Seetharama ; ಶ್ಯಾಮ್ ಮನೆಗೆ ಹೊರಟ ಸಿಹಿ : ಗೊಂದಲದಲ್ಲಿರುವ ಸೀತಾ..!
ಸೀತಾರಾಮ ಧಾರಾವಾಹಿಯಲ್ಲಿ ಡಾ.ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಲು ಸೀತಾ ಕೂಡ ಹೋಗಿದ್ದು, ಇದೇ ಸಂದರ್ಭದಲ್ಲಿ ರಾಮ್ ಕೂಡ ಅಲ್ಲಿಗೆ ಬಂದಿದ್ದಾನೆ. ಇವತ್ತು ಏನೇ ಆಗಲೀ ರಾಮ್ ಬಳಿ ಸತ್ಯ ಹೇಳುತ್ತೇನೆ ಎಂದು ತೀರ್ಮಾನಿಸಿದ್ದಾಳೆ. ಆದರೆ, ರಾಮ್ ತನ್ನಷ್ಟಕ್ಕೆ ತಾನೇ ಅಪಾರ್ಥ ಮಾಡಿಕೊಂಡಿದ್ದು, ಶ್ಯಾಮ್ ಅವರ ಬಗ್ಗೆ ತಿಳಿದುಕೊಳ್ಳಲು ಬಂದಿದ್ದಾಳೆ ಎಂದು ಅಂದುಕೊಂಡಿದ್ದಾನೆ. ವೈದ್ಯರು ಕೂಡ ರಾಮ್ ಗೆ ಸತ್ಯ ಗೊತ್ತಿಲ್ಲ ಎಂಬ ಕಾರಣಕ್ಕೆ ಸಪೋರ್ಟಿವ್ ಆಗಿ ಮಾತನಾಡಿ ಕಳಿಸಿದ್ದಾರೆ. ಈಗ ಸೀತಾಳಿಗೆ ಮುಂದೇನು ಮಾಡುವುದು ಎಂಬುದೇ ಗೊತ್ತಾಗುತ್ತಿಲ್ಲ.
ಪ್ರಿಯಾಳಿಗೆ ಧೈರ್ಯ ಹೇಳಿದ ಸೀತಾ
ಇದೇ ವೇಳೆಗೆ ಅಶೋಕ್ ಮತ್ತು ಪ್ರಿಯಾ ಕಾರಿನಲ್ಲಿ ಹೋಗುವುದನ್ನು ನೋಡಿ ರಾಮ್ ಫಾಲೋ ಮಾಡಿಕೊಂಡು ಬರುತ್ತಾನೆ. ಇಬ್ಬರೂ ಹನಿಮೂನ್ ಗೆ ಹೋಗಿದ್ದಾರೆ ಎಂದು ತಿಳಿದರೆ, ಕ್ಯಾನ್ಸರ್ ಆಸ್ಪತ್ರೆಗೆ ಬಂದಿದ್ದಾರಲ್ಲ ಎಂದು ಅನುಮಾನಿಸುತ್ತಾನೆ. ಅಶೋಕ್ ರಾಮ್ ನನ್ನು ನೋಡಿ ಸತ್ಯ ಮುಚ್ಚಿಡಲಾಗದೇ ಪ್ರಿಯಾಳಿಗೆ ಬ್ರೆಸ್ಟ್ ಕ್ಯಾನ್ಸರ್ ಇರುವ ವಿಚಾರವನ್ನು ಹೇಳುತ್ತಾನೆ. ರಾಮ್ ಗೆ ಅಶೋಕ್ ಮೇಲೆ ಕೋಪವಿದ್ದರೂ ಕೂಡ ತೋರಿಸಿಕೊಳ್ಳಲಾಗದೇ ಸುಮ್ಮನಾಗುತ್ತಾನೆ. ಶೋಕನಿಗೆ ಸಮಾಧಾನ ಮಾಡುತ್ತಾನೆ. ಸೀತಾ ಕೂಡ ಪ್ರಿಯಾಳಿಗೆ ಸಮಾಧಾನ ಹೇಳುತ್ತಾಳೆ. ಆದರೆ, ಪ್ರಿಯಾ ಬಹಳ ಕಾನ್ಫಿಡೆನ್ಸ್ ನಿಂದ ಇದ್ದು, ಎಲ್ಲರಿಗೂ ಅವಳೇ ಧೈರ್ಯ ಹೇಳುತ್ತಾಳೆ.

