Seetharama ; ಅಪ್ಪ-ಅಮ್ಮನ ಜಗಳದಲ್ಲಿ ಬಡವಾದ ಕೂಸು : ಬೋರ್ಡಿಂಗ್ ಶಾಲೆ ಸೇರುತ್ತಾಳಾ ಸಿಹಿ..!
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಕಿಡ್ನ್ಯಾಪ್ ಆಗಲು ಯಾರೋ ಯತ್ನಿಸಿದ್ದಾರೆ ಎಂದು ಮನೆಯವರು ಅನುಮಾನಗೊಂಡಿದ್ದಾರೆ. ಆದರೆ, ಸತ್ಯ ಮನೆಯವರಿಗೆ ಗೊತ್ತಿಲ್ಲ.ತನ್ನನ್ನು ಕಾಪಾಡಿದ್ದಕ್ಕೆ ಸಿಹಿ ವಿಶ್ವನ ಬಳಿ ಥ್ಯಾಂಕ್ಸ್ ಹೇಳಿದ್ದಾಳೆ. ಆದರೆ, ವಿಶ್ವನಿಗೆ ಮನದಲ್ಲೇ ಅಳುಕಿದ್ದು, ತನ್ನ ಸ್ವಾರ್ಥಕ್ಕೋಸ್ಕರ ಮಗುವಿಗೆ ತೊಂದರೆ ಕೊಟ್ಟೆ ಎಂದು ಮನದಲ್ಲೇ ನೊಂದುಕೊಂಡಿದ್ದಾನೆ. ಇನ್ನು ಪ್ರಿಯಾಳಿಗೆ ಅವರ ತಾಯಿ ದುಡುಕಿ ಮಾಡಿದ ಒಂದು ತಪ್ಪು ಈಗ ದೊಡ್ಡ ಆಸೆಯ ಅರಮನೆಯನ್ನೇ ಕಟ್ಟುವಂತೆ ಮಾಡಿದೆ. ಕ್ಷಣ ಕ್ಷಣಕ್ಕೂ, ದಿನ ದಿನಕ್ಕೂ ಅವಳ ಆಸೆಗಳು ಹೆಚ್ಚಾಗುತ್ತಿದೆ.
ಬಯಕೆಯಿಂದಾಗಿ ಕೋಪಗೊಂಡ ಪ್ರಿಯಾ
ಪ್ರಿಯಾ ತಾನು ಕೂಡ ಎಲ್ಲರಂತೆ ತಾಯಿ ಆಗಬೇಕು ಎಂದು ಆಸೆ ಪಡುತ್ತಿದ್ದಾಳೆ. ಅವಳ ಆಸೆ, ಪ್ರೇಮಾಳ ಮಾತುಗಳೀಂದ ಹೆಚ್ಚಾಗಿದೆ. ತನಗೂ ಸಿಹಿಯಂತ ಒಂದು ಮಗು ಬೇಕು ಎಂದು ಬಯಸಿದ್ದಾಳೆ. ಯಾವುದೇ ವಿಚಾರಕ್ಕೂ, ಏನೇ ಆದರೂ ಕೂಡ ಪ್ರಿಯಾ ತಾನು ತಾಯಿ ಆಗುತ್ತಿರ ಬಹುದು ಎಂದು ಭಾವಿಸುತ್ತಿದ್ದಾಳೆ. ಅಲ್ಲದೇ, ನಿತ್ಯ ಗರ್ಭಿಣಿಯಲ್ಲಿ ಆಗುವ ಬದಲಾವಣೆಗಳು ಏನು..? ಗರ್ಭಿಣಿಯರು ಹೇಗಿರಬೇಕು ಎಂದೆಲ್ಲಾ ಗೂಗಲ್ ಮಾಡುತ್ತಿದ್ದಾಳೆ. ಇದನ್ನು ಗಮನಿಸಿದ ಅಶೋಕ್ ಬೈಯುತ್ತಾನೆ. ನೀ ನು ತಾಯಿ ಆಗಲು ಇನ್ನೂ ಸಮಯವಿದೆ. ಈಗಲೇ ಯಾಕಿಷ್ಟು ಆತುರ ಮಾಡಿಕೊಳ್ಳುತ್ತಿದ್ದೀಯಾ. ಇದರಿಂದ ನೀನು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳುತ್ತಾನೆ. ಇದರಿಂದ ಪ್ರಿಯಾಳಿಗೆ ಕೋಪ ಬರುತ್ತದೆ.

