Seetharama ; ಬೋರ್ಡಿಂಗ್ ಶಾಲೆಗೆ ಸೇರಿಕೊಂಡ ಸಿಹಿ : ಸೀತಾ ಪಾಲಿನ ಶತ್ರುಗಳ ಸಂಖ್ಯೆಯಲ್ಲಿ ಹೆಚ್ಚಳ

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಸ್ಕೂಲಿನ ಬಗ್ಗೆಯೇ ದೊಡ್ಡ ಚರ್ಚೆಯಾಗುತ್ತಿದೆ. ಸಿಹಿ ಬಳಿ ನಿಮ್ಮ ಅಪ್ಪ-ಅಮ್ಮ ನಿನಗೋಸ್ಕರ ಜಗಳ ಮಾಡುತ್ತಿದ್ದಾರೆ. ನೀನು ಬೋರ್ಡಿಂಗ್ ಸ್ಕೂಲ್ ಗೆ ಹೋದರೆ ನಿಮ್ಮ ಅಪ್ಪ-ಅಮ್ಮ ಖುಷಿಯಾಗಿರುತ್ತಾರೆ ಎಂದು ಭಾರ್ಗವಿ ತಲೆ ತುಂಬಿದ್ದಾಳೆ. ಹೀಗಾಗಿ ಸಿಹಿ ತನ್ನ ತಂದೆ-ತಾಯಿಗೋಸ್ಕರ ಮನೆ ಬಿಡಲು ಸಿದ್ಧಳಾಗಿದ್ದಾಳೆ.ಬೋರ್ಡಿಂಗ್ ಸ್ಕೂಲ್ ಗೆ ಹೋಗುತ್ತೀನಿ ಎಂದು ಸಿಹಿ ಬಹಳ ಹಠ ಮಾಡುತ್ತಿದ್ದಾಳೆ. ಸೂರಿ ತಾತನ ತಲೆಗೂ ಇದೇ ವಿಚಾರವನ್ನು ಭಾರ್ಗವಿ ತುಂಬಿದ್ದು, ಈಗ ಸೀತಾ ಮತ್ತು ರಾಮ್ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.


ಸಿಹಿ ಸ್ಕೂಲ್ ಗೆ ಅಡ್ಮಿಷನ್ ಮಾಡಿಸಿ ಆಯ್ತು

ಸೂರಿ ಸಾಕಷ್ಟು ಶಾಲೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಸೀತಾ ಮತ್ತು ರಾಮ್ ಗೆ ನಿತ್ಯ ಇದರ ಬಗ್ಗೆಯೇ ಉಪದೇಶ ನೀಡುತ್ತಿದ್ದಾರೆ. ತಾತನ ಸಮಾಧಾನಕ್ಕೋಸ್ಕರ ಸೀತಾ ಮತ್ತು ರಾಮ್ ಸಿಹಿ ಜೊತೆಗೆ ಶಾಲೆಯನ್ನು ನೋಡಿಕೊಂಡು ಹೋಗಲು ಬಂದಿದ್ದಾರೆ. ಆದರೆ, ಶಾಲೆಗೆ ಬಂದ ಸಿಹಿ ತಾನು ಇದೇ ಶಾಲೆಯಲ್ಲಿ ಓದುವುದಾಗಿ ಹಠ ಮಾಡಿದ್ದಾಳೆ. ಸಿಹಿ ಹಠಕ್ಕೆ ಬೇಸತ್ತ ರಾಮ್ ಮತ್ತು ಸೀತಾ ಆತುರದಲ್ಲಿ ಅಡ್ಮಿಷನ್ ಮಾಡಿದ್ದಾರೆ. ಸಿಹಿ ಖುಷಿ ಪಟ್ಟಿದ್ದಾಳೆ. ಆದರೆ, ಸೀತಾ ಮತ್ತು ರಾಮ್ ಗೆ ಇದು ಕೊಂಚವೂ ಇಷ್ಟವಿಲ್ಲ. ಆದರೆ, ಸಿಹಿ ತನಗೆ ಕಷ್ಟ ಆದರೂ ಪರವಾಗಿಲ್ಲ ಅಪ್ಪ ಮತ್ತು ಅಮ್ಮ ಇಬ್ಬರೂ ಚೆನ್ನಾಗಿರಬೇಕು ಎಂದು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ.

