Seetharama ; 'ಸೀತಾ'ನ ಮಾತ್ರವಲ್ಲ ನಮ್ಮನ್ನೂ ಆ ದೇವರೇ ಕಾಪಾಡಬೇಕೆಂದ ಪ್ರೇಕ್ಷಕರು, ಸುಬ್ಬಿ ಎಂಟ್ರಿ ಹೇಗಿತ್ತು ?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಇಹಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ. ಆದರೆ, ಅವಳ ಆತ್ಮಕ್ಕೆ ಮುಕ್ತಿ ಸಿಗದೇ ಸೀತಮ್ಮನ ಸುತ್ತಲೂ ಸುತ್ತಾಡುತ್ತಿದ್ದಾಳೆ.ಮನೆಯವರ ಮಾತುಗಳಿಗೆ ಸಿಹಿ ಉತ್ತರ ನೀಡುತ್ತಿದ್ದಾಳೆ. ತನಗೇನೂ ಆಗಿಲ್ಲ. ತಾನಿನ್ನೂ ಬದುಕ್ಕಿದ್ದೀನಿ ಎಂದು ಹೇಳುತ್ತಲೇ ಇದ್ದಾಳೆ. ಆದರೆ, ಸಿಹಿಯ ಧ್ವನಿ ಯಾರಿಗೂ ಕೇಳಿಸುತ್ತಿಲ್ಲ. ಸೀತಾ ಮನೆಗೆ ಬಂದ ಕೂಡಲೇ ಸಿಹಿಯನ್ನು ಹುಡುಕಲು ಶುರು ಮಾಡುತ್ತಾಳೆ. ವೈದ್ಯರು ಸತ್ಯವನ್ನು ಮುಚ್ಚಿಡಲು ಹೇಳಿದ್ದು, ಸೀತಾಳಿಗೆ ಪರೀಸ್ಥಿತಿ ಅರ್ಥವಾಗಿಲ್ಲ.

ಮಗಳಿಲ್ಲದೇ ಹುಚ್ಚಿಯಂತಾದ ಸೀತಾ

ಸಿಹಿ ರೂಮಿಗೆ ಬರುತ್ತಿದ್ದಂತೆ ಸಿಹಿ ಇಲ್ಲೇ ಇದ್ದಾಳೆ ಎಂದು ಬೆಳ್ಳಿ ಗೊಂಬೆಯನ್ನು ಎತ್ತುಕೊಳಳುತ್ತಾಳೆ. ಗೊಂಬೆಯನ್ನೇ ಸಿಹಿ ಎಂದು ಭಾವಿಸುವ ಸೀತಾ, ನಿಜಕ್ಕೂ ಹುಚ್ಚಿಯಾಗಿದ್ದಾಳಾ ಎಂಬ ಅನುಮಾನ ಮೂಡಿದೆ. ರಾಮ್ ಸದ್ಯ ಸತ್ಯ ಹೇಳುವಂತಿಲ್ಲ. ಹಾಗಾಗಿ ರಾಮ್ ಏನನ್ನೂ ಮಾತನಾಡದೇ ಸುಮ್ಮನಿದ್ದಾನೆ. ಸೀತಾ ಹೇಳಿದ್ದನ್ನೆಲ್ಲಾ ಸರಿ ಎಂದು ಕೇಳುತ್ತಿದ್ದಾನೆ. ಸೀತಾ ಗೊಂಬೆಯನ್ನೇ ಸಿಹಿ ಎಂದು ಮಾತನಾಡಿಸುವುದು, ಮಲಗಿಸುವುದು, ರೆಡಿ ಮಾಡಿಸುವುದನ್ನು ಮಾಡುತ್ತಿದ್ದಾಳೆ. ಸಿಹಿ ಸಾವನ್ನಪ್ಪಿ ಅದಾಗಲೇ ಒಂದಷ್ಟು ದಿನಗಳು ಕಳೆದಿವೆ. ಈಗ ಸೀತಾ ಮನೆಯವರಿಗೆಲ್ಲಾ ಸಿಹಿ ಇದ್ದಾಳೆ ಎಂದು ಹೇಳುತ್ತಿರುವುದು ಎಲ್ಲರಿಗೂ ಬೇಸರವನ್ನು ತರಿಸಿದೆ.

