Seetharama ; ಮಗುವಿನ ಗುಂಗಿನಲ್ಲಿರುವ ಶ್ಯಾಮ್ : ಕುಟುಂಬಕ್ಕಾಗಿ ಮಿಡಿಯುತ್ತಿರುವ ಸೀತಾ
ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಸೀತಾ ಬಳಿ ಮಾತನಾಡಿದ್ದಾನೆ. ಯಾವುದೇ ಕಾರಣಕ್ಕೂ ಶ್ಯಾಮ್ ಗೆ ತನ್ನ ಮಗು ಸಿಗುವವರೆಗೂ ನಾವು ಮಗು ಮಾಡಿಕೊಳ್ಳುವುದು ಬೇಡ ಎಂದಿದ್ದಾನೆ. ಅಷ್ಟೇ ಅಲ್ಲದೇ, ಬಾಡಿಗೆ ತಾಯಿ ಬಗ್ಗೆ ಕೊಂಚ ತುಚ್ಛವಾಗಿ ಮಾತನಾಡಿದ್ದಾನೆ. ಶ್ಯಾಮ್ ಗೆ ಸುಳ್ಳು ಹೇಳಿ, ತಾನೇ ಮಗುವನ್ನು ಇಟ್ಟುಕೊಂಡಿರುವುದು ಆ ಬಾಡಿಗೆ ತಾಯಿಯ ತಪ್ಪು ಎಂದು ವಾದಿಸಿದ್ದಾನೆ. ಸೀತಾ ತನ್ನ ಬದುಕಲ್ಲಿ ನಡೆದ ಘಟನೆಯನ್ನು ರಾಮ್ ಬಳಿ ಹೇಳಲಾಗದೇ ಒದ್ದಾಡುವಂತಾಗಿದೆ. ಮದುವೆಗೂ ಮುನ್ನವೇ ತನ್ನ ಬದುಕಿನಲ್ಲಾಗಿರುವ ಕಹಿ ಘಟನೆಯನ್ನು ರಾಮ್ ಬಳಿ ಹಂಚಿಕೊಳ್ಳಬೇಕು ಎಂದಿದ್ದಳು.
ಕುಟುಂಬದ ಬಗ್ಗೆ ಆತಂಕದಲ್ಲಿರುವ ಸೀತಾ
ಆದರೆ, ಹೇಳಲು ಸಾಧ್ಯವಾಗಲಿಲ್ಲ. ಡಾ.ಅನಂತಲಕ್ಷ್ಮೀ ನ ನೋಡಿದ ಬಳಿಕ ಸತ್ಯ ಮುಚ್ಚಿಡುವುದು ಬೇಡ ಎಂದು ನಿರ್ಧರಿಸಿದ ಸೀತಾಳಿಗೆ ಈಗ ಸತ್ಯ ಹೇಳಲಾಗದಂತಹ ಸ್ಥಿತಿ ಬಂದೊದಗಿದೆ. ಭಾರ್ಗವಿ ಬೇರೆ ಸೀತಾ ಹಿಂದೆ ಬಿದ್ದಿದ್ದು, ಈ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಮುನ್ನವೇ ಗೊಂದಲಗಳು ಶುರುವಾಗಿದೆ. ಮಧ್ಯರಾತ್ರಿ ದೇವರ ಮುಂದೆ ನಿಂತು ನನ್ನ ಮಗು ಹಾಗೂ ನನ್ನ ಗಂಡನನ್ನು ನನ್ನಿಂದ ದೂರ ಮಾಡಬೇಡ ಎಂದು ದೇವರ ಬಳಿ ಬೇಡಿಕೊಂಡಿದ್ದಾಳೆ. ಅದೇನೇ ಆಗಲೀ ಯಾವುದೇ ಕಾರಣಕ್ಕೂ ತನ್ನ ನಗುವಿಗೆ ಕಾರಣವಾಗಿರುವ ರಾಮ್ ಮತ್ತು ಸಿಹಿಯನ್ನು ಕಳೆದುಕೊಳ್ಳಬಾರದು ಎಂದು ತೀರ್ಮಾನ ಮಾಡಿದ್ದಾಳೆ.

