Seetharama ; ಗಣೇಶನ ಎದುರು ಸಿಹಿ ಬೇಡಿದ ಎರಡು ವರಗಳು ಯಾವುವು..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಎಲ್ಲರ ಮನಸ್ಸನ್ನು ಬದಲಾಯಿಸುವಂತಹ ಹುಡುಗಿ. ವಯಸ್ಸು ಚಿಕ್ಕದಾದರೂ ಬುದ್ಧಿ ಬಹಳ ದೊಡ್ಡವರಂತೆ ಇದೆ. ಇದು ಕೆಲವರಿಗೆ ಇಷ್ಟವಾಗಿದೆ. ಸಿಹಿ ಮಾತುಗಳು ಮುದ್ದುದ್ದಾಗಿದ್ದರೂ, ಕೆಲವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಇರುತ್ತದೆ. ಇನ್ನು ಅನಿಕೇತನ್ ನಂತಹ ಹಠಮಾರಿ ಮಗುವಿನ ಮನಸ್ಸನ್ನು ಕೂಡ ಸಿಹಿ ಬದಲಾಯಿಸಿದ್ದಾಳೆ.ಗಣೇಶ ಹಬ್ಬಕ್ಕೆ ಮನೆಯಲ್ಲೇ ಗಣೇಶನನ್ನು ತಯಾರಿಸಬೇಕು ಸಿಹಿ ತೀರ್ಮಾನಿಸಿದ್ದಾಳೆ. ಸಿಹಿ ಜೊತೆಗೆ ಅನಿ ಕೂಡ ಕೈ ಜೋಡಿಸಿದ್ದು, ಮುದ್ದಾದ ಗಣೇಶನ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ.

ಚಾಂದಿನಿ ಹಿಂದೆ ಬಿದ್ದ ರುದ್ರಪ್ರತಾಪ್

ಮಗಳ ಆಟಗಳನ್ನು ಕಂಡು ಸೀತಾ ಮತ್ತು ರಾಮ್ ಖುಷಿಪಟ್ಟಿದ್ದಾರೆ. ಇತ್ತ ರುದ್ರಪ್ರತಾಪ್ ಸೀತಾಳ ಪತ್ರವನ್ನು ಹಿಡಿದುಕೊಂಡು ಚಾಂದಿನಿ ಮನೆಗೆ ಬಂದಿದ್ದಾನೆ. ಸೀತಾಳಿಗೂ ಚಾಂದಿನಿಗೂ ಏನು ಸಂಬಂಧವಿರಬಹುದು. ಸೀತಾ ಪತ್ರ ಬರೆದ ಮನೆಯಲ್ಲಿ ಯಾರಿದ್ದಾರೆ ಎಂದು ತಿಳಿದುಕೊಳ್ಳಲು ಬಂದಿದ್ದಾನೆ. ಆದರೆ, ಚಾಂದಿನಿ ಬಾಗಿಲು ತೆಗೆಯದೆಯೇ ರುದ್ರಪ್ರತಾಪ್ ನನ್ನು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಕಳಿಸಿದ್ದಾಳೆ. ರುದ್ರಪ್ರತಾಪ್ ಸೀದಾ ಶಾಂತಜ್ಜಿ ಮನೆಗೆ ಹೋಗಿದ್ದು, ಚಾಂದಿನಿ ಬಗ್ಗೆ ವಿಚಾರಿಸಿದ್ದಾನೆ. ಶಾಂತಜ್ಜಿ ರುದ್ರಪ್ರತಾಪ್ ನ ಗೊಡ್ಡು ಹೆದರಿಕೆಗೆ ಬೆದರದೇ ಅವನನ್ನು ಬೆದರಿಸಿ ಕಳಿಸಿದ್ದಾರೆ.

Seetharama Serial 11 September episode written update

ಗಣೇಶನ ಬಳಿ ಸಿಹಿ ಕೇಳಿಕೊಂಡಿದ್ದೇನು..?

ಇನ್ನು ಮೇಘಶ್ಯಾಮ್ ಮತ್ತು ಶಾಲಿನಿ ರಾಮ್ ಮನೆಗೆ ಆಗಮಿಸಿದ್ದಾರೆ. ಸಿಹಿಯನ್ನು ನೋಡಿ ಶ್ಯಾಮ್ ಹ್ಯಾಪಿ ಆಗಿದ್ದಾನೆ. ಸಿಹಿ ಮಾತುಗಳು ಶಾಲಿನಿಗೂ ಖುಷಿಕೊಟ್ಟಿದೆ. ಬಾಡಿಗೆ ತಾಯಿಯಿಂದ ಮೋಸವಾಗಿದ್ದು, ತಮ್ಮ ಮಗುವನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ಶಾಲಿನಿ ಮತ್ತು ಶ್ಯಾಮ್ ಹೇಳಿಕೊಳ್ಳುತ್ತಾರೆ. ಗಣೇಶನಿಗೆ ಪೂಜೆ ಮಾಡಿದಾಗ ಸಿಹಿ ಶ್ಯಾಮ್ ಅಂಕಲ್ ಗೆ ಅವರ ಮಗು ಆದಷ್ಟು ಬೇಗ ಸಿಗಲಿ ಎಂದು ಸಿಹಿ ತನ್ನ ಬಗ್ಗೆಯೇ ತನಗೇ ತಿಳಿಯದಂತೆ ಕೇಳಿಕೊಂಡಿದ್ದಾಳೆ. ಸಿಹಿ ಕೇಳಿದ ವರವನ್ನು ದೇವರು ಕರುಣಿಸಿದರೆ, ಅವರ ಸೀತಮ್ಮನ ಬದುಕೇ ಅಲ್ಲೋಲ-ಕಲ್ಲೋಲವಾಗುತ್ತದೆ. ಆದರೆ, ಸಿಹಿ ಪ್ರಾರ್ಥನೆ ಹೇಗೆ ಫಲಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸಿಹಿಯನ್ನು ನೋಡಿ ಖುಷಿಪಟ್ಟ ಶಾಲಿನಿ

