Seetharama ; ಸಿಹಿಯನ್ನು ಬೋರ್ಡಿಂಗ್ ಶಾಲೆಗೆ ಸೇರಿಸಲು ಒಪ್ಪಿದ ರಾಮ್-ಸೀತಾ..!
ಸೀತಾರಾಮ ಧಾರಾವಾಹಿಯಲ್ಲಿ ರುದ್ರಪ್ರತಾಪ್ ಗೆ ಅಂಜಲಿ ಟ್ರೀಟ್ ಮೆಂಟ್ ಕೊಡುತ್ತಿದ್ದಾಳೆ. ಇದೇ ಸಂದರ್ಭದಲ್ಲಿ ತನಗಿರುವ ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ್ದಾಳೆ. ಟ್ರೀಟ್ ಮೆಂಟ್ ಕೊಡುತ್ತಲೇ ರುದ್ರಪ್ರತಾಪ್ ನನ್ನು ಮಾತನಾಡಿಸುತ್ತಾಳೆ. ತನಗೆ ಮೋಸ ಮಾಡಲು ಕಾರಣವೇನು ಎಂದು ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಿದ್ದಾಳೆ. ಆದರೆ ರುದ್ರಪ್ರತಾಪ್ ಬಾಯಿ ಬಿಡಲು ತಯಾರಿಲ್ಲ. ಬೇಕಂತಲೇ ಅಂಜಲಿಯನ್ನು ಅವಾಯ್ಡ್ ಮಾಡುತ್ತಿದ್ದಾನೆ. ಈ ಮೂಲಕ ಅಂಜಲಿಯನ್ನು ಮತ್ತೆ ತನ್ನ ಕಡೆಗೆ ಸೆಳೆದುಕೊಳ್ಳಲು ಯತ್ನಿಸುತ್ತಿದ್ದಾನೆ.
ಬಾಯಿ ಬಿಡದ ರುದ್ರಪ್ರತಾಪ್
ಅಂಜಲಿ ಪದೇ ಪದೇ ಪ್ರಶ್ನಿಸಿದಾಗ ನಿಮ್ಮ ಅಣ್ಣಂದಿರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನೀನು ಫೋನ್ ರಿಸೀವ್ ಮಾಡದೇ ಇದ್ದಿದ್ದೇ ತಪ್ಪು ಎಂದು ಹೇಳುತ್ತಾನೆ. ನಿಮ್ಮ ಅಣ್ಣಂದಿರು ನನಗೆ ಹೊಡೆದು ಆಸ್ಪತ್ರೆ ಪಾಲು ಮಾಡಿದ್ದರು. ಬದುಕುವ ಆಸೆಯಿಂದ ನಾನು ಇಲ್ಲಿಗೆ ಬಂದು ಸೇರಿಕೊಂಡಿದ್ದೇನೆ. ಇಲ್ಲೂ ನೀನು ಬಂದಿದ್ದೀಯಾ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡು ಎಂದು ಹೇಳುತ್ತಾನೆ. ಬಳಿಕ ರುದ್ರಪ್ರತಾಪ್ ಭಾರ್ಗವಿಗೆ ಫೋನ್ ಮಾಡುತ್ತಾನೆ. ತನಗೆ ಸೆಕ್ಯೂರಿಟಿ ಕೊಡಿ ಎಂದು ಕೇಳಿದ್ದಕ್ಕೆ ಭಾರ್ಗವಿ ಸಿಹಿ ತಂದೆಯನ್ನು ಹುಡುಕಿ ಕೊಟ್ಟರೆ ನೀನು ಏನೇ ಕೇಳಿದರೂ ಕೊಡುತ್ತೇನೆ ಎಂದು ಹೇಳುತ್ತಾಳೆ.

