Seetharama ; ಶ್ಯಾಮ್ ಮನಸ್ಸು ಬದಲಾಯ್ತಾ..? ಸೀತಾಳನ್ನು ಬಿಡಿಸುತ್ತಾನಾ ರಾಮ್..?
ಸೀತಾರಾಮ ಧಾರಾವಾಹಿಯಲ್ಲಿ ಶಾಲಿನಿ ಬೇಕಂತಲೇ ಸಿಹಿಯನ್ನು ಸೀತಾ ಮನೆಗೆ ಹೋಗಲು ಬಿಟ್ಟಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ ವಿಚಾರ ತಿಳಿದ ಅಶೋಕ್ ಬೇಸರ ಮಾಡಿಕೊಳ್ಳುತ್ತಾನೆ. ಶಾಲಿನಿ ಮನೆಗೆ ಬಂದು ಶ್ಯಾಮ್ ಮತ್ತು ಶಾಲಿನಿಯನ್ನು ಬೆದರಿಸುತ್ತಾನೆ. ನಾಟಕ ಮಾಡಿ ನೀವೇನೇ ಮಾಡಿದರೂ ಸೀತಾ ರಾಮ್ ಮತ್ತು ಸಿಹಿಯನ್ನು ದೂರ ಮಾಡಲು ಸಾಧ್ಯವಿಲ್ಲ ಎಂದು ಬೈಯುತ್ತಾನೆ. ಸಿಹಿಯನ್ನು ಎತ್ತಿಕೊಂಡು ಅಲ್ಲಿಂದ ಹೊರಗೆ ಬರುತ್ತಾನೆ. ರಾಮ್ ಗೆ ಫೋನ್ ಮಾಡಿ ಶಾಲಿನಿಯ ನಾಟಕವನ್ನು ವಿವರಿಸುತ್ತಾನೆ. ಇವರೆಲ್ಲಾ ಬೇಕಂತಲೇ ಸೀತಾಳನ್ನು ಜೈಲಿಗೆ ಕಳಿಸಿದ್ದಾರೆ ಎಂದು ಹೇಳುತ್ತಾನೆ.
ಶಾಲಿನಿ ನಾಟಕದಿಂದ ನೊಂದ ಶ್ಯಾಮ್
ಶ್ಯಾಮ್ ಕೂಡ ಶಾಲಿನಿ ಆಡಿದ ನಾಟಕದಿಂದ ಬೇಸರ ಮಾಡಿಕೊಳ್ಳುತ್ತಾನೆ. ನೀನು ಹೀಗೆಲ್ಲಾ ಮಾಡಬಾರದಿತ್ತು. ರಾಮ್ ಮನಸ್ಸು ಮಾಡಿದರೆ ಏನು ಬೇಕಿದ್ದರೂ ಮಾಡುತ್ತಾನೆ. ಈಗ ನಮ್ಮ ಮೇಲೆ ದೂರು ನೀಡಿ ಜೈಲಿಗೆ ಕಳಿಸುತ್ತಾನೆ. ಸೀತಾಳನ್ನು ಜೈಲಿಗೆ ಕಳಿಸಿದ್ದು ತಪ್ಪು ಎಂದು ಶಾಲಿನಿಗೆ ಬೈಯುತ್ತಾನೆ. ಬಳಿಕ ಸಿಹಿಯನ್ನು ಸಮಾಧಾನ ಮಾಡಲು ಹೊರಗೆ ಹೋಗುತ್ತಾನೆ. ಆಗ ಸಿಹಿ ತನ್ನ ತಾಯಿ ಸೀತಾ ಜೈಲಿನಲ್ಲಿದ್ದಾಳೆ ಎಂದು ಕಣ್ಣೀರು ಹಾಕುತ್ತಾಳೆ. ಅಶೋಕ್ ರಾಮ್ ಜೊತೆಗೆ ಮಾತನಾಡುವಾಗ ಫೋನ್ ಪಡೆದು ಇದರಲ್ಲಿ ತನ್ನದೇನು ತಪ್ಪಿಲ್ಲ ಎಂದು ಹೇಳಲು ಯತ್ನಿಸುತ್ತಾನೆ. ಆಗ ರಾಮ್ ಫೋನ್ ಕಟ್ ಮಾಡಿ ವೀಡಿಯೋ ಕಾಲ್ ಮಾಡುತ್ತಾನೆ. ನೋಡು ನಿನ್ನಿಂದ ಸೀತಾ ತಲೆಗೆ ಗಾಯ ಮಾಡಿಕೊಂಡಿದ್ದಾಳೆ. ಮಗಳು ಸಿಹಿಗಾಗಿ ಒದ್ದಾಡುತ್ತಿದ್ದಾಳೆ ಎಂದು ಹೇಳುತ್ತಾನೆ.

