Seetharama ; ಸೀತಾರಾಮ ವಿರುದ್ಧ ಮುನಿಸಿಕೊಂಡ ಪ್ರೇಕ್ಷಕರು, ಕಾರಣ ಏನು...?
ಸೀತಾರಾಮ ಧಾರಾವಾಹಿಯಲ್ಲಿ ಬಹುದೊಡ್ಡ ಟ್ವಿಸ್ಟ್ ಎಲ್ಲರನ್ನು ಬೇಸರಗೊಳಿಸಿದೆ. ಖುಷಿ ಖುಷಿಯಾಗಿ, ಸದಾ ಎಲ್ಲರ ಜೊತೆಗೆ ಮಾತನಾಡಿಕೊಂಡಿರುತ್ತಿದ್ದ ಸಿಹಿ ಪುಟಾಣಿ ಈಗ ಕಣ್ಣೀರು ಹಾಕುತ್ತಿದ್ದಾಳೆ. ಅಪ್ಪ-ಅಮ್ಮ ಬೇಕು ಎಂದು ಊಟ. ತಿಂಡಿ ಬಿಟ್ಟು ಕೊರಗುತ್ತಿರುವ ಸಿಹಿಯನ್ನು ನೋಡಲು ಕಷ್ಟವಾಗುತ್ತಿದೆ ಎಂದು ವೀಕ್ಷಕರು ಕೂಡ ಬೇಸರ ಮಾಡಿಕೊಂಡಿದ್ದಾರೆ. ಅದರಲ್ಲೂ ಪ್ರೋಮೋ ಒಂದರಲ್ಲಿ ಸಿಹಿಯನ್ನು ಸಾಯಿಸಿರುವುದು ಸರಿಯಲ್ಲ ಎಂದು ವಾದ ಮಾಡಿದ್ದಾರೆ. ಆದರೆ, ಈಗ ಸೀರಿಯಲ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ.
ಮಗಳ ಜೊತೆಗೆ ಆಡಿ ನಲಿದ ಸೀತಾ-ರಾಮ
ರಾಮ್ ತನ್ನ ಇನ್ ಫ್ಲುಯೆನ್ಸ್ ಬಳಸಿಕೊಂಡು ಮಗಳು ಸಿಹಿನ್ನು ಪ್ರತಿ ಶನಿವಾರ ಭೇಟಿ ಮಾಡಲು ಲೀಗಲ್ ಆಗಿ ಪತ್ರವನ್ನು ಪಡೆದಿದ್ದಾನೆ. ಇದರ ಪ್ರಕಾರ ಪ್ರತಿ ಶನಿವಾರ ಬೆಳಗ್ಗೆಯಿಂದ ಸಂಜೆ 6 ಗಂಟೆ ಒಳಗೆ ಕರೆದುಕೊಂಡು ಬರಬೇಕು ಎಂದಿರುತ್ತದೆ. ಸಿಹಿಗೆ ಈ ವಿಚಾರ ಗೊತ್ತಾದ ಕೂಡಲೆ ಖುಷಿಯಾಗಿದ್ದಾಳೆ. ಬೆಳಗ್ಗೆ ಎದ್ದು ರೆಡಿಯಾಗಿ ಸೀತಾ ಮತ್ತು ರಾಮ್ ಬರುತ್ತಿದ್ದಂತೆ ನಗು ನಗುತ್ತಾ ಹೊರಟಿದ್ದಾಳೆ. ಅಪ್ಪ-ಅಮ್ಮನ ಜೊತೆಗೆ ಆಡಿ ಕುಣಿದು ಪಾನಿಪೂರಿ, ಜೋಳ ತಿಂದು ತೇಗಿದ್ದಾಳೆ. ಅಪ್ಪ-ಅಮ್ಮನಿಗೆ ನಿಮ್ಮನ್ನು ಬಿಟ್ಟು ಹೋಗಲು ಇಷ್ಟವಿಲ್ಲ. ಯಾವಾಗ ಈ ಸಮಸ್ಯೆ ಬಗೆ ಹರಿಯುತ್ತೆ ಎಂದು ಸಂಕಟದಲ್ಲೇ ವಿಚಾರಿಸಿದ್ದಾಳೆ. ಅಪ್ಪ-ಅಮ್ಮನಿಗೆ ನೂರು ಮುತ್ತುಗಳನ್ನು ಕೊಟ್ಟು ಬೀಳ್ಕೊಡುಗೆ ನೀಡಿದ್ದಾಳೆ.

