Seetharama ; ಮಗುವಿನ ಬಗ್ಗೆ ನಿಜ ಹೇಳಿದ ಶಾಲಿನಿ : ಸಿಹಿಯ ತಂದೆ-ತಾಯಿ ಬಗ್ಗೆ ಸತ್ಯ ತಿಳಿದ ಸೀತಾ..!
ಸೀತಾರಾಮ ಧಾರಾವಾಹಿಯಲ್ಲಿ ಪ್ರಿಯಾಳಿಗೆ ಸರ್ಜರಿಯಾಗಿದೆ. ಆದರೆ, ಮನೆಯಿಂದ ಅವರ ತಾಯಿ ಹಾಗೂ ಅಂಜಲಿಯನ್ನು ಬಾರದಂತೆ ಅಶೋಕ್ ಹೇಳಿದ್ದಾನೆ. ಮನೆಯವರು ಯಾರು ಇಲ್ಲ ಎಂದು ಇಬ್ಬರಿಗೂ ಮನದಲ್ಲಿ ಬೇಸರವಿದ್ದರೂ ತೋರಿಸಿಕೊಳ್ಳುವುದಿಲ್ಲ. ಆದರೆ, ರಾಮ್ ಮತ್ತು ಸೀತಾ ಪ್ರಿಯಾಳನ್ನು ನೋಡಲು ಬರುತ್ತಾರೆ. ಪ್ರಿಯಾಳಿಗೆ ಸೀತಾ ಊಟ ಮಾಡಿಸುತ್ತಾಳೆ. ಇಬ್ಬರಿಗೂ ಆಗ ಸಮಾಧಾನವಾಗುತ್ತದೆ. ಅಶೋಕ್ ಗೆಳೆಯ ರಾಮ್ ಬಂದಿದ್ದಕ್ಕೆ ಬಹಳ ಖುಷಿ ಪಡುತ್ತಾನೆ.
ಸಿಹಿಗಾಗಿ ಒದ್ದಾಡಿದ ಸೀತಾ
ಸಿಹಿ ಆಡಲು ಶ್ಯಾಮ್ ಅವರ ಮನೆಗೆ ಹೋಗಿದ್ದಾಳೆ. ಈ ವಿಚಾರ ತಿಳಿದು ಶಾಕ್ ಆದ ಸೀತಾ ನೇರವಾಗಿ ಶ್ಯಾಮ್ ಮನೆಗೆ ಹೋಗುತ್ತಾಳೆ. ಸಿಹಿಯನ್ನು ಮನೆಗೆ ಕರೆಯುತ್ತಾಳೆ. ಆದರೆ, ಸಿಹಿ ಇಲ್ಲೇ ಮಲಗುತ್ತೇನೆ ಎಂದು ಹಠ ಮಾಡುತ್ತಾಳೆ. ರಾಮ್ ಸಿಹಿಯ ಆಸೆಗೆ ಒಪ್ಪಿಗೆ ಕೊಡುತ್ತಾನೆ. ಸೀತಾಳಿಗೆ ಇಷ್ಟವಿಲ್ಲದಿದ್ದರೂ ಕೂಡ ಬಲವಂತವಾಗಿ ಅಲ್ಲೇ ಬಿಟ್ಟು ಬರುತ್ತಾಳೆ. ಸಿಹಿ ಒಬ್ಬಳೇ ಹೇಗಿರುತ್ತಾಳೆ. ಅವರಿಂದ ಶ್ಯಾಮ್ ಮತ್ತು ಶಾಲಿನಿಗೆ ಸಮಸ್ಯೆ ಆಗುತ್ತದೆ ಎಂದು ರಾಮ್ ಬಳಿ ಸಾಕಷ್ಟು ಬಾರಿ ಕೇಳುತ್ತಾಳೆ. ಆದರೆ ರಾಮ್ ಬೇಡ ಎಂದು ಹೇಳುತ್ತಾ ಮಲಗುತ್ತಾನೆ. ಮಲಗಿದ ಬಳಿಕವೂ ಸೀತಾ ಸಿಹಿಗಾಗಿ ಬಹಳ ಒದ್ದಾಡುತ್ತಿರುತ್ತಾಳೆ.

