Seetha Rama ;ತಂದೆ ತಾಯಿ ವಿವಾಹ ನಡೆದ ದಿನವೇ ರಾಮ್-ಸೀತಾ ಮದುವೆ ದಿನಾಂಕ್ ಫಿಕ್ಸ್ ಆಯ್ತು
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಶಾಲೆಗೆ ಹೋಗಿ ಸಿಹಿಗೆ ಪುಸ್ತಕ ಹಾಗೂ ಯೂನಿಫಾರ್ಮ್ ಅನ್ನು ತಂದಿದ್ದಾಳೆ. ಎಲ್ಲವೂ ಸರಿಯಾಗಿದೆಯಾ ಎಂದು ಚೆಕ್ ಮಾಡುತ್ತಿದ್ದಾಳೆ. ಸಿಹಿಗೆ ಯೂನಿಪಾರ್ಮ್ ಹಾಕಿ ಅಳತೆ ಸರಿ ಇದೆಯಾ ಎಂದು ಚೆಕ್ ಮಾಡುತ್ತಿದ್ದರೂ ಒಂದು ನಿಮಷವೂ ನಿಲ್ಲ ಸಿಹಿ ತಾನೇ ಚೆಕ್ ಮಾಡಿಕೊಳ್ಳುವುದಾಗಿ ಹೇಳಿ ಓಡುತ್ತಾಳೆ. ನಿನಗೆ ಪಾದರಸ ಅಂತ ಹೆಸರಿಡಬೇಕಿತ್ತು ಎಂದು ತಮಾಷೆ ಮಾಡಿದರೆ, ಪಾದರಸ ಅಂದರೆ, ಫೀಟ್ ಜ್ಯೂಸ್ ತಾನೇ ಎಂದು ಕಾಮಿಡಿ ಬೇರೆ ಮಾಡುತ್ತಾಳೆ.
ಮದುವೆ ಡೇಟ್ ಫಿಕ್ಸ್ ಆಯ್ತು
ಭಾರ್ಗವಿ ಮನೆಯಲ್ಲಿ ಪ್ರಿಯಾ, ಅಶೋಕ್ ರಾಮ್ ಜೊತೆಗೆ ಜಾಲಿ ಟೈಂ ಸ್ಪೆಂಡ್ ಮಾಡುತ್ತಿರುತ್ತಾರೆ. ಪುರೋಹಿತರು ಬರುವವರೆಗೂ ಮೂವರು ಕೂತು ಮಾತನಾಡುತ್ತಿರುತ್ತಾರೆ. ಇದೆಲ್ಲವನ್ನು ನೋಡುತ್ತಿರುವ ಭಾರ್ಗವಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ. ಇದೇ ಸಂದರ್ಭದಲ್ಲಿ ಪ್ರೇಮಾ ಪ್ರಿಯಾಳಿಗೆ ಪದೇ ಪದೇ ಕಾಲ್ ಮಾಡುತ್ತಿರುತ್ತಾಳೆ. ಪ್ರೇಮಾಳಿಗೆ ರುದ್ರಪ್ರತಾಪ್ ನನ್ನು ನೋಡಿ ಯಾರೋ ಪೊರ್ಕಿ ರೌಡಿ ಎಂದು ಭಾವಿಸಿದ್ದಾಳೆ. ಅಂಜಲಿಯಂತಹ ಒಳ್ಳೆಯ ಹುಡುಗಿಗೆ ಆ ಹುಡುಗ ಬೇಡ ಎಂದು ಹೇಳಲು ಫೋನ್ ಮಾಡುತ್ತಾಳೆ. ಆದರೆ, ಪ್ರಿಯಾ ಫೋನ್ ನಲ್ಲಿ ರೇಗಿದ್ದಕ್ಕೆ ಸುಮ್ಮನೆ ಮಾಡಿದೆ ಎಂದು ಹೇಳಿ ಫೋನ್ ಕಟ್ ಮಾಡುತ್ತಾಳೆ. ಇನ್ನು ಜೋಯಿಸರು ಬಂದು ರಾಮ್ ಮತ್ತು ಸೀತಾ ಮದುವೆಗೆ ಡೇಟ್ ಫಿಕ್ಸ್ ಮಾಡುತ್ತಾರೆ.

