Seetharama ; ಸೂರಿ ಮನೆಗೆ ಬಂದ ಡಾ.ಅನಂತಲಕ್ಷ್ಮೀ : ಸೀತಾ-ಸಿಹಿ ರಹಸ್ಯ ಬಯಲಾಯ್ತಾ..?

By ಪ್ರಿಯಾ ದೊರೆ

ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಮತ್ತೊಂದು ಮಗುವನ್ನು ಮಾಡಿಕೊಳ್ಳಲು ಮನಸ್ಸು ಮಾಡಿರುವುದು ರಾಮ್ ಗೆ ಖುಷಿ ಜೊತೆಗೆ ಗೊಂದಲವೂ ಉಂಟಾಗಿದೆ. ಇನ್ನು ಅಶೋಕ್ ಪ್ರಿಯಾಳ ಬಗ್ಗೆಯೇ ಯೋಚಿಸುತ್ತಿದ್ದು, ರಾಮ್ ಸೂರಿ ತಾತನ ಹುಟ್ಟು ಹಬ್ಬಕ್ಕೆ ಆಹ್ವಾನಿಸಿದರೂ ಅಶೋಕ್ ಬರುವುದಿಲ್ಲ ಎಂದು ಹೇಳಿದ್ದಾನೆ. ಹೆಂಡತಿ ಜೊತೆಗೆ ಸಮಯ ಕಳೆಯಬೇಕು. ಹೊರಗೆ ಹೋಗುವ ಪ್ಲಾನ್ ಮಾಡಿದ್ದೀನಿ ಎಂದು ರಾಮ್ ಬಳಿ ಸುಳ್ಳು ಹೇಳುತ್ತಾನೆ. ರಾಮ್ ಅಶೋಕ್ ಮಾತನ್ನು ನಂಬಿ ಸುಮ್ಮನಾಗುತ್ತಾನೆ.

ಸೂರಿ ಹುಟ್ಟುಹಬ್ಬ ಆಚರಿಸಿದ ಮನೆಯವರು

ಸಿಹಿ ಮತ್ತು ಅನಿಕೇತನ್ ಇಬ್ಬರೂ ಒಂದಾಗಿದ್ದಾರೆ. ಸೂರಿ ತಾತನ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಡಿಫರೆಂಟ್ ಆಗಿ ಬಂದಿದ್ದಾರೆ. ಹೂ ಗುಚ್ಛ ಕೊಟ್ಟು ತಾತನಿಗೆ ವಿಶ್ ಮಾಡಿದ್ದಾರೆ. ಬಳಿಕ ನಗುತಾ ನಗುತಾ ಬಾಳು ನೀನು ನೂರು ವರುಷ ಎಂದು ಹಾಡಿ ಕುಣಿದು ಕುಪ್ಪಳಿಸಿದ್ದಾರೆ. ಇದನ್ನು ನೋಡಿ ಮನೆಯವರು ಕೂಡ ಸಂತಸಗೊಂಡಿದ್ದಾರೆ. ಅಲ್ಲದೇ, ಅನಿಕೇತನ್ ಶುಗರ್ ಲೆಸ್ ಕೇಕ್ ಅನ್ನೇ ತಿನ್ನುತ್ತೀನಿ ಎಂದಿದ್ದಾನೆ. ಅನಿಕೇತನ್ ನಲ್ಲಿನ ಬದಲಾವಣೆ ಮನೆಯವರಲ್ಲಿ ಶಾಕ್ ತಂದಿದೆ. ಇನ್ನು ಸೂರಿ ಹುಟ್ಟುಹಬ್ಬಕ್ಕೆ ಮನೆಯವರೆಲ್ಲರೂ ಸಂತಸಗೊಂಡಿದ್ದು, ಸೂರಿ ತಾತ ಪದೇ ಪದೇ ಮರಿ ಮೊಮ್ಮಗನ ಬಗ್ಗೆ ಮಾತನಾಡಿದ್ದಾರೆ.

Seetharama Serial 04 September episode written update

ರುದ್ರಪ್ರತಾಪ್ ಕೈ ಸೇರಿದ ಸೀತಾ ಪತ್ರ

ಇತ್ತ ಚಾಂದಿನಿ ಮನೆಯಲ್ಲಿ ಶ್ಯಾಮ್ ಮತ್ತು ಶಾಲಿನಿ ಇಲ್ಲದಿರುವಾಗ ಫೋರ್ಜರಿ ಕೆಲಸ ಮಾಡಿದ್ದಾಳೆ. ಮೇಘಶ್ಯಾಮ್ ಲೆಟರ್ ಹೆಡ್ ನಲ್ಲಿ ತನಗೆ ಬೇಕಾದಂತೆ ಪತ್ರ ಬರೆದುಕೊಂಡಿದ್ದಾಳೆ. ಇದನ್ನು ತೆಗೆದುಕೊಂಡು ಹೋಗಿ ಅನಂತಲಕ್ಷ್ಮೀ ಕ್ಲಿನಿಕ್ ನಲ್ಲಿ ನೀಡಿದ್ದಾಳೆ. ಇದೇ ಸಂದರ್ಭದಲ್ಲಿ ರುದ್ರಪ್ರತಾಪ್ ಎದುರಾಗಿದ್ದು, ಚಾಂದಿನಿ ಬಳಿ ಇರುವ ಸೀತಾ ಬರೆದ ಪತ್ರ ಅಕಸ್ಮಾತ್ ಆಗಿ ರುದ್ರಪ್ರತಾಪ್ ಕೈ ಸೇರಿದೆ. ರುದ್ರಪ್ರತಾಪ್ ಪತ್ರವನ್ನು ಓದಿದ್ದು, ತಾನು ಹುಡುಕುತ್ತಿದ್ದ ಪತ್ರ ತನ್ನ ಕೈ ಸೇರಿದ್ದಕ್ಕೆ ಸಂತಸಗೊಂಡಿದ್ದಾನೆ. ಸೀತಾಳ ಬದುಕಿನ ಕಹಿ ಸತ್ಯವೊಂದನ್ನು ರುದ್ರಪ್ರತಾಪ್ ಅರಿತುಕೊಂಡಿದ್ದಾನೆ.