ಸತ್ಯ ತಿಳಿಯಲು ಅಂಜಲಿ ಪ್ರಯತ್ನ
ಅಂಜಲಿಗೆ ಫೋನ್ ಮಾಡಿ ತನ್ನ ಕಷ್ಟವನ್ನು ಹೇಳಿಕೊಳ್ಳಲು ಯತ್ನಿಸುತ್ತಾಳೆ. ಆದರೆ, ಅಂಜಲಿ ಮನೆಗೆ ಬರುವುದು ಅನುಮಾನ ಎಂದಾಗ ಪ್ರಿಯಾಳ ಕೋಪ ಹೆಚ್ಚಾಗುತ್ತದೆ. ಅಂಜಲಿ ಜೊತೆಗೆ ಜಗಳ ಮಾಡಿ ಫೋನ್ ಇಡುತ್ತಾಳೆ. ಅಶೋಕ್ ಜೊತೆಗೂ ಕೋಪ ಮಾಡಿಕೊಂಡಿದ್ದಾಳೆ. ಇನ್ನು ಅಂಜಲಿ ರುದ್ರಪ್ರತಾಫ್ ಬಗ್ಗೆ ಸತ್ಯ ತಿಳಿಯಬೇಕು ಎಂದು ಪ್ರಯತ್ನಿಸುತ್ತಿದ್ದಾಳೆ. ಆದರೆ, ರುದ್ರಪ್ರತಾಪ್ ಅಂಜಲಿಯನ್ನು ಮತ್ತೆ ಯಾಮಾರಿಸಲು ಯತ್ನಿಸಿದ್ದು, ಮತ್ತೆ ಅಂಜಲಿಯನ್ನು ತನ್ನ ಬಗ್ಗೆ ಒಳ್ಳೆಯ ಭಾವನೆ ಬರುವಂತೆ ಮಾಡಿದ್ದಾನೆ. ಅಂಜಲಿ ಸತ್ಯ ತಿಳಿಯಲು ಹೋಗಿ ಮತ್ತೆ ಅಳ್ಳಕ್ಕೆ ಬೀಳುತ್ತಾಳಾ ಇಲ್ಲ ತನ್ನ ಪ್ರೀತಿಯ ಮೂಲಕ ರುದ್ರಪ್ರತಾಪ್ ಗೆ ಪಾಠ ಕಲಿಸುತ್ತಾಳಾ ಗೊತ್ತಿಲ್ಲ.
ಜಗಳ ಮಾಡುತ್ತಿರುವ ರಾಮ್ ಮತ್ತು ಸೀತಾ
ಸಿಹಿಯನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿರುವುದಕ್ಕೆ ಸೀತಾ ಗಾಬರಿಯಾಗಿದ್ದಾಳೆ. ರಾಮ್ ಕೋಪ ಮಾಡಿಕೊಂಡಿದ್ದಾನೆ. ತನ್ನ ಮಗಳ ಸೇಫ್ಟಿಗೆ ನಿತ್ಯ ತಾನೇ ಡ್ರಾಫ್ ಪಿಕಪ್ ಮಾಡಬೇಕು ಎಂದು ತೀರ್ಮಾನಿಸಿದ್ದಾನೆ. ಆದರೆ ರಾಮ್ ನಿರ್ಧಾರವನ್ನು ಎಲ್ಲರೂ ವಿರೋಧಿಸಿದ್ದಾರೆ, ಹೀಗಾಗಿ ಭಾರ್ಗವಿ ಸಿಹಿಯನ್ನು ಅನಿ ಸ್ಕೋಲ್ ಗೆ ಸೇರಿಸಬೇಕು. 15 ಲಕ್ಷದ ಜೊತೆಗೆ 15 ಲಕ್ಷ ಕೊಟ್ಟು ಅನು ಸ್ಕೂಲ್ ಗೆ ಸೇರಿಸಿದರೆ, ಸಿಹಿ ಅರಾಮವಾಗಿರುತ್ತಾಳೆ ಎಂದು ಹೇಳುತ್ತಾಳೆ. ಇದಕ್ಕೆ ಸೀತಾ ಒಪ್ಪುವುದಿಲ್ಲ. ಬೋರ್ಡಿಂಗೆ ಸ್ಕೂಲ್ ಬೆಸ್ಟ್ ಅಂದಾಗಲೂ ಅದಕ್ಕೂ ಸೀತಾ ಮತ್ತು ರಾಮ್ ವಿರೋಧಿಸುತ್ತಾರೆ. ಸೀತಾ ಮತ್ತು ರಾಮ್ ಇಬ್ಬರೂ ಸಿಹಿ ವಿಚಾರಕ್ಕೆ ವಾದ ಮಾಡುತ್ತಿರುತ್ತಾರೆ.

ಅಪ್ಪ-ಅಮ್ಮನ ಗಲಾಟೆಯಿಂದ ಬೇಸತ್ತ ಸಿಹಿ
ಅಪ್ಪ-ಅಮ್ಮನ ಗಲಾಟೆಯನ್ನು ಕೇಳಲಾಗದ ಸಿಹಿ ತಾನು ಬೋರ್ಡಿಂಗ್ ಸ್ಕೂಲ್ ಗೆ ಹೋಗುವುದಾಗಿ ಹೇಳಿದ್ದಾಳೆ. ಆದರೆ ಸೀತಾಳಿಗೆ ಇದು ಸ್ವಲ್ಪವೂ ಇಷ್ಟವಿಲ್ಲ. ರಾಮ್ ಮಾತನ್ನೂ ಸೀತಾ ಕೇಳಲು ತಯಾರಿಲ್ಲ. ಇವರಿಬ್ಬರ ಗಲಾಟೆಯಿಂದ ಬೇಸರ ಮಾಡಿಕೊಂಡಿರುವ ಸಿಹಿ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಮೂಡಿದೆ.


Click it and Unblock the Notifications











