Seetharama ; ರಾಮ್ ಗೆ ಸತ್ಯ ಹೇಳಿದ ಶ್ಯಾಮ್ : ಸಿಹಿ ಯಾರ ಮಗಳು ಎಂದು ಗೊತ್ತಾಯ್ತಾ..?
ಸೀತಾರಾಮ ಧಾರಾವಾಹಿಯಲ್ಲಿ ಡಾ. ಅನಂತಲಕ್ಷ್ಮೀ ಸೂರಿ ಹುಟ್ಟು ಹಬ್ಬಕ್ಕೆ ಬಂದಿದ್ದು, ಸೀತಾ ಅಂತೂ ಉಸಿರು ನಿಂತು ಹೋದವಳಂತೆ ಆಗಿದ್ದಾಳೆ.ಹುಟ್ಟು ಹಬ್ಬ ಸೆಲಬ್ರೇಷನ್ ಗೆ ಶ್ಯಾಮ್ ಬರಲಿ ಎಂದು ರಾಮ್ ಕಾಯುತ್ತಾನೆ. ಎಷ್ಟೊತ್ತಾದರೂ ಬಾರದಿದ್ದಾಗ ಕೇಕ್ ಕಟ್ ಮಾಡಿ ಬರ್ತ್ ಡೇ ಅನ್ನು ಸೆಲಬ್ರೇಟ್ ಮಾಡುತ್ತಾರೆ.ಇನ್ನು ಅನಂತಲಕ್ಷ್ಮೀ ಸೀತಾಳನ್ನು ಹೊಗಳುತ್ತಾಳೆ. ಇಂತಹ ಒಳ್ಳೆಯ ಅಮ್ಮ ನಿನಗೆ ಸಿಕ್ಕಿದ್ದಾರೆ ಎಂದು ಸಿಹಿ ಬಳಿ ಡಾ.ಅನಂತಲಕ್ಷ್ಮೀ ಮಾತನಾಡುತ್ತಾಳೆ.
ಡಾಕ್ಟರ್ ಬಳಿ ಕೈ ಮುಗಿದು ಬೇಡಿದ ಸೀತಾ
ಭಾರ್ಗವಿ ಇನ್ಮುಂದೆ ಈ ಡಾಕ್ಟರ್ ಅನ್ನು ನೀನು ಪದೇ ಪದೇ ಭೇಟಿ ಮಾಡಬೇಕಾಗುತ್ತದೆ. ಮಾವನಿಗೆ ಮರಿ ಮೊಮ್ಮಗನನ್ನು ಕೊಡುವ ಸಲುವಾಗಿ ಎಂದು ಹೇಳುತ್ತಾಳೆ. ಸೀತಾಳಿಗೆ ಏನು ಮಾತನಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಡಾಕ್ಟರ್ ಎದುರು ಕೈ ಮುಗಿದು ನಿಲ್ಲುತ್ತಾಳೆ. ಆಗ ಅನಂತಲಕ್ಷ್ಮೀ ಸೀತಾ ಪರೀಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಇನ್ನು ಸೀತಾ ಈ ಮಗು ಬಗ್ಗೆ ಯಾರಿಗೂ ಹೇಳಬೇಡಿ. ಸಿಹಿ ನನ್ನ ಮಗು ಎಂದು ಎಲ್ಲರೂ ನಂಬಿ ಮನೆಯವರೆಲ್ಲಾ ಪ್ರೀತಿ ಕೊಡುತ್ತಿದ್ದಾರೆ. ಅವಳು ನನ್ನ ಮಗಳಲ್ಲ ಎಂದು ತಿಳಿದರೆ ಕಷ್ಟವಾಗುತ್ತದೆ. ಸಿಹಿ ಅನಾಥೆ ಆಗುವುದು ನನಗೆ ಇಷ್ಟವಿಲ್ಲ ಎನ್ನುತ್ತಾಳೆ. ಅನಂತಲಕ್ಷ್ಮೀ ಹೆದರಬೇಡ ಖಂಡಿತಾ ನಾನು ಯಾರಿಗೂ ಏನೂ ಹೇಳೋದಿಲ್ಲ. ನಿನ್ನ ಸಹಾಯಕ್ಕೆ ನಾನು ಸದಾ ಇರುತ್ತೇನೆ ಎಂದು ಎನ್ನುತ್ತಾರೆ.

