Seetha Rrama ; ರಾಮ ಎದುರು ಅಂಜಲಿ ಮತ್ತು ರುದ್ರಪ್ರತಾಪ್ ಒಟ್ಟಿಗೆ ಸಿಕ್ಕಿ ಬಿದ್ದರಾ..?
ಸೀತಾರಾಮ ಧಾರಾವಾಹಿಯಲ್ಲಿ ಕಳೆದು ಹೋದ ಸಿಹಿ, ರಾಮ ಕೈಗೆ ಸಿಕ್ಕಿದ್ದಾಳೆ. ದೇವರೇ ಬೇಕಂತಲೇ ಹೀಗೆ ಮಾಡಿರಬಹುದು ಎಂದು ರಾಮ ಮತ್ತು ಸೀತಾ ಅಂದುಕೊಂಡಿದ್ದಾರೆ. ಸಿಹಿಗೂ ರಾಮ ಮೇಲಿದ್ದ ಹುಸಿ ಮುನಿಸು ಮಾಯವಾಗಿದೆ. ತನ್ನ ಫ್ರೆಂಡ್ ಮೇಲಿನ ತಪ್ಪು ಅಭಿಪ್ರಾಯ ಸರಿ ಹೋಗಿದೆ. ತನ್ನನ್ನು ಮತ್ತು ಸೀತಮ್ಮನನ್ನು ದೂರ ಮಾಡುವುದಿಲ್ಲ ಎಂಬ ಭರವಸೆ ಮೂಡಿದೆ.ಅದರಲ್ಲೂ ರಾಮ ತಾನು ಸಿಹಿಯ ಅಪ್ಪ ಎಂದು ಹೇಳಿದ್ದು, ಅವಳಲ್ಲಿನ ಭರವಸೆಯನ್ನು ಹೆಚ್ಚಿಸಿದೆ. ಸಿಹಿ ಮತ್ತು ರಾಮ ಇಬ್ಬರೂ ಸೇರಿ ಸೀತಾಳನ್ನು ಹುಡುಕಿಕೊಂಡು ಹೊರಟಿದ್ದಾರೆ.
ಒಟ್ಟಿಗೆ ದೇವರ ದರ್ಶನ ಪಡೆದ ಸೀತಾರಾಮ
ಸಿಹಿ ಕಳೆದು ಹೋಗಿದ್ದಾಳೆ ತನಗೆ ಸಿಗುವುದೇ ಇಲ್ಲ ಎಂದುಕೊಂಡಿದ್ದಳು ಸೀತಾ. ಆದರೆ ರಾಮ್ ಜೊತೆಗೆ ಸಿಹಿಯನ್ನು ಕಂಡು ಖುಷಿ ಪಡುತ್ತಾಳೆ. ಮೂವರು ಮತ್ತೆ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಸೀತಾ ಕೂಡ ತನ್ನ ನಿರ್ಧಾರ ಸರಿನಾ ತಪ್ಪಾ ಎಂದು ದೇವರ ಬಳಿ ಪ್ರಶ್ನೆ ಕೇಳಿರುತ್ತಾಳೆ. ಅದಕ್ಕೆ ಉತ್ತರವಾಗಿ ದೇವರೇ ಈ ಸಂದರ್ಭವನ್ನು ತಂದೊಡ್ಡಿದ್ದಾರೆ ಎಂದು ಭಾವಿಸುತ್ತಾಳೆ. ತನ್ನ ಆಯ್ಕೆ ಸರಿಯಾಗಿದ್ದು, ಮತ್ಯಾವತ್ತೂ ರಾಮ್ ನಿಂದ ದೂರ ಇರುವ ಯೋಚನೆಯನ್ನು ಮಾಡುವುದಿಲ್ಲ ಎಂದು ದೇವರಲ್ಲಿ ಹೇಳಿದ್ದಾಳೆ. ರಾಮ್ ಕೂಡ ಈ ಸಂದರ್ಭ ಬಂದದ್ದು ತಮ್ಮ ಬದುಕಲ್ಲಿ ಒಳ್ಳೆಯದೇ ಆಯ್ತು ಎಂದು ತಿಳಿದಿದ್ದಾನೆ. ರಾಮ್ ಮತ್ತು ಸೀತಾ ಸ್ವಲ್ಪ ಕಾಲ ಅಲ್ಲೇ ಸಮಯ ಕಲೆಯುತ್ತಾರೆ.

