Seetharama ; ಸಿಹಿಯನ್ನು ಹುಡುಕುತ್ತಿರುವ ಸೀತಾ, ಭಾರ್ಗವಿ ಆಟಕ್ಕೆ ಬ್ರೇಕ್ ಹಾಕ್ತಾಳಾ ಸುಬ್ಬಿ..?
ಸೀತಾರಾಮ ಧಾರಾವಾಹಿಯಲ್ಲಿ ಸಿಹಿಗೆ ಭಾರ್ಗವಿ ಮಾತನಾಡಿದ ಮಾತುಗಳು ಗೊತ್ತಾಗಿದೆ. ರಾಮ್ ತಾಯಿಯನ್ನು ಕೊಂದಿದ್ದು ಭಾರ್ಗವಿ ಎಂಬ ಸತ್ಯವನ್ನು ಹೇಳಲು ಮುಂದಾಗಿದ್ದಾಳೆ. ಸಿಹಿ ಬದುಕಿದರೆ ತನಗೆ ಕಷ್ಟ ಎಂದು ತಿಳಿದಿರುವ ಭಾರ್ಗವಿ ಅವಳನ್ನು ಕೊಲ್ಲಲು ರುದ್ರಪ್ರತಾಪ್ ಸಹಾಯ ಪಡೆದಿದ್ದಾಳೆ. ಸಿಹಿಯನ್ನು ದತ್ತು ಪಡೆಯುವ ಮುನ್ನವೇ ಕೊಲ್ಲಿಸಲು ಪ್ಲಾನ್ ಮಾಡಿದ್ದಳು.ಆದರೆ, ಅದು ಸಾಧ್ಯವಾಗಲಿಲ್ಲ. ಸಿಹಿಯನ್ನು ರಾಮ್ ಮತ್ತು ಸೀತಾ ಸೇರಿ ಶ್ಯಾಮ್ ಹಾಗೂ ಶಾಲಿನಿ ದಂಪತಿಗಳಿಂದ ದತ್ತು ಪಡೆದು ಪತ್ರಗಳಿಗೆ ಸಹಿ ಹಾಕಿದ್ದಾಗಿದೆ.
ಸಿಹಿ ಕಥೆ ಮುಗಿದಾಯ್ತು
ಸಿಹಿ ಕಾರಿನಲ್ಲಿ ಅಮ್ಮನೊಂದಿಗೆ ಹೋಗುವ ದಾರಿಯಲ್ಲೇ ಸತ್ಯ ಹೇಳಿದ್ದಾಳೆ. ವಾಣಿ ಅಜ್ಜಿಯನ್ನು ಕೊಂದಿದ್ದು, ಬಡ್ಡಿಬಂಗಾರಮ್ಮ ಆಂಟಿ ಎಂದು ಹೇಳಿದ್ದಾಳೆ. ಸೀತಾ ಈ ಮಾತನ್ನು ಕೇಳಿ ಶಾಕ್ ಆಗಿದ್ದಾಳೆ. ಅಲ್ಲದೇ, ಈ ಹಿಂದೆ ಭಾರ್ಗವಿ ರೂಮ್ ನಲ್ಲಿ ಸಿಹಿಯನ್ನು ಹುಟ್ಟಲಿಲ್ಲ ಅನಿಸುತ್ತೇನೆ ಎಂದು ಮಾತನಾಡಿದ ಮಾತು ನೆನಪಾಗಿದ್ದು, ಈ ವಿಚಾರವನ್ನು ಸೀತಾಳಿಗೆ ಸಿಹಿ ಹೇಳುತ್ತಾಳೆ. ಆಗ ಸೀತಾ ಈ ವಿಚಾರವನ್ನು ರಾಮ್ ಬಳಿ ಹೇಳೋಣ ಎಂದು ಕಾರಿನಿಂದ ಇಳಿಯುತ್ತಾಳೆ. ಅಷ್ಟರಲ್ಲಿ ರುದ್ರಪ್ರತಾಪ್ ಹುಡುಗರನ್ನು ಬಿಟ್ಟು ಸಿಹಿಗೆ ಅಪಘಾತವಾಗುವಂತೆ ಮಾಡುತ್ತಾನೆ. ಕಾರು ಡಿಕ್ಕಿ ಹೊಡೆದ ಕೂಡಲೇ ಸಿಹಿ ಸ್ಪಾಟ್ ನಲ್ಲೇ ಸಾವನ್ನಪ್ಪಿದ್ದಾಳೆ. ಆದರೆ, ಅವಳ ಆತ್ಮ ದೇಹದಿಂದ ಹೊರಗೆ ಬಂದಿದ್ದು, ತಾನು ಸತ್ತಿರುವ ಸತ್ಯ ಅವಳಿಗೆ ಅರ್ಥವಾಗಿಲ್ಲ.

