Seetharama; ಸಿಹಿಯನ್ನು ಶಾಲೆಯಿಂದ ಕಿಡ್ನ್ಯಾಪ್ ಮಾಡಿದಂತೆ ವಿಶ್ವ ನಟಿಸಿದ್ದು ಏಕೆ..?
ಸೀತಾರಾಮ ಧಾರಾವಾಹಿಯಲ್ಲಿ ಅಂಜಲಿಗೆ ಕಣ್ಣಿಗೆ ರುದ್ರಪ್ರತಾಪ್ ಕಾಣಿಸಿಕೊಂಡಿದ್ದಾನೆ. ಈಗಲೂ ರುದ್ರಪ್ರತಾಪ್ ಒಳ್ಳೆಯವನಂತೆ ನಟಿಸುತ್ತಿದ್ದಾನೆ. ಇವರಿಬ್ಬರೂ ಮತ್ತೆ ಒಂದಾಗುತ್ತಾರಾ ಎಂಬ ಕುತೂಹಲ ಮೂಡಿದೆ.ಇತ್ತ ಪ್ರಿಯಾಳಿಗೆ ಸದ್ಯ ತಾಯಿಯಾಗುವ ಆಸೆ ಬಂದಿದೆ. ಹೀಗಾಗಿ ನಿತ್ಯ ತಾನು ತಾಯಿ ಆಗುತ್ತಿದ್ದೀನಿ ಎಂಬ ಕನಸನ್ನು ಕಾಣಲು ಶುರು ಮಾಡಿದ್ದಾಳೆ. ಏನಾದರೂ ತಿನ್ನಲು ಬಯಸಿದರೂ ಇದು ಬಯಕೆ ಎಂದು ಹೇಳುತ್ತಿದ್ದಾಳೆ.ಈಗ ದಪ್ಪ ಆಗಿದ್ದು, ತಾನು ಗರ್ಭಿಣಿ ಎಂದು ತೋರಿಸಿಕೊಳ್ಳಲು ಯತ್ನಿಸುತ್ತಿದ್ದಾಳೆ. ಆದರೆ, ಪ್ರಿಯಾಳಿಗೆ ಅಶೋಕ್ ಬೈದು ಬುದ್ಧಿ ಹೇಳುತ್ತಿದ್ದಾನೆ. ನಮಗೆ ಮಕ್ಕಳಾಗಲು ಇನ್ನೂ ಸಮಯವಿದೆ. ಇಷ್ಟು ಆತುರ ಬೇಡ ಎಂದು ಹೇಳುತ್ತಾನೆ.
ಕಿಡ್ನ್ಯಾಪ್ ಪ್ಲಾನ್ ಮಾಡಿರುವ ಭಾರ್ಗವಿ
ರಾಮ್ ನಿತ್ಯ ಸಿಹಿಯನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದನ್ನು ಮಾಡುತ್ತಿದ್ದಾನೆ. ಇದನ್ನು ತಪ್ಪಿಸಲು ಭಾರ್ಗವಿ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ಸೂರಿ ತಾತನಿಗೆ ಚಾಡಿ ಹೇಳಿದ್ದು, ಸೂರಿ ತಾತ ಮೊಮ್ಮಗ ರಾಮನಿಗೆ ಇದೆಲ್ಲಾ ಬೇಡ. ಡ್ರೈವರ್ ಸಿಹಿಯನ್ನು ಡ್ರಾಪ್ ಮತ್ತು ಪಿಕಪ್ ಮಾಡುತ್ತಾರೆ ಎಂದು ಹೇಳುತ್ತಾನೆ. ಸಿಹಿ ಕೂಡ ಇದಕ್ಕೆ ಒಪ್ಪಿದ್ದು, ರಾಮ್ ಬೇರೆ ದಾರಿ ಇಲ್ಲದೇ ಒಪ್ಪಿಕೊಳ್ಳುತ್ತಾನೆ. ಸಿಹಿಯನ್ನು ಕಿಡ್ನ್ಯಾಪ್ ಮಾಡಲು ಇದೇ ಸರಿಯಾದ ದಿನ ಎಂದು ಪ್ಲಾನ್ ಮಾಡಿದ್ದಾಳೆ. ವಿಶ್ವನಿಗೆ ಪ್ಲಾನ್ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ನೀಡಿದ್ದಾಳೆ.

