Seetharama ;ಅಂಜಲಿ ಪ್ರೀತಿ ಬಗ್ಗೆ ತಿಳಿದ ಅಶೋಕ್ ನಡವಳಿಕೆಯಲ್ಲಿ ಬದಲಾವಣೆ..!
ಸೀತಾರಾಮ ಧಾರಾವಾಹಿಯಲ್ಲಿ ಸದ್ಯಕ್ಕೆ ಸೀತಾ ಮತ್ತು ರಾಮ್ ಮದುವೆಯದ್ದೇ ದೊಡ್ಡ ವಿಚಾರವಾಗಿದೆ. ಸೀತಾ, ರಾಮ್ ಮತ್ತು ಸಿಹಿ ಪ್ರತೀ ಕ್ಷಣವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಸಿಹಿಗೆ ಸೀತಮ್ಮ ಈ ಮದುವೆಯಿಂದ ಖುಷಿಯಾಗಿ ಇರುತ್ತಾರೆ. ತನ್ನ ಫ್ರೆಂಡ್ ರಾಮ್ ಸೀತಮ್ಮನನ್ನು ಸಂತೋಷವಾಗಿ ನೋಡಿಕೊಳ್ಳುತ್ತಾರೆ ಎಂದು ಖುಷಿಯಾಗಿದ್ದಾಳೆ. ಸೀತಾಳಿಗೆ ರಾಮ್ ತನ್ನನ್ನು ಇರುವ ಹಾಗೆ ಒಪ್ಪಿಕೊಂಡಿದ್ದು, ಸಿಹಿಯನ್ನು ತನ್ನ ಮಗಳು ಎನ್ನುತ್ತಿದ್ದಾನೆ ಎಂಬುದೇ ಅವಳಿಗೆ ದೊಡ್ಡ ಸಮಾಧಾನವಾಗಿದೆ.
ಸಿಹಿ ನನ್ನ ಮಗಳು ಎಂದು ರಾಮ
ಸೀತಾ ಮನದಲ್ಲಿ ಯಾವ ಸತ್ಯವನ್ನು ಮುಚ್ಚಿಟ್ಟುಕೊಳ್ಳುವಂತಹ ಹುಡುಗಿ ಅಲ್ಲ. ಸತ್ಯವ್ನೇ ಮಾತನಾಡುವ ಸೀತಾ ಸಿಹಿ ವಿಚಾರವನ್ನು ಮಾತ್ರವೇ ರಹಸ್ಯವಾಗಿಟ್ಟಿದ್ದಾಳೆ. ದೇವರಾಯನ ದುರ್ಗಕ್ಕೆ ಹೋದಾಗ ಸಿಹಿ ಕಳೆದು ಹೋಗಿದ್ದಕ್ಕೆ ಸೀತಾ ಒಂದು ಕ್ಷಣ ತಾನು ಮದುವೆಯಾಗಬೇಕು ಎಂದು ತೆಗೆದುಕೊಂಡಿರುವ ನಿರ್ಧಾರ ತಪ್ಪು ಎಂದು ಭಾವಿಸಿದ್ದಳು. ಆದರೆ, ರಾಮ್ ಬಂದು ಸಿಹಿಯನ್ನು ಹುಡುಕಿ ಕರೆತಂದ ಬಳಿಕ ತನ್ನ ನಿರ್ಧಾರದ ಬಗ್ಗೆ ಭರವಸೆಯನ್ನು ಹೆಚ್ಚಿಸಿಕೊಂಡಳು. ಈ ವಿಚಾರವನ್ನು ರಾಮ್ ಮುಂದೆ ಬಚ್ಚಿಡದೇ ತನಗೆ ಅನಿಸಿದ್ದನ್ನು ಹೇಳುತ್ತಾಳೆ. ಆಗ ರಾಮ್ ಕೂಡ ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ಸಿಹಿ ನನ್ನ ಮಗಳು. ನೀವು ಹಾಗೆಲ್ಲಾ ಭಯಪಡಬೇಡಿ. ನನ್ನ ಮಗಳು ಸಿಹಿ ಅನ್ನು ಬಿಟ್ಟು ನಾನು ಮತ್ತು ನೀವು ಒಂದು ಕ್ಷಣವೂ ಇರುವಂತಹ ಪರೀಸ್ಥಿತಿ ಬರುವುದಿಲ್ಲ ಎಂದು ಮಾತು ಕೊಡುತ್ತಾನೆ.

