Seetha Rama ; ಅಂಜಲಿಗೆ ನುಂಗಲಾರದ ತುತ್ತಾದ ಪ್ರೀತಿ : ರುದ್ರಪ್ರತಾಪ್ ಗೆ ಕಾಣುತ್ತಿಲ್ಲ ಯಾವುದೇ ದಾರಿ
ಸೀತಾರಾಮ ಧಾರಾವಾಹಿಯಲ್ಲಿ ಅಂಜಲಿಗೆ ತನ್ನ ಪ್ರೀತಿ ನುಂಗಲಾರದ ತುಪ್ಪದಂತಾಗಿದೆ. ಭೇಟಿ ಮಾಡಲು ಹೇಳಿ ರುದ್ರಪ್ರತಾಪ್ ಇದ್ದಕ್ಕಿದ್ದ ಹಾಗೆಯೇ ಎಸ್ಕೇಪ್ ಆಗಿದ್ದಾನೆ. ಪ್ರೇಮಅ ತರಕಾರಿ ತರಲೆಂದು ಹೊರಗಡೆ ಹೋದಾಗ ರುದ್ರಪ್ರತಾಪ್ ನನ್ನು ಮತ್ತೆ ಭೇಟಿ ಮಾಡಿದ್ದಾಳೆ. ರುದ್ರಪ್ರತಾಪ್ ಧೂಮಪಾನ ಮಾಡುತ್ತಿರುವುದನ್ನು ನೋಡಿ ಬುದ್ಧಿ ಹೇಳಿದ್ದಾಳೆ. ಇದೆಲ್ಲಾ ಆರೋಗ್ಯಕ್ಕೆ ಒಳ್ಳೆಯದಲ್ಲಿ ಬಿಟ್ಟುಬಿಡು ಎಂದು ಹೇಳಿದ್ದಾಳೆ. ರುದ್ರಪ್ರತಾಪ್ ಪ್ರೇಮಾಳಿಗೆ ಮತ್ತೆ ಕಾಣಿಸಿಕೊಳ್ಳಬೇಡ ನಿನ್ನ ಕಥೆ ಮುಗಿಸುತ್ತೇನೆ ಎಂದು ವಾರ್ನ್ ಮಾಡಿದ್ದಾನೆ.
ಅಂಜಲಿಗೆ ಬೈಯುತ್ತಿರುವ ಅಶೋಕ್
ರುದ್ರಪ್ರತಾಪ್ ನ ತನ್ನ ಅಣ್ಣನಿಗೆ ಅಂಜಲಿ ಭೇಟಿ ಮಾಡಿಸಲು ಪ್ರಯತ್ನ ಪಡುತ್ತಲೇ ಇದ್ದಾಳೆ. ಆದರೆ, ರುದ್ರಪ್ರತಾಪ್ ಯಾವ ಫೋನ್ ಕರೆಗೂ ರೆಸ್ಪಾನ್ಸ್ ಮಾಡುತ್ತಿಲ್ಲ. ಮನೆಗೆ ಕರೆಸು ಎಂದು ಅಶೋಕ್ ಹೇಳಿದ್ದರೂ ಆತ ಇನ್ನೂ ಮನೆಗೆ ಬಾರದಿರುವುದಕ್ಕೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾನೆ. ಒಳ್ಳೆಯ ಗುಣವಂತರಾಗಿದ್ದರೆ, ಇಷ್ಟೊತ್ತಿಗೆ ಮನೆಗೆ ಕರೆದ ಕೂಡಲೇ ಬರಬೇಕಿತ್ತು ಎಂದು ಅಂಜಲಿ ಬಳಿ ಕೂಗಾಡಿದ್ದಾನೆ. ಇನ್ನೊಂದು ದಿನ ಸಮಯ ಕೊಡುತ್ತೇನೆ. ಏನು ಮಾಡುತ್ತೀಯೋ ಗೊತ್ತಿಲ್ಲ. ನಾನು ಅವನನ್ನು ಭೇಟಿ ಮಾಡಬೇಕು. ಇಲ್ಲದೇ ಹೋದರೆ ನೀನು ಅವನನ್ನು ಮರೆತುಬಿಡಬೇಕು ಎಂದು ಖಡಕ್ ಆಗಿ ಹೇಳಿದ್ದಾಳೆ. ಅಂಜಲಿ ಅಶೋಕನ ಮಾತಿಗಿ ಹೆದರಿದ್ದಾಳೆ.

