Seetharama ; ಕೊನೆಗೂ ಒಂದಾದ ಕರುಳ ಬಳ್ಳಿಗಳು : ಮನೆಯಲ್ಲಿ ಸುತ್ತಾಡಿದ ಸುಬ್ಬಿ !

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ರಾಮ ಟೀ ಮಾಡಲು ಅಡುಗೆ ಮನೆಯಲ್ಲಿ ಪೇಚಾಡುತ್ತಿದ್ದಾನೆ. ಈ ವೇಳೆಗೆ ಸುಬ್ಬಿಗೆ ಅಶೋಕ್ ಸಿಹಿ ಬಗ್ಗೆ ಹೇಳಿದ್ದಾನೆ. ಅಲ್ಲದೇ ಸಿಹಿ ಹೇಗೆ ನಡೆದಾಡುತ್ತಾಳೆ. ಅವಳ ಬಾಡಿ ಲ್ಯಾಂಗ್ವೇಜ್ ಬಗ್ಗೆ ಹೇಳಿಕೊಟ್ಟಿದ್ದು, ಸುಬ್ಬಿಗೆ ಪ್ರ್ಯಾಕ್ಟೀಸ್ ಮಾಡಿಸುತ್ತಿದ್ದಾರೆ. ಸುಬ್ಬಿಗೆ ಸ್ವಲ್ಪ ಜಂಬವೂ ಇದೆ. ಇದರಿಂದ ಆಗಾಗ ತಾನು ಹೇಳಿದ್ದೇ ಸರಿ. ತಾನು ಹೇಳಿದ್ದನ್ನೇ ಎಲ್ಲರೂ ಪಾಲಿಸಬೇಕು ಎಂದು ಹೇಳುತ್ತಾಳೆ. ಈಗ ರಾಮ್ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾಳೆ.

ಒಂದಾಗಿವೆ ಅವಳಿ ಮಕ್ಕಳ ಆತ್ಮಗಳು

ಟೀ ಮಾಡಿಕೊಟ್ಟ ರಾಮ್ ಸುಬ್ಬಿಯನ್ನು ಕರೆದುಕೊಂಡು ಹೋಗಿ ಸಿಹಿಯ ರೀತಿ ಕಾಣುವಂತೆ ಮೇಕ್ ಓವರ್ ಮಾಡಿಸಿದ್ದಾನೆ. ಮನೆಗೆ ಬಂದ ಸುಬ್ಬಿಯನ್ನು ಕಂಡು ಪುಟ್ಲಿಂಗು, ರಾಕಿ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ. ಅಲ್ಲದೇ, ಸುಬ್ಬಿ ಥೇಟ್ ಸಿಹಿಯಂತೆ ಕಂಡಿದ್ದಾಳೆ. ಆದರೆ, ಅವಳ ಮಾತು ಹಾಗೂ ನಡವಳಿಕೆಯೊಂದೇ ಬದಲಾಗಬೇಕಿದೆ. ರಾಮ್ ಈಗಲೇ ಸುಬ್ಬಿಯನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದು, ಅವರ ತಾತ ಹೆಣ್ಣು ಮಕ್ಕಳನ್ನು ಕತ್ತಲಾದ ಮೇಲೆ ಮನೆಯಿಂದ ಕರೆದುಕೊಂಡು ಹೋಗಲು ಬಿಡುವುದಿಲ್ಲ ಎಂದಿದ್ದಾರೆ. ಹಾಗಾಗಿ ರಾಮ್ ಮತ್ತು ಅಶೋಕ್ ಮಗುವನ್ನು ಮನೆಯಲ್ಲೇ ಬಿಟ್ಟು ಬಂದಿದ್ದಾರೆ. ಇನ್ನು ರಾತ್ರಿಯೆಲ್ಲಾ ಸುಬ್ಬಿಗೆ ನಿದ್ದೆ ಬಂದಿಲ್ಲ. ಇದೇ ಕೊನೆಯ ರಾತ್ರಿ ನಾನಿಲ್ಲಿರುವುದು ಇನ್ಮುಂದೆ ಸೀತಮ್ಮ ಬಳಿ ಇರುತ್ತೇನೆ ಎಂದು ಒದ್ದಾಡಿದ್ದು, ಸಿಹಿ ಬಂದು ಹೊರಗಡೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಸುಬ್ಬಿಯನ್ನು ಕಣ್ಣು ಮುಚ್ಚಲು ಹೇಳಿ. ಅವಳ ಆತ್ಮವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಒಟ್ನಲ್ಲಿ ಸೀತಾಳ ಕರುಳಬಳ್ಳಿಗಳು ಒಂದಾಗಿವೆ.