ಸಿಹಿಯನ್ನು ಪೊಲೀಸ್ ಠಾಣೆಗೆ ಕರೆ ತಂದ ಶ್ಯಾಮ್
ಸೀತಾಳನ್ನು ಆ ಸ್ಥಿತಿಯಲ್ಲಿ ನೋಡಿದ ಶ್ಯಾಮ್ ನಾನು ಸಿಹಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಸಿಹಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಸಿಹಿ ಪೊಲೀಸರ ಬಳಿ ರಿಕ್ಷೆಸ್ಟ್ ಮಾಡಿಕೊಳ್ಳುತ್ತಾಳೆ. ನಾನೇ ನಿನ್ನೆ ರಾತ್ರಿ ಬಾಗಿಲು ತೆಗೆದಿದೆ ಎಂದು ಸೀತಮ್ಮನ ಮನೆಗೆ ಹೋದೆ. ಇದರಲ್ಲಿ ಸೀತಮ್ಮನ ತಪ್ಪಿಲ್ಲ. ನನ್ನನ್ನು ಜೈಲಿಗೆ ಹಾಕಿ. ಸೀತಮ್ಮನನ್ನು ಬಿಟ್ಟು ಬಿಡಿ ಪ್ಲೀಸ್ ಎಂದು ಪರಿ ಪರಿಯಾಗಿ ಕೇಳಿಕೊಳ್ಳುತ್ತಾಳೆ. ಸಿಹಿ ತಾಐಿ ಸೀತಾಳಿಗಾಗಿ ಮರುಗುತ್ತಿರುವುದನ್ನು ಕಂಡು ಶ್ಯಾಮ್ ಬಹಳ ಬೇಸರ ಮಾಡಿಕೊಳ್ಳುತ್ತಾನೆ.
ಸೀತಾಳನ್ನು ಬಿಡಿಸಲು ಶ್ಯಾಮ್ ನಿರ್ಧಾರ
ಇದೇ ವೇಳೇಘೇ ಶಾಲಿನಿ ಸಿಹಿ ಜೊತೆಗೆ ಕೆನಡಾಗೆ ಹೋಗಲು ಪ್ಲಾನ್ ಮಾಡುತ್ತಾಳೆ. ಶ್ಯಾಮ್ ಗೆ ಫೋನ್ ಮಾಡಿ ಕೂಡಲೇ ಸಿಹಿಯನ್ನು ಕರೆದುಕೊಂಡು ಬಾ ಎಂದು ಬೆದರಿಸಿದಾಗ ಸಿಹಿಯನ್ನು ಶ್ಯಾಮ್ ಮನೆಗೆ ಕರೆದುಕೊಂಡು ಹೋಗುತ್ತಾನೆ. ಆಗ ಶಾಳಿನಿ ತಾವು ಕೆನಡಾಗೆ ಹೋಗಬೇಕು ಎಂದು ಹೇಳುತ್ತಾಳೆ. ಆಗ ಶ್ಯಾಮ್ ಶಾಳಿನಿ ಮಾತಿಗೆ ಒಪ್ಪಿಗೆಯನ್ನು ಕೊಡ್ಡು ಅದಕ್ಕೂ ಮುನ್ನ ನಾವು ಸೀತಾಳನ್ನು ಜೈಲಿನಿಂದ ಬಿಡಿಸಬೇಕು. ಕೊಟ್ಟಿರುವ ದೂರನ್ನು ಹಿಂಪಡೆಯೋಣ ಬಾ ಎಂದು ಕರೆಯುತ್ತಾನೆ. ಇದಕ್ಕೆ ಶಾಲಿನಿ ಸುತಾರಾಂ ಒಪ್ಪುವುದಿಲ್ಲ. ಶ್ಯಾಮ್ ಶಾಲಿನಿ ಮೇಲೆ ಕೂಗಾಡುತ್ತಾನೆ.
ಭಾರ್ಗವಿ ಆಟಕ್ಕೆ ಸೆಡ್ಡು ಹೊಡೆದ ಅಶೋಕ
ಇತ್ತ ಭಾರ್ಗವಿ ಸೀತಾಳನ್ನು ಜೈಲಿನಿಂದ ಬಿಡಿಸಬಾರದು ಎಂದು ಸೂರಿಗೆ ನಿದ್ದೆ ಮಾತ್ರೆ ಕೊಟ್ಟಿದ್ದಾಳೆ. ಲಾಯರ್ ಗಳು ರಾಮ್ ಸಹಾಯಕ್ಕೆ ಬಾರದಂತೆ ನೋಡಿಕೊಂಡಿದ್ದಾಳೆ. ಭಾರ್ಗವಿಯನ್ನು ಅಶೋಕ್ ಬೇಡಿಕೊಂಡರೂ ಭಾರ್ಗವಿ ಬಗ್ಗುವುದಿಲ್ಲ. ಆಗ ಅಶೋಕ್ ಇವತ್ತೇ ಸೀತಾ ಮನೆಗೆ ಬರುತ್ತಾಳೆ ಎಂದು ಚಾಲೇಂಜ್ ಮಾಡಿ ಹೋಗುತ್ತಾನೆ. ರಾಮ್ ಗೆ ಯಾರಾದರೂ ಮಿನಿಸ್ಟರ್ ಅನ್ನು ಭೇಟಿ ಮಾಡು ಎಂದು ಸಲಹೆ ನೀಡಿದಾಗ ರಾಮ್ ತನಗೆ ತಿಳಿದಿರುವ ಮಿನಿಸ್ಟರ್ ಗೆ ಫೋನ್ ಮಾಡಿ ಸೀತಾಳನ್ನು ಜೈಲಿನಿಂದ ಬಿಡಿಸುವಂತೆ ಕೇಳಿಕೊಳ್ಳುತ್ತಾನೆ. ಅವರು ರಾಮ್ ಬೇಡಿಕೆಗೆ ಒಪ್ಪಿಕೊಳ್ಳುತ್ತಾನೆ.


Click it and Unblock the Notifications











