Seetha Rama ; ಮದುವೆ ಬೇಡ ಎಂದು ಹಠ ಮಾಡಿದ ಸೀತಾ : ಆತಂಕದಲ್ಲಿ ಭಾರ್ಗವಿ..!
ಸೀತಾರಾಮ ಧಾರಾವಾಹಿಯಲ್ಲಿ ಸೀತಾಳಿಗೆ ಅರಿಶಿಣ ಶಾಸ್ತ್ರ ಮಾಡಲಾಗುತ್ತಿದೆ. ಸಿಹಿ ಮುತ್ತೈದೆಯಂತೆ ತನ್ನ ತಾಯಿಗೆ ಅರಿಶಿಣ ಶಾಸ್ತ್ರವನ್ನು ಮಾಡಿದ್ದಾಳೆ. ಇತ್ತ ರಾಮ್ ಗೂ ಭಾರ್ಗವಿ ಅರಿಶಿಣ ಶಾಸ್ತ್ರವನ್ನು ಮಾಡುತ್ತಿದ್ದಾಳೆ. ಶಾಸ್ತ್ರ ಮಾಡುವಾಗ ಎಲ್ಲರೂ ರಾಮ್ ನನ್ನು ರೇಗಿಸುತ್ತಿದ್ದಾರೆ. ಅಂತೂ ಇಂತೂ ರಾಮ್ ಸೀತಾ ಮದುವೆ ಆಗುತ್ತಿರುವುದಕ್ಕೆ ಎಲ್ಲರೂ ಖುಷಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ರಾಮ್ ಸಂಬಂಧಿಕರು ಆಗಮಿಸಿದ್ದಾರೆ. ಸೂರ್ಯ ಈ ಥಾತನ ದೊಡ್ಡಪ್ಪನ ಮಗ ಹಾಗೂ ಹೆಂಡತಿ ಬಂದಿದ್ದಾರೆ. ಅವರು ಸೀತಾಳನ್ನು ನೋಡಲು ಬಯಸಿದ್ದಾರೆ.
ಮರಿ ಮೊಮ್ಮಗನನ್ನು ಬಯಸಿದ ಸೂರಿ
ಭಾರ್ಗವಿ ಮತ್ತು ಸೂರಿ ಇಬ್ಬರೂ ಅವರನ್ನು ಸೀತಾ ಇರುವ ಬಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸೀತಾಳನ್ನು ನೋಡಿ ಹೊಗಳುತ್ತಾರೆ. ನಮ್ಮ ರಾಮನಿಗೆ ಸೀತಾಮಾತೆಯಂತಹ ಹುಡುಗಿಯೇ ಸಿಕ್ಕಿದ್ದಾಳೆ ಎಂದು ಖುಷಿ ಪಡುತ್ತಾರೆ. ರಾಮ್ ಬಾಳನ್ನು ಬೆಳಗುವ ಸೀತಾಳಿಗೆ ಆಶೀರ್ವಾದ ಮಾಡುತ್ತಾರೆ. ಆದಷ್ಟು ಬೇಗ ವಂಶದ ಕುಡಿಯನ್ನು ಹೆತ್ತು ಕೊಡು ತಾಯಿ ಎನ್ನುತ್ತಾರೆ. ಆಗ ಸೂರಿ ಕೂಡ ವಂಶೋದ್ಧಾರಕ ವರ್ಷದೊಳಗೆ ಆಗಮಿಸುತ್ತಾನೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ, ನಾನು ನನ್ನ ಮರಿ ಮೊಮ್ಮಗನನ್ನು ನೋಡಿಕೊಂಡೇ ಸಾಯೋದು ಎಂದು ಹೇಳಿದಾಗ ಸೀತಾಳಿಗೆ ಶಾಕ್ ಆಗುತ್ತದೆ. ತಕ್ಷಣವೇ ಈ ವಿಚಾರವಾಗಿ ಮಾತನಾಡಲು ಎದ್ದು ಹೊರಡುತ್ತಾಳೆ.