ಸತ್ಯ ತಿಳಿದು ಬೇಸರ ಮಾಡಿಕೊಂಡ ಪ್ರಿಯಾ
ಪ್ರಿಯಾ ಅಶೋಕ್ ನಡೆದುಕೊಳ್ಳುತ್ತಿರುವ ರೀತಿಗೆ ಕೋಪ ಮಾಡಿಕೊಂಡಿದ್ದಾಳೆ. ಪರಿಸ್ಥಿತಿಯನ್ನು ನಿಭಾಯಿಸಲು ಯತ್ನಿಸುತ್ತಿದ್ದಾಳೆ. ಆದರೆ, ಪ್ರೇಮಾ ತಾನು ಆ ಹುಡುಗನನ್ನು ಭೇಟಿ ಮಾಡಿದ್ದು, ಬಾಯಿ ತೆಗೆದರೆ ಸುಳ್ಳು ಹೇಳುತ್ತಾನೆ. ನೋಡಲು ರೌಡಿ ಇದ್ದಂತೆ ಇದ್ದಾನೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಪ್ರಿಯಾಳಿಗೆ ಬೇಸರವಾಗುತ್ತದೆ. ಅಂಜಲಿಗೆ ಆ ಹುಡುಗ ಮೋಸ ಮಾಡುತ್ತಿದ್ದಾನೆ ಎಂಬುದು ಅರ್ಥವಾಗಿದೆ. ಆದರೆ, ಈ ಸೂಕ್ಷ್ಮವಾದ ವಿಚಾರವನ್ನು ಹೇಗೆ ಅಂಜಲಿ ತಿಳಿಸಿ ಹೇಳುವುದು ಎಂದು ಪ್ರಿಯಾ ಯೋಚಿಸುತ್ತಿದ್ದಾಳೆ. ರುದ್ರಪ್ರತಾಪ್ ಗೆ ಈಗ ಅಂಜಲಿಯನ್ನು ತನ್ನ ವಶ ಮಾಡಿಕೊಳ್ಳಲಾಗದೇ ಒದ್ದಾಡುತ್ತಿದ್ದಾನೆ. ರಾಮ್ ಮದುವೆಗೂ ಮುನ್ನವೇ ಈ ವಿಚಾರ ಇತ್ಯರ್ಥವಾಗುತ್ತದೋ, ಅಥವಾ ಇದು ಹೀಗೆ ಮುಂದುವರೆಯುತ್ತದೋ ಎಂಬುದನ್ನು ಕಾದು ನೋಡಬೇಕಿದೆ.
ಸೀತಾ ಮನೆಯಲ್ಲಿ ಫೋಟೋಶೂಟ್
ಇನ್ನು ಸೀತಾ ಮತ್ತು ರಾಮ್ ಜೀವನದಲ್ಲಿ ಒಂದು ದಿನ ಎಂಬ ಕಾನ್ಸೆಪ್ಟ್ ಅನ್ನು ಇಟ್ಟುಕೊಂಡು ಸೀತಾಳ ಮನೆಯಲ್ಲಿ ಫೋಟೋಶೂಟ್ ಮಾಡಲಾಗಿದೆ. ಇದರಲ್ಲಿ ಸೀತಾ ಮನೆಯಲ್ಲಿ ಕೆಲಸ ಮಾಡುತ್ತಿರುವುದು. ಸೀತಾಳಿಗೆ ಸಪೋರ್ಟ್ ಆಗಿ ಸಿಹಿ ಮತ್ತು ರಾಮ್ ಹೆಲ್ಪ್ ಮಾಡುವುದನ್ನೆಲ್ಲಾ ಫೋಟೋ ತೆಗೆಯಲಾಗಿದೆ. ಶಾಂತಜ್ಜಿ ಹಾಗೂ ಮೂರ್ತಿ ತಾತ ಈ ರೀತಿಯ ಫೋಟೋಶೂಟ್ ಅನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ.

ಭಾರ್ಗವಿಗೆ ಇರಿಟೇಟ್ ಮಾಡಿದ ಸತ್ಯಜಿತ್
ಭಾರ್ಗವಿ ಸೂರಿ ಮಾವನಿಗೆ ಫೋನ್ ಮಾಡಿ ರಾಮ್ ಮದುವೆಯ ತಯಾರಿ ಹೇಗೆಲ್ಲಾ ನಡೆಯುತ್ತಿದೆ ಎಂಬುದನ್ನು ಫೋನ್ ಮಾಡಿ ಅಪ್ ಡೇಟ್ ಮಾಡುತ್ತಾಳೆ. ಆದಷ್ಟು ಬೇಗ ಬನ್ನಿ ಎಂದು ಹೇಳಿದ್ದಾಳೆ. ಸೀತಾ ಮತ್ತು ರಾಮ್ ಬಟ್ಟೆ ಖರೀದಿ ಶಾಪಿಂಗ್ ಗೆ ಎಂದು ಭಾರ್ಗವಿಯೂ ಹೊರಟಿದ್ದಾಳೆ. ಈ ವೇಳೆ ಸತ್ಯಜಿತ್ ಬೇಕಂತಲೇ ಭಾರ್ಗವಿಗೆ ಕೋಪ ಬರಿಸುತ್ತಾನೆ. ಭಾರ್ಗವಿ ಆಟಗಳೆಲ್ಲವೂ ಮುಗಿಯುವ ಸಮಯ ಬಂದಿದೆ. ಅಪ್ಪಾಜಿ ಮೊಮ್ಮಗನ ಮದುವೆಯಲ್ಲಿ ಹುಡುಗನಂತೆ ಓಡಾಡಿಕೊಂಡಿರುತ್ತಾರೆ ಎಂದೆಲ್ಲಾ ಮಾತಣಾಡಿ ಇರಿಟೇಟ್ ಮಾಡುತ್ತಾನೆ. ಅದಲ್ಲದೇ ಅನಿಕೇತನ್ ಶಾಪಿಂಗ್ ಗೆ ಬರುವುದಿಲ್ಲ ಎಂದಿದ್ದಕ್ಕೂ ಭಾರ್ಗವಿಗೆ ಬಹಳ ಬೇಗ ಕೋಪ ಮಾಡಿಕೊಳ್ಳುತ್ತಾಳೆ.


Click it and Unblock the Notifications