Seetharama Serial 11 December episode written update

ಸತ್ಯ ಹೇಳಲು ಯತ್ನಿಸಿದ ಭಾರ್ಗವಿ

ರಾಮ್ ರೂಮ್ ಕಿಟಕಿಗಳನ್ನು ತೆರೆದಿದ್ದಕ್ಕೆ, ಸಿಹಿಗೆ ಚಲಿಯಾಗುತ್ತಿದೆ ಎಂದು ಬೈಯುತ್ತಾಳೆ. ರಾಮ್ ಮಗತ್ತು ಸೂರಿ ತಾತ ಸೀತಾ ಮಾತಿಗೆ ವಿಧಿ ಇಲ್ಲದೇ ತಾಳ ಹಾಕುತ್ತಾರೆ. ಆದರೆ, ಭಾರ್ಗವಿ ಬೇಕಂತಲೇ ನೀನು ಎತ್ತುಕೊಂಡಿರುವುದು ಗೊಂಬೆ ಎಂದು ಹೇಳಲು ಯತ್ನಿಸಿದಾಗ ರಾಮ್ ತಡೆದು ಎಷ್ಟೇ ದೊಡ್ಡವಳಾದರೂ ಸಿಹಿ ನಮಗೆ ಮಗುವಿನಂತೆ ಎಂದು ಹೇಳುತ್ತಾನೆ. ರಾಮ್ ಸೀತಾಳನ್ನು ಸಮಾಧಾನ ಮಾಡುತ್ತಾನೆ. ಇದು ಭಾರ್ಗವಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಆದರೆ, ಮನೆಯವರೆಲ್ಲಾ ಸಪೋರ್ಟ್ ಮಾಡುವಾಗ ಭಾರ್ಗವಿ ಕೈಯಲ್ಲಿ ಏನೂ ಮಾಡಲು ಸಾಧ್ಯವಾಗುವುದಿಲ್ಲ.


ಸಿಹಿಯ ತದ್ರೂಪಿಯ ಆಗಮನ

ಇತ್ತ ಸಿಹಿಯ ತದ್ರೂಪಿ ಆಗಿರುವ ಸುಬ್ಬಿಯ ಎಂಟ್ರಿಯಾಗಿದೆ. ಈ ಹಿಂದೆಯೇ ಮಹಾಸಂಚಿಕೆಯಲ್ಲಿ ಸುಬ್ಬಿಯನ್ನು ತೋರಿಸಲಾಗಿತ್ತು. ಇಂದು ಅವಳ ಎಂಟ್ರಿಯಾಗಿದೆ. ಅಂಕಾಳಮ್ಮ ದೇವಿ ದೇಗುಲಕ್ಕೆ ತೆರಳಿ ನಮಸ್ಕರಿಸುವ ಸುಬ್ಬಿ ಒಳ್ಳೊಳ್ಳೆ ಮಾತುಗಳನ್ನು ಆಡುತ್ತಾಳೆ. ಸಿಹಿಗಿಂತಲೂ ಮುದ್ದಾಗಿ ಕಾಣುವ ಸುಬ್ಬಿ, ಸಿಹಿಯಂತೆಯೇ ಮಾತಿನ ಮಲ್ಲಿ ಎಂಬುದು ಎಂಟ್ರಿಯಲ್ಲೇ ಗೊತ್ತಾಗಿದೆ. ಹೀರೋಯಿನ್ ಎನ್ನುವುದಕ್ಕಿಂತಲೂ ಖಡಕ್ ಹೀರೋ ಎಂಟ್ರಿಯಂತೆ ಸುಬ್ಬಿಯ ಆಗಮನವಾಗಿದೆ. ಇದರೊಂದಿಗೆ ಸುಬ್ಬಿ ಉಳಿದುಕೊಂಡಿರುವ ಜಾಗವನ್ನು ಆಕ್ರಮಣ ಮಾಡಿಕೊಳ್ಳಲು ಮತ್ತೊಬ್ಬ ವ್ಯಕ್ತಿ ಆಗಮಿಸಿದ್ದಾನೆ.


