Seetharama ; ರಾಮ ಕೈಯಿಂದ ಎಸ್ಕೇಪ್ ಆದ ರುದ್ರಪ್ರತಾಪ್ ಪ್ರೇಮಾ ಕಣ್ಣಿಗೆ ಸಿಕ್ಕಿದ್ದಾಯ್ತು..!
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ವಠಾರಕ್ಕೆಲ್ಲಾ ದೇವಸ್ಥಾನದ ಪ್ರಸಾದವನ್ನು ಹಂಚಿದ್ದಾಳೆ. ತಾನು ಕಳೆದು ಹೋಗಿದ್ದರ ಬಗ್ಗೆ ಎಲ್ಲರಿಗೂ ಕಥೆ ಹೇಳುತ್ತಿದ್ದಾಳೆ. ರಜೆ ಮುಗಿದು ಶಾಲೆ ಶುರುವಾಗಲು ಇನ್ನೊಂದು ವಾರವಿದೆ. ಪುಸ್ತಕಗಳನ್ನು ತೆಗೆದಿಟ್ಟುಕೋ ಎಂದು ಸೀತಾ ಸಿಹಿಗೆ ಪದೇ ಪದೇ ನೆನಪು ಮಾಡುತ್ತಿದ್ದಾಳೆ.
ಆದರೆ, ಶಾಂತಜ್ಜಿ ಮತ್ತು ಮೂರ್ತಿ ತಾತನಿಗೆ ಸೀತಾಳ ಮದುವೆ ಮುಗಿದ ಬಳಿ ಸಿಹಿ ಇಲ್ಲಿರುವುದಿಲ್ಲ ಎಂಬುದನ್ನು ನೆನಪು ಮಾಡಿಕೊಂಡು ಬೇಸರ ಮಾಡಿಕೊಂಡಿದ್ದಾರೆ.
ಅಮ್ಮನ ಮದುವೆ ಮಾಡಲು ಸಿಹಿಗೆ ಖುಷಿ
ಸಿಹಿಗೆ ಶಾಲೆಗೆ ಸಿದ್ಧತೆ ಮಾಡಿಕೋ ಎಂದು ಸೀತಾ ಹೇಳಿದರೆ ಸೀತಾಳ ಮದುವೆಗೆ ಸಿಹಿ ತಯಾರಿ ನಡೆಸುತ್ತಿದ್ದಾಳೆ. ಅಮ್ಮನಿಗೆ ತಲೆಗೆ ಎಣ್ಣೆ ಹಚ್ಚಿ, ಸ್ನಾನ ಮಾಡಿಸಿ, ಕೂದಲನ್ನು ಧೂಪದ ಹೊಗೆಯಿಂದ ಆರಿಸುತ್ತಿದ್ದಾಳೆ. ಫೇಸ್ ಪ್ಯಾಕ್ ಹಾಕೊಂಡು ಸ್ಕಿನ್ ಗ್ಲೋ ಬರುವಂತೆ ಮಾಡಿಕೋ ಎಂದು ಅಮ್ಮನಿಗೆ ಟಿಪ್ಸ್ ಕೂಡ ಕೊಡತ್ತಿದ್ದಾಳೆ. ಶಾಲೆ ಶುರುವಾದ ಮೇಲೆ ಅಮ್ಮನ ಮದುವೆಗೋಸ್ಕರ ರಜೆ ಹಾಕಲು ರೆಡಿ ಈ ವರ್ಷ ಸ್ಕೂಲಿಗೆ ಹೋಗದಿದ್ದರೂ ನಡೆಯುತ್ತೆ ಎಂದು ಹೇಳಿದ್ದಾಳೆ. ಅಮ್ಮನಂತೆ ನಡೆದುಕೊಳ್ಳುವ ಸಿಹಿಯ ನಡವಳಿಕೆಯನ್ನು ಕಂಡು ಸೀತಾ ಬಹಳ ಆನಂದವಾಗಿದ್ದಾಳೆ.

ರುದ್ರಪ್ರತಾಪ್ ಜಸ್ಟ್ ಎಸ್ಕೇಪ್
ಅಶೋಕ್ ಮನೆಯಿಂದ ರಾಮ್ ಹೊರಡುವಾಗ ದಾರಿ ಮಧ್ಯೆ ಅಂಜಲಿಯನ್ನು ನೋಡಿ ಕಾರನ್ನು ನಿಲ್ಲಿಸುತ್ತಾನೆ. ಪಕ್ಕದಲ್ಲೇ ನಿಂತಿದ್ದ ರುದ್ರಪ್ರತಾಪ್ ಇದ್ದಕ್ಕಿದ್ದ ಹಾಗೆಯೇ ಮಾಯವಾಗುತ್ತಾನೆ. ಅಂಜಲಿಗೆ ಗಾಬರಿಯಾಗುತ್ತದೆ. ರಾಮ್ ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿ ಅಂಜಲಿಯನ್ನು ಕರೆದುಕೊಂಡು ಹೋಗುತ್ತಾನೆ. ರುದ್ರಪ್ರತಾಪ್ ಗೆ ರಾಮ್ ತನ್ನ ಮತ್ತು ಅಂಜಲಿ ಮಧ್ಯೆ ಬಂದಿದ್ದಕ್ಕೆ ಕೋಪ ಮಾಡಿಕೊಳ್ಳುತ್ತಾನೆ.
