Seetha Rama ; ಮಗಳ ಜೊತೆಗೆ ಹೆಜ್ಜೆ ಹಾಕಿದ ಸೀತಾ : ಸಿಹಿ ಮತ್ತು ಸುಬ್ಬಿ ಒಂದಾಗುತ್ತಾರಾ..?
ಸೀತಾರಾಮ ಧಾರಾವಾಹಿಯಲ್ಲಿ ಸತ್ಯಜಿತ್ ವಾಪಸ್ ಮನೆಗೆ ಬಂದಿದ್ದಾನೆ. ಅಲ್ಲದೇ, ಆಶ್ಚರ್ಯವೆಂಬಂತೆ ಕುಡಿಯುವುದನ್ನು ಕೂಡ ಬಿಟ್ಟಿರುವ ಸತ್ಯ ಸಿಹಿಯ ಸಾವಿನಿಂದ ನೊಂದಿದ್ದಾನೆ. ಸಿಹಿ ಸಾವಿಗೆ ಯಾರು ಕಾರಣ ಎಂದು ತಿಳಿಯಲು ಮುಂದಾಗಿದ್ದಾನೆ. ಅದಕ್ಕಾಗಿ ಭಾರ್ಗವಿ ಜೊತೆಗೆ ಮಾತನಾಡಿದ್ದಾನೆ. ಭಾರ್ಗವಿಗೆ ಸತ್ಯಜಿತ್ ನ ನಡವಳಿಕೆ ಅನುಮಾನ ತರಿಸಿದೆ. ಕುಡಿದು ಕುಡಿದು ಹಾಳಾಗಿರುವ ಸತ್ಯ ತನ್ನ ಬಣ್ಣವನ್ನು ಬಯಲು ಮಾಡುವುದು ಸುಳ್ಳು ಎಂಬ ಭ್ರಮೆಯಲ್ಲಿದ್ದಾಳೆ.
ಒಂದಾದ ಸತ್ಯಜಿತ್, ಅಶೋಕ್
ಸತ್ಯಜಿತ್ ನಲ್ಲಿ ಆಗಿರುವ ಬದಲಾವಣೆಗಳನ್ನು ಕಂಡು ಸಾಧನಾ ಶಾಕ್ ಆಗಿದ್ದಾಳೆ. ಸತ್ಯ ಸಿಹಿಗೆ ಆಕ್ಸಿಡೆಂಟ್ ಆದ ಜಾಗಕ್ಕೆ ತೆರಳುತ್ತಾನೆ. ಅಲ್ಲಿರುವ ಅಂಗಡಿಗಳಲ್ಲಿ ಅಪಘಾತದ ಬಗ್ಗೆ ವಿಚಾರಿಸುತ್ತಾನೆ. ಬಳಿಕ ಅಲ್ಲಿರುವ ಸಿಸಿಟಿವಿ ಕ್ಯಾಮರಾಗಳನ್ನು ಚೆಕ್ ಮಾಡುತ್ತಾನೆ. ಆದರೆ, ಅಫಘಾತ ನಡೆದ ಸಮಯದ ವೀಡಿಯೋಗಳು ಡಿಲೀಟ್ ಆಗಿರುತ್ತವೆ. ಅಷ್ಟೇ ಅಲ್ಲದೇ, ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಕೂಡ ರಿಜಿಸ್ಟರ್ ಆಗಿರುವುದಿಲ್ಲ. ಈ ಬಗ್ಗೆ ಅನುಮಾನಗೊಂಡ ಸತ್ಯ ಅಶೋಕ್ ಗೆ ಫೋನ್ ಮಾಡಿ ವಿಚಾರಿಸುತ್ತಾರೆ. ಆಗ ಅಶೋಕ್ ಗೂ ಕೂಡ ಸಿಹಿ ಸಾವು ಸಹಜ ಅಲ್ಲ ಕೊಲೆ ಎಂಬ ಅನುಮಾನವಿದೆ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಇಬ್ಬರೂ ಕೂಡ ಒಟ್ಟಿಗೆ ಸೇರಿ ಈ ಬಗ್ಗೆ ಮಾಹಿತಿ ಕಲೆ ಹಾಕಲು ತೀರ್ಮಾನ ಮಾಡಿದ್ದಾರೆ.