ಸಿಹಿಗೆ ಬೈದ ಶಾಲಿನಿ
ಇನ್ನು ಸಿಹಿ ಸುಮ್ಮನೆ ಮಲಗದೇ ನಿಮ್ಮ ಜೊತೆಗೆ ಮಲಗುತ್ತೇನೆ, ಕತೆ ಹೇಲಿ ಎಂದು ಶಾಲಿನಿ ಬಳಿ ಹೇಳುತ್ತಾಳೆ. ಮೊದಲೇ ಶಾಲಿನಿಗೆ ಸಿಹಿ ಎಂದರೆ ಬೇಸರವಿದ್ದೇ ಇರುತ್ತದೆ. ಅದರಲ್ಲೂ ಸಿಹಿ ಮನೆಯಲ್ಲಿ ಉಳಿದುಕೊಂಡಿರುವುದು ಇಷ್ಟವಿರುವುದಿಲ್ಲ. ಇದೀಗ ಕಥೆ ಹೇಳಿ ಎಂದು ಕೇಳಿದ್ದು ಕೋಪ ತರಿಸುತ್ತದೆ. ಹೀಗಾಗಿ ಸಿಹಿಗೆ ಬೈಯುತ್ತಾಳೆ. ನೀನು ಇಷ್ಟಪಟ್ಟು ಮನೆಗೆ ಬಂದಿದ್ದು, ಹಾಗಾಗಿ ನಮಗೆ ಇರಿಟೇಟ್ ಮಾಡಬೇಡ. ಸುಮ್ಮನೆ ಮಲಗು ಎಂದು ಹೇಳುತ್ತಾಳೆ. ಅಷ್ಟರಲ್ಲಿ ಶ್ಯಾಮ್ ಬಂದು ಸಿಹಿಗೆ ಕಥೆ ಹೇಳುತ್ತೇನೆ ಎಂದು ಹೇಳುತ್ತಾನೆ. ಸಿಹಿ ತುಂಬಾ ಮಾತನಾಡುತ್ತಾಳೆ. ಇದು ಶಾಲಿನಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ.
ಮಗು ಬಗ್ಗೆ ಸತ್ಯ ಹೇಳಿದ ಶಾಲಿನಿ
ಶ್ಯಾಮ್ ಬೆಳಗ್ಗೆ ಎದ್ದ ಕೂಡಲೇ ಡಾ.ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಿ ಸತ್ಯ ತಿಳಿಯೋಣ. ಮಗು ಸತ್ತಿದೆ ಎಂದು ಸುಳ್ಳು ಹೇಲಿದ್ಯಾಕೆ. ತಮಗೆ ಮೋಸ ಮಾಡಲು ಕಾರಣವೇನು ಎಂದು ತಿಳಿದುಕೊಳ್ಳೋಣ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಶಾಲಿನಿ ಸುಮ್ಮನಿರಲಾಗದೇ ಮಗು ಸತ್ತಿದೆ ಎಂದು ಸುಳ್ಳು ಹೇಳಿದ್ದು ನಾನು, ವೈದ್ಯರಲ್ಲ ಎಂದು ಸತ್ಯವನ್ನು ಹೇಳುತ್ತಾಳೆ. ಈ ಮಾತನ್ನು ಕೇಳಿದ ಶ್ಯಾಮ್ ಬಹಳ ಬೇಸರ ಮಾಡಿಕೊಳ್ಳುತ್ತಾನೆ. ಇದೇ ಸಮಯಕ್ಕೆ ಸರಿಯಾಗಿ ಸಿಹಿಯನ್ನು ಕರೆದುಕೊಂಡು ಬರೋಣ ಎಂದು ಸೀತಾ ಬಂದಿರುತ್ತಾಳೆ. ಬಾಗಿಲಲ್ಲಿ ನಿಂತು ಸೀತಾ ಎಲ್ಲಾ ವಿಚಾರವನ್ನು ಕೇಳಿಸಿಕೊಳ್ಳುತ್ತಾಳೆ. ಆಗ ಸೀತಾಳಿಗೆ ಸಿಹಿ ಶ್ಯಾಮ್ ಮತ್ತು ಶಾಲಿನಿ ಮಗು ಎಂಬ ಸತ್ಯ ಗೊತ್ತಾಗುತ್ತದೆ.
ವೈದ್ಯರಿಗೆ ಧನ್ಯವಾದ ಹೇಳಿದ ಸೀತಾ
ಈ ವಿಚಾರ ವೈದ್ಯರಿಗೂ ಗೊತ್ತಿದೆ. ಹಾಗಾಗಿಯೇ ಅವರು ರಾಮ್ ಬಳಿ ಶ್ಯಾಮ್ ಅವರು ನೆನಪಾಗುತ್ತಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಸಿಹಿ ನನ್ನ ಮಗಳು. ಯಾವುದೇ ಕಾರಣಕ್ಕೂ ನಾನು ಅವರಿಗೆ ನನ್ನ ಮಗಳು ಸಿಹಿಯನ್ನು ಬಿಟ್ಟುಕೊಡುವುದಿಲ್ಲ ಎಂದು ತೀರ್ಮಾನಿಸುತ್ತಾಳೆ. ಸೀತಾ ವೈದ್ಯರಿಗೆ ಥ್ಯಾಂಕ್ಸ್ ಎಂದು ಮೆಸೇಜ್ ಮಾಡುತ್ತಾಳೆ. ವೈದ್ಯರು ಸೀತಾಳನ್ನು ಕ್ಲಿನಿಕ್ ಗೆ ಬನ್ನಿ ಮಾತನಾಡೋಣ ಎಂದು ಹೇಳುತ್ತಾರೆ. ಈಗ ಸೀತಾಳಿಗೆ ಸತ್ಯ ಗೊತ್ತಾಗಿದೆ. ಆದರೆ ಮುಂದೆ ಮನೆಯವರಿಗೆಲ್ಲಾ ಯಾವಾಗ ಸತ್ಯ ತಿಳಿಯುತ್ತೆ ಎಂಬ ಕುತೂಹಲ ಮೂಡಿದೆ.


Click it and Unblock the Notifications











