Seetharama ; ಕೇಕ್ ತಿಂದ ಸುಬ್ಬಿ ಭಾರ್ಗವಿ ಬಳಿ ಎಲ್ಲಾ ಸತ್ಯವನ್ನು ಹೇಳಿ ಬಿಡುತ್ತಾಳಾ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸುಬ್ಬಿ ಸಿಹಿ ರೂಪದಲ್ಲಿ ಮನೆ ಸೇರಿದ್ದೇ ತಡ ಸೀತಾ ಕಂಪ್ಲೀಟ್ ಆಗಿ ಸರಿ ಹೋಗಿದ್ದಾಳೆ. ಗೊಂಬೆ ಬೆಳ್ಳಿಯನ್ನು ಬಿಟ್ಟಿದ್ದಾಳೆ. ಸಿಹಿಯಂತೆ ಚಟ-ಪಟನೇ ಮಾತನಾಡಲು ಸುಬ್ಬಿಗೆ ಸಾಧ್ಯವಾಗುತ್ತಿಲ್ಲ. ಆದರೂ ಸುಬ್ಬಿಗೆ ಪ್ರತೀ ಹೆಜ್ಜೆಯಲ್ಲೂ ಸಿಹಿ ಸಹಾಯ ಮಾಡುತ್ತಿದ್ದಾಳೆ. ಯಾರ ಬಳಿ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಡುತ್ತಿದ್ದಾಳೆ. ಸೀತಮ್ಮನ ಮಡಿಲು ಸೇರಿದ ಬಳಿಕವೂ ಸುಬ್ಬಿಗೆ ಶ್ರೀರಾಮ್ ಮೇಲಿರುವ ಆತಂಕ ಮಾತ್ರ ಕೊಂಚವೂ ಕಡಿಮೆ ಆಗಿಲ್ಲ. ಆದರೆ, ರಾಮ್ ಇದ್ಯಾವುದನ್ನೂ ಲೆಕ್ಕಿಸದೇ ಸೀತಾ ಸರಿ ಹೋಗಿರುವುದಕ್ಕೆ ಖುಷಿ ಪಟ್ಟಿದ್ದಾಳೆ.

ಸುಬ್ಬಿ ಭಾಷೆಯಲ್ಲಿ ವ್ಯತ್ಯಾಸ

ಇತ್ತ ಭಾರ್ಗವಿಗೆ ಕುತೂಹಲ ತಡೆಯಲು ಸಾಧ್ಯವಾಗುತ್ತಿಲ್ಲ. ಸಿಹಿ ಮೃತದೇಹವನ್ನು ಸುಡುವಾಗ ನಾವೆಲ್ಲರೂ ಇದ್ದೆವು. ಹಾಗಿರುವಾಗ ಸಿಹಿ ಹೇಗೆ ಬಂದಳು ಎಂದು ಆಶ್ಚರ್ಯಗೊಂಡಿದ್ದಾಳೆ. ರಾಮ್ ನಿಂದ ಸತ್ಯ ಬಾಯಿ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ, ರಾಮ್ ಮತ್ತು ಅಶೋಕ್ ಸೇರಿಕೊಂಡು ಸತ್ಯವನ್ನು ಮುಚ್ಚಿಟ್ಟಿದ್ದಾರೆ. ಇವಳೇ ಸಿಹಿ ಹೇಗೆ ಬದುಕಿ ಬಂದಳು, ಏನಾಗಿತ್ತು ಎಂಬುದೆಲ್ಲಾ ನಮಗೂ ಗೊತ್ತಿಲ್ಲ. ಆದರೆ, ನಮ್ಮ ಸಿಹಿ ವಾಪಸ್ ಬಂದಿದ್ದಾಳೆ ಅಷ್ಟೇ ಎಂದು ಹೇಳಿದ್ದಾಳೆ. ಇನ್ನು ಸುಬ್ಬಿ ಭಾಷೆಯಲ್ಲಿನ ಬದಲಾವಣೆಯನ್ನು ಸೀತಾ ಗುರುತು ಹಿಡಿದಿದ್ದಾಳೆ. ಆದರೆ, ಸುಬ್ಬಿ ತನಗೆ ಶಾಲೆಯಲ್ಲಿ ಹೊಸ ಗೆಳೆಯರಿದ್ದು, ಅವರಿಂದ ಹೀಗೆ ಮಾತನಾಡುತ್ತಿದ್ದೇನೆ ಎಂದು ಹೇಳಿ ಯಾಮಾರಿಸಿದ್ದಾಳೆ.