ಸೀತಾ ಮೇಲಿನ ಹೊಟ್ಟೆಕಿಚ್ಚು ಎಂದ ಶಾಲಿನಿ
ಇತ್ತ ಚಾಂದಿನಿ ಶಾಲಿನಿಯನ್ನು ಪ್ರಶ್ನೆ ಮಾಡಿದ್ದಾಳೆ. ಸಿಹಿ ಎಂದರೆ ನಿನಗೆ ಇಷ್ಟವಿಲ್ಲ. ಮಕ್ಕಳು ಎಂದರೆ ಉರಿದು ಬೀಳುವ ನೀನು ಈಗ ಸಿಹಿ ಮೇಲೆ ಯಾಕೆ ಇಷ್ಟು ಮೋಹ ತೋರುತ್ತಿದ್ದೀಯಾ ಎಂದು ಪ್ರಶ್ನಿಸುತ್ತಾಳೆ. ಆಗ ಶಾಲಿನಿ ತನಗೆ ಸೀತಾ ಮೇಲೆ ಕೋಪವಿದೆ. ಈಗಲೂ ಸಿಹಿ ಎಂದರೆ ಸ್ವಲ್ಪವೂ ಇಷ್ಟವಿಲ್ಲ. ಆದರೆ, ಸೀತಾ ತಾನೊಬ್ಬಳೇ ಜಗತ್ತಿನಲ್ಲಿರುವ ತಾಯಿ ಎಂಬಂತೆ ನಡೆದುಕೊಳ್ಳುತ್ತಾಳೆ. ಅವಳು ಕಷ್ಟಪಡುವುದನ್ನು ನೋಡಬೇಕು. ಅದಕ್ಕೆ ನಾನು ಸಿಹಿಯನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದು. ನೀನು ಸೀತಾಳನ್ನು ಮಟ್ಟ ಹಾಕಲು ಏನು ಮಾಡಬೇಕು ಎಂದು ಪ್ಲಾನ್ ಮಾಡು ಎಂದು ಹೇಳುತ್ತಾಳೆ. ಈ ಮಾತುಗಳನ್ನು ಮೇಘಶ್ಯಾಮ್ ಕೇಳಿಸಿಕೊಂಡು ಬೇಸರ ಮಾಡಿಕೊಳ್ಳುತ್ತಾನೆ.
ವಾಪಸ್ ಬಂದ ಸಿಹಿಗೆ ಶಾಲಿನಿ ಬೈಗುಳ
ಸಿಹಿ ಮನೆಗೆ ಬರುತ್ತಿದ್ದಂತೆ ಶಾಲಿನಿ ಜೋರಾಗಿ ಬಾಗಿಲನ್ನು ಹಾಕುತ್ತಾಳೆ. ಸಿಹಿ ಆಟವಾಡಿ ಬಟ್ಟೆಯನ್ನೆಲ್ಲಾ ಕೊಳೆ ಮಾಡಿಕೊಂಡಿರುತ್ತಾಳೆ. ಇದನ್ನು ನೋಡಿದ ಶಾಲಿನಿಗೆ ಕೋಪ ಬರುತ್ತದೆ. ಸ್ನಾನ ಮಾಡು ಎನ್ನುತ್ತಾಳೆ. ಮತ್ತೆ ಹೀಗೆಲ್ಲಾ ಕೊಳೆ ಮಾಡಿಕೊಳ್ಳಬೇಡ. ಕ್ಲೀನ್ ಆಗಿ, ಡಿಸಿಪ್ಲೈನ್ ನಿಂದ ಇರು ಎನ್ನುತ್ತಾಳೆ. ಆಗ ಸಿಹಿ ನಮ್ಮ ಸೀತಮ್ಮ ಹೀಗೆಲ್ಲಾ ಹೇಳೋದೇ ಇಲ್ಲ ಎನ್ನುತ್ತಾಳೆ. ಬಳಿಕ ತಾನು ಆಚೆ ತಿಂದ ತಿಂಡಿಗಳ ಲಿಸ್ಟ್ ಹೇಳುತ್ತಾಳೆ. ಇದನ್ನೆಲ್ಲಾ ಕೇಳಿದ ಶಾಲಿನಿ ಮತ್ತೆ ಬೈಯುತ್ತಾಳೆ. ಹೊರಗಡೆ ಊಟ ಮಾಡಬೇಡ. ಅದೆಲ್ಲಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾಳೆ. ಸೀತಾಳನ್ನು ಬೈಯುತ್ತಾಳೆ ಆಗ ಸಿಹಿಗೆ ಕೋಪ ಬರುತ್ತದೆ. ಸೀತಮ್ಮನನ್ನು ಮತ್ತೆ ಬೈದರೆ ನಾನಂತೂ ಸುಮ್ಮನಿರುವುದಿಲ್ಲ ಎಂದು ಹೇಳುತ್ತಾಳೆ.
ಶಾಲಿನಿಗೆ ಬಂದ ಫೋನ್ ಯಾರದ್ದು..?
ಆ ನಂತರ ಸಿಹಿಯನ್ನು ಸಮಾಧಾನದಿಂದದ ಮಾತನಾಡಿಸಲು ಯತ್ನಿಸುತ್ತಾಳೆ. ಸಿಹಿ ತನ್ನ ರೂಮಿನಲ್ಲಿ ರಾಮ್, ಸೀತಾ ಚಿತ್ರ ಬರೆದು ಮಿಸ್ ಯೂ ಸೀತಮ್ಮ ಎಂದು ಬರೆದಿರುತ್ತಾಳೆ. ಇದನ್ನು ನೋಡಿದ ಶಾಲಿನಿಗೆ ಮತ್ತೆ ಕೋಪ ಬರುತ್ತದೆ. ಆಗ ಶಾಲಿನಿ ಡ್ರಾಯಿಂಗ್ ಅನ್ನು ಹರಿದು ಸಿಹಿಗೆ ಮತ್ತೆ ಬೈಯುತ್ತಾಳೆ. ಅಷ್ಟರಲ್ಲಿ ಶಾಲಿನಿಗೆ ಫೋನ್ ಬರುತ್ತದೆ. ಭಾರ್ಗವಿಯ ಫೋನ್ ಇದಾಗಿದ್ದು, ಯಾವ ಪ್ಲಾನ್ ಅನ್ನು ಜಾರಿಗೊಳಿಸಲು ಫೋನ್ ಮಾಡಿದ್ದಾಳೆ ಎಂಬುದು ಮುಂದೆ ತಿಳಿಯಬೇಕಿದೆ


Click it and Unblock the Notifications











