Seetharama ; ಸೀತಾ ಬರೆದ ಪತ್ರ ಚಾಂದಿನಿ ಕೈಯಲ್ಲಿ : ಸಂಜೀವಿನಿ ಆಶ್ರಮದ ರಹಸ್ಯವೇನು..?
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮನೆಯನ್ನು ಸುಲೋಚನಾ ಸೇಲ್ ಗೆ ಹಾಕಿದ್ದಾಳೆ. ಇದರಿಂದ ಮನೆಯನ್ನು ನೋಡಲು ಜನ ಬರುತ್ತಿದ್ದು, ಅಜ್ಜಿ-ತಾತ ಗಾಬರಿಯಾಗಿದ್ದಾರೆ. ಸೀತಾಳಿಗೆ ಫೋನ್ ಮಾಡಿ ಈ ಬಗ್ಗೆ ವಿಚಾರಿಸುತ್ತಾರೆ. ಮನೆಯನ್ನು ಸೇಲ್ ಗೆ ಇಟ್ಟಿದ್ದೀಯಾ. ಮನೆ ನೋಡಲು ಜನ ಬರುತ್ತಿದ್ದಾರೆ ಎಂದು ಕೇಳುತ್ತಾರೆ. ಸೀತಾ ಗಮನವೆಲ್ಲಾ ಮಗಳ ಮೇಲಿದೆ. ಹೀಗಾಗಿ ಇವಳಿಗೆ ತನ್ನ ಮನೆಯ ಬಗೆಗಿನ ಕಾಳಜಿ ಹೆಚ್ಚಾಗಿ ಇರುವುದಿಲ್ಲ. ಅಜ್ಜಿ-ತಾತನ ಮಾತನ್ನು ಗಂಭೀರವಾಗಿ ಕೇಳದ ಸೀತಾ ಅಣ್ಣ-ಅತ್ತಿಗೆಗೆ ಕೆಲಸ ವಹಿಸುವುದಾಗಿ ಹೇಳಿ ಸುಮ್ಮನಾಗುತ್ತಾಳೆ.
ಬೋರ್ಡಿಂಗ್ ಸ್ಕೂಲ್ ಗೆ ಸಿಹಿ ತಯಾರಿ
ಸಿಹಿಯನ್ನು ಸೀತಾ ಬೋರ್ಡಿಂಗ್ ಸ್ಕೂಲ್ ಗೆ ಕಳಿಸುವುದು ಇಷ್ಟವಿರುವುದಿಲ್ಲ. ಆದರೆ ಈಗಾಗಲೇ ಅಡ್ಮಿಷನ್ ಮಾಡಿ ಆಗಿದ್ದು,ಈಗ ಅವಳನ್ನು ಶಾಲೆಗೆ ಕಳಿಸಲೇಬೇಕಾಗಿದೆ. ಹೀಗಾಗಿ ಅವಳ ಬಟ್ಟೆಗಳನ್ನು ಸೀತಾ ಪ್ಯಾಕ್ ಮಾಡುತ್ತಿದ್ದಾಳೆ. ಸಿಹಿ ಮನೆಯವರಿಗೆಲ್ಲಾ ಡ್ರಾಯಿಂಗ್ ಮಾಡಿ ಅವರ ಮೇಲಿನ ಪ್ರೀತಿಯನ್ನು ತೋರಿಸುತ್ತಿದ್ದಾಳೆ. ಅನಿಕೇತನ್ ಗೆ ಡ್ರಾಯಿಂಗ್ ಕೊಟ್ಟಾಗಿದೆ. ಈಗ ಸಾಧನಾಳಿಗೆ ಡ್ರಾಯಿಂಗ್ ಕೊಟ್ಟಿದ್ದಾಳೆ.ವೀಡಿಯೋ ಕಾಲ್ ನಲ್ಲಿ ಸತ್ಯಜಿತ್ ಜೊತೆಗೆ ಮಾತನಾಡಿದ್ದಾಳೆ. ಸಿಹಿ ಬೋರ್ಡಿಂಗ್ ಸ್ಕೂಲ್ ಗೆ ಹೋಗುತ್ತಿರುವ ಸುದ್ದಿ ಕೇಳಿ ಸತ್ಯಜಿತ್ ಶಾಕ್ ಆಗಿದ್ದಾನೆ. ಸಿಹಿ ಮತ್ತು ಸೀತಾ ಇಬ್ಬರೂ ಸಾಧನಾ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಪ್ಲಾನ್ ಮಾಡುತ್ತಿದ್ದಾರೆ.

