Seetha Rama ; ಅಂಜಲಿಯನ್ನು ತರಾಟೆಗೆ ತೆಗೆದುಕೊಂಡ ಅಶೋಕ್ : ಸೈಲೆಂಟ್ ಆಗಿ ಎಸ್ಕೇಪ್ ಆದ ಆರ್ ಪಿ..!
ಸೀತಾರಾಮ ಧಾರಾವಾಹಿಯಲ್ಲಿ ರಾಮ್ ಮನೆಗೆ ಸಿಹಿ ಮತ್ತು ಸೀತಾ ಆಗಮಿಸಿದ್ದಾರೆ. ಸೀರೆ ಸೆಲಕ್ಟ್ ಮಾಡಲು ಮುಂದಾಗಿದ್ದಾರೆ. ಇದೇ ಸಮಯದಲ್ಲಿ ಭಾರ್ಗವಿ ರಾಮ್ ಮತ್ತು ಸೀತಾಳ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಇಟ್ಟುಕೊಂಡಿದ್ದಾರೆ. ದೇಸಾಯಿ ಕುಟುಂಬದ ಟ್ರೆಡಿಷನಲ್ ಉಡುಗೆ ಮತ್ತು ಮಾಡ್ರನ್ ಲುಕ್ ಎರಡರಲ್ಲೂ ಫೋಟೋ ಶೂಟ್ ಮಾಡಿಸಿದ್ದಾಳೆ. ಸೀತಾ ಎರಡೂ ರೀತಿಯ ಉಡುಗೆಯಲ್ಲೂ ಮುದ್ದಾಗಿ ಕಾಣಿಸಿದ್ದಾಳೆ. ಮನೆಯಲ್ಲಿ ಸೀರೆ ಆಯ್ಕೆ ಮಾಡುವಾಗ ಸಿಹಿ ಅನಿಕೇತನ್ ನ ಟ್ಯಾಬ್ ತೆಗೆದುಕೊಂಡು ಎಲ್ಲವನ್ನೂ ಶೂಟ್ ಮಾಡಿದ್ದಾಳೆ. ಅಲ್ಲಿದ್ದ ಪ್ರತೀ ಕ್ಷಣವೂ ಸಿಹಿ ಎಂಜಾಯ್ ಮಾಡಿದ್ದಾಳೆ.
ರಾವಣನಿಗೆ ಹೋಲಿಸಿಕೊಂಡ ಭಾರ್ಗವಿ
ಫೋಟೋ ಶೂಟ್ ಮಾಡುವ ಸಂದರ್ಭದಲ್ಲಿ ಸಿಹಿ ಸೀತಾ ಮತ್ತು ರಾಮ್ ನನ್ನು ರಾಜ, ರಾಣಿಗೆ ಹೋಲಿಸಿದ್ದಾಳೆ. ಸತ್ಯಜಿತ್ ಇಬ್ಬರನ್ನೂ ಸಾಕ್ಷಾತ್ ಸೀತಾರಾಮ್ ಎಂದು ಹೇಳಿದ್ದಾನೆ. ಸಿಹಿ ತನಗೆ ರಾಮಾಯಣ ಗೊತ್ತು. ಅದರಲ್ಲಿ ಸೀತಾ ರಾಮ ಕಷ್ಟಪಡುತ್ತಾರೆ. ಆದರೆ, ಇಲ್ಲಿ ಇಬ್ಬರೂ ಹ್ಯಾಪಿಯಾಗಿದ್ದಾರೆ. ಅವರ ಜೊತೆಗೆ ನಾನೂ ಇದ್ದೀನಿ ಎಂದು ಹೇಳುತ್ತಾಳೆ. ಆಗ ಭಾರ್ಗವಿ ಸಿಹಿಗೆ ರಾಮಾಯಣದಲ್ಲಿ ರಾವಣ ಇದ್ದ ಆದರೆ, ಇಲ್ಲಿ ಭಾರ್ಗವಿ ಇದ್ದಾಳೆ ಎಂದು ಎಚ್ಚರಿಕೆಯನ್ನು ಕೊಡುತ್ತಾಳೆ. ಆದರೆ. ಸಿಹಿಗೆ ಭಾರ್ಗವಿಯ ಮಾತು ಅರ್ಥವಾಗುವುದಿಲ್ಲ. ಮದುವೆಯಾಗುವವರೆಗೂ ಅಷ್ಟೇ ಸೀತಾ ರಾಮನ ಖುಷಿ, ನಂತರ ಎಲ್ಲವೂ ದುಃಖವೇ ಎಂಬುದು ಭಾರ್ಗವಿ ಮಾತಿನ ಅರ್ಥವಾಗಿರುತ್ತದೆ.

