Seetharama ; ಅಂಜಲಿಗೆ ಸರ್ಪ್ರೈಸ್ ಕೊಟ್ಟ ರಾಮ್ : ಆರ್ ಪಿ ಜಸ್ಟ್ ಎಸ್ಕೇಪ್..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಭಾರ್ಗವಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ರಾಮ್ ಗೆ ಶಾಪಿಂಗ್ ಹಾಗೂ ಮದುವೆ ಶಾಸ್ತ್ರಗಳ ಬಗ್ಗೆ ಹೇಳಿದ್ದಾಳೆ. ಇದೆಲ್ಲವನ್ನೂ ಕೇಳಿದ ರಾಮ್ ಗೆ ಸೀತಾ ಬಳಿ ಹಂಚಿಕೊಳ್ಳುವ ಮನಸ್ಸಾಗಿದೆ. ಹಾಗಾಗಿ ಆಫಿಸಿಗೆ ಹೋಗುವ ಬದಲು ರಾಮ್ ಸೀತಾ ಮನೆಗೆ ಹೊರಡುತ್ತಾನೆ. ಇತ್ತ ಸಿಹಿ ಸೀತಮ್ಮನನ್ನು ಮದುವೆಯಲ್ಲಿ ಸುಂದರವಾಗಿ ಕಾಣಬೇಕು ಎಂದು ಯೂಟ್ಯೂಬ್ ನೋಡಿ ಸಾಕಷ್ಟು ಫೇಸ್ ಪ್ಯಾಕ್ ಗಳ ಬಗ್ಗೆ ಮಾಹಿತಿ ಪಡೆದಿದ್ದಾಳೆ.

ಅಮ್ಮನಿಗೆ ಫೇಸ್ ಪ್ಯಾಕ್ ಹಾಕಿದ ಸಿಹಿ

ಸೀತಮ್ಮನನ್ನು ಕೂರಿಸಿ, ಮನೆಯಲ್ಲೇ ಸಿಹಿ ಪೆಡಿಕ್ಯೂರ್ ಮಾಡಿದ್ದಾಳೆ. ಕಡಲೆ ಹಿಟ್ಟಿನ ಪ್ಯಾಕ್ ಅನ್ನು ಹಾಕಿ, ಕಣ್ನೀಗೆ ಸೌತೆಕಾಯಿ ಇಟ್ಟಿದ್ದಾಳೆ. ಅಮ್ಮ ಚೆನ್ನಾಗಿ ಕಾಣಬೇಕು ಎಂದು ಸಿಹಿ ಹೀಗೆಲ್ಲಾ ಮಾಡುತ್ತಿದ್ದಾಳೆ. ಪ್ರಿಯಾ ಮದುವೆಗೆ ಮುನ್ನ ಏನೆಲ್ಲಾ ಮಾಡಿಕೊಂಡಿದ್ದಳೊ ಅದನ್ನೆಲ್ಲಾ ಸೀತಾಲಿಗೂ ಮಾಡಬೇಕು ಎಂದು ಸಿಹಿ ಅಂದುಕೊಂಡಿದ್ದಾಳೆ. ಇದೇ ಸಮಯಕ್ಕೆ ರಾಮ್ ಕೂಡ ಮನೆಗೆ ಬಂದಿದ್ದಾನೆ. ಸಿಹಿ ಜೊತೆಗೆ ಸೇರಿಕೊಂಡು ನೈಲ್ ಪಾಲಿಶ್ ಹಚ್ಚಿದ್ದಾನೆ. ರಾಮ್, ಸೀತಾ ಮತ್ತು ಸಿಹಿ ಸಕತ್ ಎಂಜಾಯ್ ಮಾಡಿದ್ದಾರೆ. ಇದೆಲ್ಲವನ್ನೂ ನೋಡಿದ ಶಾಂತಮ್ಮ ಹಾಗೂ ಮೂರ್ತಿ ತಾತ ಖುಷಿ ಪಟ್ಟಿದ್ದಾರೆ. ಈ ಜೋಡಿಗಳು ಹೀಗೆ ಖುಷಿಯಾಗಿರಲಿ ಎಂದು ಹರಸಿದ್ದಾರೆ.

seetharama-serial-11-june-episode-written-update

ರುದ್ರಪ್ರತಾಪ್ ನನ್ನು ಭೇಟಿ ಮಾಡಿದ ಪ್ರೇಮಾ

ಅಂಜಲಿ ಅಶೋಕ್ ನಡವಳಿಕೆಗೆ ಸುಸ್ತಾಗಿ ಹೋಗಿದ್ದಾಳೆ. ಭಾಗಶಃ ತನ್ನ ಪ್ರೀತಿ ವಿಚಾರ ತಿಳಿದಿರಬೇಕು. ಹಾಗಾಗಿ ಅಣ್ಣ ಹೀಗೆ ನಡೆದುಕೊಳ್ಳುತ್ತಿರುವಬಹುದು ಎಂದು ಆಲೋಚಿಸಿದ್ದಾಳೆ. ಇನ್ನು ರುದ್ರಪ್ರತಾಪ್ ಅಂಜಲಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಪ್ರೇಮಾ ಅದೇ ಜಾಗಕ್ಕೆ ಬೇಕಂತಲೇ ಬಂದಿದ್ದಾಳೆ. ಆರ್ ಪಿ ನೋಡಿ ತಮ್ಮ ದೂರದ ಸಂಬಂಧಿ ತಮ್ಮಣ್ಣ ಎಂದು ಸುಳ್ಳು ಹೇಳುತ್ತಾ ಮಾತನಾಡಿದ್ದಾಳೆ. ಆರ್ ಪಿಗೆ ಕೋಪ ಬಂದಿದ್ದು, ಅಲ್ಲಿಂದ ಹೊರಟು ಹೋಗಿದ್ದಾನೆ.

