Seetharama ; ಶ್ಯಾಮ್ ನನ್ನು ನೋಡಿ ಬೈದ ಡಾ.ಅನಂತಲಕ್ಷ್ಮೀ : ಮಗುವಿಗಾಗಿ ಸೀತಾ ಮಾಡಿದ ಕೆಲಸವೇನು..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಶಾಲಿನಿ ಮಗು ಸತ್ತು ಹೋಗಿದೆ ಎಂದು ಸುಳ್ಳು ಹೇಳಿದ್ದು ಎಂಬ ಸತ್ಯ ಶ್ಯಾಮ್ ಗೆ ಗೊತ್ತಾಗಿದೆ. ಅಷ್ಟೇ ಇಲ್ಲದೇ ಇದನ್ನೆಲ್ಲಾ ಸೀತಾ ಕೂಡ ಕೇಳಿಸಿಕೊಂಡಿದ್ದಾಳೆ. ಶ್ಯಾಮ್ ಗೆ ತನ್ನ ಹೆಂಡತಿಯೇ ತಮ್ಮ ಮಗುವನ್ನು ದೂರ ಮಾಡಿದಳು ಎಂಬ ಕೋಪವಿದೆ. ಅದೇನೇ ಆದರೂ ತನಗೆ ಮಗು ಬೇಕೇಬೇಕು ಎಂದು ಹಠ ಹಿಡಿದಿದ್ದಾನೆ. ಡಾ. ಅನಂತಲಕ್ಷ್ಮೀ ತಮಗೆ ಮಗು ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಹೇಳಿದರೂ ಕೂಡ ಶ್ಯಾಮ್ ಶಾಲಿನಿಯ ಮಾತನ್ನು ಕೇಳುತ್ತಿಲ್ಲ. ಬಲವಂತವಾಗಿ ವೈದ್ಯರ ಬಳಿ ಕರೆದುಕೊಂಡು ಹೊರಟಿದ್ದಾನೆ.

ಸೀತಾಳಿಗೆ ಶ್ಯಾಮ್ ಎಂದರೆ ಆತಂಕ

ಇತ್ತ ಸೀತಾ ಮನೆಯಲ್ಲಿ ಗೊಂಬೆಗಳನ್ನು ಇಟ್ಟಿದ್ದು, ದಸರಾ ಹಬ್ಬ ಜೋರಾಗಿ ನಡೆಯುತ್ತಿದೆ. ಆತಂಕದಲ್ಲಿರುವ ಸೀತಾ ತನ್ನ ಮಗಳಿಗೋಸ್ಕರ ಉಪವಾಸ ಬೇರೆ ಮಾಡುತ್ತಿದ್ದಾಳೆ. ಇನ್ನು ರಾಮ್ ಮತ್ತು ಭಾರ್ಗವಿ ಡಾ.ಅನಂತಲಕ್ಷ್ಮೀ ಅವರನ್ನು ಮನೆಗೆ ಆಹ್ವಾನಿಸಿದ್ದಾಳೆ. ಸತ್ಯ ಏನಿದ್ದರೂ ಮನೆಯಲ್ಲಿ ತಿಳಿಯಲಿ ಎಂಬುದು ಭಾರ್ಗವಿ ಆಲೋಚನೆ. ಆದರೆ, ಸೀತಾಳಿಗೆ ಈ ವಿಚಾರದಲ್ಲಿ ರಾಮ್ ತಲೆ ಕೆಡಿಸಿಕೊಂಡಿರುವುದು ಸ್ವಲ್ಪವೂ ಇಷ್ಟವಿಲ್ಲ. ಹೀಗಾಗಿ ಶ್ಯಾಮ್ ಗೆ ಮನೆಗೆ ಬರುವಂತೆ ಕರೆದಿದ್ದಾರೆ. ಆದರೆ, ಶಾಲಿನಿ ಸೀತಾ ಮನೆಗೆ ಬರುವುದಿಲ್ಲ. ನನಗೆ ಅವಳೇಂದರೆ ಆಗುವುದಿಲ್ಲ ಎಂದು ಹೇಳಿ ಮನೆಯಲ್ಲೇ ಉಳಿದಿದ್ದಾಳೆ.