ಇಂದ್ರ-ವಾಣಿ ಮದುವೆ ದಿನವೇ ಮಗನ ವಿವಾಹ
ಅದೂ ಕೂಡ ರಾಮ್ ತಂದೆ-ತಾಯಿ ಇಂದ್ರಾಪ್ರಸಾದ್ ಮತ್ತು ವಾಣಿಯ ಮದುವೆಯ ವಾರ್ಷಿಕೋತ್ಸವದ ದಿನವೇ ಸೀತಾ ರಾಮನ ಮದುವೆ ದಿನಾಂಕವೂ ಇರುತ್ತದೆ. ಇದು ಅರಿಯದೇ ಬಾರ್ಗವಿ ಅದೇ ದಿನ ಇರಲಿ ಎಂದಾಗ ಸತ್ಯ ಅದು ಅಣ್ಣ-ಾತ್ತಿಗೆ ಮದುವೆಯ ದಿನ ಎಂದು ಸಂಭ್ರಮಿಸುತ್ತಾನೆ. ರಾಮ್ ಗೂ ಒಳ್ಳೆಯದಾಗಲಿ ಎಂದು ವಿಶ್ ಮಾಡುತ್ತಾನೆ. ರಾಮ್ ಗೂ ಕೂಡ ಖುಷಿಯಾಗುತ್ತದೆ. ಭಾರ್ಗವಿ ಏನು ಮಾಡುವುದು ಎಂದು ಯೋಚಿಸುವ ಮುನ್ನವೇ ಅಶೋಕ್, ಪ್ರಿಯಾ, ಸಾಧನಾ ಎಲ್ಲರೂ ಇದೇ ದಿನವೇ ರಾಮ್ ಮದುವೆ ನಡೆಯಲಿ ಎನ್ನುತ್ತಾರೆ. ಭಾರ್ಗವಿಯೂ ಬೇರೆ ದಾರಿ ಇಲ್ಲದೇ ಒಪ್ಪಿಕೊಳ್ಳುತ್ತಾಳೆ.
ಸೀತಾ-ರಾಮನಿಗೆ ಫುಲ್ ಖುಷಿ
ಅಶೋಕ್ ಮತ್ತು ಪ್ರಿಯಾ ಇಬ್ಬರೂ ಕೂಡ ಹೊರಟಾಗ ಭಾರ್ಗವಿ ಅಶೋಕನಿಗೆ ಮೊಬೈಲ್ ನೋಡು ಎಂದು ಹೇಳಿ ಚಮಕ್ ಕೊಡುತ್ತಾಳೆ. ಅಶೋಕ್ ಗಾಬರಿಯಾಗಿ ಬಿಡುತ್ತಾನೆ. ರಾಮ್ ಗೆ ಸೀತಾಳಿಗೆ ಮದುವೆ ದಿನಾಂಕವನ್ನು ಭೇಟಿ ಮಾಡಿ ಹೇಳು. ಅವಳೂ ಖುಷಿ ಪಡುತ್ತಾಳೆ ಎಂದು ಭಾರ್ಗವಿ ರಾಮ್ ಗೆ ಹೇಳುತ್ತಾಳೆ. ರಾಮ್ ಸೀತಾಳನ್ನು ಭೇಟಿ ಮಾಡಿ ಮದುವೆ ಡೇಟ್ ಫಿಕ್ಸ್ ಆಗಿದ್ದರ ಬಗ್ಗೆ ಹೇಳುತ್ತಾನೆ. ಸೀತಾ ಮತ್ತು ಸಿಹಿ ಕೂಡ ಅಷ್ಟೇ ಖುಷಿ ಪಡುತ್ತಾರೆ.

ಮನೆಯವರ ಮೇಲೆ ಕೋಪ ಮಾಡಿಕೊಂಡ ಪ್ರಿಯಾ
ಇನ್ನು ಅಶೋಕ್ ಮತ್ತು ಪ್ರಿಯಾ ಮನೆಗೆ ಬರುತ್ತಾರೆ. ಪ್ರಿಯಾ ಮನೆಗೆ ಬಂದ ಕೂಡಲೇ ಊಟ ಬೇಕು ಎಂದು ತಿನ್ನುತ್ತಿರುತ್ತಾಳೆ. ಒರೇಮಾ ಗಾಬರಿಯಲ್ಲಿ ತಾನು ರುದ್ರಪ್ರತಾಪ್ ನನ್ನು ನೋಡಿದ ಬಗ್ಗೆ ಹೇಳುತ್ತಾಳೆ. ಅಶೋಕ್ ಬಳಿ ಮಾತನಾಡಿ ಅಂಜಲಿಗೆ ಬುದ್ಧಿ ಹೇಳು ಎಂದರೆ ಪ್ರಿಯಾ ಕೇಳುವುದಿಲ್ಲ. ಅಂಜಲಿ ಪ್ರೀತಿ ಮಾಡುತ್ತಿದ್ದಾಳೆ. ಇನ್ನು ಸ್ವಲ್ಪ ದಿನದಲ್ಲೇ ನಮಗೆಲ್ಲಾ ಆ ಸತ್ಯ ಹೇಳುತ್ತಾಳೆ ಬಿಡು ಎನ್ನುತ್ತಾಳೆ. ಇದೇ ವೇಳೆಗೆ ಅಶೋಕ್ ಬಂದು ರೂಮ್ ಲೈಟ್, ಫ್ಯಾನ್ ಹಾಗೆ ಆನ್ ಆಗಿದೆ ಆಫ್ ಮಾಡುವುದಕ್ಕೆ ಆಗುವುದಿಲ್ವಾ ಎಂದು ಕೇಳಿದ್ದಕ್ಕೆ ಪ್ರಿಯಾ ಇಬ್ಬರ ಮೇಲೂ ಕೂಗಾಡಿ ಹೋಗುತ್ತಾಳೆ.


Click it and Unblock the Notifications