seetharama-serial-12-august-episode-written-update

ಬೇಸರದಲ್ಲಿರುವ ಸೀತಾ ಮತ್ತು ರಾಮ್

ಸಿಹಿ ಬೋರ್ಡಿಂಗ್ ಸ್ಕೂಲ್ ಗೆ ಹೋಗಲು ತೋರಿಸುತ್ತಿರುವ ಉತ್ಸಾಹವನ್ನು ಕಂಡು ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಸೀತಾ ರಾಮನಿಗೆ ಬೇಸರವಾಗಿದ್ದರೂ ಕೂಡ ಬೇರೆ ದಾರಿ ಇಲ್ಲದೇ ಸುಮ್ಮನಾಗಿದ್ದಾರೆ. ಸಿಹಿ ಅನಿಕೇತನ್ ಗೆ ಮಿಸ್ ಯೂ ಡ್ರಾಯಿಂಗ್ ಮಾಡಿಕೊಟ್ಟಿದ್ದಾಳೆ. ಇದನ್ನು ನೋಡಿದ ವಿಶ್ವ ಸಿಹಿ ಬಗ್ಗೆ ಬೇಸರಗೊಂಡಿದ್ದಾನೆ. ಇತ್ತ ಸುಲೋಚನಾ ಸೀತಾ ಮನೆಯನ್ನು ಮಾರಾಟಕ್ಕಿಟ್ಟಿದ್ದು, ಪೇಪರ್ ನೋಡಿ ಮನೆ ನೋಡಲು ಜನ ಬರುತ್ತಿದ್ದಾರೆ. ಆದರೆ, ಈ ವಿಚಾರ ತಿಳಿಯದ ಶಾಂತಜ್ಜಿ ಮತ್ತು ಮೂರ್ತಿ ತಾತ ಶಾಕ್ ಆಗಿದ್ದಾರೆ.

ಸಿಹಿ ತಂದೆ ಬಗ್ಗೆ ತಲೆಕೆಡಿಸಿಕೊಂಡ ರುದ್ರಪ್ರತಾಪ್

ಇತ್ತ ರುದ್ರಪ್ರತಾಪ್ ಭಾರ್ಗವಿ ಕೊಟ್ಟಿರುವ ಆಫರ್ ಗಾಗಿ ಸಿಹಿ ತಂದೆಯನ್ನು ಹುಡುಕಲು ಮುಂದಾಗಿದ್ದಾನೆ. ಆದರೆ, ಸುಲೋಚನಾ ಮತ್ತು ಸುದೇಶ್ ಗೆ ಈ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಇನ್ನು ಅಂಜಲಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆಶ್ರಮದಿಂದ ರಾತ್ರೋರಾತ್ರಿ ಕಾಲ್ಕಿತ್ತಿದ್ದಾನೆ. ಅಂಜಲಿ ಫೋನ್ ಮಾಡಿದರೂ ಬ್ಲಾಕ್ ಮಾಡಿ ಆಟವಾಡಿಸುತ್ತಿದ್ದಾನೆ. ಇನ್ನು ಸೀತಾಳಿಗೆ ಈಗ ರುದ್ರಪ್ರತಾಪ್ ಜೊತೆಗೆ ಚಾಂದಿನಿ ಕೂಡ ಶತ್ರು ಆಗಿದ್ದಾಳೆ.

seetharama-serial-12-august-episode-written-update

ಚಾಂದಿನಿಗೆ ಸಪೋರ್ಟ್ ಮಾಡುತ್ತಿರುವ ಶಾಲಿನಿ ಯಾರು..?

ಸೀತಾಳ ನೆಮ್ಮದಿಯನ್ನು ಅವಳಿಗೆ ಸಿಕ್ಕಿರುವ ಪ್ರೀತಿ ಮತ್ತು ಅಂತಸ್ತು ಐಶ್ವರ್ಯ ಎಲ್ಲವನ್ನೂ ಕಿತ್ತುಕೊಳ್ಳಬೇಕು ಎಂದು ತೀರ್ಮಾನಿಸಿದ್ದಾಳೆ. ಚಾಂದಿನಿಯ ಈ ನಿರ್ಧಾರಕ್ಕೆ ಶಾಳಿನಿ ಕೂಡ ಸಪೋರ್ಟ್ ಮಾಡುತ್ತಿದ್ದಾಳೆ. ಶಾಲಿನಿ ಚಾಂದಿನಿಯ ಅಕ್ಕ. ಅವರ ಅಕ್ಕ ಡಾ.ಮೇಘಶ್ಯಾಮ್ ಎಂಬಾತನನ್ನು ಮದುವೆಯಾಗಿದ್ದು, ಅವರಿಬ್ಬರು ಹತ್ತನೇ ವರ್ಷದ ಆನಿವರ್ಸರಿಯನ್ನು ಆಚರಿಸಿಕೊಂಡಿದ್ದಾರೆ. ಇನ್ನು ಮೇಘಶ್ಯಾಮ್ ತಾಯಿ ಹಾಗೂ ರಾಮ್ ತಾಯಿ ಇಬ್ಬರೂ ಸ್ನೇಹಿತರಾಗಿದ್ದವರು ಎಂಬ ಸತ್ಯ ತಿಳಿದು ಬಂದಿದೆ. ಈಗ ಸೀತಾಳಿಗೆ ಇಬ್ಬರಿಗಿಂತ ಹೆಚ್ಚು ಶತ್ರುಗಳಿದ್ದು, ರಾಮ್ ಮತ್ತು ಸೀತಾ ತಮ್ಮ ಜೀವನದಲ್ಲಿ ಏನೆಲ್ಲಾ ಕಷ್ಟಪಡಬೇಕಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X