ಸೀತಾಳ ಬಳಿ ಸುಳ್ಳು ಹೇಳಿರುವ ರಾಮ
ಇತ್ತ ಸೀತಾ ಇಲ್ಲದೆಯೇ ಸಿಹಿಯ ಕಾರ್ಯಗಳನ್ನು ರಾಮ್ ಮುಗಿಸಿದ್ದಾಗಿದೆ. ರಾಮ್ ಮತ್ತು ಸೀತಾ ಬಳಿ ಸಿಹಿ ಮಾತನಾಡಲು ಯತ್ನಿಸಿದ್ದು, ಯಾರೂ ಅವಳ ಮಾತನ್ನು ಕೇಳಿಸಿಕೊಳ್ಳಲು ತಯಾರಿಲ್ಲ. ಯಾಕೆಂದರೆ ಆತ್ಮವಾಗಿರುವ ಸಿಹಿ ಯಾರ ಕಣ್ಣಿಗೂ ಕಾಣುತ್ತಿಲ್ಲ. ಜೊತೆಗೆ ಯಾರಿಗೂ ಅವಳ ಮಾತುಗಳು ಕೇಳಿಸುತ್ತಿಲ್ಲ. ಸೀತಾಳ ತಲೆಗೂ ಏಟಾಗಿದ್ದು, ಪ್ರಜ್ಞೆ ಬಂದಿದೆ. ಆದರೆ, ವೈದ್ಯರು ಅವಳ ಬಳಿ ಸಿಹಿ ಸತ್ತಿರುವ ವಿಚಾರವನ್ನು ಹೇಳದಂತೆ ತಿಳಿಸಿದ್ದಾರೆ. ಹೀಗಾಗಿ ರಾಮ್ ಸೀತಾ ಬಳಿ ಸಿಹಿ ಅರಾಮಾಗಿದ್ದಾಳೆ. ಅವಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಮನೆಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ.
ಗೊಂದಲಕ್ಕೆ ಸಿಲುಕಿದ ಸಿಹಿಯ ಆತ್ಮ
ಇತ್ತ ಮನೆಯಲ್ಲಿ ಸಿಹಿಯ ಫೋಟೋಗೆ ಹಾರ ಹಾಕಿ ದೇವರ ಮನೆಯಲ್ಲಿ ಇಡಲಾಗಿದೆ. ಸಿಹಿ ಸತ್ತಿರುವ ವಿಚಾರ ಸೀತಾಳಿಗೆ ತಿಳಿಯಬಾರದು ಎಂದು ಹೇಳಿದರೂ ಕೂಡ ಭಾರ್ಗವಿ ಸತ್ಯ ಇವತ್ತಲ್ಲ ನಾಳೆ ಗೊತ್ತಾಗಲೇಬೇಕು ಎಂದು ಹೇಳಿದ್ದಾಳೆ. ಆದರೆ, ಅನಿ ಸೀತಾ ಅತ್ತಿಗೆಗೆ ಸಮಸ್ಯೆ ಆಗಬಾರದು ಎಂದು ಸಿಹಿ ಬದುಕಿದ್ದಾಳೆ ಎಂಬಂತೆ ನಡೆದುಕೊಂಡಿದ್ದಾನೆ. ಸೀತಾ ಮನೆಗೆ ಬಂದ ಕೂಡ ಸಿಹಿಯನ್ನು ಹುಡುಕಾಡುತ್ತಿದ್ದಾಳೆ. ಬೇಕಂತಲೇ ಸಿಹಿ ಬಚ್ಚಿಟ್ಟುಕೊಂಡಿದ್ದಾಳೆ ಎಂದು ಭಾವಿಸಿದ್ದಾಳೆ. ಸಿಹಿ ಅವರ ಸುತ್ತವೇ ಇದ್ದು, ಇವರಿಗೆಲ್ಲಾ ತಾನ್ಯಾಕೆ ಕಾಣುತ್ತಿಲ್ಲ ಎಂಬ ಗೊಂದಲದಲ್ಲಿದ್ದಾಳೆ.
ಸಿಹಿಗೆ ಸಿಗುತ್ತಾಳಾ ಅವಳ ಸಹೋದರಿ ಸುಬ್ಬಿ
ರಾಮ್ ಈಗಾಗಲೇ ಮಗಳನ್ನು ಕಳೆದುಕೊಂಡಿರುವ ದುಃಖದಲ್ಲಿದ್ದು, ಇತ್ತ ಸೀತಾಳನ್ನು ಸಮಾಧಾನ ಮಾಡುವ ಜವಾಬ್ದಾರಿಯೂ ಅವನ ಮೇಲಿದೆ. ರಾಮ್ ಈಗಿನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾನೋ ಕಾದು ನೋಡಬೇಕಿದೆ. ಇನ್ನು ಭಾರ್ಗವಿಯ ಮತ್ತೊಂದು ಮುಖ ಸಿಹಿಗೆ ಗೊತ್ತಾಗಿದ್ದು, ಆ ಸತ್ಯವನ್ನು ಬಯಲು ಮಾಡಬೇಕಿದೆ. ಈಗಾಗಲೇ ಆತ್ಮವಾಗಿರುವ ಸಿಹಿ ತನ್ನ ಸಹೋದರಿ ಸುಬ್ಬಿಯನ್ನು ಹುಡುಕುತ್ತಾಳಾ..? ಸುಬ್ಬಿ ಜೊತೆಗೆ ಸೇರಿಕೊಂಡು ಭಾರ್ಗವಿ ಆಟಗಳಿಗೆ ಬ್ರೇಕ್ ಹಾಕುತ್ತಾಳಾ..? ಧಾರಾವಾಹಿಯ ಮುಂದಿನ ಕಥೆ ಹೇಗೆ ಸಾಗುತ್ತದೆ ಎಂಬ ಕುತೂಹಲವಂತೂ ಮೂಡಿದೆ.


Click it and Unblock the Notifications