ಸುಬ್ಬಿ ಡೈಲಾಗ್ ಮೇಲೆ ಡೈಲಾಗ್

ಸುಬ್ಬಿ ಜೊತೆಗೆ ಮೂವರು ಮಕ್ಕಳು ಸೇರಿಕೊಂಡು ರೌಡಿಯನ್ನು ಎದುರಿಸಲು ಮುಂದಾಗಿದ್ದಾರೆ. ಕಾಲೋನಿಯಲ್ಲಿರುವ ಹಿರಿಯರು, ವಯಸ್ಕರೆಲ್ಲರೂ ಸುಮ್ಮನೆ ನಿಂತಿದ್ದರೆ, ಸುಬ್ಬಿ ಜೋರು ಧ್ವನಿಯಲ್ಲಿ ಮಾತನಾಡಿದ್ದಾಳೆ. ಕೋರ್ಟ್ ಆರ್ಡರ್ ತೋರಿಸಿ ಮೂರು ಲಕ್ಷ ಹಣ ಕೊಟ್ಟು ಉಳಿದುಕೊಳ್ಳಿ. ಇಲ್ಲದೇ ಹೋದರೆ ಜಾಗ ಖಾಲಿ ಮಾಡಿ ಎಂದು ಹೇಳಿದ್ದು, ಸುಬ್ಬಿ ಬಗ್ಗದೇ ನಮ್ಮ ಬಳಿಯೂ ಕೋರ್ಟ್ ಆರ್ಡರ್ ಇದೆ. ನಮಗೂ ಮೂರು ದಿನ ಟೈಮ್ ಇದೆ ಎಂದಿದ್ದಾಳೆ. ಅಲ್ಲದೇ ಅವಳ ಮೇಲೆ ಜೆಸಿಬಿ ಓಡಿಸಲು ಮುಂದಾದರೂ ಹೆದರದ ಸುಬ್ಬಿ ನಿಂತಲ್ಲೇ ನಿಂತಿರುತ್ತಾಳೆ. ಇನ್ನು ಜನರೆಲ್ಲಾ ಇದನ್ನು ವೀಡಿಯೋ ಮಾಡುತ್ತಿರುತ್ತಾರೆ. ನನ್ನ ಮೇಲೆ ನೀವು ಜೆಸಿಬಿ ಹಾರಿಸಿದರೆ, ಈ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಕಾಗುತ್ತದೆ ಎಂದು ಹೆದರಿಸುತ್ತಾಳೆ. ಸಿಹಿಗಿಂತಲೂ ಒಂದು ಕೈ ಮೇಲೆ ಎಂಬಂತೆ ಸುಬ್ಬಿ ಮಾತನಾಡಿದ್ದಾಳೆ. ಆದರೆ, ಸುಬ್ಬಿ ಮತ್ತು ಸಿಹಿ ಭೇಟಿ ಯಾವಾಗ ಆಗುತ್ತದೆ ಎಂದು ಕಾದು ನೋಡಬೇಕಿದೆ. ಸೀತಾಳ ಸಂಕಟ ಮತ್ತು ಸಿಹಿಯ ಹೊಸ ಅವತಾರ ಕಂಡು ಪ್ರೇಕ್ಷಕರ ವರ್ಗದಲ್ಲಿ ಕೂಡ ಅಸಮಾಧಾನದ ಅಲೆ ಎದ್ದಿದೆ. ಕೇವಲ ಸೀತಾ ಮಾತ್ರವಲ್ಲ ನಮ್ಮನ್ನೂ ಆ ದೇವರೇ ಕಾಪಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X