Seetharama ; ಆಸ್ಪತ್ರೆ ಪಾಲಾಗುತ್ತಾಳಾ ಸೀತಾ : ಅಮ್ಮನನ್ನು ಸೇವ್ ಮಾಡುತ್ತಾಳಾ ಸುಬ್ಬಿ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿಯ ಒಪ್ಪಿಗೆ ಇಲ್ಲದೆಯೇ ಅವಳ ಜಾಗಕ್ಕೆ ಈಗ ನಾನು ಸುಬ್ಬಿಯನ್ಹು ಕರೆದುಕೊಂಡು ಬರುತ್ತಿದ್ದೇನೆ ಎಂದು ರಾಮ್ ಬೇಸರ ಮಾಡಿಕೊಂಡಿದ್ದಾನೆ. ರಾಮ್ ಬೇಸರವನ್ನು ಅರ್ಥ ಮಾಡಿಕೊಂಡ ಅಶೋಕ್, ಗೆಳೆಯನಿಗೆ ಸಹಾಯ ಮಾಡುತ್ತಿದ್ದಾನೆ. ನೀನು ಸುಬ್ಬಿಯನ್ನು ಕರೆದುಕೊಂಡು ಬಂದರೆ ಸೀತಾ ಸರಿ ಹೋಗುತ್ತಾಳೆ. ಇವತ್ತು ಸುಬ್ಬಿಯನ್ನು ಕರೆದುಕೊಂಡು ಬರದೇ ಹೋದರೆ, ಸೀತಾಳನ್ನು ಆಸ್ಪತ್ರೆಗೆ ಸೇರಿಸಬೇಕು. ಆದಷ್ಟು ಬೇಗ ಸುಬ್ಬಿಯನ್ನು ಮನೆಗೆ ಕರೆದುಕೊಂಡು ಬಾ ಎಂದು ಕರೆದುಕೊಂಡು ಹೊರಡುತ್ತಾನೆ.

ತಾತನೊಂದಿಗೆ ಕಾಣೆಯಾದ ಸುಬ್ಬಿ

ಇದೇ ವೇಳೆಗೆ ಭಾರ್ಗವಿ ವಿಚಾರವನ್ನು ತಿಳಿದುಕೊಳ್ಳಲು ಪ್ರಯತ್ನ ಪಡುತ್ತಾಳೆ. ಆದರೆ, ಅಶೋಕ್ ಯಾವ ಗುಟ್ಟನ್ನು ಬಿಟ್ಟು ಕೊಡದೆಯೇ ರಾಮ್ ನನ್ನು ಕರೆದುಕೊಂಡು ಹೊರಡುತ್ತಾನೆ. ಇತ್ತ ಸುಬ್ಬಿ ಮತ್ತು ಅವರ ತಾತ ಇಬ್ಬರೂ ಕಾಣೆಯಾಗಿರುತ್ತಾರೆ. ಮನೆಯಲ್ಲಿ ಕಾವೇರಿ, ಪುಟ್ಲಿಂಗು ಮತ್ತು ಜಾಕಿ ಹೆದರಿಕೊಂಡು ಊರೆಲ್ಲಾ ಹುಡುಕಾಡುತ್ತಾರೆ. ಆದರೆ, ಸ್ವಾಮಿ ಮತ್ತು ಸುಬ್ಬಿ ಎಲ್ಲೂ ಸಿಗುವುದಿಲ್ಲ. ಹುಡುಕಾಡಿ ಸುಸ್ತಾಗಿ ಮನೆಗೆ ಬಂದರೆ ರಾಮ್ ಮತ್ತು ಅಶೋಕ್, ಹೊಸ ಬಟ್ಟೆ, ಹಣ್ಣುಗಳನ್ನು ತೆಗೆದುಕೊಂಡು ಬಂದಿರುತ್ತಾರೆ. ಸುಬ್ಬಿಯನ್ನು ಕಳಿಸಿಕೊಡಿ ಎಂದು ಕೇಳುತ್ತಾರೆ. ಕಾವೇರಿ, ಜಾಕಿ, ಪುಟ್ಲಿಂಗು ಅವರಿಗೆ ಈಗ ರಾಮ್ ಅವರ ಬಳಿ ಏನು ಹೇಳಬೇಕು ಎಂಬುದೇ ಗೊತ್ತಾಗುವುದಿಲ್ಲ. ತಾತ ಮತ್ತು ಸುಬ್ಬಿ ಬೆಳಗ್ಗೆಯಿಂದ ಎಲ್ಲೂ ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ.