ಭಾರ್ಗವಿ ಹೊಸ ನಾಟಕ
ಆದರೆ, ಭಾರ್ಗವಿ ತಾನು ಮಾಡಿದ ಪ್ಲಾನ್ ಗಳು ಉಲ್ಟಾ ಆಗುತ್ತಿರುವ ಕಾರಣ ಹೊಸ ಆಟವನ್ನು ಶುರು ಮಾಡಿದ್ದಾಳೆ. ಹಬ್ಬದ ದಿನವೇ ಬೆಳಗೆದ್ದು, ನಾಟಕದ ಕಣ್ಣೀರನ್ನು ಹಾಕುತ್ತಿರುವ ಭಾರ್ಗವಿ ರಾಮ್ ಕಣ್ಣಿನಲ್ಲಿ ಒಳ್ಳೆಯವಳಾಗಲು ಮುಂದಾಗಿದ್ದಾಳೆ. ಚಿಕ್ಕಿ ಕಣ್ಣಲ್ಲಿ ನೀಡು ನೋಡಿದ ರಾಮ್ ಸಾಫ್ಟ್ ಆಗಿದ್ದಾನೆ. ಆದರೆ, ಭಾರ್ಗವಿ ಮಾಡಿರುವ ಪ್ಲಾನ್ ಮಾತ್ರ ಇನ್ನೂ ಯಾರಿಗೂ ಗೊತ್ತಾಗಿಲ್ಲ. ಹೊಸ ನಾಟಕ ಮಾಡಿ ಸೀತಾಳಿಂದ ರಾಮ್ ಅನ್ನು ದೂರ ಂಆಡಲು ಮುಂದಾಗಿರುವುದಂತೂ ಪಕ್ಕಾ ಆಗಿದೆ.
ಮಗುವಿನ ಗುಂಗಿನಲ್ಲಿ ಮೇಘಶ್ಯಾಮ್
ಮೇಘಶ್ಯಾಮ್ ಗೆ ಡಾ. ಅನಂತಲಕ್ಷ್ಮೀ ಮಗು ಬದುಕಿದೆ ಎಂದು ಹೇಳಿದ್ದು, ಡಿಸ್ಟರ್ಬ್ ಮಾಡಿದೆ. ಮೇಘಶ್ಯಾಮ್ ತನ್ನ ಮಗುವನ್ನು ನೋಡಬೇಕು. ತನ್ನ ಬಳೀಗೆ ಕರೆತರಬೇಕು ಎಂದು ತೀರ್ಮಾನಿಸಿದ್ದಾನೆ. ನಿಮಿಷ ನಿಮಿಷವೂ ಮಗುವಿಗಾಗಿ ಮಿಡಿಯುತ್ತಿದ್ದಾನೆ. ಆದರೆ, ಶಾಲಿನಿಗೆ ಇದು ಪ್ರಾಣಸಂಕಟದ ಪರಿಸ್ಥಿತಿಯಾಗಿದೆ. ಕಾರಣ, ಮಗು ಸತ್ತು ಹೋಗಿದೆ ಎಂದು ಸುಳ್ಳು ಹೇಳಿದ್ದೇ ಶಾಲಿನಿ. ಈ ಸತ್ಯ ಶ್ಯಾಮ್ ಗೆ ಗೊತ್ತಾದರೆ ಸಮಸ್ಯೆ ಆಗಬಹುದು ಎಂದು ಗಾಬರಿಯಾಗಿದ್ದಾಳೆ. ಆ ಮಗು ಈಗಾಗಲೇ ಎಲ್ಲೋ ಒಂದು ಕಡೆ ಬೆಳೆಯುತ್ತಿದೆ. ಆ ಮಗುವನ್ನು ನಾವೇಕೆ ಡಿಸ್ಟರ್ಬ್ ಮಾಡುವುದು. ಎಲ್ಲಿದೆಯೋ ಅಲ್ಲೇ ಇರಲಿ ಎಂದು ಬಯಸಿದ್ದಾಳೆ. ಆದರೆ ಶ್ಯಾಮ್ ಮಗು ಬೇಕೇಬೇಕು ಎಂದು ಹಠ ಮಾಡಿದ್ದಾನೆ.

ಮನೆ ಬಿಟ್ಟು ಹೊರಟ ಮೇಘಶ್ಯಾಮ್
ಇನ್ನು ಚಾಂದಿನಿ ಶ್ಯಾಮ್ ಹೆಸರನ್ನು ಬಳಿಸಿಕೊಂಡು ಸೀತಾ ಹಿನ್ನೆಲೆ ಕೆದಕಲು ಮುಂದಾದಳು. ಆದರೆ, ಅದು ತನ್ನ ಅಕ್ಕನ ಬಾಳಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ. ತನ್ನ ಜೊತೆಗೆ ಇದ್ದುಕೊಂಡು ತಮ್ಮ ಬಗ್ಗೆ ಹಿಂದೆ ಕೆದಕಲು ಮುಂದಾಗಿದ್ದಾಳೆ. ತಮಗೆ ಚಾಂದಿನಿ ವಂಚಿಸಿದ್ದಾಳೆ ಎಂದು ಶ್ಯಾಮ್ ಜಗಳ ಮಾಡಿದ್ದಾನೆ. ಈ ಜಗಳದಲ್ಲಿ ಈಗ ಶ್ಯಾಮ್ ಚಾಂದಿನಿ ಮನೆಯನ್ನು ಬಿಟ್ಟು ಹೊರಟಿದ್ದಾನೆ. ಶಾಲಿನಿ ಶ್ಯಾಮ್ ನನ್ನು ಎಷ್ಟೇ ಸಮಾಧಾನ ಪಡಸಿಲು ಮುಂದಾದರೂ ಶ್ಯಾಮ್ ಯಾರ ಮಾತನ್ನೂ ಕೇಳುತ್ತಿಲ್ಲ.


Click it and Unblock the Notifications











