Seetha Rama ; ಅಂತೂ ಇಂತೂ ಅದ್ಧೂರಿಯಾಗಿ ನಡೀತು ಸೀತಾರಾಮ ಮದುವೆ ; ಸಿಹಿ ದೂರ ಉಳಿದಿದ್ದೇಕೆ..?
ಸೀತಾರಾಮ ಧಾರಾವಾಹಿಯಲ್ಲಿ ಸೂರಿ ತಾತನ ಜೊತೆಗೆ ಮಾತನಾಡಿದ ಸೀತಾಳ ಮನಸ್ಸು ಹಗುರವಾಗಿದೆ. ಭಾರ್ಗವಿ ಹಾಗೂ ಸೂರಿ ತಾತನ ಬಳಿ ಕಾಯಿಸಿದ್ದಕ್ಕಾಗಿ ಕ್ಷಮೆ ಕೇಳುತ್ತಾಳೆ.ಅಂತೂ ಇಂತೂ ಸೀತಾ ರಾಮ್ ಮದುವೆ ಅದ್ಧುರಿಯಾಗಿ ನೆರವೇರಿದೆ. ಈ ಮದುವೆಯಿಂದ ಹಲವರು ಖುಷಿಯಾಗಿದ್ದರೆ, ಭಾರ್ಗವಿ ಮಾತ್ರ ಧ್ವೇಷ ಭಾವದಲ್ಲೇ ಇದ್ದಾಳೆ.ರಾಮ್ ಮುಖದಲ್ಲಿನ ಖುಷಿಯನ್ನು ನೋಡುವ ಭಾರ್ಗವಿ ನೀನೇ ಗೆದ್ದೆ ಎಂದುಕೊಳ್ಳಬೇಡ ರಾಮ್. ಇದು ನನ್ನ ಗೆಲುವು.ಸೀತಾ ಜೊತೆಗೆ ಮದುವೆ ಮಾಡಿಸುತ್ತಿರುವುದು ನಾನು. ಇನ್ಮುಂದೆ ಸೀತಾ, ವಾಣಿ ಅನುಭವಿಸಿದ್ದನ್ನೆಲ್ಲಾ ಅನುಭವಿಸುತ್ತಾಳೆ ಎಂದು ಮನದಲ್ಲೇ ಮಾತನಾಡುತ್ತಾಳೆ.
ಸೀತಾ ಖುಷಿಯಿಂದಲೇ ಹಸೆಮಣೆ ಏರುತ್ತಾಳೆ. ಮಾಂಗಲ್ಯ ಧಾರಣೆ ಆದ ಬಳಿಕ ರಾಮ್ ಮತ್ತು ಸೀತಾ ಸಪ್ತಪದಿ ತುಳಿಯುತ್ತಾರೆ. ಏಳು ಸುತ್ತು ಮುಗಿದ ಬಳಿಕ ಸಿಹಿಯ ಜೊತೆಗೆ ಸುತ್ತುತ್ತಾರೆ. ಸಿಹಿಯನ್ನು ಎತ್ತಿಕೊಂಡು ಅಗ್ನಿಸಾಕ್ಷಿಯಾಗಿ ಸಿಹಿ ನನ್ನ ಮಗಳು ಎಂದು ಪ್ರಮಾಣ ಮಾಡಿ ರಾಮ್ ಹೇಳುತ್ತಾನೆ. ನನ್ನ ಉಸಿರು ಇರುವವರೆಗೂ ಸೀತಾ ಮತ್ತು ಸಿಹಿಯನ್ನು ಕೈ ಬಿಡುವುದಿಲ್ಲ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಸಿಹಿ ಮತ್ತು ಸೀತಾ ಇಬ್ಬರಿಗೂ ಖುಷಿಯಾಗುತ್ತದೆ. ಬಳಿಕ ಮೂವರು ಸೇರಿ ಅಗ್ನಿ ಪ್ರದಕ್ಷಿಣೆ ಹಾಕುತ್ತಾರೆ. ಸೀತಾ, ರಾಮ್ ಮಾತುಗಳನ್ನು ಕೇಳಿ ತೃಪ್ತ ಭಾವದಲ್ಲಿರುತ್ತಾಳೆ. ತನಗಿನ್ನು ಯಾವ ಭಯವೂ ಇಲ್ಲ ಎಂಬಂತೆ ನಡೆದುಕೊಳ್ಳುತ್ತಾಳೆ.

