Seetharama ; ರೂಲ್ಸ್ ಬ್ರೇಕ್ ಮಾಡಿ ಮುತ್ತು ಕೊಟ್ಟ ಸೀತಾ : ಬಳೆ ತೊಡಿಸಿದ ರಾಮ್..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಅದ್ಧೂರಿಯಾಗಿ ಸೀತಾರಾಮನ ಮದುವೆ ನಡೆಯುತ್ತಿದ್ದು, ಸೂರಿ ಫುಲ್ ಹ್ಯಾಪಿ ಆಗಿದ್ದಾರೆ. ಮೊಮ್ಮಗನ ಮದುವೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.ಗಂಡಸರೆಲ್ಲಾ ಒಂದು ಕಡೆ ಸೇರಿಕೊಂಡು ಆಟವಾಡುತ್ತಿದ್ದಾರೆ. ಹೆಂಗಸರೆಲ್ಲಾ ಇನ್ನೊಂದು ಕಡೆ ಮಜಾ ಮಾಡುತ್ತಿದ್ದಾರೆ. ಸೂರಿ ತಾತ ಮೂಖಾಭಿನಯ ಮಾಡಿ ಎಲ್ಲರನ್ನೂ ರಂಜಿಸಿದ್ದಾರೆ. ಪ್ರಿಯಾ ಟ್ರೂತ್ ಆರ್ ಡೇರ್ ಆಟವಾಡಿಸಿದ್ದು, ತಾನು ಅಶೋಕನಿಗೆ ಎಲ್ಲರ ಮುಂದೆ ಕಿವಿ ಹಿಂಡಿ ಬಂದಿದ್ದಾಳೆ. ಇನ್ನು ಶಾಂತಜ್ಜಿ ಎಲ್ಲರ ಎದುರು ಮೂರ್ತಿ ತಾತನಿಗೆ ಮೊದಲ ಸಲ ಐ ಲವ್ ಯೂ ಎಂದು ಹೇಳಿದ್ದಾರೆ.

ಗಂಡು ಹೆಣ್ಣನ್ನು ಹುರಿದುಂಬಿಸುತ್ತಿರುವ ಅಶೋಕ್-ಪ್ರಿಯಾ

ಇನ್ನು ಪ್ರಿಯಾ ಮತ್ತು ಅಶೋಕ್ ಇಬ್ಬರೂ ಒಬ್ಬರಿಗೆ ಒಬ್ಬರು ಚಾಲೆಂಜ್ ಮಾಡಿಕೊಂಡಿದ್ದಾರೆ. ಮದುವೆ ಆಗುವ ಮುನ್ನವೇ ಸೀತಾ ಮತ್ತು ರಾಮ್ ರೂಲ್ಸ್ ಬ್ರೇಕ್ ಮಾಡಿಸಬೇಕು. ಇಬ್ಬರೂ ಒಬ್ಬರಿಗೊಬ್ಬರು ಭೇಟಿಯಾಗುವಂತೆ ಮಾಡಬೇಕು ಎಂದು ಚಾಲೆಂಜ್ ಮಾಡಿಕೊಂಡಿದ್ದಾರೆ. ಗಂಡು-ಹೆಣ್ಣನ್ನು ರೇಗಿಸುತ್ತಾ ಮದುವೆ ಮನೆಗೆ ಒಂದು ಕಳೆ ತಂದಿದ್ದಾರೆ. ಇಬ್ಬರೂ ಹೆಣ್ಣು ಗಂಡನನ್ನು ಚೆನ್ನಾಗಿ ಆಟವಾಡಿಸಿದ್ದಾರೆ. ಸುಲೋಚನಾ, ಪ್ರೇಮಾ, ಸಿಹಿ, ಸೂರಿ, ವಿಶ್ವ ಎಲ್ಲರೂ ಈ ಸಂದರ್ಭವನ್ನು ಸಕತ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಗಂಟೆಗೊಂದು ಬಟ್ಟೆಯಲ್ಲಿ ಸೀತಾ ಮಿಂಚುತ್ತಿದ್ದಾಳೆ.