ರಾಮ್ ನನ್ನು ಒಪ್ಪಿಸಿದ ಭಾರ್ಗವಿ-ಸಿಹಿ
ಇನ್ನು ಮಗಳು ಬೋರ್ಡಿಂಗ್ ಸ್ಕೂಲ್ ಗೆ ಹೋಗುವುದು ಸೀತಾ ಮತ್ತು ರಾಮ್ ಇಬ್ಬರಿಗೂ ಇಷ್ಟವಿರುವುದಿಲ್ಲ. ಆದರೆ ಸಿಹಿ ತಾನು ಬೋರ್ಡಿಂಗ್ ಸ್ಕೂಲ್ ಗೆ ಹೋಗುವುದಾಗಿ ಹಠ ಮಾಡುತ್ತಲೇ ಇರುತ್ತಾಳೆ. ಭಾರ್ಗವಿ ಕೂಡ ಇದೇ ಸರಿಯಾದ ನಿರ್ಧಾರ ಯೋಚನೆ ಮಾಡು ಎಂದು ರಾಮ್ ಗೆ ಬುದ್ಧಿ ಹೇಳುತ್ತಾಳೆ. ರಾಮ್ ಈ ವಿಚಾರದಲ್ಲಿ ಯಾರ ಮಾತನ್ನು ಕೇಳುವುದಕ್ಕೆ ತಯಾರಿರುವುದಿಲ್ಲ. ತಾತ ಕೂಡ ಸಿಹಿ ಬೋರ್ಡಿಂಗ್ ಸ್ಕೂಲ್ ಗೆ ಹೋಗಲಿ ಎಂದು ಬಯಸುತ್ತಾರೆ. ಆಗ ರಾಮ್ ಮತ್ತು ಸೀತಾ ಹಾಯಾಗಿರಬಹುದು. ಮನೆಗೂ ವಂಶೋದ್ಧಾರಕ ಬರುತ್ತಾನೆ ಎಂದು ಆಸೆ ಪಡುತ್ತಾರೆ. ಸಿಹಿ ಒತ್ತಾಯಕ್ಕೆ ರಾಮ್ ಸೀತಾ ಒಪ್ಪಿಗೆ ನೀಡಿದ ಮೇಲೆ ಬೋರ್ಡಿಂಗ್ ಸ್ಕೂಲ್ ಗೆ ಹಾಕಲು ಮುಂದಾಗುತ್ತಾನೆ. ಆದರೆ ಈ ವಿಚಾರದಿಂದ ರಾಮ್ ಬಹಳ ಡಿಸ್ಟರ್ಬ್ ಆಗಿರುತ್ತಾನೆ.
ಬೋರ್ಡಿಂಗ್ ಸ್ಕೂಲ್ ಗೆ ಸೇರಿಸಲು ನಿರ್ಧಾರ
ರಾಮ್ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್ ಗೆ ಹಾಕಲು ಒಪ್ಪಿದ್ದು, ಈ ಬಗ್ಗೆ ಅಶೋಕ್ ಬಳಿ ಹೇಳುತ್ತಾನೆ. ಅಶೋಕ್ ಇದರಲ್ಲಿ ಭಾರ್ಗವಿಯ ಕೈವಾಡ ಇರಬಹುದು ಎಂದು ಗೆಸ್ ಮಾಡುತ್ತಾನೆ. ಆದರೆ, ಅಶೋಕ್ ಅನುಮಾನ ತಪ್ಪಾಗಿದೆ ಎಂದು ಪ್ರಿಯಾ ವಾದ ಮಾಡುತ್ತಾಳೆ. ರಾಮ್ ಸಿಕ್ಕಾಪಟಟೆ ಅಪ್ಸೆಟ್ ಅಗಿರುವುದನ್ನು ನೋಡಿ ಅಶೋಕ್ ಕೂಡ ಬೇಸರ ಮಾಡಿಕೊಳ್ಳುತ್ತಾನೆ. ಇತ್ತ ಚಾಂದಿನಿಯನ್ನು ರಾಮ್ ಕೆಲಸದಿಂದ ತೆಗೆದಿರುತ್ತಾನೆ. ಹೀಗಾಗಿ ಚಾಂದಿನಿ ಕೋಪ ಮಾಡಿಕೊಂಡು ಭಾರ್ಗವಿಗೆ ಫೋನ್ ಮಾಡುತ್ತಾಳೆ. ಭಾರ್ಗವಿ ಚಾಂದಿನಿಯ ಮಾತುಗಳಿಗೆ ಕೇರ್ ಮಾಡುವುದಿಲ್ಲ. ಸೀತಾಳೇ ನಿನ್ನನ್ನು ಕಲಸದಿಂದ ತೆಗೆದಿರಬೇಕು ಎಂದು ಚಾಡಿ ಹೇಳುತ್ತಾಳೆ.

ಸಿಹಿ ಆಲೋಚನೆ ಬಗ್ಗೆ ರಾಮ್ ಚಿಂತೆ
ಇನ್ನು ಸಿಹಿಗೆ ಬೋರ್ಡಿಂಗ್ ಸ್ಕೂಲ್ ಗೆ ಹೋಗಬೇಕು ಎಂದು ಅನಿಸಲು ಹೇಗೆ ಸಾಧ್ಯಾ. ಅವಳೀಗೆ ಬೋರ್ಡಿಂಗ್ ಸ್ಕೂಲ್ ಬಗ್ಗೆ ಮಾಹಿತಿ ಕೊಟ್ಟವರಾರು. ಕಿಡ್ನ್ಯಾಪ್ ಹಿಂದಿನ ಕಾರಣವೇನು. ಸಿಹಿಗೆ ನಮ್ಮ ಮನೆಯಲ್ಲಿ ಯಾಕೆ ತೊಂದರೆ ಆಗುತ್ತಿದೆ ಎಂದು ಯೋಚಿಸುತ್ತಿದ್ದಾನೆ. ಈ ಯೋಚನೆ ರಾಮ್ ನನ್ನು ಭಾರ್ಗವಿಯ ಪ್ಲಾನ್ ತಿಳಿಯುವಂತೆ ಮಾಡುತ್ತದೆಯಾ ಎಂಬ ಕುತೂಹಲ ಮೂಡಿದೆ.


Click it and Unblock the Notifications