Seetharama Serial 11 October episode written update

ಶ್ಯಾಮ್ ಗೆ ಬೈದು ಕಳಿಸಿದ ವೈದ್ಯರು

ಸುಮಾರು ಸಮಯ ಕಾದು ಕೂತರು ವೈದ್ಯರು ಬಾರದಿದ್ದಾಗ ಶ್ಯಾಮ್ ಮತ್ತು ರಾಮ್ ಆಸ್ಪತ್ರೆಗೆ ಹೋಗಿ ಡಾ.ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಲು ಮುಂದಾಗುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ. ರಜೆ ಮೇಲೆ ಹೊರಗಡೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಆಚೆ ಬಂದು ನೋಡಿದರೆ, ಡಾ. ಅನಂತಲಕ್ಷ್ಮೀ ಅಲ್ಲೇ ಇರುತ್ತಾರೆ. ಆಗ ರಾಮ್ ಮಗು ಬಗ್ಗೆ ವಿಚಾರಿಸುತ್ತಾರೆ. ಆಗ ಡಾಕ್ಟರ್ ಇವರನ್ನು ನಂಬಿರುವುದು ನಿಮ್ಮ ತಪ್ಪು. ನಾನು ಇನ್ಯಾವತ್ತು ನಂಬೋದಿಲ್ಲ. ಬರೋವಾಗ ಬರುವುದು ಬಿಟ್ಟು, ಈಗ ಯಾಕೆ ಬಂದಿದ್ದೀರಾ. ನಿಮ್ಮ ಮಗಳು ನೆಮ್ಮದಿಯಾಗಿದ್ದಾಳೆ. ಅವಳನ್ನು ಅವಳ ಪಾಡಿಗೆ ಇರಲು ಬಿಡಿ ಎಂದಿದ್ದಾಳೆ.

ಶ್ಯಾಮ್ ನನ್ನು ಕಂಡು ಶಾಕ್ ಆದ ಸುದೇಶ್

ಇನ್ನು ಸೀತಾ ಅಣ್ಣ ಸುದೇಶ್ ಮತ್ತು ಸುಲೋಚನಾ ಇಬ್ಬರೂ ಸೀತಾ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಬೇಕು ಎಂದು ಪ್ಲಾನ್ ಮಾಡಿಕೊಂಡು ಮನೆಗೆ ಬಂದಿದ್ದಾರೆ. ಈ ವೇಳೆಗೆ ಶ್ಯಾಮ್ ನನ್ನು ನೋಡಿದ ಸುದೇಶ್ ಶಾಕ್ ಆಗುತ್ತಾನೆ. ರುದ್ರಪ್ರತಾಪ್ ಹುಡುಕುತ್ತಿರುವ ವ್ಯಕ್ತಿ ಇವನೇ ಅಲ್ಲವಾ. ನೀವು ಮಗುವನ್ನು ಕರೆದುಕೊಂಡು ಹೋಗಲು ಬಂದಿದ್ದೀರಾ ಎಂದು ಪ್ರಶ್ನಿಸುತ್ತಾನೆ. ಈ ಮಾತನ್ನು ಕೇಳಿದ ಕೂಡಲೇ ಸೀತಾಳ ಆತಂಕ ಹೆಚ್ಚಾಗುತ್ತೆ.

ಅಣ್ಣನ ಬಳಿ ರಹಸ್ಯ ಹಂಚಿಕೊಂಡ ಸೀತಾ

ಸೀತಾ ಕೂಡಲೇ ತನ್ನ ಅಣ್ಣ ಮತ್ತು ಅತ್ತಿಗೆಯನ್ನು ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ನಿಮಗೆ ಏನು ಬೇಕೋ ಅದನ್ನು ಕೊಡುತ್ತೇನೆ. ಆದರೆ, ಸಿಹಿಯನ್ನು ನನ್ನಿಂದ ದೂರ ಮಾಡಬೇಡಿ. ಅವರಿಬ್ಬರನ್ನು ಇಲ್ಲಿಂದ ಕಳಿಸಬೇಕು. ಅವರಿಗೆ ಯಾವುದೇ ಕಾರಣಕ್ಕೂ ನನ್ನ ಮಗು ಸಿಗಬಾರದು ಎಂದು ಕಣ್ಣೀರು ಹಾಕುತ್ತಾಳೆ. ಆಗ ಸುಲೋಚನಾ ನಾವು ಕೇಳಿದ್ದನ್ನು ಕೊಡುತ್ತೀಯಾ ಎಂದರೆ ಅವರನ್ನು ಇಲ್ಲಿಂದ ಕಳಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಸೀತಾಳಿಗೆ ಮಾತು ಕೊಡುತ್ತಾಳೆ. ರುದ್ರಪ್ರತಾಪ್, ಸುದೇಶ್, ಸುಲೋಚನಾ ಎಲ್ಲರಿಗೂ ಈಗ ಸಿಹಿ ಹುಟ್ಟಿನ ರಹಸ್ಯ ಗೊತ್ತಾಗಿದ್ದು, ಮುಂದಿನ ಸಂಚಿಕೆಗಳು ಇನ್ನಷ್ಟು ಕುತೂಹಲವನ್ನು ಮೂಡಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X