ಮಗಳ ಅಸ್ತಿ ಕಾಣದೆ ಕಂಗಾಲಾದ ರಾಮ್
ರಾಮ್ ಸಿಹಿಯ ಅಸ್ತಿಯನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಬಂದಿರುತ್ತಾನೆ. ಸೀತಾಳಿಗೆ ತಿಳಿಯದಂತೆ ಅಸ್ತಿಯನ್ನು ಬಿಟ್ಟು ಹೇಗಾದರೂ ಮಾಡಿ ಮಗಳಿಗೆ ಸದ್ಗತಿ ಕೊಡಿಸಬೇಕು ಎಂದು ತೀರ್ಮಾನಿಸಿರುತ್ತಾನೆ. ಅದೇ ದೇವಸ್ಥಾನಕ್ಕೆ ಸುಬ್ಬಿ ಮತ್ತು ಅವಳ ಕುಟುಂಬ ಕೂಡ ದೊಂಬರಾಟ ಆಡಲು ಬಂದಿರುತ್ತಾರೆ. ದೇವಸ್ಥಾನದಲ್ಲಿ ಮಗಳ ಹೆಸರಲ್ಲಿ ಸೀತಾ ಪೂಜೆ ಮಾಡಿಸಿ ಪ್ರಸಾದವನ್ನು ಹಂಚುತ್ತಾಳೆ. ಸುಬ್ಬಿ ಸೀತಾ ಕೈಯಿಂದ ಪ್ರಸಾದ ಪಡೆದು ಖುಷಿ ಪಡುತ್ತಾಳೆ. ಇನ್ನು ಸೀತಾ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ನೀನು ನೋಡುತ್ತಿರು ಹತ್ತು ನಿಮಿಷ ಬರುತ್ತೇನೆ ಎಂದು ಹೇಲಿ ಹೋಗುತ್ತಾನೆ. ಆದರೆ, ಕಾರಿನಲ್ಲಿ ಅಸ್ತಿ ಇರುವುದಿಲ್ಲ. ಇದರಿಂದ ರಾಮ್ ಗಾಬರಿಯಾಗುತ್ತಾನೆ.
ಮಗಳೊಂದಿಗೆ ಹೆಜ್ಜೆ ಹಾಕಿದ ಸೀತಾ
ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸುಬ್ಬಿ ಕೃಷ್ಣನ ವೇಷ ಧರಿಸಿ ಡ್ಯಾನ್ಸ್ ಮಾಡುತ್ತಿರುತ್ತಾಳೆ. ಇದನ್ನು ನೋಡಿದ ಸೀತಾ ತನ್ನ ಮಗಳೇ ಎಂದು ಭಾವಿಸುತ್ತಾಳೆ. ಮಧ್ಯದಲ್ಲಿ ಡ್ಯಾನ್ಸ್ ಮರೆತು ಹೋಗುವ ಸುಬ್ಬಿ ಗಾಬರಿಯಾಗುತ್ತಾಳೆ. ಆದ ಸೀತಾ ಸ್ಟೇಜ್ ಹತ್ತಿ ಮಗಳ ಜೊತೆಗೆ ಹೆಜ್ಜೆ ಹಾಕುತ್ತಾಳೆ. ಅಲ್ಲದೇ, ಮಗಳ ಜೊತೆಗೆ ಡ್ಯಾನ್ಸ್ ಮಾಡಿ ಖುಷಿ ಪಡುತ್ತಾಳೆ. ಸುಬ್ಬಿಗೂ ಇದು ಖುಷಿ ಕೊಡುತ್ತದೆ. ಇತ್ತ ಸುಬ್ಬಿ ಕಡೆಯವರು ದೊಂಬರಾಟಕ್ಕೆ ತಯಾರಿ ನಡೆಸುತ್ತಿರುತ್ತಾರೆ.
ಸುಬ್ಬಿಯನ್ನು ಮಾತನಾಡಿಸಲು ಯತ್ನಿಸಿದ ಸಿಹಿ
ಕಾರ್ಯಕ್ರಮ ಮುಗಿದ ಬಳಿಕ ಸೀತಾ ಮತ್ತು ರಾಮ್ ದೊಂಬರಾಟ ನಡೆಯುವ ಜಾಗಕ್ಕೆ ಬರುತ್ತಾರೆ. ಸುಬ್ಬಿ ಅಲ್ಲಿ ಹಗ್ಗದ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆಯುತ್ತಿರುತ್ತಾಳೆ. ಆದರೆ, ಅವಳ ಮುಖ ಸೀತಾಳಿಗೆ ಕಾಣುವುದಿಲ್ಲ. ಇತ್ತ ಸಿಹಿ ಆತ್ಮ ಸುಬ್ಬಿಯನ್ನು ನೋಡಿ ಮಾತನಾಡಿಸುತ್ತಾಳೆ. ಕಳ್ಳಿ, ನಿನಗೆ ನಾನು ಕಾಣಿಸುತ್ತೀನಾ..? ನನ್ನ ಮಾತು ಕೇಳುತ್ತಾ ಎಂದು ಪ್ರಶ್ನೆ ಮಾಡುತ್ತಾಳೆ. ಸಿಹಿಯ ಮಾತುಗಳನ್ನು ಕೇಳಿ ಭಯಪಡುವ ಸುಬ್ಬಿ, ಈಗ ತನ್ನ ಗಮನ ಬೇರೆಡೆ ಹೋದರೆ ಕೆಲಸ ಕೆಡುತ್ತದೆ ಎಂದು ತನ್ನ ಕೆಲಸವನ್ನು ತಾನು ಮುಂದುವರೆಸುತ್ತಾಳೆ.


Click it and Unblock the Notifications











