Seetharama ; ಸೀತಾರಾಮದಲ್ಲಿ ಅಶೋಕನ ಕಥೆ ಮುಕ್ತಾಯವಾಗುತ್ತಾ ? ಕೆರಳಿದ ಭಾರ್ಗವಿ ಮುಂದೇನ್ಮಾಡುತ್ತಾಳೆ ?
ಸೀತಾರಾಮ ಧಾರಾವಾಹಿಯಲ್ಲಿ ಸುಬ್ಬಿ ಮತ್ತು ಸಿಹಿ ಸೇರಿಕೊಂಡು ಭಾರ್ಗವಿ ಆಟಗಳಿಗೆ ನಿಧಾನವಾಗಿ ಬ್ರೇಕ್ ಹಾಕುತ್ತಿದ್ದಾರೆ. ಭಾರ್ಗವಿ ಏನೇ ಪ್ಲಾನ್ ಮಾಡಿದರೂ ತಿಳಿದುಕೊಳ್ಳುತ್ತಿರುವ ಸಿಹಿ ಸುಬ್ಬಿಗೆ ತಿಳಿಸುತ್ತಿದ್ದಾಳೆ. ಸುಬ್ಬಿ ಭಾರ್ಗವಿ ಪ್ಲಾನ್ ಗೆ ಬ್ರೇಕ್ ಹಾಕುತ್ತಿದ್ದಾಳೆ. ಈಗಾಗಲೇ ಸೀತಾಳಿಗೆ ಭಾರ್ಗವಿ ಕೊಡುತ್ತಿದ್ದ ಔಷಧಿಯನ್ನು ಚೆಲ್ಲಿದ್ದಾಳೆ. ಇದರಿಂದ ಭಾರ್ಗವಿಗೆ ಬಹಳ ಬೇಸರವಾಗಿದೆ. ಹೇಗಾದರೂ ಮಾಡಿ ಈ ಹುಡುಗಿ ಸಿಹಿ ಅಲ್ಲ ಎಂಬುದನ್ನು ಪ್ರೂವ್ ಮಾಡಲು ಭಾರ್ಗವಿ ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದರೂ ಅದೂ ಸಾಧ್ಯವಾಗುತ್ತಿಲ್ಲ.
ಭಾರ್ಗವಿಯ ಚಿತ್ರ ಬಿಡಿಸಿದ ಸುಬ್ಬಿ
ಹೇಗಾದರೂ ಮಾಡಿ ಈ ಹುಡುಗಿ ಸುಬ್ಬಿಯಲ್ಲ ಎಂಬುದನ್ನು ಸೀತಾಳಿಗೆ ತೋರಿಸಿಕೊಡಬೇಕು ಎಂದು ಭಾರ್ಗವಿ ಸುಬ್ಬಿಗೆ ಡ್ರಾಯಿಂಗ್ ಮಾಡಲು ತಿಳಿಸುತ್ತಾಳೆ. ಸೀತಮ್ಮ ಎಂದು ಬರೆಯುವುದು ಬಿಟ್ಟು ಸುಬ್ಬಿಗೆ ಬೇರೇನೂ ಬರುವುದಿಲ್ಲ. ಅದಕ್ಕಾಗಿ ಸಿಹಿ ಸುಬ್ಬಿಗೆ ಚಿತ್ರ ಬಿಡಿಸುವುದು ಹೇಗೆ ಎಂದು ಎಳೆ ಎಳೆಯಾಗಿ ಹೇಳಿಕೊಡುತ್ತಾಳೆ. ಸುಬ್ಬಿ ತನಗೆ ತೋಚಿದ ಹಾಗೆ ಚಿತ್ರವನ್ನು ಬಿಡಿಸುತ್ತಾಳೆ. ಬಳಿಕ ಸಿಹಿ ಆ ಚಿತ್ರಗಳಿಗೆ ಬಣ್ಣ ತುಂಬುವುದನ್ನು ಹೇಳಿಕೊಡುತ್ತಾಳೆ. ಇದನ್ನು ಗಮನಿಸಿದ ಅಶೋಕ್ ಎಲ್ಲರಿಗೂ ತೋರಿಸುತ್ತಾನೆ. ಸೀತಾ ಯಾಕೆ ಸಿಹಿ ಇಷ್ಟು ಕೆಟ್ಟದಾಗಿ ಕಲರ್ ಮಾಡಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾಳೆ. ಒಂದೊಂದು ಸಲ ನೀನು ನಡೆದುಕೊಳ್ಳುವುದನ್ನು ನೋಡಿದರೆ ಇವಳು ನನ್ನ ಮಗಳಾ ಎಂದು ಡೌಟ್ ಬರುತ್ತೆ ಎಂದಿದ್ದಾಳೆ.