ರಾಮ್ ಬಗ್ಗೆ ಮಾತನಾಡಿದ ಸೀತಾ
ಇದು ಸೀತಾಳ ಭರವಸೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಅಜ್ಜಿ ಶಾಂತಮ್ಮ ಮತ್ತು ಮೂರ್ತಿ ತಾತನ ಬಳಿ ಹೋಗಿ ತನ್ನ ಮದುವೆಯ ದಿನಾಂಕ ಫಿಕ್ಸ್ ಆಗಿದ್ದರ ಬಗ್ಗೆ ಹೇಳುತ್ತಾಳೆ. ಎಲ್ಲರೂ ಖುಷಿ ಪಡುತ್ತಾಳೆ. ಆಗ ಸೀತಾ ಮುಚ್ಚುಮರೆ ಇಲ್ಲದೇ, ತಾನು ರಾಮ್ ಬಗ್ಗೆ ಅಪಾರ್ಥ ಮಾಡಿಕೊಂಡಿದ್ದು, ತನಗೆ ಸಿಹಿ ಬಿಟ್ಟು ಬೇರೆ ಮಗು ಬೇಡ ಎಂದುಕೊಂಡಿರುವುದು. ಅದಕ್ಕೆ ರಾಮ್ ಕೂಡ ಒಪ್ಪಿಗೆ ಕೊಟ್ಟಿರುವ ವಿಚಾರಗಳನ್ನು ಹೇಳಿಕೊಂಡು ರಾಮ್ ನಿಷ್ಕಲ್ಮಶ ಮನಸಿನ ಹುಡುಗ. ನನಗಂತೂ ಈ ಮದುವೆ ಆಗುತ್ತಿರುವುದಕ್ಕೆ ಬಹಳ ಖುಷಿ ಇದೆ ಎಂದು ಹೇಳುತ್ತಾಳೆ. ಅಜ್ಜಿ ಶಾಂತಮ್ಮನೂ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಹೇಳುತ್ತಾರೆ.
ಅಂಜಲಿ ಬಗ್ಗೆ ಸತ್ಯ ತಿಳಿದ ಅಶೋಕ
ಇನ್ನು ಪ್ರಿಯಾ ಮತ್ತು ಅಶೋಕ್ ಮಾತನಾಡುವಾಗ, ಅಶೋಕ್ ಅಂಜಲಿಗೆ ಒಳ್ಳೆಯ ಹುಡುಗನನ್ನು ಹುಡುಕಬೇಕು ಎನ್ನುತ್ತಾನೆ. ಆಗ ಪ್ರಿಯಾ ಅಂಜಲಿ ನಿನ್ನ ಕೆಲಸವನ್ನು ಕಡಿಮೆ ಮಾಡಿದ್ದಾಳೆ. ಅವಳು ಈಗಾಗಲೇ ಯಾರನ್ನೋ ಪ್ರೀತಿಸುತ್ತಿದ್ದಾಳೆ. ಸ್ವಲ್ಪ ದಿನದಲ್ಲೇ ಆ ಹುಡುಗನನ್ನು ನಿನಗೆ ಪರಿಚಯಿಸುತ್ತಾಳೆ ಎಂದು ಹೇಳುತ್ತಾಳೆ. ಈ ಸತ್ಯ ಅರಿತ ಅಶೋಕನಿಗೆ ಕೋಪ ಬರುತ್ತದೆ. ತಿಂಡಿ ತಿನ್ನುವಾಗ ಅಂಜಲಿ ಉಪವಾಸ ಮಾಡುತ್ತಿರುವುದಾಗಿ ಹೇಳಿದ್ದಕ್ಕೆ ಅಶೋಕ್ ಕೋಪ ಮಾಡಿಕೊಂಡು ತಿಂಡಿ ತಿನ್ನುವಂತೆ ಹೇಳುತ್ತಾನೆ.

ಅಂಜಲಿಗೆ ಜೋರು ಮಾಡಿದ ಅಶೋಕ
ಅಂಜಲಿಗೆ ಅಶೋಕನ ಕೋಪ ನೋಡಿ ಭಯವಾಗುತ್ತದೆ. ಅಶೋಕ್ ಅಣ್ಣ ಯಾಕೆ ರ್‍ಯಾಶ್ ಆಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದೇ ಅರ್ಥವಾಗುವುದಿಲ್ಲ. ಅಶೋಕ್ ತಾನೇ ಅಂಜಲಿಯನ್ನು ಕ್ಲಿನಿಕ್ ಗೆ ಡ್ರಾಪ್ ಮಾಡುತ್ತಾನೆ. ಆಗ ಅಂಜಲಿಗೆ ರುದ್ರಪ್ರತಾಪ್ ಪದೇ ಪದೇ ಫೋನ್ ಮಾಡುತ್ತಿರುತ್ತಾನೆ. ಅಂಜಲಿ ಕಟ್ ಮಾಡುತ್ತಾಳೆ. ಅಶೋಕ್ ಅಂಜಲಿ ಬಳಿ ಹಾಗೆ ನಡೆದುಕೊಂಡಿದ್ದಕ್ಕೆ ಪ್ರಿಯಾ ಬೈಯುತ್ತಾಳೆ. ಅಂಜಲಿ ತೀರಾ ಗಾಬರಿಯಾಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