ಸಿಹಿ ಮಾತುಗಳು ಶಾಲಿನಿಗೂ ಖುಷಿ ಕೊಡುತ್ತದೆ. ಸಿಹಿ ಎಲ್ಲರನ್ನೂ ಮುದ್ದಾಗಿ ಮಾತನಾಡಿಸುತ್ತಾಳೆ. ಶಾಲಿನಿ ಸಿಹಿ ಮಾತುಗಳನ್ನು ಕೇಳುತ್ತಾ ನಗಲು ಶುರುಮಾಡುತ್ತಾಳೆ. ಸಿಹಿ ಎಲ್ಲರಿಗೂ ಲಡ್ಡು ಕೊಡುತ್ತಾಳೆ. ಆದರೆ ಶಾಲಿನಿ ಡಯಟ್ ಮಾಡುತ್ತಿರುವ ಕಾರಣ ಸಿಹಿ ಬೇಡ ಎಂದು ಹೇಳುತ್ತಾಳೆ. ಆಗ ಸಿಹಿ ನಿಮಗೆ ಸ್ವೀಟ್ ತಿನ್ನುವ ಯೋಗವಿದೆ. ನನಗೆ ಜೀವನ ಪೂರ್ತಿ ಸ್ವೀಟ್ ತಿನ್ನುವ ಹಾಗೆಯೇ ಇಲ್ಲ. ನನಗೋಸ್ಕರ ಸ್ವೀಟ್ ತಿನ್ನಿ. ಆಗ ನನಗೂ ಖುಷಿಯಾಗುತ್ತದೆ ಎಂದು ಹೇಳುತ್ತಾಳೆ. ಸಿಹಿಯ ಮುದ್ದಾದ ಮಾತುಗಳಿಗೆ ಮರುಳಾಗುವ ಶಾಲಿನಿ ಸ್ವೀಟ್ ತಿನ್ನಲು ಒಪ್ಪುತ್ತಾಳೆ. ಆಗ ಸಿಹಿಯೇ ಲಾಡುವನ್ನು ತಿನ್ನಿಸುತ್ತಾಳೆ. ಶಾಲಿನಿ ಸ್ವೀಟ್ ತಿಂದಿದ್ದಕ್ಕೆ ಶ್ಯಾಮ್ ಕೂಡ ಆಶ್ಚರ್ಯ ಪಡುತ್ತಾನೆ.

seetharama-serial-11-september-episode-written-update

ರುದ್ರಪ್ರತಾಪ್ ಬಗ್ಗೆ ಹೇಳಿದ ಶಾಂತಜ್ಜಿ

ಇತ್ತ ಸೀತಾ ವಠಾರದಲ್ಲಿ ಸಮಸ್ಯೆ ಏನೋ ಆಗಿರಬೇಕು ಎಂದು ಭಾವಿಸಿ ಒಬ್ಬಳೇ ವಠಾರಕ್ಕೆ ಬರುತ್ತಾಳೆ. ಆಗ ಶಾಂತಜ್ಜಿ ಮತ್ತು ಮೂರ್ತಿ ತಾತ ರುದ್ರಪ್ರತಾಪ್ ಮನೆಗೆ ಬಂದ ವಿಚಾರವನ್ನು ಹೇಳುತ್ತಾರೆ. ಅವನು ಇನ್ನೂ ನಿನ್ನನ್ನು ತನ್ನವನನ್ನಾಗಿ ಮಾಡಿಕೊಳ್ಳುವ ಆಸೆ ಇಟ್ಟುಕೊಂಡಿದ್ದಾನೆ. ನೀನು ಹುಷಾರಾಗಿ ಇರುವ ಎಂದು ಹೇಳುತ್ತಾರೆ. ಸೀತಾಳಿಗೆ ರುದ್ರಪ್ರತಾಪ್ ಹೀಗೆ ಯಾಕೆ ಮಾಡುತ್ತಿದ್ದಾನೆ ಎಂಬುದು ಗೊತ್ತಾಗುವುದಿಲ್ಲ. ಇನ್ನು ರುದ್ರಪ್ರತಾಪ್ ಸೀತಾಳನ್ನು ಮದುವೆಯಾಗುವ ಆಸೆಯನ್ನು ಇನ್ನೂ ಇಟ್ಟುಕೊಂಡಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X