Seetharama Serial 14 February episode written update

ಸುಬ್ಬಿ ಸಿಹಿ ಕೊಟ್ಟ ಭಾರ್ಗವಿ

ಸೂರಿ ತಾತ ಸಿಹಿ ವಾಪಸ್ ಮನೆಗೆ ಬಂದಿದ್ದು, ಸೀತಾ ಸರಿ ಹೋಗಿರುವುದಕ್ಕೆ ಖುಷಿಪಟ್ಟಿದ್ದಾನೆ. ಇನ್ನು ಸುಬ್ಬಿ ಒಬ್ಬಳೇ ಇರುವಾಗ ಭಾರ್ಗವಿ ಬೇಕಂತಲೇ ಕೇಕ್ ಕೊಟ್ಟಿದ್ದಾಳೆ. ಸಿಹಿ ಕೇಕ್ ತಿನ್ನಬೇಡ ಎಂದರೂ ಸುಬ್ಬಿ ಆಸೆಯಿಂದ ಕೇಕ್ ತಿಂದಿದ್ದಾಳೆ. ಚಾಕ್ಲೇಟ್, ಐಸ್ ಕ್ರೀಂ ಕೊಡುತ್ತೀನಿ ನಾನು ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಹೇಳುತ್ತಾಳೆ. ಇದಕ್ಕೆ ಸುಬ್ಬಿ ಹೂ ಎಂದಿದ್ದಾಳೆ. ನಿನ್ನ ಮನೆಯಲ್ಲಿ ಯಾರು ಯಾರು ಇದ್ದಾರೆ ಎಂದು ಕೇಳುತ್ತಾಳೆ. ಆಗ ಸಿಹಿ ಸತ್ಯ ಹೇಳಬೇಡ. ಇದೇ ನಿನ್ನ ಮನೆ ಅಂತ ಹೇಳು ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ. ಸುಬ್ಬಿ ಸಿಹಿ ಹೇಳಿದಂತೆ ಇದೇ ನನ್ನ ಮನೆ ಎಂದು ಹೇಳಿದ್ದಾಳೆ. ಇನ್ನು ಅವಳು ಇಷ್ಟು ದಿನ ಎಲ್ಲಿದ್ದಳು ಎಂಬ ಬಗ್ಗೆ ಪ್ರಶ್ನೆ ಮಾಡಿದ್ದು, ಉತ್ತರ ನೀಡುವ ಮುನ್ನವೇ ಸೀತಾ ಬಂದಿದ್ದಾಳೆ.

Cತಮ್ಮ ಎಂದು ಬರೆದ ಸುಬ್ಬಿ

ಸುಬ್ಬಿ ಕೇಕ್ ತಿನ್ನುತ್ತಿರುವುದನ್ನು ನೋಡಿ ಬೈಯುತ್ತಾಳೆ. ಕೈಯಲ್ಲಿರುವ ಚಾಕ್ಲೇಟ್ ಅನ್ನು ಕಿತ್ತು ಎತ್ತಿಡುತ್ತಾಳೆ. ನೀನು ಸ್ವೀಟ್ ತಿನ್ನಬಾರದು ಬಾ ಎಂದು ಕರೆದುಕೊಂಡು ಹೋಗುತ್ತಾಳೆ. ಬರೆಯಲು ಬುಕ್ ಕೊಟ್ಟರೆ ಸುಬ್ಬಿ ಅನಿ ಹತ್ರ ತಾನು ಯಾಕೆ ಸಿಹಿ ತಿನ್ನಬಾರದು ಎಂದು ಕೇಳುತ್ತಾಳೆ. ಆಗ ಅನಿ ಸಿಹಿಗೆ ಸಕ್ಕರೆ ಖಾಯಿಲೆ ಇರುವ ಬಗ್ಗೆ ಹೇಳುತ್ತಾನೆ. ಇದನ್ನು ಕೇಳಿದ ಸುಬ್ಬಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಓದಲು, ಬರೆಯಲು ಬರದ ಸುಬ್ಬಿ Cತಮ್ಮ(ಸೀತಮ್ಮ) ಎಂದು ಬರೆದಿರುತ್ತಾಳೆ. ಇದನ್ನು ನೋಡಿ ಸೀತಾ ಬೈಯುತ್ತಾಳೆ. ಊಟ ಮಾಡಿಸಿ ಸೀತಾ, ಸುಬ್ಬಿಗೆ ಇನ್ಸುಲಿನ್ ಕೊಡಲು ಮುಂದಾಗಿದ್ದಾಳೆ. ಆದರೆ, ಸುಬ್ಬಿ ಇಂಜೆಕ್ಷನ್ ಗೆ ಹೆದರಿ ಮನೆಯೆಲ್ಲಾ ಓಡಾಡಿದ್ದಾಳೆ.

ಇಂಜೆಕ್ಷನ್ ಬೇಡ ಎಂದ ಸುಬ್ಬಿ

ಇತ್ತ ಭಾರ್ಗವಿ ಸೂರಿ ಬಳಿ ಬಂದು ಸುಬ್ಬಿ ಸಿಹಿ ಆಗಿರೋದಕ್ಕೆ ಸಾಧ್ಯವಿಲ್ಲ. ರಾಮ್ ಮತ್ತು ಅಶೋಕ್ ಸೇರಿಕೊಂಡು ಏನೋ ನಾಟಕ ಮಾಡುತ್ತಿದ್ದಾರೆ ಎಂದು ಚಾಡಿ ಹೇಳಲು ಮುಂದಾಗುತ್ತಾಳೆ. ಆದರೆ, ಸೂರಿ ಈಗ ಮಗುವಿನಿಂದಾಗಿ ರಾಮ್ ಮತ್ತು ಸೀತಾ ಬದುಕು ಸರಿ ಆಗಿದೆಯಲ್ಲಾ ಅಷ್ಟೇ ಸಾಕು ಎಂದು ಹೇಳಿ ಸುಮ್ಮನಾಗುತ್ತಾನೆ. ಸುಬ್ಬಿ ಇಂಜೆಕ್ಷನ್ ಬೇಡ ಎಂದು ಓಡಿ ಹೋಗಿದ್ದನ್ನು ಕಂಡು ಭಾರ್ಗವಿಗೆ ಆಶ್ಚರ್ಯವಾಗಿದೆ. ರಾಮ್ ಮತ್ತು ಅಶೋಕ್ ಈಗ ಏನು ಮಾಡುವುದು ಎಂದು ಆಂತಕ ಮಾಡಿಕೊಂಡಿದ್ದಾರೆ. ಇನ್ನು ಸುಬ್ಬಿ ಮತ್ತು ಸಿಹಿಗಿರುವ ವ್ಯತ್ಯಾಸಗಳು ಮನೆಯಲ್ಲಿ ಅವಾಂತರವನ್ನು ಸೃಷ್ಟಿ ಮಾಡುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X