SeethaRama ; ಸುಬ್ಬಿಗೆ ಮಹಾ ಕಂಟಕ;ಎಲ್ಲಾ ಗೊತ್ತಿದ್ದರೂ ಏನೂ ಮಾಡಲಾಗದೇ ಒದ್ದಾಡುತ್ತಿರುವ ಸಿಹಿ..!
ಸೀತಾರಾಮ ಧಾರಾವಾಹಿಯಲ್ಲಿ ಸುಬ್ಬಿಗೆ ಇಷ್ಟು ದಿನ ಮನೆಯಲ್ಲಿ ತಾನು ಸಿಹಿ ಅಂತೆ ನಟಿಸಿದರೆ ಸಾಕಾಗಿತ್ತು. ದೊಡ್ಡ ಮನೆಯಲ್ಲಿ ತನಗೆ ಬೇಕಿರುವುದೆಲ್ಲವೂ ಸಿಗುತ್ತಿತ್ತು. ಜೊತೆಗೆ ಸದಾ ಬಯಸುತ್ತಿದ್ದ ತಾಯಿ ಪ್ರೀತಿಯೂ ಹೆಚ್ಚಾಗಿಯೇ ಸಿಕ್ಕಿದೆ. ಸೀತಾಳ ತೋಳುಗಳಲ್ಲಿ ಸುಬ್ಬಿ ಬಂಧಿಯಾಗಿದ್ದಾಳೆ.
ಆದರೂ ಆಗಾಗ ತಾನಿದ್ದ ಮನೆ ಹಾಗೂ ತನ್ನ ಸಂಗಡಿಗರ ನೆನಪು ಕಾಡುತ್ತಿರುತ್ತದೆ. ಮೊದಲ ದಿನ ಖುಷಿಯಲ್ಲಿ ಶಾಲೆಗೆ ಹೋದ ಸುಬ್ಬಿಗೆ ಓದುವುದು ಬರೆಯುವುದು ದೊಡ್ಡ ತಲೆನೋವನ್ನೇ ತಂದಿದೆ. ಶಾಲೆ ಎಂದರೆ ಏನೋ ಅಂದುಕೊಂಡಿದ್ದ ಸುಬ್ಬಿಗೆ ತಲೆ ಚಚ್ಚಿಕೊಳ್ಳುವಂತಾಗಿದೆ.

ಸುಬ್ಬಿ ಮೇಲೆ ಭಾರ್ಗವಿ ಕೆಂಗಣ್ಣು
ಹೀಗಾಗಿ ಶಾಲೆಯಿಂದ ತಪ್ಪಿಸಿಕೊಂಡು ಮನೆಗೆ ಬಂದ ಸುಬ್ಬಿ ತನ್ನ ಸಂಗಡಿಗರ ಜೊತೆಗೆ ಕುಣಿದು ಕುಪ್ಪಳಿಸಿದ್ದಾಳೆ. ಮನೆಯಲ್ಲಿ ಐಸ್ ಕ್ರೀಮ್ ಸವಿದು. ಹಣ್ಣು ತಿಂದು, ಪುಟ್ಲಿಂಗು, ಕಾವೇರಿ, ಜಾಕಿ ಜೊತೆಗೆ ಮಸ್ತ್ ಮಜಾ ಮಾಡಿದ್ದಾಳೆ. ಇದೇ ಸಂದರ್ಭಕ್ಕೆ ಸರಿಯಾಗಿ ಭಾರ್ಗವಿ ಬಂದು ಸಿಹಿಯ ಗ್ರಹಚಾರ ಬೊಡಿಸಿದ್ದಾಳೆ. ಆದರೆ, ಪುಟ್ಲಿಂಗು, ಕಾವೇರಿ ಮತ್ತು ಜಾಕಿ ಸ್ವಲ್ಪದರಲ್ಲೇ ಎಸ್ಕೇಪ್ ಕೂಡ ಆಗಿದ್ದಾರೆ. ಮೊದಲಿನಿಂದಲೂ ಸುಬ್ಬಿ ಮೇಲೆ ಅನುಮಾನವಿರುವ ಭಾರ್ಗವಯ ಕೆಟ್ಟ ಕಣ್ಣುಗಳು ಈಗ ಸುಬ್ಬಿಯ ಮೇಲಿದೆ. ಅವಳು ಯಾರು ಎಂಬುದನ್ನು ತಿಳಿದುಕೊಂಡು ಮನೆಯಿಂದ ಹೊರಹಾಕಲು ಸಂಚು ರೂಪಿಸುತ್ತಿದ್ದಾಳೆ. ಆದರೆ, ಅಶೊಕ್ ಇದ್ಯಾವುದಕ್ಕೂ ಅವಕಾಶ ಮಾಡಿಕೊಡದೇ, ಸುಬ್ಬಿಯನ್ನು ಹೆಜ್ಜೆ ಹೆಜ್ಜೆಗೂ ಕಾಪಾಡುತ್ತಿದ್ದಾನೆ.