ಸುಲೋಚನಾ ಮನೆಯಲ್ಲಿ ರುದ್ರಪ್ರತಾಪ್
ಇನ್ನು ಸುಲೋಚನಾ ಮನೆಗೆ ರುದ್ರಪ್ರತಾಪ್ ಎಂಟ್ರಿಕೊಟ್ಟಿದ್ದಾನೆ. ತಮ್ಮ ಪಾಲಿಗೆ ದಕ್ಕದ ಸೀತಾ ಮನೆಯನ್ನು ಮಾರಾಟ ಮಾಡಿ ಇಬ್ಬರೂ ಆ ಹಣದಲ್ಲಿ ಮಜಾ ಮಾಡಬೇಕು ಎಂದು ಸುಲೋಚನಾ ಮತ್ತು ಸುದೇಶ್ ಸ್ಕೆಚ್ ಹಾಕುತ್ತಿದ್ದಾರೆ. ಇದೇ ವೇಳೆಗೆ ರುದ್ರಪ್ರತಾಪ್ ಮತ್ತೆ ಮನೆಗೆ ಬಂದು ವಕ್ಕರಿಸಿದ್ದಾನೆ. ಸೀತಾ ಗಂಡ ಹಾಗೂ ಸಿಹಿ ತಂದೆಯ ಬ ಗ್ಗೆ ಮಾಹಿತಿ ನೀಡಿ ಎಂದು ರುದ್ರಪ್ರತಾಪ್ ಪೀಡಿಸಿದ್ದಾನೆ. ಆದರೆ, ಇಬ್ಬರಿಗೂ ಆ ಸತ್ಯ ತಿಳಿದಿಲ್ಲ. ರುದ್ರಪ್ರತಾಪ್ ಹಣದ ಆಸೆಯನ್ನು ತೋರಿಸಿದ್ದಾನೆ. ಆದರೂ ಸುಲೋಚನಾ ಶ್ರೀರಾಮ್ ದೇಸಾಯಿ ಹೆಸರನ್ನು ಹೇಳಿ ಸುಮ್ಮನಾಗಿದ್ದಾಳೆ. ರುದ್ರಪ್ರತಾಪ್ ಕೆಲಸ ಸುಲಭವಾಗುತ್ತಾ ಕಾದು ನೋಡಬೇಕಿದೆ.
ಸಂಜೀವಿನಿ ಆಶ್ರಮಕ್ಕೆ ಬಂದ ಅಶೋಕ್-ಪ್ರಿಯಾ
ಪ್ರಿಯಾ ಮನೆಯಲ್ಲಿ ಬಹಳ ಅಪ್ಸೆಟ್ ಆಗಿದ್ದಾಳೆ. ಇದೇ ಸಂದರ್ಭದಲ್ಲಿ ಅವಳ ಜೊತೆಗೆ ಅಂಜಲಿ ಇಲ್ಲದಿರುವುದಕ್ಕೆ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾಳೆ. ಹಾಗಾಗಿ ಅಶೋಕ್ ಸರ್ಪ್ರೈಸ್ ಕೊಡಲು ಪ್ರಿಯಾಳೀಗೆ ವಿಚಾರ ಹೇಳದೆಯೇ ಅಂಜಲಿ ಇರುವ ಸಂಜೀವಿನಿ ಆಶ್ರಮಕ್ಕೆ ಕರೆದುಕೊಂಡು ಬಂದಿದ್ದಾನೆ. ಅಂಜಲಿಯನ್ನು ಭೇಟಿಯಾದ ಪ್ರಿಯಾ ಫುಲ್ ಹ್ಯಾಪಿಯಾಗಿದ್ದಾಳೆ. ಆದರೆ, ಅಶೋಕ್ ಅಂಜಲಿಯನ್ನು ಮಾತನಾಡಿಸಿಲ್ಲ. ಹೇಳದೇ ಕೇಳದೇ ಬಂದಿದ್ದಕ್ಕೆ ತಂಗಿಯ ಮೇಲೆ ಕೋಪಗೊಂಡಿದ್ದಾನೆ. ರುದ್ರಪ್ರತಾಪ್ ಅಣ್ಣ ಬರುವ ಮುನ್ನ ಅಲ್ಲಿಂದ ಹೊರಟಿರುವುದಕ್ಕೆ ಗಾಬರಿಯಾಗಿದ್ದಾಳೆ. ಅಣ್ಣನಿಗೆ ರುದ್ರಪ್ರತಾಪ್ ಇಲ್ಲಿ ಇದ್ದದ್ದು ಗೊತ್ತಿದೆಯಾ ಎಂದು ಗೆಸ್ ಮಾಡುತ್ತಿದ್ದಾಳೆ.

ಸಿಹಿ ಮೂಲ ಹುಡುಕುತ್ತಿರುವ ಚಾಂದಿನಿ
ಚಾಂದಿನಿ ಸೀತಾ ಮೇಲೆ ಜಿದ್ದು ಸಾಧಿಸುತ್ತಿದ್ದಾಳೆ. ಹೇಗಾದರೂ ಮಾಡಿ ಸೀತಾಳನ್ನು ಮಟ್ಟ ಹಾಕಬೇಕು ಎಂದು ಅವಳ ಹಳೆಯ ಗಂಡನ ಬಗ್ಗೆ ಮಾಹಿತಿ ಹುಡುಕಲು ಮುಂದಾಗಿದ್ದಾಳೆ. ತನ್ನ ಅಗ್ರಿಮೆಂಟ್ ಪೇಪರ್ ಹುಡುಕುವ ಸಂದರ್ಭದಲ್ಲಿ ಅವಳಿಗೆ ಸಂಜೀವಿನಿ ಆಶ್ರಮಕ್ಕೆ ಸೀತಾ ಬರೆದ ಪತ್ರವೊಂದು ಸಿಕ್ಕಿದೆ. ಕನ್ನಡ ಓದಲು ಬರದ ಚಾಂದಿನಿ ಆ ಪತ್ರದ ಮೂಲವನ್ನು ಹುಡುಕುತ್ತಿದ್ದಾಳೆ. ಇದರಿಂದ ಸೀತಾಳ ಹಿಂದಿನ ಕಥೆ ಗೊತ್ತಾಗಬಹುದು. ಆಗ ಅವಳ ಖುಷಿಯನ್ನು ಕಿತ್ತುಕೊಳ್ಳಬಹುದು ಎಂದುಕೊಂಡಿದ್ದಾಳೆ.


Click it and Unblock the Notifications