ರಾಮ್ ಜೊತೆಗೆ ಮಾತನಾಡಲು ಬಯಸಿದ ಸೀತಾ
ಆದರೆ, ಭಾರ್ಗವಿ ಸೀತಾಳನ್ನು ತಡೆಯುತ್ತಾಳೆ. ಏನಾಯ್ತು ಎಂದು ವಿಚಾರಿಸಿದ್ದಕ್ಕೆ, ಸೀತಾ ತನಗೆ ಮಗು ಬೇಡ. ಸೂರಿ ತಾತ ಇನ್ನೂ ಮೊಮ್ಮಗು ಬಗ್ಗೆ ಆಸೆ ಇಟ್ಟುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಾನು ಈಗಾಗಲೇ ರಾಮ್ ಬಳಿ ಮಾತನಾಡಿದ್ದೆ. ರಾಮ್ ಕೂಡ ಬೇಡ ಎಂದು ಹೇಲಿದ್ದರು. ಆದರೆ, ಈ ವಿಚಾರ ಸೂರಿ ತಾತನಿಗೆ ಅರ್ಥವಾಗಿಲ್ಲ ಅಂತ ಅನಿಸುತ್ತಿದೆ. ಈ ವಿಚಾರವನ್ನು ನಾನು ಈಗಲೇ ಸೂರಿ ತಾತ ಹಾಗೂ ರಾಮ್ ಬಳಿ ಮಾತನಾಡಿ ಕ್ಲಿಯರ್ ಮಾಡಿಕೊಳ್ಳಬೇಕು ಎಂದು ಸೀತಾ ಬಯಸುತ್ತಾಳೆ. ಆದರೆ, ಭಾರ್ಗವಿ ಬೇಕಂತಲೇ ಸೀತಾಳನ್ನು ತಡೆಯುತ್ತಾಳೆ. ಸೂರಿ ತಾತನ ಆರೋಗ್ಯ ಸರಿಯಿಲ್ಲ. ಈಗ ಈ ವಿಚಾರದ ಬಗ್ಗೆ ಮಾತನಾಡಿ ಈ ಮನೆಯಲ್ಲಿ ತುಂಬಿರುವ ಖುಷಿಯನ್ನು ಹಾಳು ಮಾಡಬೇಡ. ರಾಮ್ ಈಗಾಗಲೇ ಪ್ರೀತಿಸಿದವಳನ್ನು ಕಳೆದುಕೊಂಡಿದ್ದಾನೆ. ಮತ್ತೆ ಅವನಿಗೆ ನೋವಾಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿ ಅಂಗಲಾಚಿ ಬೇಡುತ್ತಾಳೆ. ಆಗ ಸೀತಾ ಏನೂ ಮಾತನಾಡದೇ ಸುಮ್ಮನಾಗುತ್ತಾಳೆ.
ಕಾಶಿಯಾತ್ರೆಯಲ್ಲಿ ಪಾದ ತೊಳೆದ ಸಿಹಿ
ಇನ್ನು ಕಾಶಿಯಾತ್ರೆಯಲ್ಲಿ ಸಿಹಿ ರಾಮ್ ಗೆ ಪಾದ ತೊಳೆಯುತ್ತಾಳೆ. ಸೀತಮ್ಮನ ಮಗಳಾಗಿರುವ ನಾನು ನಿಮಗೆ ಸೀತಮ್ಮನನ್ನು ಕೊಟ್ಟು ಮದುವೆ ಮಾಡುತ್ತೇನೆ ಎಂದು ಹೇಳುತ್ತಾಳೆ. ಇದೆಲ್ಲವನ್ನು ನೋಡುವ ಸೂರಿ ತಾತ ಹೆಮ್ಮೆ ಪಡುತ್ತಾರೆ. ಇನ್ನು ಸೀತಾಳ ಮನಸ್ಸು ಗೊಂದಲದಲ್ಲಿರುತ್ತದೆ. ಮದುವೆಯಾದ ಬಳಿಕ ಮಗು ಬೇಡ, ತನಗೆ ಸಿಹಿ ಒಬ್ಬಳೇ ಸಾಕು ಎಂಬ ವಿಚಾರವನ್ನು ರಾಮ್ ಜೊತೆಗೆ ಮಾತನಾಡಬೇಕು ಎಂದು ಬಯಸುತ್ತಾಳೆ.

ಗೊಂದಲದಲ್ಲಿರುವ ಸೀತಾಗೆ ಭಾರ್ಗವಿ
ಇಲ್ಲದೇ ಹೋದರೆ, ಈ ಮದುವೆ ಆಗುವುದೇ ಬೇಡ. ಸುಳ್ಳಿನ ಮೇಲೆ ಮದುವೆಯಾಗುವುದು ಸರಿಯಲ್ಲ ಎಂದು ಸೀತಾ ನಿರ್ಧಾರ ಮಾಡಿದ್ದಾಳೆ. ಹಸೆಮಣೆಗೆ ಸೀತಾಳನ್ನು ಕರೆದಾಗ ಸೀತಾ ಬರಲು ನಿರಾಕರಿಸುತ್ತಾಳೆ. ಆಗ ಭಾರ್ಗವಿ ಬಂದು ಏನಾಯ್ತು ಎಂದಿದ್ದಕ್ಕೆ ಈಗಲೇ ನಾನು ಸೂರಿ ತಾತನ ಬಳಿ ಮಾತನಾಡಬೇಕು ಎನ್ನುತ್ತಾಳೆ. ಆಗ ಭಾರ್ಗವಿ ಸೂರಿ ತಾತನಿಗೆ ಸಿಹಿ ಬಗ್ಗೆ ಸೀತಾ ಆತಂಕಗೊಂಡಿದ್ದಾಳೆ ಎಂದು ಸುಳ್ಳು ಸಿಹಿ ಕರೆದುಕೊಂಡು ಬಂದಾಗ ಸೂರಿ ತಾತ ಸಿಹಿ ನನ್ನ ಮೊಮ್ಮಗಳು ಎಂದು ಸೀತಾಳಿಗೆ ಭರವಸೆ ನೀಡಿದಾಗ ಸೀತಾ ಮದುವೆಗೆ ಒಪ್ಪುತ್ತಾಳೆ.


Click it and Unblock the Notifications