Seetharama Serial 08 February episode written update

ಬೇಸರ ಮಾಡಿಕೊಂಡ ಸುಬ್ಬಿ

ಇವರಿಬ್ಬರ ಒಡನಾಟ ನೋಡುವುದೇ ಎಲ್ಲರಿಗೂ ಖುಷಿ ಕೊಟ್ಟಿದೆ. ಸುಬ್ಬಿಗೆ ತನ್ನ ಮನೆಯವರನ್ನು ಸಿಹಿ ಪರಿಚಯ ಮಾಡಿಸಿದ್ದಾಳೆ. ಸುಬ್ಬಿಯ ಆತ್ಮ ರಾಮ್ ಮನೆಯಲ್ಲಿ ಓಡಾಡಿದ್ದು, ಯಾವ ಯಾವ ಕೋಣೆ ಎಲ್ಲೆಲ್ಲಿದೆ ಎಂದು ನೋಡಿದ್ದಾಳೆ. ಭಾರ್ಗವಿ, ವಿಶ್ವ, ಸಾಧನಾ ಎಲ್ಲರನ್ನೂ ನೋಡಿಕೊಂಡು ಕೊನೆಗೆ ಸುಬ್ಬಿಯ ಆತ್ಮ ಸೀದಾ ರಾಮ್ ಮತ್ತು ಸೀತಾ ರೂಮಿಗೆ ಹೋಗಿದೆ. ಸೀತಾ ಪಕ್ಕದಲ್ಲಿ ಬೆಳ್ಳಿ ಗೊಂಬೆ ಮಲಗಿದೆ. ಅದನ್ನು ತೆಗೆದು ಸುಬ್ಬಿಯ ಆತ್ಮ ಅಮ್ಮನ ಪಕ್ಕ ಮಲಗಿದ್ದು, ಇದೇ ವೇಳೆಗೆ ಅವರ ತಾತ ಬಂದು ಸುಬ್ಬಿ ಹೊರಗಡೆ ಯಾಕೆ ನಿಂತಿದ್ದೀಯಾ ಎಂದು ಮಾತನಾಡಿಸಿದ್ದಾರೆ. ಇನ್ನು ಸುಬ್ಬಿಗೆ ಇಷ್ಟು ವರ್ಷ ಇದ್ದ ಜಾಗವನ್ನು ಬಿಟ್ಟು ಹೋಗಬೇಕಲ್ಲ ಎಂಬ ಬೇಸರ ಕಾಡುತ್ತಿದೆ.

ಭಾರ್ಗವಿಗೆ ತಡೆಯಲಾಗುತ್ತಿಲ್ಲ ಕುತೂಹಲ

ಇನ್ನು ರಾಮ್ ಫುಲ್ ಖುಷಿಯಾಗಿದ್ದು, ಇವತ್ತು ನಿಮಗೊಂದು ಸರ್ಪ್ರೈಸ್ ಇದೆ ಎಂದು ಸೀತಾಳಿಗೆ ಹೇಳಿದ್ದಾನೆ. ಇತ್ತ ಸೂರಿ ಅಶೋಕ್ ಬಳಿ ರಾಮ್ ಕೇಳಿದ ಒಂದು ವಾರ ಮುಗೀತಾ ಬಂತು. ಸೀತಾ ಇನ್ನೂ ಸರಿ ಹೋಗಿಲ್ಲ. ಅವಳನ್ನು ಆಸ್ಪತ್ರೆಗೆ ಸೇರಿಸಬೇಕು. ಆ ವಿಚಾರದ ಬಗ್ಗೆ ರಾಮ್ ಜೊತೆಗೆ ಮಾತನಾಡು ಎಂದು ಹೇಳುತ್ತಾರೆ. ಆಗ ಅಶೋಕ್ ಅದರ ಅಗತ್ಯವಿಲ್ಲ ಸೂರಿ. ಇವತ್ತು ನಿಮಗೆಲ್ಲಾ ಸರ್ಪ್ರೈಸ್ ಇದೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ಇದು ಭಾರ್ಗವಿಯ ಕುತೂಹಲವನ್ನು ಹೆಚ್ಚಿಸಿದೆ.

ಸಿಹಿ ಜಾಗಕ್ಕೆ ಬರುತ್ತಿದ್ದಾಳೆ ಸುಬ್ಬಿ

ಇನ್ನು ರಾಮ್ ಗೆ ಇದ್ದಕ್ಕಿದ್ದ ಹಾಗೆಯೇ ಸಿಹಿಯ ನೆನಪಾಗಿದ್ದು, ಸಿಹಿ ಜಾಗಕ್ಕೆ ಮತ್ತೊಂದು ಮಗುವನ್ನು ಕರೆತರುತ್ತಿದ್ದೇನೆ. ಇದು ಎಷ್ಟು ಸರಿ ಎಂದು ತನ್ನನ್ನು ತಾನು ಪ್ರಶ್ನಿಸಿಕೊಂಡಿದ್ದಾನೆ. ಇನ್ನು ಸುಬ್ಬಿ ಸಿಹಿಯಾಗಿ ಮನೆಗೆ ಬಂದರೆ ಯಾರು ಯಾರು ಹೇಗೆಲ್ಲಾ ರಿಯಾಕ್ಟ್ ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.

More from Filmibeat

English summary
subbi soul and sihi soul travels to house and learns about family members.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X