ಚಿತ್ರವನ್ನು ಕಂಡು ಬೆರಗಾದ ಭಾರ್ಗವಿ
ಇನ್ನು ಚಿತ್ರವನ್ನು ಕಂಡು ಭಾರ್ಗವಿ ಬೆರಗಾಗುತ್ತಾಳೆ. ಆಗ ಸೀತಾ ತನ್ನ ಹುಟ್ಟಿದ ಹಬ್ಬದ ದಿನ ನಡೆದ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾಳೆ. ಆದರೆ, ಸಿಹಿಗೆ ಅಪಘಾತವಾದ ಕ್ಷಣವನ್ನು ಮಾತ್ರ ಮರೆತಿರುತ್ತಾಳೆ. ಇನ್ನು ಭಾರ್ಗವಿ ಅವತ್ತು ಯಾರ ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಿದ್ದರು ಎಂದು ಅಶೋಕ್ ಪ್ರಶ್ನೆ ಮಾಡುತ್ತಾನೆ. ಆಗ ಭಾರ್ಗವಿ ಮಾವನ ಆರೋಗ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೆ ಎಂದು ತಬ್ಬಿಬ್ಬಾಗಿ ಉತ್ತರಿಸುತ್ತಾಳೆ. ಈ ಮಾತುಕತೆ ನಡೆಯುವಾಗ ಸಿಹಿಯ ಆತ್ಮ ಅಂದು ನಡೆದ ಘಟನೆಯನ್ನು ನೆನೆದು ಬೇಸರ ಮಾಡಿಕೊಳ್ಳುತ್ತಾಳೆ.
ಮನೆಗೆ ಬಂದು ಗಲಾಟೆ ಮಾಡಿದ ಸ್ವಾಮಿ
ಇನ್ನು ಸುಬ್ಬಿ ಹೇಗೆ ಈ ಚಿತ್ರ ಬಿಡಿಸಿದಳು ಎಂದು ರಾಮ್ ಗಾಬರಿಯಾಗಿರುತ್ತಾನೆ. ಅಶೋಕ್ ಆ ವಿಚಾರವನ್ನು ಬಿಡು. ಚಿತ್ರವನ್ನು ಕಂಡಾಗ ಭಾರ್ಗವಿ ಚಿಕ್ಕಿ ಯಾಕೆ ಗಾಬರಿಯಾಗಿದ್ದರು ಎಂದು ವಿಚಾರಿಸು ಎಂದಾಗ, ಭಾರ್ಗವಿ ಆ ಚಿತ್ರವನ್ನು ಸುಡುವುದನ್ನು ಕಂಡು ಪ್ರಶ್ನಿಸುತ್ತಾನೆ. ಭಾರ್ಗವಿ ತನ್ನ ವಿಚಾರವನ್ನು ಮರೆಸಿ, ಇವಳು ಸಿಹಿ ಅಲ್ಲ. ನಿನಗೆ ಯಾರೋ ಯಾಮಾರಿಸಿದ್ದಾರೆ ಎಂದಾಗ ರಾಮ್ ಈ ಚಿತ್ರ ಬಿಡಿಸಿದ ಮೇಲೂ ನಿಮಗೆ ಸಿಹಿ ಮೇಲೆ ನಂಬಿಕೆ ಬಂದಿಲ್ಲ ಎಂದರೆ ಏನೂ ಮಾಡೋದಿಕ್ಕೆ ಆಗೊಲ್ಲ ಎನ್ನುತ್ತಾನೆ. ಇನ್ನು ಸ್ವಾಮಿ ಕುಡಿದು ಸುಬ್ಬಿಯನ್ನು ಹುಡುಕಿಕೊಂಡು ಬಂದು ರಾಮ್ ಮನೆ ಮುಂದೆ ಗಲಾಟೆ ಮಾಡುತ್ತಾನೆ.
ಭಾರ್ಗವಿಗೆ ಅಡ್ಡಲಾಗಿರುವ ಅಶೋಕ
ಹೇಗೋ ಅಶೋಕ್ ಹಣ ಕೊಟ್ಟು ಅಲ್ಲಿಂದ ಸ್ವಾಮಿಯನ್ನು ಕಳಿಸುತ್ತಾನೆ. ಇದನ್ನು ಗಮನಿಸಿದ ಭಾರ್ಗವಿ ಆತ ಯಾರು ಎಂಬುದನ್ನು ತಿಳಿದುಕೊಳ್ಳಲು ಡ್ರೈವರ್ ಗೆ ಫೋನ್ ಮಾಡಿ ಹೇಳುತ್ತಾಳೆ. ಡ್ರೈವರ್ ಸ್ವಾಮಿ ಬಳಿ ಹೋಗಿ ಪ್ರಶ್ನೆ ಮಾಡುವ ವೇಳೆಗೆ ಅಶೋಕ್ ಬಂದು ತಡೆಯುತ್ತಾನೆ. ಇದರಿಂದ ಭಾರ್ಗವಿಗೆ ಅಶೋಕನ ಮೇಲೆ ಕೋಪ ಬರುತ್ತದೆ. ನನ್ನ ದಾರಿಗೆ ಅಡ್ಡ ಬರುತ್ತಿರುವ ಅಶೋಕ, ಮೊದಲು ನಿನಗೆ ಒಂದು ಗತಿಯನ್ನು ಕಾಣಿಸಬೇಕು ಎಂದು ಕೋಪ ಮಾಡಿಕೊಂಡಿದ್ದಾಳೆ.


Click it and Unblock the Notifications











