Seetharama ; ಸೂರಿ ಬಳಿ ಅಶೋಕ್ ಮಾತನಾಡಿದ್ದೇನು..? ಸುಬ್ಬಿಯನ್ನು ಭೇಟಿ ಮಾಡುತ್ತಾಳಾ ಸಿಹಿ..?
ಸೀತಾರಾಮ ಧಾರಾವಾಹಿಯಲ್ಲಿ ಸುಬ್ಬಿ ಶ್ರೀರಾಮ್ ದೇಸಾಯಿ ಮನೆಯಲ್ಲಿ ಕಳ್ಳತನ ಮಾಡಬೇಕು ಎಂದು ಮನೆಗೆ ನುಗ್ಗಿದ್ದಾಳೆ. ಟೆರೆಸ್ ಮೂಲಕ ಮನೆಗೆ ಬಂದ ಸುಬ್ಬಿ ನೇರವಾಗಿ ಸೀತಾ ರೂಮಿಗೆ ಬಂದಿದ್ದಾಳೆ. ಇಡೀ ರೂಮ್ ನಲ್ಲಿ ಕುಣಿದು ಕುಪ್ಪಳಿಸುತ್ತಾಳೆ. ನಂತರ ರಾಮ್ ಇಟ್ಟ ಸಿಹಿ ಚೈನ್ ತೆಗೆದುಕೊಂಡ ಸುಬ್ಬಿ ತಾನೇ ಕೊರಳಿಗೆ ಧರಿಸಿಕೊಳ್ಳುತ್ತಾಳೆ. ನಂತರ ರೂಮ್ ಗೆ ಸೀತಾ ಬಂದಿದ್ದು, ಸುಬ್ಬಿ ಗಾಬರಿಯಾಗಿದ್ದಾಳೆ. ಸೀತಾಳನ್ನು ಕಂಡು ಸುಬ್ಬಿ ಮೈಮರೆಯುತ್ತಾಳೆ. ಕೊನೆಗೆ ಸೀತಾ ನಿದ್ದೆ ಕಣ್ಣಿನಲ್ಲಿ ಸುಬ್ಬಿಗೆ ಮುತ್ತುಕೊಟ್ಟು ಮುದ್ದಾಡುತ್ತಾಳೆ. ಇದೆಲ್ಲವೂ ಸುಬ್ಬಿ ಮನದಲ್ಲಿ ಹೊಸ ಅನುಭವವನ್ನು ನೀಡುವಂತೆ ಮಾಡುತ್ತದೆ.
ಸುಬ್ಬಿ ಕಣ್ಣಿಗೆ ಬಿದ್ದ ಸಿಹಿ
ಕನ್ನಡಿ ಮೇಲೆ ಅಮ್ಮ ಎಂದು ಲಿಪ್ ಸ್ಟಿಕ್ ನಲ್ಲಿ ಸುಬ್ಬಿ ಬರೆದಿರುತ್ತಾಳೆ. ಇನ್ನು ಸಿಹಿ ರೂಮಿಗೆ ಬಂದು ಸುಬ್ಬಿಯನ್ನು ಕಂಡು ಕಳ್ಳಿ ಕಳ್ಳಿ ಎಂದು ಕೂಗುತ್ತಾಳೆ. ಸುಬ್ಬಿಗೆ ಈ ಧ್ವನಿ ಕೇಳಿಸುತ್ತದೆ. ತಕ್ಷಣವೇ ತಿರುಗಿ ನೋಡಿದರೆ ಸುಬ್ಬಿ ಕಣ್ಣಿಗೆ ಸಿಹಿ 'ಕಾಣುತ್ತಾಳೆ. ಇನ್ನು ಸಿಹಿ ಕೂಗಿದ್ದಕ್ಕೆ ಮನೆಯವರೆಲ್ಲಾ ಬರುತ್ತಾರೆ ಎಂಬ ಆತಂಕದಲ್ಲಿ ಅಲ್ಲಿಂದ ಓಡಿ ಹೋಗುತ್ತಾಳೆ. ಸಿಹಿ ಸ್ವಲ್ಪ ಸಮಯದ ಬಳಿಕ ಯೋಚಿಸುತ್ತಾಳೆ. ನಾನು ಸತ್ತಿದ್ದಾಗಿದೆ. ಆದರೆ, ಈ ವಿಚಾರ ಸೀತಮ್ಮನಿಗೆ ಅರ್ಥ ಆಗುತ್ತಿಲ್ಲ. ಇನ್ನು ನಾನು ಯಾರ ಕಣ್ಣಿಗೂ ಕಾಣುತ್ತಿಲ್ಲ. ಆದರೆ ಈಗ ಕಳ್ಳಿ ಕಣ್ಣಿಗೆ ನಾನು ಕಾಣಿಸಿಕೊಂಡಿದ್ದೇನೆ. ಅಲ್ಲದೇ, ನನ್ನ ಧ್ವನಿಯೂ ಅವಳಿಗೆ ಕೇಳಿಸಿತು ಎಂಬುದನ್ನು ಸಿಹಿ ಅರ್ಥ ಮಾಡಿಕೊಂಡಿದ್ದಾಳೆ.

