Seetharama ; ಎಲ್ಲರ ಎದುರು ಹಸಿ ಸುಳ್ಳು ಹೇಳಿದ ಸೀತಾ-ರಾಮ ..!
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮ್ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಎರಡೂ ಕುಟುಂಬದವರು ಮಂಟಪಕ್ಕೆ ಆಗಮಿಸಿದ್ದಾರೆ. ಅಂಜಲಿ ಕೂಡ ರುದ್ರಪ್ರತಾಪ್ ಬಗ್ಗೆ ಎಲ್ಲವನ್ನೂ ಮರೆತು ಹಾಯಾಗಿದ್ದಾಳೆ. ಅಣ್ಣನ ಮದುವೆ ಸಮಾರಂಭದಲ್ಲಿ ಸಂಭ್ರಮ ಪಡುತ್ತಾ, ಸಿಹಿ ಜೊತೆಗೆ ಆಡಿಕೊಂಡಿದ್ದಾಳೆ.ದೇಸಾಯಿ ಕುಟುಂಬದ ಮದುವೆಯ ಶಾಸ್ತ್ರಗಳು ಶುರುವಾಗಿದ್ದು, ಮನೆಯ ಹಿರಿಯ ಮಗನಿಗೆ ಎಲ್ಲಾ ಶಾಸ್ತ್ರ, ಅಧಿಕಾರ ಅನ್ವಯಿಸುತ್ತದೆ ಎಂದು ಸೂರಿ ಹೇಳಿದ್ದಾರೆ.
ರಾಮ್-ಸೀತಾ ಅದ್ಧೂರಿ ಮದುವೆ
ಮದುವೆ ಸುಸೂತ್ರವಾಗಿ ನಡೆಯಲಿ ಎಂದು ರಾಮ್ ಕಳಸಕ್ಕೆ ಪೂಜೆ ಮಾಡಿದ್ದಾನೆ. ರಾಮ್ ಮದುವೆ ನಡೆಯುತ್ತಿರುವ ಸ್ಥಳ ನೋಡಲು ಅರಮನೆಯಂತಿದೆ. ಒಂದೊಂದು ರೂಮ್ ಕೂಡ ರಾಜಾ-ರಾಣಿಯರ ಕೋಣೆಗಳಂತೆ ಅದ್ಧೂರಿಯಾಗಿ ಸಿಂಗಾರಗೊಂಡಿವೆ. ಇದನ್ನೆಲ್ಲಾ ನೋಡಿ ಸೀತಾ ಶಾಕ್ ಆಗಿದ್ದಾಳೆ. ಸಿಂಪಲ್ ಆಗಿ ಬದುಕುತ್ತಿದ್ದ ಸೀತಾ ಬಾಳಲ್ಲಿ ಊಹೆಗೂ ಮೀರಿದ ಸಿರಿವಂತಿಕೆ ಆಗಮಿಸಿದ್ದು, ಅದ್ಧೂರಿತನವನ್ನು ಸಂಭ್ರಮಿಸುವುದಕ್ಕಿಂತಲೂ ಅದರ ಭಾರವನ್ನು ಹೊರುವುದಕ್ಕೆ ಸೀತಾ ಕಂಗಾಲಾಗಿದ್ದಾಳೆ. ಇನ್ನು ಸೀತಾಳ ಅಣ್ಣ ಹಾಗೂ ಅತ್ತಿಗೆ ಸುಲೋಚನಾ ಅಂತೂ ತಾವೇ ಖರ್ಚು ಮಾಡಿ ಮದುವೆ ಮಾಡುತ್ತಿರುವವರಂತೆ ನಡೆದುಕೊಂಡಿದ್ದಾರೆ. ಅರೇಂಜ್ ಮೆಂಟ್ಸ್ ಎಲ್ಲವನ್ನು ಕಂಡು ಪ್ರಿಯಾ ಹಾಗೂ ಇತರರು ಖುಷಿಪಟ್ಟಿದ್ದಾರೆ. ಸೀತಾ ಒಳ್ಳೆಯ ಮನೆ ಸೇರುತ್ತಿದ್ದಾಳೆ ಎಂಬ ಸಮಾಧಾನವಿದೆ.