ಕದ್ದು ಮನೆಗೆ ಬಂದ ಸತ್ಯಜಿತ್
ಇತ್ತ ಸತ್ಯಜಿತ್ ಹಲವು ದಿನಗಳ ಬಳಿಕ ಮನೆಗೆ ಬಂದಿದ್ದಾನೆ. ಯಾರಿಗೂ ಕಾಣಿಸಿಕೊಳ್ಳದಂತೆ ಮನೆಯವರನ್ನೆಲ್ಲಾ ನೋಡಿಕೊಂಡು ಹೋಗಬೇಕು ಎಂದು ಸತ್ಯ ಮನೆಗೆ ಬಂದಿರುತ್ತಾನೆ. ಆದರೆ, ವಿಶ್ವ ಮತ್ತು ಭಾರ್ಗವಿ ಸೀತಾ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾನೆ. ಸೀಥಾ ಹಿಂದೆ ಜನರನ್ನು ಬಿಟ್ಟಿರುವ ಭಾರ್ಗವಿ ತಾತನ ಬಳಿ ಸೀತಾ ಮನೆಯಲ್ಲಿ ಯಾರಿಗೂ ಹೇಳದೇ ಹೊರಗೆ ಹೋಗಿದ್ದಾಳೆ ಎಂದು ಚಾಡಿ ಹೇಳಿರುತ್ತಾನೆ. ಇದನ್ನು ಕೇಳಿಸಿಕೊಂಡ ಸತ್ಯ ಸಿಹಿಗೆ ಅಮ್ಮ ಮನೆಗೆ ಬಂದ ಕೂಡಲೇ ಎಲ್ಲಿಗೆ ಹೋಗಿದ್ದರು ಎಂಬುದನ್ನು ತಾತನ ಬಳಿ ಹೇಳುವಂತೆ ನೀನು ಮಾಡು ಎಂದು ಹೇಳಿಕೊಡುತ್ತಾನೆ. ಅಲ್ಲದೇ, ಮನೆಗೆ ಬಂದ ಶ್ಯಾಮ್ ಮತ್ತು ಶಾಲಿನಿಯನ್ನು ಕಂಡು ಸತ್ಯನಿಗೆ ಬೇಸರವಾಗುತ್ತದೆ.
ಶ್ಯಾಮ್ ಜೊತೆ ಹೊರಟ ಸಿಹಿ
ಶ್ಯಾಮ್ ಮತ್ತು ಶಾಲಿನಿ ಮನೆಗೆ ಬಂದು ರಾಮ್ ಮನೆಯವರನ್ನೆಲ್ಲಾ ತನ್ನ ಹೊಸ ಮನೆಗೆ ಇನ್ವೈಟ್ ಮಾಡುತ್ತಾನೆ. ಸಿಹಿ ಜೊತೆಗೆ ಖುಷಿ ಖುಷಿಯಾಗಿ ಮಾತನಾಡುತ್ತಾನೆ. ಅಲ್ಲದೇ, ಸಿಹಿ ನಾನು ನಿಮ್ಮ ಮನೆಗೆ ಬರುತ್ತೇನೆ ಎಂದು ಸಿಹಿ ಹಠ ಮಾಡಿಕೊಂಡು ಶ್ಯಾಮ್ ಮನೆಗೆ ಹೋಗುತ್ತಾಳೆ. ಇದನ್ನು ನೋಡಿದ ಸತ್ಯನಿಗೆ ಇಷ್ಟವಾಗುವುದಿಲ್ಲ. ಸಾಧನಾ ಬಳಿ ಸಿಹಿಯನ್ನು ವಾಪಸ್ ಮನೆಗೆ ಕರೆದುಕೊಂಡು ಬಾ. ಆ ಮನೆಯವರನ್ನು ನೋಡಿದರೆ, ಒಳ್ಳೆಯ ಜನ ಅನಿಸೊಲ್ಲ ಎಂದು ಹೇಳುತ್ತಾನೆ.
ಸಿಹಿ ಇಲ್ಲ ಎಂದು ಗಾಬರಿಯಾದ ಸೀತಾ
ಸಿಹಿ ತಮ್ಮ ಮನೆಗೆ ಬರುತ್ತಿರುವುದು ಶಾಳಿನಿಗೆ ಕೊಂಚವೂ ಇಷ್ಟವಿರುವುದಿಲ್ಲ. ಆದರೆ, ಮುಂದೆ ಒಂದು ದಿನ ಶಾಲಿನಿಗೆ ಸಿಹಿಯೇ ತಮ್ಮ ಮಗಳು ಎಂದು ಗೊತ್ತಾದರೆ ಏನು ಮಾಡುತ್ತಾಳೋ ಗೊತ್ತಿಲ್ಲ. ಇನ್ನು ಸೀತಾ ಮನ ಎಗೆ ಬಂದು ಎಷ್ಟು ಹೊತ್ತಾದರೂ ಸಿಹಿ ಕಾಣಿಸುವುದಿಲ್ಲ. ಆಗ ಸಾಧನಾ ಬಳಿ ಬಂದು ಸಿಹಿ ಎಲ್ಲಿ ಎಂದು ಕೇಳಿದ್ದಕ್ಕೆ ಶ್ಯಾಮ್ ಮನೆಗೆ ಹೋದಲು ಎಂದಾಗ ಸೀತಾಳಿಗೆ ಕೋಪ ಬರುತ್ತದೆ. ಇಷ್ಟೊತ್ತಿನಲ್ಲಿ ಅವಳ್ಯಾಕೆ ಅಲ್ಲಿಗೆ ಹೋಗಬೇಕಿತ್ತು ಎಂದು ಸೀತಾ ಸಿಟ್ಟು ಮಾಡಿಕೊಳ್ಳುತ್ತಾಳೆ.


Click it and Unblock the Notifications