ಶ್ಯಾಮ್ ಗೆ ಫೋನ್ ಮಾಡಿ ಬೈದ ಡಾಕ್ಟರ್
ಕ್ಲಿನಿಕ್ ಗೆ ಬಂದ ಕೂಡಲೇ ಡಾ. ಅನಂತಲಕ್ಷ್ಮೀ ಚಾಮದಿನಿ ಕೊಟ್ಟು ಹೋಗಿರುವ ಲೆಟರ್ ನೋಡಿ ಕೋಪಗೊಳ್ಳುತ್ತಾಳೆ. ಅದೇ ಕೋಪದಲ್ಲೇ ಮೇಘಶ್ಯಾಮ್ ಗೆ ಫೋನ್ ಮಾಡಿ ಬೈಯುತ್ತಾಳೆ. ನೀವು ಚಾಂದಿನಿ ಕೈಯಲ್ಲಿ ಲೆಟರ್ ಕೊಟ್ಟು, ಯಾವ ಸತ್ಯ ತಿಳಿದುಕೊಳ್ಳಬೇಕು ಎಂದುಕೊಂಡಿದ್ದೀರಾ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ, ನೀವು ಮತ್ತೆ ಆ ಮಗುವನ್ನು ಪಡೆದುಕೊಳ್ಳುವ ಯಾವ ಪ್ರಯತ್ನವನ್ನು ಮಾಡಬೇಡಿ. ಆ ಮಗುವನ್ನು ಹೆತ್ತ ತಾಯಿಯೇ ಸುಖವಾಗಿ ಸಾಕುತ್ತಿದ್ದಾಳೆ. ನನ್ನಿಂದ ಯಾವುದೇ ರೀತಿಯ ಸಹಾಯವನ್ನು ನಿರೀಕ್ಷಿಸಬೇಡಿ ಎಂದು ಹೇಳಿ ಫೋನ್ ಕಟ್ ಮಾಡುತ್ತಾಳೆ.
ವಾರ್ನಿಂಗ್ ಕೊಟ್ಟ ಭಾರ್ಗವಿ ಮಾತು
ಇನ್ನು ಭಾರ್ಗವಿ ಸೀತಾ ಬಳಿ ವ್ಯಂಗ್ಯವಾಗಿ ಮಾತನಾಡುತ್ತಾಳೆ. ಈ ಡಾಕ್ಟರ್ ನಮ್ಮ ಫ್ಯಾಮಿಲಿಗೆ ಬಹಳ ಬೇಕಾದವರು. ನೀನು ಏನೇ ಇದ್ದರೂ ಅವರ ಬಳಿ ಟ್ರೀಟ್ ಮೆಂಟ್ ತೆಗೆದುಕೊಳ್ಳಬಹುದು. ಸಾಧನಾಳಿಗೂ ಈ ಡಾಕ್ಟರ್ ನೋಡಿದ್ದು, ಅವಳಿಗೆ ಗೊತ್ತಿಲ್ಲದ ವಿಚಾರ ನನಗೆ ಗೊತ್ತಿದೆ. ಯಾಕೆಂದರೆ ಡಾಕ್ಟರ್ ನನಗೆ ಬಹಳ ಕ್ಲೋಸ್ ಇದ್ದಾರೆ. ನಿನ್ನ ವಿಚಾರದಲ್ಲೂ ಅಷ್ಟೇ ಎಂದು ಹೇಳುತ್ತಾಳೆ. ಭಾರ್ಗವಿ ಮಾತು ಸೀತಾಳನ್ನು ಕನ್ಫ್ಯೂಸ್ ಮಾಡುತ್ತದೆ. ಇವರು ನನ್ನನ್ನು ಹೆದರಿಸುತ್ತಿದ್ದಾರಾ. ಅಥವಾ ವಿಚಾರ ಹೇಳುತ್ತಿದ್ದಾರಾ ಎಂದು ಆಲೋಚಿಸುತ್ತಾಳೆ.

ಮಗು ಬಗ್ಗೆ ಸತ್ಯ ಹೇಳಿದ ಶ್ಯಾಮ್
ಶ್ಯಾಮ್ ಗೆ ಡಾಕ್ಟರ್ ಫೋನ್ ಮಾಡಿದ ಬಳಿಕ ತನ್ನ ಮಗು ಇನ್ನೂ ಬದುಕಿದೆ ಎಂಬ ಸತ್ಯ ಗೊತ್ತಾಗುತ್ತದೆ. ಇದರಿಂದ ಶ್ಯಾಮ್ ಗೆ ದುಃಖ ಮತ್ತು ಸಂತೋಷ ಎರಡೂ ಒಟ್ಟೊಟ್ಟಿಗೆ ಆಗುತ್ತದೆ. ಏನು ಮಾಡಬೇಕು ಎಂಬುದು ಅರ್ಥವಾಗುವುದಿಲ್ಲ. ಇದೇ ಸಮಯಕ್ಕೆ ರಾಮ್ ಫೋನ್ ಮಾಡುತ್ತಾನೆ. ಶ್ಯಾಮ್ ಧ್ವನಿ ಕೇಳಿ ರಾಮ್ ಏನೋ ಸಮಸ್ಯೆ ಆಗಿದೆ ಎಂದು ಭೇಟಿ ಮಾಡಲು ಹೋಗುತ್ತಾನೆ. ಆಗ ಶ್ಯಾಮ್ ತನ್ನ ತಪ್ಪನ್ನು ಮುಚ್ಚಿಟ್ಟು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಂಡಿದ್ದು, ಆ ಮಗು ತಮ್ಮ ಕೈ ಸೇರದೇ ಇದ್ದದ್ದನ್ನು ಮಾತ್ರ ಹೇಳುತ್ತಾನೆ. ಈ ಮಾತನ್ನು ಕೇಳಿದ ರಾಮ್ ಶ್ಯಾಮ್ ಗೆ ನಿನ್ನ ಮಗುವನ್ನು ನಿನಗೆ ವಾಪಸ್ ಸಿಗುವಂತೆ ನಾನು ಮಾಡುತ್ತೇನೆ ಎಂದು ಮಾತು ಕೊಡುತ್ತಾನೆ. ಮುಂದಿನ ಕಥೆ ಬಹಳ ಟ್ವಿಸ್ಟ್ ಆಂಡ್ ಟರ್ನ್ ನಿಂದ ಕೂಡಿದೆ.


Click it and Unblock the Notifications