ಸಿಹಿಗೆ ಕೊಟ್ಟ ಮುತ್ತು ಸೀತಾಳನ್ನು ತಲುಪಿತು
ರಾಮ್ ನನ್ನು ನೋಡಲು ಬಂದ ಸಿಹಿಗೆ ಪ್ರೀತಿಯಿಂದ ಮುತ್ತಿನ ಸುರಿಮಳೆಗೈದಿದ್ದಾನೆ. ಸಿಹಿ ತನಗೆ ಊಟ ಹೆಚ್ಚಾದರೆ ಸೀತಮ್ಮನಿಗೆ ಕೊಡುತ್ತೇನೆ. ಇನ್ನು ನೀನು ಇಷ್ಟೋಂದು ಮುತ್ತು ಕೊಟ್ಟರೆ ಏನು ಮಾಡಲಿ ಎಂದು ಕೇಳುತ್ತಾಳೆ. ಇದನ್ನು ಕೂಡ ಸೀತಮ್ಮನಿಗೆ ಕೊಟ್ಟು ಬಿಡುತ್ತೇನೆ ಎಂದು ಸೀದಾ ಸೀತಾಳ ಬಳಿ ಬಂದು ಮುತ್ತಿನ ಮಳೆಗರೆದಿದ್ದಾಳೆ. ಏನಾಯ್ತೇ ಎಂದು ಸೀತಾ ಕೇಳಿದ್ದಕ್ಕೆ ನನ್ ಫ್ರೆಂಡ್ ಕೊಟ್ಟಿದ್ದು ಎಂದು ಹೇಳುತ್ತಾ ಮಾತು ಮುಗಿಸುವ ಮುನ್ನವೇ ಪ್ರಿಯಾ ಅಪಾರ್ಥ ಮಾಡಿಕೊಂಡಿದ್ದಾಳೆ. ಪ್ರಿಯಾ ಮತ್ತು ಅಶೋಕ್ ಇಬ್ಬರೂ ರಾಮ್ ಹಾಗೂ ಸೀತಾಳನ್ನು ರೇಗಿಸುತ್ತಿದ್ದಾರೆ.
ಸೀತಾಳಿಗೆ ಸೀರೆ ಉಡಿಸಿದ ರಾಮ್
ಭಾರ್ಗವಿ ಬೇರೆ ರಾಮ್ ಮತ್ತು ಸೀತಾ ಯಾವುದೇ ಕಾರಣಕ್ಕೂ ಒಬ್ಬರನ್ನೊಬ್ಬರು ನೋಡಬಾರದು, ಮಾತನಾಡಬಾರದು ಎಂದು ಕಂಡೀಷನ್ ಹಾಕಿದ್ದಾಳೆ. ಹೀಗಾಗಿ ರಾಮ್ ಮತ್ತು ಸೀತಾ ಕದ್ದು ಮುಚ್ಚಿ ಭೇಟಿ ಮಾಡುವಂತಾಗಿದೆ. ಸುಲೋಚನಾ ಸೀತಾಳಿಗೆ ಅರ್ಧಂಬರ್ಧ ಸೀರೆ ಉಡಿಸಿ ಹೋಗಿದ್ದಾಳೆ. ಇದೇ ಸಮಯಕ್ಕೆ ರಾಮ್ ಸೀತಾ ರೂಮಿಗೆ ಬಂದಿದ್ದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೀತಾಳಿಗೆ ಸೀರೆ ಉಡಿಸಿದ್ದಾನೆ. ಇಬ್ಬರೂ ಭೇಟಿಯಾದ ಕ್ಷಣವನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು ಎಂದು ಮಾತನಾಡಿಕೊಂಡಿದ್ದಾರೆ. ಭಾವಿ ಹೆಂಡತಿಗೆ ರಾಮ್ ಕಾಲ್ಗೆಜ್ಜೆಯನ್ನು ತೋಡಿಸಿದ್ದಾನೆ.

ಮದುವೆಗೂ ಮುನ್ನವೇ ಸುಳ್ಳು ಹೇಳಿದ ಜೋಡಿಗಳು
ನಾಳೆ ಮದುವೆ ಇರುವುದರಿಂದ ಈ ಸಂಜೆ ಯಾರಿಗೂ ಬೋರ್ ಆಗಬಾರದು ಎಂದು ಪ್ರಿಯಾ ಮತ್ತು ಅಶೋಕ್ ಮೈಕ್ ಹಿಡಿದು ಎಲ್ಲರನ್ನೂ ಎಂಟರ್ ಟೈನ್ ಮಾಡುತ್ತಿದ್ದಾರೆ. ಅದರಲ್ಲೂ ಸೀತಾ ಮತ್ತು ರಾಮ್ ನನ್ನು ಪದೇ ಪದೇ ಕಾಲೆಳೆದಿದ್ದಾರೆ. ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಬಾರದು ಎಂದು ರೇಗಿಸುತ್ತಿದ್ದಾರೆ. ಭಾರ್ಗವಿ ಇದೇ ಸಂದರ್ಭದಲ್ಲಿ ಇಬ್ಬರಿಗೂ ರೂಲ್ಸ್ ಬ್ರೇಕ್ ಮಾಡಬಾರದು ಎಂದು ತಾಕೀತು ಮಾಡಿದ್ದಾಳೆ. ಆದರೆ, ರಾಮ್ ಮತ್ತು ಸೀತಾ ಈಗಾಗಲೇ ಭೇಟಿ ಮಾಡಿದ್ದು, ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಮಾತನಾಡಿದ್ದಾರೆ. ಆದರೆ, ಮನೆಯವರ ಮುಂದೆ ಸುಳ್ಳು ಹೇಳಿದ್ದಾರೆ. ಇಬ್ಬರೂ ರೂಲ್ಸ್ ಫಾಲೋ ಮಾಡುವುದಾಗಿ ನಂಬಿಸಿದ್ದಾರೆ.


Click it and Unblock the Notifications