ರಾಮ್ ಮನೆಗೆ ಬಂದ ಅಶೋಕ್ ಮತ್ತು ಪ್ರಿಯಾ
ಇನ್ನು ಯಾವುದೋ ಕೆಟ್ಟ ಉದ್ದೇಶ ಇಟ್ಟುಕೊಂಡು ಭಾರ್ಗವಿ ಅಶೋಕ್ ಮನೆಯವರನ್ನು ಮಧ್ಯಾಹ್ನದ ಊಟಕ್ಕೆ ಆಹ್ವಾನ ನೀಡಿದ್ದಾಳೆ. ಮನೆಗೆ ಬಾರದೇ ಹೋದರೆ ರಾಮ್ ಬೇಸರ ಮಾಡಿಕೊಳ್ಳುತ್ತಾನೆ ಎಂದು ಅಶೋಕ್ ಇಷ್ಟವಿಲ್ಲದಿದ್ದರೂ ಪ್ರಿಯಾಳನ್ನು ಕರೆದುಕೊಂಡು ಬಂದಿದ್ದಾನೆ. ಸಾಧನಾ ತರಹೇವಾರಿ ಅಡುಗೆಯನ್ನು ಮಾಡಿದ್ದು, ಭಾರ್ಗವಿ ತಾನೇ ಖುದ್ದಾಗಿ ಅಶೋಕನಿಗೆ ಇಷ್ಟವಾಗುವ ಜಾಮೂನ್ ಮತ್ತು ಪಾಯಸವನ್ನು ಮಾಡಿರುತ್ತಾಳೆ. ಊಟ ಮಾಡುವಾಗಲೂ ಅಶೋಕ್ ಬಹಳ ಸಂಕೋಚದಿಂದಲೇ ಊಟ ಮಾಡುತ್ತಾನೆ. ರಾಮ್ ಮುಂದೆ ಭಾರ್ಗವಿ ಅಣ್ಣನ ಸ್ಥಾನದಲ್ಲಿ ನಿಂತು ರಾಮ್ ಮದುವೆಯನ್ನು ನಡೆಸಿಕೊಡು ಎಂದು ಅಶೋಕ್ ನನ್ನು ಭಾರ್ಗವಿ ಕೇಳಿಕೊಳ್ಳುತ್ತಾಳೆ. ಆದರೆ, ಯಾಕೆ ಎಂಬ ವಿಚಾರ ಅಶೋಕನಿಗೆ ಅರ್ಥವಾಗುವುದಿಲ್ಲ.

ಅಂಜಲಿಯನ್ನು ಫಾಲೋ ಮಾಡಿದ ಪ್ರೇಮಾ
ಮಾರನೇಯ ದಿನ ಅಂಜಲಿ ತನ್ನ ಪಾಡಿಗೆ ತಾನು ಕ್ಲಿನಿಕ್ ಗೆ ಹೊರಡುತ್ತಾಳೆ. ಅಂಜಲಿ ಮೇಲೆ ಪ್ರೇಮಾಳ ಮನದಲ್ಲಿ ಸಾಕಷ್ಟು ಅನುಮಾನಗಳಿವೆ. ಸದಾ ಅಂಜಲಿ ಮೇಲೆ ಕಣ್ಣಿಡುವ ಪ್ರೇಮಾ ಇಂದು ಅಂಜಲಿಗೆ ತಿಳಿಯದಂತೆ ಫಾಲೋ ಮಾಡಿದ್ದಾಳೆ. ಒಂದಷ್ಟು ದೂರ ಫಾಲೋ ಮಾಡಿಕೊಂಡು ಹೋದ ಬಳಿಕ ಅಂಜಲಿ ಒಂದು ಜಾಗದಲ್ಲಿ ನಿಂತು ಫೋನ್ ಮಾಡುತ್ತಾಳೆ. ಆಗ ಹಿಂದಿನಿಂದ ಬರುವ ರುದ್ರಪ್ರತಾಪ್ ಅಂಜಲಿ ಕಣ್ಣು ಮುಚ್ಚುತ್ತಾನೆ. ಪ್ರೇಮಾ ರುದ್ರಪ್ರತಾಪ್ ನನ್ನು ನೋಡಿ ಇವನೇ ಅಂಜಲಿಯ ಲವ್ವರ್ ಇರಬೇಕು ಎಂದು ಗೆಸ್ ಮಾಡುತ್ತಾಳೆ. ಆದರೆ, ಪ್ರೇಮಾಳಿಗೆ ರುದ್ರಪ್ರತಾಪ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಂಜಲಿ ಆರ್ ಪಿ ಬಲೆಯಲ್ಲಿ ಬಿದ್ದಿದ್ದು, ಮನೆಯವರ ಎದುರು ಯಾವಾಗ ಸಿಕ್ಕಿ ಬೀಳುತ್ತಾಳೆ ಎಂಬುದು ಗೊತ್ತಿಲ್ಲ. ಅಷ್ಟರಲ್ಲಿ ಪರೀಸ್ಥಿತಿ ಕೈ ಮೀರುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