ಆದರೆ, ಭಾರ್ಗವಿ ಸಿಹಿ ಒಬ್ಬಳೇ ಇದ್ದಾಗ, ಇನ್ಮುಂದೆ ಸೀತಾ ಮತ್ತು ರಾಮ್ ಒಟ್ಟಿಗೆ ಇರುತ್ತಾರೆ. ಅವರ ಜೊತೆಗೆ ಸಿಹಿ ಇರುವುದಕ್ಕೆ ಆಗುವುದಿಲ್ಲ ಎಂದು ಹೆದರಿಕೆಯಾಗುವಂತೆ ಮಾತನಾಡುತ್ತಾಳೆ. ಸಿಹಿಯನ್ನು ದೂರ ಕುಳಿತುಕೊಂಡು ಶಾಸ್ತ್ರ ನೋಡುವಂತೆ ಹೇಳುತ್ತಾಳೆ. ಇದು ಸಿಹಿಗೆ ನೋವುಂಟು ಮಾಡುತ್ತದೆ. ಫ್ರೆಂಡ್ ಮತ್ತು ಅಮ್ಮನಿಂದ ದೂರ ಇರಬೇಕಾ ಎಂದು ಆಲೋಚಿಸುತ್ತಾಳೆ. ಭಾರ್ಗವಿ ಮಾತು ಕೇಳಿದ ಸಿಹಿ ನೊಂದುಕೊಳ್ಳುತ್ತಾಳೆ. ತಾನು ಇನ್ಮುಂದೆ ಅನಾಥೆ, ಒಂಟಿ ಎಂದು ದುಃಖಿಸುತ್ತಾಳೆ.
ಇನ್ನು ಸಿಹಿ ಜೊತೆಗೆ ಎಂಟನೇ ಸುತ್ತು ಹಾಕಿದ್ದಕ್ಕೆ ಭಾರ್ಗವಿ ಕೋಪ ಮಾಡಿಕೊಳ್ಳುತ್ತಾಳೆ. ಈ ಎಂಟು ಸುತ್ತು ಆದ ಮೇಲೆ ಮೂವರಿಗೂ ವನವಾಸವೇ ಗತಿ ಎಂದು ಮಾತನಾಡಿಕೊಳ್ಳುತ್ತಾಳೆ. ಎಷ್ಟು ಖುಷಿ ಪಡಬೇಕೋ ಈಗಲೇ ಪಡಿ ಎಂದು ಕೋಪ ಮಾಡಿಕೊಳ್ಳುತ್ತಾಳೆ. ಆದರೆ, ರಾಮ್ ನನ್ನು ಕರೆದು ನನಗೆ ತುಂಬಾ ಖುಷಿಯಾಗುತ್ತದೆ. ಈ ಕ್ಷಣ ನನ್ನ ಜೀವನದಲ್ಲಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೆ. ಅದು ಈಗ ಸಂಭವಿಸಿದೆ. ಅಪ್ಪು ನೀನು ಹೀಗೆ ಖುಷಿ ಖುಷಿಯಾಗಿ ನೂರು ಕಾಲ ಇರಬೇಕು. ವಾಣಿ ಅಕ್ಕನ ಆತ್ಮಕ್ಕೆ ಈಗ ಶಾಂತಿ ಸಿಕ್ಕಿರುತ್ತದೆ ಎಂದು ಹೇಳುತ್ತಾಳೆ. ಭಾವುಕಳಾದವಳಂತೆ ನಟಿಸುತ್ತಾಳೆ. ಆದರೆ, ರಾಮ್ ಹಾಗೂ ಸೀತಾ ಬಾಳಲ್ಲಿ ಯಾವೆಲ್ಲಾ ಸಮಸ್ಯೆಗಳನ್ನು ತಂದೊಡ್ಡುತ್ತಾಳೆ ಎಂಬುದು ಮುಂದಿನ ದಿನಗಳಲ್ಲಿ ನೋಡಿ ತಿಳಿದುಕೊಳ್ಳಬೇಕಿದೆ.

ಸೀತಾ ಮದುವೆಯಾದ ಕ್ಷಣವಮನ್ನು ಎಂಜಾಯ್ ಮಾಡುತ್ತಿರುತ್ತಾಳೆ. ಸೀತಮ್ಮನಿಗೆ ಮದುವೆಯಾಯ್ತು ಎಂದು ಸಿಹಿಯೂ ಖುಷಿಯಾಗಿರುತ್ತಾಳೆ. ರಾಮ್ ಅಂತೂ ತನ್ನ ಪ್ರೀತಿಯನ್ನು ಪಡೆದ ಸಂತಸದಲ್ಲಿ ತೇಲಾಡುತ್ತಿರುತ್ತಾನೆ. ಅರುಂಧತಿ ನಕ್ಷತ್ರ ನೋಡಲು ಎಲ್ಲರೂ ಹೊರಗೆ ಬಂದಾಗ ಭಾರ್ಗವಿ ಸಿಹಿ ಅನ್ನು ಸಪರೇಟ್ ಆಗಿ ಕರೆಯುತ್ತಾಳೆ. ಪ್ರೀತಿಯಿಂದ ಮಾತನಾಡುತ್ತಲೇ ಇವತ್ತು ರಾಮ್ ಮತ್ತು ಸೀತಾ ಮದುವೆ. ಅವರ ನಡುವೆ ನೀನು ಕಾಣಿಸಿಕೊಂಡರೆ ಚೆನ್ನಾಗಿರುವುದಿಲ್ಲ. ಫೋಟೋದಲ್ಲಿ ಸೀತಮ್ಮ ಮತ್ತು ನಿನ್ನ ಫ್ರೆಂಡ್ ಇಬ್ಬರೂ ಚೆನ್ನಾಗಿ ಕಾಣಬೇಕು ಎಂದರೆ, ನೀನು ಇಲ್ಲೇ ದೂರದಲ್ಲಿ ನಿಂತುಕೋ ಎಂದು ಹೇಳುತ್ತಾಳೆ. ಸಿಹಿ ಭಾರ್ಗವಿ ಮಾತನ್ನು ನಂಬಿ ಒಬ್ಬಳೇ ಮರೆಯಲ್ಲಿ ನಿಂತುಕೊಳ್ಳುತ್ತಾಳೆ


Click it and Unblock the Notifications