ಸಿಹಿಯನ್ನು ಕಂಡು ಹಠ ಹಿಡಿದ ಅನಿಕೇತನ್
ಸಿಹಿ ಟ್ಯಾಬ್ ಹಿಡಿದಿದ್ದನ್ನು ನೋಡಿದ ಅನಿಕೇತನ್ ಗೆ ಕೋಪ ಬರುತ್ತದೆ. ಮೊದಲೇ ಅನಿಕೇತನ್ ಗೆ ಸಿಹಿ ಎಂದರೆ ಅಷ್ಟಕಷ್ಟೇ, ತನ್ನ ವಸ್ತುವನ್ನು ಸಿಹಿ ಮುಟಿದಳು ಎಂಬ ಕಾರಣಕ್ಕೆ ಅನಿಕೇತನ್ ಕೋಪ ಮಾಡಿಕೊಳ್ಳುತ್ತಾನೆ. ಟ್ಯಾಬ್ ಅನ್ನು ಕಿತ್ತುಕೊಂಡು ಕೂಗಾಡುತ್ತಾನೆ. ನಾನು ಸಿಹಿ ಜೊತೆಗೆ ಆಡುವುದಿಲ್ಲ. ನನಗೆ ಅವಳೆಂದರೆ ಇಷ್ಟವಿಲ್ಲ ಎಂದು ಕೂಗಾಡುತ್ತಾನೆ. ಯಾರು ಬುದ್ಧಿ ಹೇಲಿದರೂ ಅನಿಕೇತನ್ ಕೇಳುವುದಿಲ್ಲ. ಆಗ ಅನಿಕೇತನ್ ನಡವಳಿಕೆಗೆ ಮನೆಯವರೆಲ್ಲಾ ಸಿಹಿ ಮತ್ತು ಸೀತಾ ಬಳಿ ಕ್ಷಮೆ ಕೇಳುತ್ತಾರೆ. ಇನ್ನು ವಾಣಿ ಸೀರೆಯನ್ನೇ ಮದುವೆಗೆ ಸೀತಾ ಉಡಲಿ ಎಂದು ಸತ್ಯಜಿತ್ ಹೇಳಿದ್ದು, ಎಲ್ಲರೂ ಇದಕ್ಕೆ ಒಪ್ಪಿಕೊಳ್ಳುತ್ತಾರೆ.
ಅಂಜಲಿಗೆ ಅಶೋಕ್ ತರಾಟೆ
ಅಂಜಲಿ ಭಾನುವಾರ ಮನೆಯಲ್ಲಿ ಇರುತ್ತಾಳೆ. ಆದರೆ, ರುದ್ರಪ್ರತಾಪ್ ಪದೇ ಪದೇ ಫೋನ್ ಮಾಡುತ್ತಾನೆ. ಅಂಜಲಿಯನ್ನು ಭೇಟಿಯಾಗಲೇಬೇಕು ಎಂದು ಹಠ ಮಾಡುತ್ತಾನೆ. ಅಂಜಲಿಗೆ ಮನೆಯಿಂದ ಹೊರಗೆ ಹೋಗಲು ಇಷ್ಟವಿಲ್ಲದಿದ್ದರೂ ಕೂಡ ಪ್ರೀತಿಗಾಗಿ ಗರಿಕೆ ಸೊಪ್ಪಿನ ಎಣ್ಣೆ ಬೇಕು ಎಂದು ಮನೆಯಿಂದ ಹೊರಡುತ್ತಾಳೆ. ಇದನ್ನು ನೋಡಿದ ಅಶೋಕ್ ಬೈಯುತ್ತಾನೆ. ಆ ಹುಡುಗನನ್ನು ನೋಡಲು ಹೀಗೆಲ್ಲಾ ನೆಪ ಮಾಡಿಕೊಂಡು ಹೋಗುತ್ತಿದ್ದೀಯಾ ಎಂದು ಗಲಾಟೆ ಮಾಡುತ್ತಾನೆ. ಅವನನ್ನು ಇವತ್ತೇ ನನಗೆ ತೋರಿಸು ಎಂದು ಹೇಳುತ್ತಾನೆ. ದೇವಸ್ಥಾನದ ಬಳಿ ಹೋದರೆ ಅಲ್ಲಿ ರುದ್ರಪ್ರತಾಪ್ ಇರುವುದಿಲ್ಲ.

ಕೈಗೆ ಸಿಗದೇ ಎಸ್ಕೇಪ್ ಆದ ಆರ್ ಪಿ
ಅಶೋಕ್ ನನ್ನು ನೋಡಿ ರುದ್ರಪ್ರತಾಪ್ ಬೇಕಂತಲೇ ಬಚ್ಚಿಟ್ಟುಕೊಂಡಿರುತ್ತಾನೆ. ಅಂಜಲಿ ಫೋನ್ ಮಾಡಿದರೂ ರೆಸ್ಪಾನ್ಸ್ ಮಾಡುವುದಿಲ್ಲ. ಸುಮಾರು ಕಾಲ ಕಾದು ಅಶೋಕ್ ಅಂಜಲಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ. ಆ ಹುಡುಗ ಸರಿಯಿಲ್ಲ. ಅವನನ್ನು ಮರೆತು ಬಿಡು ಎಂದು ಹೇಳುತ್ತಾನೆ. ಪ್ರಿಯಾ ಅಂಜಲಿಯನ್ನು ಹೊರಗಡೆ ಕರೆದುಕೊಂಡು ಹೋಗಿ ಪಾನಿಪೂರಿ ಕೊಡಿಸುತ್ತಾಳೆ. ಹುಡುಗನ ಬಗ್ಗೆ ವಿಚಾರಿಸುತ್ತಾಳೆ. ಆದರೆ, ಆರ್ ಪಿ ಫೋನ್ ಗೂ ಸಿಗದೇ, ಡಿಪಿ ಅನ್ನು ಕೂಡ ಬದಲಾಯಿಸಿರುತ್ತಾನೆ.


Click it and Unblock the Notifications