ಡಾ.ಅನಂತಲಕ್ಷ್ಮೀ ನೋಡಿ ಸೀತಾ ಶಾಕ್

ಮೇಘಶ್ಯಾಮ್ ರಾಮ್ ತಾತನ ಹುಟ್ಟುಹಬ್ಬಕ್ಕೆ ಮನೆಗೆ ಹೋಗಲು ಬಯಸಿದ್ದಾನೆ. ಆದರೆ ಶಾಲಿನಿ, ಚಾಂದಿನಿ ಕಾರಣವನ್ನು ಕೊಟ್ಟು ರಾಮ್ ನ್ನು ಅವಾಯ್ಡ್ ಮಾಡಲು ಯತ್ನಿಸಿದ್ದಾಳೆ. ಆದರೂ ಪದೇ ಪದೇ ಮೇಘಶ್ಯಾಮ್ ರಾಮ್ ಮನೆಗೆ ಭೇಟಿ ಕೊಡಲು ಯತ್ನಿಸುತ್ತಿದ್ದಾನೆ. ಸೂರಿ ಹುಟ್ಟು ಹಬ್ಬಕ್ಕೆ ಭಾರ್ಗವಿ ಬೇಕಂತಲೇ ಡಾ.ಅನಂತಲಕ್ಷ್ಮೀ ಅವರನ್ನು ಆಹ್ವಾನಿಸಿದ್ದಾಳೆ. ಇದರಿಂದ ಸೀತಾಳಿಗೆ ಶಾಕ್ ಆಗಲಿ. ಅವಳ ಆಟಗಳಿಗೆ ಬ್ರೇಕ್ ಬೀಳುವಂತಾಗಲಿ ಎಂದು ಬಯಸಿದ್ದಾಳೆ. ಸೂರಿಗೆ ವಿಶ್ ಮಾಡಲು ಡಾ.ಅನಂತಲಕ್ಷ್ಮೀ ಬಂದ ಕೂಡಲೇ ಸೀತಾ ಶಾಕ್ ಆಗುತ್ತಾಳೆ. ತನ್ನ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ದಂಗಾಗಿ ನಿಂತಿರುತ್ತಾಳೆ.

Seetharama Serial 04 September episode written update

ಸಿಹಿ ಜೊತೆಗೆ ಮಾತನಾಡಿದ ಅನಂತಲಕ್ಷ್ಮೀ

ಅನಂತಲಕ್ಷ್ಮೀ ಕೂಡ ಸೀತಾಳನ್ನು ನೋಡಿ ಹಳೆಯದನ್ನು ನೆನಪಿಸಿಕೊಳ್ಳುತ್ತಾಳೆ. ಸೀತಾ ಮೇಘಶ್ಯಾಮ್ ಮತ್ತು ಶಾಲಿನಿಗೆ ಮಗು ಹೆತ್ತು ಕೊಡಲು ಮುಂದಾಗಿರುತ್ತಾಳೆ. ತನಗೆ ಹಣದ ಅವಶ್ಯಕತೆ ಇದ್ದ ಕಾರಣ ಬಾಡಿಗೆ ತಾಯಿ ಆಗಿರುತ್ತಾಳೆ. ಆದರೆ, ಮೇಘಶ್ಯಾಮ್ ಸೀತಾಳಿಗೆ ಡೆಲಿವರಿ ಆದ ಸಂದರ್ಭದಲ್ಲಿ ಅಲ್ಲಿಗೆ ಬಾರದೇ ಮಗುವನ್ನು ಬಿಟ್ಟಿರುತ್ತಾರೆ. ಸೀತಾ ಆ ಮಗುವನ್ನು ಅನಾಥಾಶ್ರಮದಲ್ಲಿ ಬಿಡಲು ಬಯಸದೇ ತಾನೇ ನೋಡಿಕೊಂಡಿರುತ್ತಾಳೆ. ಈ ಸತ್ಯ ಯಾರಿಗೂ ತಿಳಿದಿರುವುದಿಲ್ಲ. ಇನ್ನು ಅನಂತಲಕ್ಷ್ಮೀ ಸಿಹಿಯನ್ನು ಮಾತನಾಡಿಸುತ್ತಾಳೆ. ಭಾರ್ಗವಿ ಅನಂತಲಕ್ಷ್ಮೀ ಮತ್ತು ಸೀತಾ ಮುಖದಲ್ಲಾಗುವ ಬದಲಾವಣೆಯನ್ನು ಗಮನಿಸುತ್ತಾಳೆ. ಮುಂದೆ ಏನಾಗುತ್ತೆ ಎಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X