ಸೀತಾಳಿಗೆ ಮಗಳ ಬಗ್ಗಯೇ ಯೋಚನೆ
ಇನ್ನು ಸಿಹಿ ಶಾಲೆಯಿಂದ ತಪ್ಪಿಸಿಕೊಂಡು ಮನೆಗೆಬಂದಿದ್ದು,. ಕೆಲಸ ಸಮಯ ಎಲ್ಲರಿಗೂ ಶಾಕ್ ಆಗುವಂತೆ ಮಾಡಿತ್ತು. ಅಲ್ಲದೇ, ಸಿಹಿಗೆ ಮೊದಲಿನಂತೆ ಏನೂ ಓದಲು ಬರುತ್ತಿಲ್ಲ. ಈ ವಿಚಾರವನ್ನು ಕೇಳಿದ ಸೀತಾಳಿಗೆ ಮಗಳ ಬಗ್ಗೆ ಚಿಂತೆ ಕಾಡುತ್ತಿದೆ. ಹೋಮ್ ಸ್ಕೂಲಿಂಗ್ ಮಾಡಿ ಎಂದುನಟೀಚರ್ ಹೇಳುತ್ತಿದ್ದಾರೆ. ಸಿಹಿ ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂದು ಆತಂಕಗೊಂಡಿದ್ದಾಳೆ. ಹೀಗೆ ಆದರೆ ಸಿಹಿ ಭವಿಷ್ಯ ಹಾಳುಗುತ್ತದೆ ಎಂಬುದು ಸೀತಾಳ ಚಿಂತೆಗೆ ಕಾರಣವಾಗಿದೆ.
ಸುಬ್ಬಿಗೆ ಸಿಹಿಯಂತಾಗುವುದೇ ಚಾಲೆಂಜ್
ಏನೂ ಅರಿಯದ ಸುಬ್ಬಿಗೆ ಈಗ ಸಿಹಿಯಂತೆ ಆಗುವ ಚಾಲೇಂಜ್ ಎದುರಾಗಿದೆ. ಓದುವುದು, ಬರೆಯುವುದು ಹಾಗೂ ಚಟಪಟನೇ ಮಾತನಾಡುವ ಗುಣಗಳನ್ನು ಸಿಹಿ ಕಲಿತುಕೊಳ್ಳಬೇಕಿದೆ. ಅದೂ ಕೂಡ ಅವಳಿಗೆ ಸದ್ಯ ಹೇಳಿಕೊಡಲು ಕೂಡ ಯಾರೂ ಇಲ್ಲ. ಸೀತಾ ಸಿಹಿಗೆ ಎಲ್ಲಾ ಗೊತ್ತಿದೆ ಎಂದೇ ಭಾವಿಸಿದ್ದಾಳೆ. ಭಾರ್ಗವಿ ಸುಬ್ಬಿಯ ಬಣ್ಣವನ್ನು ಬಯಲು ಮಾಡಲು ಮುಂದಾಗಿದ್ದಾಳೆ. ಇನ್ನು ಅಶೋಕ್ ಮತ್ತು ರಾಮ್ ಮನೆಯವರ ಕಣ್ಣು ತಪ್ಪಿಸಿ ಸುಬ್ಬಿಗೆ ಪಾಠ ಮಾಡುವುದು ದೊಡ್ಡ ಚಾಲೇಂಜ್ ಆಗಿದೆ. ಒಟ್ನಲ್ಲಿ ಮನೆ, ಸಂಸಾರದ ಮಧ್ಯೆ ರಾಮ್ ಸಿಕ್ಕಿ ಬಿದ್ದಿದ್ದು, ಒಬ್ಬನೇ ಒದ್ದಾಡುವಂತೆ ಆಗಿದೆ.
ಹನುಮನ ಶಕ್ತಿ ಪಡೆದು ಸಿಹಿ ಪವಾಡ ಮಾಡುತ್ತಾಳಾ..?
ಎಲ್ಲರ ಎದುರು ಪ್ರತಿಯೊಂದು ವಿಚಾರಕ್ಕೂ ಸುಬ್ಬಿ ಸಿಕ್ಕಿ ಬೀಳುತ್ತಿದ್ದಾಳೆ. ಇದನ್ನು ನೋಡುತ್ತಿರುವ ಸಿಹಿಯ ಆತ್ಮ ತಾನೇನು ಮಾಡಲಾಗುತ್ತಿಲ್ಲ ಎಂದು ಒದ್ದಾಡುತ್ತಿದೆ. ಈಗ ಸಿಹಿ ಹನುಮಾನ್ ಚಾಲೀಸಾ ಓದಿ ಶಕ್ತಿಯನ್ನು ಪಡೆದುಕೊಳ್ಳಬೇಕಿದೆ. ನಿಜಕ್ಕೂ ಸಿಹಿಯ ಆತ್ಮದ ಪ್ರಾರ್ಥನೆಗೆ ಹನುಮ ಒಲಿಯುತ್ತಾಣಾ. ಸದ್ಯದ ಪರೀಸ್ಥಿತಿಯನ್ನು ಸಿಹಿ ನಿಭಾಯಿಸಲು ಆಂಜನೇಯ ಸ್ವಾಮಿ ಶಕ್ತಿಯನ್ನು ಕೊಡುತ್ತಾನಾ..? ಸಿಹಿ ಪವಾಡ ಮಾಡಿ ಎಲ್ಲವನ್ನೂ ಸರಿ ಮಾಡುತ್ತಾಳಾ..? ಅಲ್ಲದೇ, ಭಾರ್ಗವಿ ಹಲವು ವರ್ಷದ ನಾಟಕಕ್ಕೆ ತೆರೆ ಎಳೆದು ದೇಸಾಯಿ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುತ್ತಾಳಾ ಎಂಬ ಪ್ರಶ್ನೆಗಳು ಎಲ್ಲರಲ್ಲೂ ಕಾಡಲು ಶುರುವಾಗಿದೆ.


Click it and Unblock the Notifications











