Seetharama ; ವರಸೆ ಬದಲಿಸಿದ ಸೀತಾ : ಮತ್ತೊಂದು ಮಗು ಮಾಡಿಕೊಳ್ಳಲು ನಿಜವಾಗಿಯೂ ಒಪ್ಪಿದ್ದಾಳಾ..?
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ತಾನು ಬೋರ್ಡಿಂಗ್ ಸ್ಕೂಲ್ ಗೆ ಹೋಗಲು ಭಾರ್ಗವಿ ಅವರೇ ಹೇಳಿಕೊಟ್ಟಿದ್ದು. ನಾನು ದೂರ ಇದ್ದರೆ ನೀವು ಖುಷಿಯಾಗಿರುತ್ತೀರಾ ಎಂದು ಹೇಳಿದರು ಎನ್ನುತ್ತಾಳೆ.ಈ ಮಾತು ಕೇಳಿದ ಸೀತಾ ಮತ್ತು ರಾಮ್ ಮನದಲ್ಲಿ ಗೊಂದಲಗಳು ಹೆಚ್ಚಾಗಿವೆ. ರಾಮ್ ಈ ವಿಚಾರವನ್ನು ಅಶೋಕ್ ಬಳಿ ಹಂಚಿಕೊಂಡಿದ್ದಾನೆ. ಚಿಕ್ಕಿ ಯಾಕೆ ಹೀಗೆ ಮಾಡಿದರು ಎಂಬುದು ಅರ್ಥವಾಗುತ್ತಿಲ್ಲ ಎಂದು ಯೋಚಿಸುತ್ತಿದ್ದಾನೆ.ಸೀತಾ ಭಾರ್ಗವಿ ಮನಸ್ಸಿನಲ್ಲಿ ಬೇರೆ ಯಾವುದೋ ಉದ್ದೇಶ ಇರಬಹುದು. ಆದರೆ, ಸಿಹಿ ಮನಸ್ಸಲ್ಲಿ ಈ ರೀತಿಯ ವಿಚಾರಗಳನ್ನೆಲ್ಲಾ ಯಾಕೆ ತುಂಬುತ್ತಿದ್ದಾರೆ ಎಂಬ ಚಿಂತೆ ಕಾಡುತ್ತಿದೆ.
ಪ್ರಿಯಾಳ ಆರೋಗ್ಯದ ಬಗ್ಗೆ ಸತ್ಯ ಹೇಳಿದ ಅಶೋಕ್
ಇತ್ತ ಪ್ರಿಯಾಳಿಗೆ ಅಶೋಕ್ ಬ್ರೆಸ್ಟ್ ಕ್ಯಾನ್ಸರ್ ಬಂದಿರುವ ವಿಚಾರವನ್ನು ಅರಗಿಸಿಕೊಳ್ಳಲೂ ಆಗದೇ, ಪ್ರಿಯಾ ಬಳಿ ಸತ್ಯ ಹೇಳಲೂ ಆಗದೇ ಒದ್ದಾಡುತ್ತಿದ್ದಾನೆ. ಪ್ರೇಮಾ ಪದೇ ಪದೇ ಅಶೋಕ್ ಬಳಿ ಯಾಕೆ ಹೀಗಿದ್ದೀರಾ.? ನನ್ನ ಮಗಳ ಬಗ್ಗೆ ನೀವು ಯಾವುದೋ ಸತ್ಯವನ್ನು ಮುಚ್ಚಿಡುತ್ತಿದ್ದೀರಾ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾಳೆ. ಆಗ ಅಶೋಕ್ ತನ್ನ ಮನದಲ್ಲೂ ದುಃಖ ಇಟ್ಟುಕೊಳ್ಳಲಾಗದೇ ಸತ್ಯ ಹೇಳುತ್ತಾನೆ. ಪ್ರಿಯಾಗೆ ಬಂದಿರುವ ಕ್ಯಾನ್ಸರ್ ಅನ್ನು ಓಡಿಸಲು ನಾವೆಲ್ಲಾ ಜೊತೆಯಾಗಿರಬೇಕು. ಅವಳನ್ನು ಖುಷಿಯಿಂದ ನೋಡಿಕೊಳ್ಳಬೇಕು. ಈ ಕಷ್ಟದಿಂದ ನಾವು ಹೊರ ಬರಲೇಬೇಕು ಎನ್ನುತ್ತಾನೆ. ಈ ಮಾತನ್ನು ಕೇಳುತ್ತಿದ್ದಂತೆಯೇ ಪ್ರೇಮಾ ಮತ್ತು ಅಂಜಲಿ ಇಬ್ಬರೂ ಶಾಕ್ ಆಗುತ್ತಾರೆ.