Seetharama Serial 10 February episode written update

ಸುಬ್ಬಿಯನ್ನು ಹುಡುಕಿದ ಸಿಹಿ

ಸಿಹಿ ಎಲ್ಲಿಗೆ ಹೋದಳು ಎಂದು ಎಲ್ಲರೂ ಗಾಬರಿಯಾಗಿ ಮತ್ತೆ ಹುಡುಕಾಟ ಶುರು ಮಾಡುತ್ತಾರೆ. ಇತ್ತ ಸ್ವಾಮಿ ಮತ್ತು ಸುಬ್ಬಿ ಇಬ್ಬರೂ ಗೋಡೌನ್ ನಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ. ಸುಬ್ಬಿ ಸ್ವಾಮಿ ಬಳಿ ನಾವ್ಯಾಕೆ ಇಲ್ಲಿದ್ದೀವಿ ಎಂದು ಕೇಳುತ್ತಾಳೆ. ಆಗ ಸ್ವಾಮಿ ನಿನ್ನನ್ನು ರಾಮ್ ಜೊತೆಗೆ ಕಳಿಸಲು ಇಷ್ಟವಿಲ್ಲ. ಅದಕ್ಕೆ ಇಲ್ಲಿಗೆ ಕರೆದುಕೊಂಡು ಬಂದಿದ್ದೀನಿ ಎಂದು ಹೇಳುತ್ತಾನೆ. ಆದರೆ, ಸುಬ್ಬಿ ನಾವು ಅವರ ಬಳಿ ಹಣ ತೆಗೆದುಕೊಂಡಿದ್ದೇವೆ. ಈಗ ಬಚ್ಚಿಟ್ಟುಕೊಳ್ಳುವುದು ತಪ್ಪು ಎಂದು ಹೇಳಿದರೂ ಕೇಳುವುದಿಲ್ಲ. ಸಿಹಿ ಸುಬ್ಬಿಯನ್ನು ಹುಡುಕಿ ರಾಮ್ ನನ್ನು ಅಲ್ಲಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾಳೆ. ದೇವರ ಬಳಿ ತನ್ನ ಮಾತು ಅಪ್ಪನಿಗೆ ಕೇಳಲಿ ಎಂದು ಬೇಡಿಕೊಂಡು ರಾಮ್ ಗೆ ದಾರಿಯನ್ನು ತೋರಿಸುತ್ತಾಳೆ.


ಸುಬ್ಬಿ ಜೊತೆಗೆ ಮನೆಗೆ ಬಂದ ರಾಮ್

ತನಗೇ ತಿಳಿಯದೆ ರಾಮ್ ಸುಬ್ಬಿ ಇರುವ ಜಾಗಕ್ಕೆ ಬರುತ್ತಾನೆ. ಆಗ ಸುಬ್ಬಿ ಕೂಗುವುದನ್ನು ಕೇಳಿಸಿಕೊಂಡು ಸುಬ್ಬಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ಮುಂದಾಗುತ್ತಾರೆ. ಸುಬ್ಬಿ ತನ್ನ ಮನೆಯವರಿಗೆಲ್ಲಾ ವಿದಾಯ ಹೇಲಿ ಬರುತ್ತಾಳೆ. ಇತ್ತ ಭಾರ್ಗವಿ ರಾಮ್ ಮತ್ತು ಅಶೋಕ್ ಪ್ಲಾನ್ ಫ್ಲಾಪ್ ಆಗಬೇಕು ಎಂದು ದೊಡ್ಡ ನಾಟಕ ಮಾಡಿದ್ದಾಳೆ. ತನ್ನ ಮೇಲೆ ತಾನೇ ಬಿಸಿ ನೀರು ಚೆಲ್ಲಿಕೊಂಡು ಸಿಹಿ ಮೇಲೆ ಗೂಬೆ ಕೂರಿಸಿದ್ದಾಳೆ. ಏನು ಹೇಳಿದರೂ ಸೀತಾಳಿಗೆ ಕೋಪ ಬರುವುದಿಲ್ಲ. ಆಗ ಬೇಕಂತಲೇ ಸಿಹಿ ಅವತ್ತೇ ಸತ್ತು ಹೋಗಬೇಕಿತ್ತು ಎನ್ನುತ್ತಾಳೆ.


ಸೀತಾ ಮೇಲೆ ಗೂಬೆ ಕೂರಿಸಿದ ಭಾರ್ಗವಿ

ಈ ಮಾತನ್ನು ಕೇಳಿದ ಸೀತಾ ಕೋಪಗೊಂಡು ಭಾರ್ಗವಿ ಕುತ್ತಿಗೆಗೆ ಚಾಕು ಹಿಡಿಯುತ್ತಾಳೆ. ಇದನ್ನು ಸೂರಿ ಮತ್ತು ಸಾಧನಾ ಕೂಡ ನೋಡುವಂತೆ ಮಾಡುತ್ತಾಳೆ. ತಕ್ಷಣವೇ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಅನ್ನು ಕರೆಸುತ್ತಾರೆ. ಸೀತಾ ಮನೆಯಲ್ಲಿದ್ದರೆ ಸರಿ ಹೋಗುವುದಿಲ್ಲ ಎಂದು ತೀರ್ಮಾನಿಸಿ ಆಸ್ಪತ್ರೆಗೆ ಕಳಿಸುತ್ತಾರೆ. ಇದನ್ನು ನೋಡಿ ಪ್ರಶ್ನಿಸಿದ ರಾಮ್ ಗೆ ಬೇಸರವಾಗುತ್ತದೆ. ಈಗ ಸುಬ್ಬಿ ಎದುರಿಗೆ ಬಂದು ಸೀತಾಳನ್ನು ಬಚಾವ್ ಮಾಡುತ್ತಾಳಾ ಎಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X