ಒಟ್ಟಿಗೆ ಊಟ ಮಾಡಲು ಬಯಸಿದ ಸಿಹಿ
ಸಿಹಿಗೆ ಹಸಿವಾಗಿದ್ದರಿಂದ ಚುರುಮುರಿಯನ್ನು ತೆಗೆದುಕೊಳ್ಳುತ್ತಾರೆ. ಹೊರಗಿನ ತಿಂಡಿಗಳನ್ನು ತಿಂದು ಅಭ್ಯಾಸವಿಲ್ಲದ ರಾಮ್ ತನಗೆ ಬೇಡ ಬೇಡ ಎನ್ನುತ್ತಾನೆ. ಆದರೆ, ಸೀತಾ ಮತ್ತು ಸಿಹಿ ಬಲವಂತ ಮಾಡಿ ರುಚಿ ನೋಡಲು ಹೇಳಿದಾಗ ರಾಮ್ ಗೆ ಚುರುಮುರಿ ಇಷ್ಟವಾಗುತ್ತದೆ. ಒಂದು ಪ್ಲೇಟ್ ಫುಲ್ ತಾನೇ ತಿಂದು ಬಿಡುತ್ತಾನೆ. ಇಬ್ಬರನ್ನು ರಾಮ್ ವಠಾರಕ್ಕೆ ಸೇಫ್ ಆಗಿ ತಲುಪಿಸುತ್ತಾನೆ. ಬಳಿಕ ಸಿಹಿ ಒಟ್ಟಿಗೆ ಡಿನ್ನರ್ ಮಾಡೋಣ ಎಂದು ರಾಮ್ ನನ್ನು ಬಲವಂತವಾಗಿ ಮನೆಯಲ್ಲೇ ಉಳಿಸಿಕೊಳ್ಳುತ್ತಾಳೆ.
ರಾಮ್ ತಲೆಗೆ ಹುಳ ಬಿಟ್ಟ ಭಾರ್ಗವಿ
ಅಷ್ಟರಲ್ಲಿ ಭಾರ್ಗವಿ ರಾಮ್ ಗೆ ಫೋನ್ ಮಾಡುತ್ತಾಳೆ. ಸೀತಾ ಮತ್ತು ರಾಮ್ ಒಟ್ಟಿಗೆ ಇರಬಾರದು ಎಂಬ ಉದ್ದೇಶದಿಂದ ಅಶೋಕ್ ನನ್ನು ಮೀಟ್ ಮಾಡು ಎಂದು ಪದೇ ಪದೇ ಫೋನ್ ನಲ್ಲಿ ಹೇಳುತ್ತಾಳೆ. ಊಟಕ್ಕೆ ಕುಳಿತಿದ್ದ ರಾಮ್ ಗೆ ಅಶೋಕನಿಗೆ ಏನೋ ಆಗಿದೆ. ಇಲ್ಲದೇ ಹೋದರೆ ಚಿಕ್ಕಿ ಹೀಗೆಲ್ಲಾ ಹೇಳುವುದಿಲ್ಲ ಎಂದು ಗಾಬರಿಯಾಗುತ್ತಾನೆ. ಸಿಹಿ ಮತ್ತು ಸೀತಾ ಬಳಿ ಕ್ಷಮೆ ಕೇಳಿ ರಾಮ್ ಅಲ್ಲಿಂದ ಹೊರಡುತ್ತಾನೆ. ಅಶೋಕನನ್ನು ಭೇಟಿ ಮಾಡಿ ನಾಳೆ ಕುಟುಂಬ ಸಮೇತ ತನ್ನ ಮನೆಗೆ ಊಟಕ್ಕೆ ಬನ್ನಿ ಎಂದು ಆಹ್ವಾನಿಸುತ್ತಾನೆ. ಇದು ಅಶೋಕನಿಗೆ ಚಿಕ್ಕಿ ಮೇಲೆ ಇನ್ನಷ್ಟು ಅನುಮಾನ ಬರುವಂತೆ ಮಾಡುತ್ತದೆ.

ಅಂಜಲಿ, ಆರ್ ಪಿ ನ ನೋಡಿದ ರಾಮ್
ಇತ್ತ ಅಂಜಲಿ ಜ್ವರ ಇದ್ದರೂ ಕೂಡ ರುದ್ರಪ್ರತಾಪ್ ನನ್ನು ಭೇಟಿ ಮಾಡಲು ಔಷಧಿ ತರುವ ನೆಪದಲ್ಲಿ ಮನೆಯಿಂದ ಹೊರಗಡೆ ಬಂದಿರುತ್ತಾಳೆ. ರುದ್ರಪ್ರತಾಪ್ ಮತ್ತು ಅಂಜಲಿ ಇಬ್ಬರೂ ಒಟ್ಟಿಗೆ ಇರುತ್ತಾರೆ. ರಾಮ್ ಅದೇ ದಾರಿಯಲ್ಲಿ ಹಾದು ಹೋಗುವಾಗ ಇಬ್ಬರನ್ನೂ ಗಮನಿಸುತ್ತಾನೋ ಏನೋ ವಾಪಸ್ ಕಾರನ್ನು ರಿವರ್ಸ್ ನಲ್ಲಿ ತರುತ್ತಾನೆ. ರಾಮ್ ನನ್ನು ನೋಡಿದ ಅಂಜಲಿ ಶ್ರೀರಾಮಣ್ಣ ಎಂದು ಹೇಳುತ್ತಾಳೆ. ಈಗ ರುದ್ರಪ್ರತಾಪ್ ಏನು ಮಾಡುತ್ತಾನೆ ಎಂದು ಕಾದು ನೋಡಬೇಕಿದೆ.


Click it and Unblock the Notifications