ಸೂರಿ ಬಳಿ ಪಿನ್ ಇಟ್ಟ ಅಶೋಕ್
ಇತ್ತ ಸುಬ್ಬಿ ಸೀತಮ್ಮನ ವಾತ್ಸಲ್ಯಕ್ಕೆ ಮಾರು ಹೋಗಿದ್ದಾಳೆ. ಇಡೀ ದಿನ ಅಮ್ಮನ ನೆನಪಲ್ಲಿ ಮುಳುಗಿ ಹೋಗಿರುತ್ತಾಳೆ. ಇನ್ನು ಸೀತಮ್ಮ ತನ್ನ ನಿಜವಾದ ಅಮ್ಮ ಎಂಬ ಭಾವದಲ್ಲೇ ಇದ್ದಾಳೆ. ಇದೆಲ್ಲವೂ ಸುಬ್ಬಿ ತಾತನ ಮನದಲ್ಲಿ ಆತಂಕವನ್ನು ಸೃಷ್ಟಿಸಿದೆ. ಇದರ ನಡುವೆಯೇ ಅಶೋಕ್ ಸರಿಯಾದ ಸಮಯ ನೋಡಿಕೊಂಡು ಸೂರಿ ಬಳಿ ಮಾತನಾಡಿದ್ದಾನೆ. ಸಿಹಿ ಸಾವು ಸಹಜ ಅಲ್ಲ ಅನಿಸುತ್ತಿದೆ. ಬೇಕಂತಲೇ ಯಾರೋ ಕೊಲೆ ಮಾಡಿಸಿದಂತೆ ಕಾಣುತ್ತಿದೆ ಎಂಬ ಹುಳ ಬಿಟ್ಟಿದ್ದಾನೆ. ಸೂರಿ ಕೂಡ ಸಿಹಿಯನ್ನು ಕಳೆದುಕೊಂಡ ದುಃಖದಲ್ಲಿದ್ದು, ಸಿಹಿ ಕೊಲೆ ಮಾಡಿಸಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ. ಈ ಮೂಲಕ ಅಶೋಕ್ ಸಿಹಿ ಸಾವಿಗೆ ಭಾರ್ಗವಿಯೇ ಕಾರಣ, ಅದು ಸಹಜವಾಗಿಯೇ ಮನೆಯಲ್ಲಿರುವವರಿಗೆ ಗೊತ್ತಾಗಲಿ ಎಂದು ಈ ಕೆಲಸ ಮಾಡಿದ್ದಾನೆ.
ಸಂಕಟದಲ್ಲಿ ಸಿಲುಕಿರುವ ಶ್ರೀರಾಮ್ ದೇಸಾಯಿ
ಸೀತಾಳಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು ಸೀತಾ ಜೊತೆಗೆ ಸಿಹಿ ಬದುಕಿದ್ದಾಳೆ ಎಂಬ ರೀತಿಯಲ್ಲೇ ಮಾತನಾಡಿದ್ದು, ಸಿಹಿಯಂತಹ ಮಗು ಸೀತಾ ಬಾಳಲ್ಲಿ ಬಾರದೇ ಹೋದರೆ ಸೀತಾ ಸರಿ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿರುವ ರಾಮ್ ಸಂಕಟದಲ್ಲಿ ಸಿಲುಕಿದ್ದಾನೆ. ಈಗ ಸಿಹಿಯಂತಹ ಮಗುವನ್ನು ನಾನು ಎಲ್ಲಿಂದ ಕರೆದುಕೊಂಡು ಬರಲಿ ಎಂದು ಚಿಂತೆಗೀಡಾಗಿದ್ದಾನೆ. ಒಂದು ಕಡೆ ಸೀತಾಳನ್ನು ಸಂಬಾಳಿಸಬೇಕು. ಇನ್ನೊಂದು ಕಡೆ ಮನೆಯವರನ್ನು ಸಮಾಧಾನ ಪಡಿಸಬೇಕು. ಇದರ ನಡುವೆಯೇ ತನ್ನನ್ನು ತಾನು ನೋಡಿಕೊಳ್ಳಬೇಕು.
ಸುಬ್ಬಿಯನ್ನು ಮನೆಗೆ ಕರೆತರುತ್ತಾಳಾ ಸಿಹಿ..?
ಈಗ ಸಿಹಿ ಮತ್ತು ಸುಬ್ಬಿ ಎದುರಾಗಿದ್ದಾಗಿದೆ. ಸಿಹಿ ಸುಬ್ಬಿ ತನ್ನಂತೆಯೇ ಇದ್ದಾಳೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅದರ ಜೊತೆಗೆ ಅವಳನ್ನು ಮನೆಗೆ ಕರೆ ತಂದು ತಮನ್ನ ತಾಯಿಯ ಪರೀಸ್ಥಿತಿ ಸುಧಾರಿಸುವಂತೆ ಮಾಡಬೇಕಿದೆ. ಇದರಿಂದ ಭಾರ್ಗವಿಯ ಬಣ್ಣವನ್ನು ಸುಬ್ಬಿ ಮೂಲಕ ಸಿಹಿ ಹೊರ ತರಬೇಕಿದೆ. ಇಡೀ ಕಥೆಯೇ ಸದ್ಯ ಸಿಹಿಯ ಆಲೋಚನೆ ಹಾಗೂ ನಿರ್ಧಾರದ ಮೇಲೆ ನಿಂತಿದೆ.


Click it and Unblock the Notifications