ಮಗಳ ಸ್ಥಿತಿಗೆ ಪಶ್ಚಾತಾಪ ಪಟ್ಟ ಪ್ರೇಮಾ
ನನ್ನ ಮಗಳು ಹೂವಿನಂತಹ ಮನಸ್ಸಿನವಳು. ಅವಳು ಯಾರಿಗೂ ಕೆಟ್ಟದ್ದನ್ನು ಬಯಸೋಳಲ್ಲ. ಅವಳಿಗ್ಯಾಕೆ ದೇವರು ಇಂತಹ ದೊಡ್ಡ ಶಿಕ್ಷೆಯನ್ನು ಕೊಟ್ಟ. ಇದೆಲ್ಲವೂ ನಾನು ಮಾಡಿದ ಪಾಪ. ನಾನು ಮಾಡಿದ್ದು, ನನ್ನ ಮಗಳು ಅನುಭವಿಸುವಂತಾಗಿದೆ ಎಂದು ಗೋಳಾಡುತ್ತಾಳೆ. ಅಂಜಲಿಯನ್ನು ನನ್ನನ್ನು ಕ್ಷಮಿಸಿ ಬಿಡು. ನಾನು ನಿನ್ನ ಮೇಲೆ ಹೊಟ್ಟೆ ಕಿಚ್ಚಿನಿಂದ ಧ್ವೇಷ ಕಾರಿದೆ. ಈ ಮನೆಯಿಂದ ಹೊರಗೆ ಹೋಗುವಂತೆ ಮಾಡಿದೆ. ಇನ್ಮುಂದೆ ನೀನು ಏನು ಹೇಳುತ್ತೀಯೋ ಅದನ್ನೇ ಕೇಳುತ್ತೇನೆ ಎಂದು ಪಶ್ಚಾತಾಪದಿಂದ ಬಳಲುತ್ತಿದ್ದಾಳೆ. ಅಂಜಲಿ ಪ್ರೇಮಾಳಿಗೆ ಸಮಾಧಾನ ಮಾಡುತ್ತಾಳೆ. ನಾವೆಲ್ಲರೂ ಪ್ರೀತಿಯಿಂದ ಅತ್ತಿಗೆ ಜೊತೆಗೆ ಇರೋಣ ಎಂದು ಹೇಳುತ್ತಾಳೆ.
ಭಾರ್ಗವಿ ಬಳಿ ವರಸೆ ಬದಲಿಸಿದ ಸೀತಾ
ಇನ್ನು ಸೀತಾ ಸಮಾಧಾನವಾಗಿ ಪರಿಸ್ಥಿತಿಯನ್ನು ಎದುರಿಸಲು ಮುಂದಾಗಿದ್ದಾಳೆ. ಸಿಹಿ ಬಳಿ ಹಾಗೆಲ್ಲಾ ಭಾರ್ಗವಿ ಅತ್ತೆ ಯಾಕೆ ನಡೆದುಕೊಳ್ಳುತ್ತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಲು ಮುಂದಾಗಿದ್ದಾಳೆ. ಸಿಹಿ ತಮ್ಮ ಬೇಕು ಎಂದು ಪೂಜೆ ಮಾಡಿದ್ದರೆ, ಸಿಹಿ ಆಸೆ ಆದಷ್ಟು ಬೇಗ ನೆರವೇರಲಿ ಎಂದು ಆರತಿ ಬೆಳಗಿದ್ದಾಳೆ. ಸಿಹಿ ಪುಷ್ಪಾರ್ಚನೆ ಮಾಡಿದ ಹೂವನ್ನು ಮನೆಯವರಿಗೆಲ್ಲಾ ಹಂಚಿದ್ದಾಳೆ. ಭಾರ್ಗವಿ ಸೀತಾಳೇ ಮತ್ತೊಂದು ಮಗುವನ್ನು ಒಪ್ಪಿಕೊಂಡಿದ್ದಾಳಾ ಎಂಬ ಅನುಮಾನ ಕಾಡಿದೆ. ಪ್ರಶ್ನೆ ಮಾಡಿದ್ದಕ್ಕೆ, ಸಿಹಿ ಆಸೆಯನ್ನು ನೆರವೇರಿಸೋಣ. ಇನ್ನೊಂದು ಮಗು ಆಗೋದ್ರಿಂದ ತೊಂದರೆ ಏನು ಇಲ್ಲ ಅಲ್ವಾ ಎನ್ನುತ್ತಾಳೆ.

ಭಾರ್ಗವಿ ಆಟಕ್ಕೆ ಸಿಗುತ್ತಾ ಟ್ವಿಸ್ಟ್
ಸೀತಾಳ ಮಾತುಗಳು ಭಾರ್ಗವಿಗೆ ಶಾಕ್ ತರುತ್ತದೆ. ಇದೇನು ಎಲ್ಲವೂ ಬದಲಾಗುತ್ತಿದೆ. ತನ್ನ ಪ್ಲಾನ್ ಎಲ್ಲವೂ ಠುಸ್ ಆಗುತ್ತಿದೆ ಎಂದು ಯೋಚಿಸುತ್ತಿದ್ದಾಳೆ. ಭಾರ್ಗವಿ ಈಗ ತನ್ನ ಆಟಕ್ಕೆ ಟ್ವಿಸ್ಟ್ ತರಬೇಕು. ದಾರಿ ಬದಲಿಸಬೇಕು ಎಂದು ಅಂದುಕೊಳ್ಳುತ್ತಿದ್ದಾಳೆ. ಇತ್ತ ಸೀತಾ ಭಾರ್ಗವಿ ಮುಖದಲ್ಲಿನ ಬದಲಾವಣೆಗಳನ್ನು ನೋಡಿ, ಅತ್ತೆ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬ ಸತ್ಯವನ್ನು ತಿಳಿದುಕೊಳ್ಳಬೇಕು ಎಂದು ಯೋಚಿಸುತ್ತಾಳೆ. ಈಗ ಸೀತಾ ಟ್ರ್ಯಾಕ್ ಅನ್ನು ಹಿಡಿದಿದ್ದು, ಭಾರ್ಗವಿ ಇನ್ಮುಂದೆ ಪ್ರತಿಯೊಂದರಲ್ಲೂ ಸೋಲುವುದು ಪಕ್ಕಾ ಆಗಿದೆ.


Click it and Unblock the Notifications