seetharama-serial-05-july-episode-written-update

ರಾಮ್ ಗೆ ಕಿಸ್ ಕೊಟ್ಟ ಸೀತಾ

ಟ್ರೂತ್ ಆರ್ ಡೇರ್ ಆಟವಾಡುವಾಗ ಸೀತಾ ಸತ್ಯ ಹೇಳಲು ಒಪ್ಪಿಕೊಂಡರೆ ಕಷ್ಟವಾಗಬಹುದು ಎಂದು ಡೇರ್ ಒಪ್ಪಿಕೊಂಡಿದ್ದಾಳೆ. ಈ ಸಂದರ್ಭವನ್ನು ಸದುಪಯೋಗ ಮಾಡಿಕೊಂಡು ರಾಮ್ ಗೆ ಪ್ರಿಯಾ ಮೂರು ಮುತ್ತನ್ನು ಕೊಡಬೇಕು ಎಂದು ಹೇಳಿದ್ದಾಳೆ. ಟಾಸ್ಕ್ ಕಂಪ್ಲೀಟ್ ಮಾಡಲು ಸೀತಾಳಿಗೆ ಗಾಬರಿಯಾಗಿದೆ. ಇದಕ್ಕೆ ಅಶೋಕ್ ಮತ್ತು ಪ್ರಿಯಾ ಸಹಾಯ ಮಾಡಿದ್ದಾರೆ. ಇಬ್ಬರನ್ನು ಒಂದು ಜಾಗದಲ್ಲಿ ಸೇರಿಸಿದ್ದಾರೆ. ಸೀತಾ ಗಾಬರಿ ಆಗಿದ್ದುಕೊಂಡೆ ರಾಮ್ ಕಣ್ಣು ಮುಚ್ಚಿಸಿ, ಕೆನ್ನೆ ಮತ್ತು ಹಣೆಗೆ ಮೂರು ಮುತ್ತನ್ನು ಕೊಟ್ಟು ಓಡಿ ಹೋಗಿದ್ದಾಳೆ.

ಸೀತಾಳಿಗೆ ಬಳೆ ತೊಡಿಸಿದ ರಾಮ್

ಇದೇ ಗುಂಗಿನಲ್ಲಿರುವ ರಾಮ್ ಸೀತಾಳನ್ನು ನೋಡಲೇ ಬೇಕು ಎಂದು ಹಠ ಮಾಡಿದ್ದಾನೆ. ಇದಕ್ಕೂ ಅಶೋಕ್ ಸಹಾಯ ಮಾಡಿದ್ದು, ಸೀತಾ ಬಳೆ ತೊಡಿಸುವ ಶಾಸ್ತ್ರ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಮ್ ಬುಡು ಬುಡುಕೆಯವನ ವೇಷದಲ್ಲಿ ಬಂದಿದ್ದಾನೆ. ಸಿಹಿ ಬಗ್ಗೆ ಶಾಸ್ತ್ರ ನುಡಿದ ರಾಮ್ ಮಾತನ್ನು ನಂಬಿದ ಮನೆಯವರೆಲ್ಲಾ ಸೀತಾ ಕೈ ನೋಡಿ ಶಾಸ್ತ್ರ ಹೇಳಿ ಎಂದಿದ್ದಾರೆ. ರಾಮ್ ಶಾಸ್ತ್ರ ಹೇಳುವ ನೆಪದಲ್ಲಿ ಬಳೆ ತೊಡಿಸುತ್ತಾನೆ. ಮದುಮಗನೇ ಬಂದು ನಿನಗೆ ಬಳೆ ಬಡಿಸುತ್ತಾನೆ ಎಂದು ಹೇಳುತ್ತಾನೆ. ಈ ಎಲ್ಲಾ ಮಾತು ಎಲ್ಲರನ್ನೂ ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ. ಆದರೆ, ಸೀತಾಳಿಗೆ ಸತ್ಯ ಗೊತ್ತಾಗುತ್ತದೆ. ಆದರೆ ಅವಳು ಯಾರಿಗೂ ಹೇಳುವುದಿಲ್ಲ.

seetharama-serial-05-july-episode-written-update

ರೂಲ್ಸ್ ಬ್ರೇಕ್ ಮಾಡಿದ ಸೀತಾ-ರಾಮ್

ಅಶೋಕ್ ಮತ್ತು ಪ್ರಿಯಾ ಸೇರಿಕೊಂಡು ಸೀತಾ ಹಾಗೂ ರಾಮ್ ರೂಲ್ಸ್ ಬ್ರೇಕ್ ಮಾಡುವಂತೆ ಮಾಡಿದ್ದಾರೆ. ತುಂಬಿದ ಮದುವೆ ಮನೆಯ್ಲಲಿ ಭಾವಿ ಗಂಡ-ಹೆಂಡತಿ ನಿಯಮ ಮೀರಿ ಭೇಟಿ ಮಾಡಿದ್ದಲ್ಲದೇ, ಮುತ್ತು ಕೊಟ್ಟಿದ್ದು, ಮಾತನಾಡಿದ್ದಾರೆ. ಈಗ ಅರಿಶಿನದ ಶಾಸ್ತ್ರಕ್ಕೆ ತಯಾರಿ ನಡೆಸುತ್ತಿದ್ದು, ಸಿಹಿ ತಾನು ಸೀರೆ ಉಡಲು ಆಸೆ ಪಟ್ಟಿದ್ದಾಳೆ. ಇದಕ್ಕೆ ಸೀತಾ ನಿನ್ನ ಫ್ರೆಂಡ್ ರಾಮ್ ಸೀರೆ ಚೆನ್ನಾಗಿ ಉಡಿಸುತ್ತಾರೆ ಎಂದು ಹೇಳಿದ್ದು, ಸಿಹಿ ಈಗ ತನ್ನ ಫ್ರೆಂಡ್ ಬಳಿ ಹೋಗಿದ್ದಾಳೆ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಮನೆ ಮಾಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X