ಅಂಜಲಿಗೆ ಸರ್ಪ್ರೈಸ್ ಕೊಟ್ಟ ರಾಮ್

ಅಂಜಲಿಯನ್ನು ಭೇಟಿ ಮಾಡಲೆಂದು ಸೀದಾ ಕ್ಲಿನಿಕ್ ಗೆ ಹೋಗಿದ್ದಾನೆ. ಅಂಜಲಿ ಜೊತೆ ಮಾತನಾಡುತ್ತಾ ಕುಳಿತಿದ್ದಾನೆ. ಅಂಜಲಿ ಪದೇ ಪದೇ ರುದ್ರಪ್ರತಾಪ್ ಗೆ ತನ್ನ ಅಣ್ಣಂದಿರನ್ನು ಭೇಟಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾಳೆ. ಇದರಿಂದ ಇರಿಟೇಟ್ ಆದ ರುದ್ರಪ್ರತಾಪ್ ನಿಮ್ಮ ಅಣ್ಣಂದಿರು ಅವರವರ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ನೀನು ಮಾತ್ರ ಅವರ ಬಗ್ಗೆ ಕಾಳಜಿ ವಹಿಸುತ್ತಿದ್ದೀಯಾ ಎಂದು ಬುದ್ಧಿ ಹೇಳುತ್ತಾನೆ. ತಮ್ಮಿಬ್ಬರ ನಡುವೆ ಅಡ್ಡಲಾಗಿ ನಿಂತಿರುವ ಅಣ್ಣಂದಿರಿಂದ ಅಂಜಲಿಯನ್ನು ದೂರ ಮಾಡಬೇಕು ಎನ್ನುವುದು ರುದ್ರ ಪ್ರತಾಪ್ ನ ಆಲೋಚನೆ. ಅಷ್ಟರಲ್ಲಿ ಅಂಜಲಿಗೆ ರಾಮ್ ಫೋನ್ ಮಾಡುತ್ತಾನೆ. ಆರ್ ಪಿ ಫೋನ್ ರಿಸೀವ್ ಮಾಡಬೇಡ ಎಂದು ಹೇಳುತ್ತಾನೆ. ಆದರೂ ಕೇಳದೇ ಅಂಜಲಿ ಫೋನ್ ರಿಸೀವ್ ಮಾಡುತ್ತಾಳೆ. ರಾಮ್ ನಿನಗೆ ಸರ್ಪ್ರೈಸ್ ಕೊಡಲು ಕ್ಲಿನಿಕ್ ಗೆ ಬಂದಿದ್ದೀನಿ ಎನ್ನುತ್ತಾನೆ.

seetharama-serial-11-june-episode-written-update

ಪ್ರೇಯಸಿಗೆ ವಾರ್ನಿಂಗ್ ಕೊಟ್ಟ ರುದ್ರಪ್ರತಾಪ್

ಅಂಜಲಿ ಖುಷಿಯಾಗಿ ರುದ್ರಪ್ರತಾಪ್ ಗೆ ಯಾವುದೇ ಕಾರಣ ಕೊಡದೇ ಇವತ್ತು ನನ್ನ ಅಣ್ಣನನ್ನು ಭೇಟಿ ಮಾಡಬೇಕು ಎಂದು ಹೇಳಿ ರಾಮ್ ನನ್ನು ಕರೆದುಕೊಂಡು ಬರಲು ಹೋಗುತ್ತಾಳೆ. ಅಷ್ಟರಲ್ಲಿ ರುದ್ರಪ್ರತಾಪ್ ಅಲ್ಲಿಂದ ಎಸ್ಕೇಪ್ ಆಗುತ್ತಾನೆ. ಅಂಜಲಿಗೆ ಆರ್ ಪಿ ಕಾಣದಿದ್ದಾಗ ಆತಂಕವಾಗುತ್ತದೆ. ನಂತರ ರಾಮ್ ಹೋದ ಬಳಿಕ ಆರ್ ಪಿ ಬರುತ್ತಾನೆ. ಆಗ ಅಂಜಲಿ ಅಣ್ಣನನ್ನು ಯಾಕೆ ಭೇಟಿ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ರುದ್ರಪ್ರತಾಪ್ ಇನ್ಯಾವತ್ತು ನಿಮ್ಮ ಅಣ್ಣಂದಿರನ್ನು ಭೇಟಿ ಮಾಡು ಎಂದು ನನಗೆ ಹೇಳಬೇಡ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿ ಹೊರಟು ಬಿಡುತ್ತಾನೆ. ಅಂಜಲಿ ಶಾಕ್ ಆಗುತ್ತಾಳೆ.

More from Filmibeat

English summary
Ram comes to Anjali office. But rudraprathap escapes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X