂದರೆ ಕೊಡುವುದಿಲ್ಲ. ಆದರೆ, ಆಗಾಗ ಸಿಹಿಯನ್ನು ನೋಡಲು, ಅವಳ ಜೊತೆಗೆ ಸಮಯ ಕಳೆಯಲು ಅವಕಾಶ ಮಾಡಿಕೊಡಿ, ನಾವು ನಡೆದುಕೊಂಡ ರೀತಿಗೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ. ರಾಮ್ ಸಿಹಿಗೆ ಇನ್ನು ಮುಂದೆ ಯಾವುದೇ ಸಮಸ್ಯೆ ಆಗಬಾರದು ಎಂದು ಈ ಪತ್ರಗಳನ್ನು ಮಾಡಿಸಿದ್ದೇವೆ ಎಂದು ಸ್ಪಷ್ಟನೆ ನೀಡುತ್ತಾನೆ.

ಭಾರ್ಗವಿ ಪ್ಲಾನ್ ಗೆ ಬಿತ್ತು ಕಲ್ಲು..!
ಭಾರ್ಗವಿ ಸಿಹಿಯನ್ನು ದತ್ತು ಪಡೆಯುವ ಕೆಲಸ ಆಗಬಾರದು. ಹಾಗೇನಾದರೂ ನಡೆದರೆ, ಆಸ್ತಿಯೆಲ್ಲಾ ಸಿಹಿ ಪಾಲಾಗುತ್ತದೆ. ತನ್ನ ಮಗ ಅನಿಕೇತನ್ ಗೆ ಏನೂ ಸಿಗುವುದಿಲ್ಲ ಎಂದು ಪ್ಲಾನ್ ಗಳ ಮೇಲೆ ಪ್ಲಾನ್ ಮಾಡುತ್ತಾಳೆ. ರುದ್ರಪ್ರತಾಪ್ ಜೊತೆ ಸೇರಿ ರಾಮ್, ಸೀತಾ ಮತ್ತು ಸಿಹಿ ಲಾಯರ್ ಆಫೀಸಿಗೆ ಹೋಗದಂತೆ ತಡೆಯಲು ಪ್ಲಾನ್ ಮಾಡಿರುತ್ತಾಳೆ. ಆದರೆ ಅದು ಫೇಲ್ ಆದಾಗ ಭಾರ್ಗವಿ ಸೂರಿಗೆ ಮಾತ್ರೆಯನ್ನು ಕೊಟ್ಟು ಆರೋಗ್ಯದಲ್ಲಿ ಏರುಪೇರಾಗುವಂತೆ ಮಾಡುತ್ತಾಳೆ. ಈಗಲೇ ರಾಮ್ ನನ್ನು ಮನೆಗೆ ಕರೆಸಿ ಎಂದು ಅರಚುತ್ತಾಳೆ. ಆದರೆ, ಅಶೋಕ್ ಬೇಡ ಅವರು ಆಸ್ಪತ್ರೆಗೆ ಬರಲಿ ಎಂದು ಸೂರಿಯನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಭಾರ್ಗವಿ ಮಾಡಿದ ಪ್ಲಾನ್ ಗಳು ಅಟ್ಟರ್ ಫ್ಲಾಪ್ ಆಗಿವೆ.
ಡಾಕ್ಯುಮೆಂಟ್ ಮಿಸ್ ಮಾಡಿದ್ದೇ ತಪ್ಪಾಯ್ತಾ..?
ಇನ್ನು ಶ್ಯಾಮ್ ಮತ್ತು ಶಾಲಿನಿ ಹೊರಟ ಬಳಿಕ ಮತ್ತೊಂದು ಡಾಕ್ಯೂಮೆಂಟ್ ಮರೆತಿದ್ದೀರಾ ಎಂದು ಲಾಯರ್ ಹೇಳಿದ್ದು, ಅದನ್ನು ತರಲೆಂದು ಸೀತಾ ಮತ್ತು ಸಿಹಿ ವಾಪಸ್ ಮನೆಗೆ ಹೊರಟಿದ್ದಾರೆ. ಕ್ಯಾಬ್ ನಲ್ಲಿ ಮನೆಗೆ ಹೋಗುವ ಸೀತಾ ಮತ್ತು ಸಿಹಿಯನ್ನು ಆರ್ ಪಿ ಫಾಲೋ ಮಾಡಿದ್ದಾನೆ. ಭಾರ್ಗವಿ ಕೂಡ ಯಾವುದೇ ಕಾರಣಕ್ಕೂ ಸಿಹಿ ಬದುಕಿ ವಾಪಸ್ ಮನೆಗೆ ಬರಬಾರದು ಎಂದು ಹೇಳಿದ್ದಾಳೆ.
ಸಿಹಿ ಸಾವಿಗೆ ಕಾದು ಕುಳಿತ ರುದ್ರಪ್ರತಾಪ್
ಸಿಹಿ ಸಾವಿಗಾಗಿ ರುದ್ರಪ್ರತಾಪ್ ಮತ್ತು ಭಾರ್ಗವಿ ಇಬ್ಬರೂ ಕಾದು ಕುಳಿತಿದ್ದಾರೆ. ನಾಳಿನ ಸಂಚಿಕೆಯ ಪ್ರೊಮೋ ಪ್ರಕಾರ ಸಿಹಿ ಅಪಘಾತದಲ್ಲಿ ಸಾಯುವುದು ಪಕ್ಕಾ ಆಗಿದೆ. ಆದರೆ, ಮುಂದೆ ಏನೆಲ್ಲಾ ಆಗುತ್ತೆ ಎಂಬ ಕುತೂಹಲವೂ ಮೂಡಿದೆ. ಇನ್ನು ಸಿಹಿಯನ್ನು ಧಾರಾವಾಹಿಯಲ್ಲಿ ಸಾಯಿಸುತ್ತಿರುವುದು ವೀಕ್ಷಕರಲ್ಲಿ ಬೇಸರವಂತೂ ಇದೆ. ಆದರೂ ಸಿಹಿ ಇಲ್ಲದ ಧಾರಾವಾಹಿಯ ಕಥೆ ಹೇಗೆ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