ಸಿಹಿಯನ್ನು ಅಪಹರಿಸಿದ ವಿಶ್ವ
ಸಿಹಿಯನ್ನು ಅಪಹರಿಸಲು ಭಯವಿದ್ದರೂ ಕೂಡ ಆಸ್ತಿಗಾಗಿ ವಿಶ್ವಿ ಈ ಪ್ಲಾನ್ ಗೆ ಒಪ್ಪಿಕೊಂಡಿದ್ದಾನೆ. ಇನ್ನು ಸೀತಾ ಅಡುಗೆ ಮಾಡಿ ಗಂಡನಿಗೆ ಬಾಕ್ಸ್ ತೆಗೆದುಕೊಂಡು ಹೋಗಲು ತಯಾರಿ ನಡೆಸುತ್ತಿದ್ದು, ಸಾಧನಾ ಸತ್ಯಜಿತ್ ಗಾಗಿ ಗೊಜ್ಜವಲಕ್ಕಿ ಮಾಡಿಕೊಳ್ಳಲು ಕೇಳಿಕೊಳ್ಳುತ್ತಾಳೆ. ಆಗ ಸೀತಾ ಅವರು ಕೂಡ ಇಲ್ಲೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಾಳೆ. ಬಳಿಕ ಆಫಿಸಿಗೆ ಬಾಕ್ಸ್ ಅನ್ನು ತೆಗೆದುಕೊಂಡು ಬರುತ್ತಾಳೆ. ಸಿಹಿ ಶಾಲೆ ಮುಗಿದ ಬಳಿಕ ಕಾರ ಹತ್ತುತ್ತಾಳೆ. ಹಿಂದಿನಿಂದ ಯಾರೋ ಬಂದು ಸಿಹಿ ಮುಗಿಗೆ ಕರ್ಚೀಫ್ ಹಿಡಿದು ಉಸಿರು ಕಟ್ಟಿಸುತ್ತಾರೆ.
ಗಾಬರಿಯಾಗಿರುವ ಸೀತಾ ಮತ್ತು ರಾಮ್
ಇದರಿಂದ ಸಿಹಿ ಬಹಳ ಗಾಬರಿಯಾಗುತ್ತಾಳೆ. ಅಷ್ಟರಲ್ಲಿ ವಿಶ್ವ ಬಂದು ಸಿಹಿಯನ್ನು ಕಾಪಾಡುತ್ತಾನೆ. ಮನೆಗೆ ಕರೆದುಕೊಂಡು ಬರುತ್ತಾನೆ. ಸಿಹಿಯನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದರು ಎಂಬ ಮಾತನ್ನು ಕೇಳಿದ ಸೀತಾ ಮತ್ತು ರಾಮ್ ಗಾಬರಿಯಾಗಿ ಮನೆಗೆ ಓಡಿ ಬರುತ್ತಾರೆ. ಸಿಹಿ ನಡೆದ ಘಟನೆಯನ್ನು ಹೇಳಿ ಅಳುತ್ತಿರುತ್ತಾಳೆ. ಸಿಹಿ ಸೇಫ್ಟಿ ಬಗ್ಗೆ ಮಾತನಾಡುವ ಬದಲು ಅವಳನ್ನು ನಾನೇ ಕರೆದುಕೊಂಡು ಹೋಗಿ ಬರುತ್ತೇನೆ ಎಂದು ರಾಮ್ ಹೇಳುತ್ತಾನೆ.

ಬೋರ್ಡಿಂಗ್ ಸ್ಕೂಲ್ ಬೇಡ ಎಂದ ಸೀತಾ
ಇದೆಲ್ಲಾ ಸರಿ ಹೋಗುವುದಿಲ್ಲ. ಸಿಹಿ ಸೇಫ್ಟಿ ಬಗ್ಗೆ ಯೋಚಿಸುವುದಾದರೆ, ಸದ್ಯಕ್ಕೆ ಅವಳನ್ನು ಬೋರ್ಡಿಂಗ್ ಸ್ಕೂಲ್ ಗೆ ಹಾಕುವುದು ಬಹಳ ಮುಖ್ಯ ಎಂದು ಹೇಳುತ್ತಾಳೆ ಭಾರ್ಗವಿ. ಭಾರ್ಗವಿ ಮಾತನ್ನು ಕೇಳಿ ಎಲ್ಲರಿಗೂ ಶಾಕ್ ಆಗುತ್ತದೆ. ಮನೆಯವರೆಲ್ಲಾ ಸಿಹಿ ಸೇಫ್ ಆಗಿರಲಿ ಎಂದು ಬೋರ್ಡಿಂಗ್ ಸ್ಕೂಲ್ ಗೆ ಹಾಕಲು ಒಪ್ಪಿಕೊಳ್ಳುತ್ತಾರೆ. ಆದರೆ, ಸೀತಾಳಿಗೆ ಇದು ಇಷ್ಟವಾಗುವುದಿಲ್ಲ. ನನ್ನ ಮಗಳನ್ನು ನಾನು ಎಲ್ಲಿಗೂ ಕಳಿಸುವುದಿಲ್ಲ. ಅವಳು ನನ್ನ ಜೊತೆಗೆ ಇರುತ್ತಾಳೆ. ಬೋರ್ಡಿಂಗ್ ಸ್ಕೂಲ್ ಗೆ ಹೋಗುವುದಿಲ್ಲ ಎಂದು ಕೋಪ ಮಾಡಿಕೊಳ್ಳುತ್ತಾಳೆ. ಸೀತಾಳ ಮಾತು ಈಗ ಆ ಮನೆಯಲ್ಲಿ ನಡೆಯುತ್ತಾ..? ಇಲ್ಲ ಭಾರ್ಗವಿ ಪ್ಲಾನ್ ವರ್ಕೌಟ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











