Seetharama ; ವೈದ್ಯರ ಹಿಂದೆ ಬಿದ್ದ ಮೂವರು : ಸೀತಾಳನ್ನು ಆತಂಕ ಪಡಿಸಿದ ಗೊಂಬೆ ಭವಿಷ್ಯ ..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿಗೆ ಬೋರ್ಡಿಂಗ್ ಸ್ಕೂಲ್ ಗೆ ಹೋಗುವ ಸಂಭ್ರಮ. ಅವಳು ಇರುವಷ್ಟು ದಿನವೂ ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ರಾಮ್ ತೀರ್ಮಾನಿಸಿದ್ದಾನೆ. ಹೀಗಾಗಿ ಅವಳಿಗೆ ಇಷ್ವಾಗುವಂತೆ ಶಾಪಿಂಗ್ ಕರೆದುಕೊಂಡು ಹೋಗಿದ್ದಾನೆ. ಅಲ್ಲದೇ, ಸಾಧನಾಳ ಹುಟ್ಟುಹಬ್ಬಕ್ಕೆ ಸತ್ಯಜಿತ್ ಇರುವ ಫಾರ್ಮ್ ಹೌಸ್ ಗೆ ಹೋಗಲು ಪ್ಲಾನ್ ಮಾಡಿದ್ದಾನೆ. ಆದರೆ, ಮನೆಯಲ್ಲಿ ಭಾರ್ಗವಿ ಇಲ್ಲ ಹೀಗಾಗಿ ವಿಶ್ವನ ಬಳಿ ರಾಮ್ ತನ್ನ ಪ್ಲಾನ್ ಬಗ್ಗೆ ಹೇಳಿದ್ದಾನೆ. ಆದರೆ, ವಿಶ್ವ ಇದೆಲ್ಲಾ ಬೇಡ. ಸೂರಿ ಅಪ್ಪನಿಗೆ ಇಷ್ಟವಾಗುವುದಿಲ್ಲ ಎಂದು ಹೇಳುತ್ತಾನೆ.


ಸೀತಾ ಮನೆ ಬಾಗಿಲು ಒಡೆದ ಅಣ್ಣ

ಸುದೇಶ್ ಮನೆಗೆ ರುದ್ರಪ್ರತಾಪ್ ಬಂದು ಕುಳಿತಿದ್ದಾನೆ. ಸುಲೋಚನಾ ಪೇಪರ್ ನಲ್ಲಿ ಸೀತಾ ಮನೆ ಮಾರಾಟಕ್ಕಿದೆ ಎಂದು ಆಡ್ ಕೊಟ್ಟಿದ್ದಾಳೆ. ಅದರ ಪ್ರಕಾರ, ಸುಲೋಚನಾ ಮತ್ತು ಸುದೇಶ್ ಬಂದು ಶಾಂತಜ್ಜಿ ಬಳಿ ಸೀತಾ ಮನೆಯ ಕೀ ಕೇಳುತ್ತಾರೆ. ಆದರೆ, ಅಜ್ಜಿ ತಾತನಿಗೆ ಸುಲೋಚನಾ ಕೈಗೆ ಕೀ ಕೊಡಲು ಇಷ್ಟವಿಲ್ಲದ ಕಾರಣ ನಮ್ಮ ಬಳಿ ಇಲ್ಲ ಎಂದು ಹೇಳುತ್ತಾಳೆ. ಸುದೇಶ್ ಮನೆ ಬಾಗಿಲ ಬೀಗವನ್ನು ಹೊಡೆದಿದ್ದು, ಮನೆಯೊಳಗೆ ಹೋಗಿದ್ದಾರೆ. ಅಲ್ಲಿ ಸೀತಾ ಸಿಹಿಗೆ ಜನ್ಮ ಕೊಟ್ಟ ಆಸ್ಪತ್ರೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಲಕ್ಷ್ಮೀ ಮೆಟರ್ನಿಟಿ ಹಾಸ್ಪಿಟಲ್ ನ ಫೈಲ್ ಅನ್ನು ರುದ್ರಪ್ರತಾಪ್ ಗೆ ಕಳಿಸುತ್ತಾರೆ. ರುದ್ರಪ್ರತಾಪ್ ನಿಂದ ಹಣವನ್ನು ಪಡೆದುಕೊಂಡಿದ್ದಾರೆ.

Seetharama Serial 15 August episode written update

ರುದ್ರಪ್ರತಾಪ್ ಗೆ ಸಿಕ್ತು ಸಿಹಿ ತಂದೆ ಮಾಹಿತಿ

ಲಕ್ಷ್ಮೀ ಮೆಟರ್ನಿಟಿ ಆಸ್ಪತ್ರೆಯಲ್ಲಿ ಸೀತಾ ಸಿಹಿಗೆ ಜನ್ಮ ನೀಡಿರುತ್ತಾಳೆ. ಅವಳಿಗೆ ಚಿಕಿತ್ಸೆ ಕೊಟ್ಟ ವೈದ್ಯರ ಹೆಸರು ಅನಂತಲಕ್ಷ್ಮೀ. ಈ ವೈದ್ಯರನ್ನು ಸಂಪರ್ಕ ಮಾಡಿದರೆ ಸಿಹಿ ತಂದೆಯ ಬಗ್ಗೆ ಮಾಹಿತಿ ಸಿಗಬಹುದು ಎಂದು ರುದ್ರಪ್ರತಾಪ್ ಗೆಸ್ ಮಾಡಿದ್ದಾನೆ. ಈ ವಿಚಾರವನ್ನು ರುದ್ರಪ್ರತಾಪ್ ಭಾರ್ಗವಿಗೆ ಫೋನ್ ಮಾಡಿ ತಿಳಿಸುತ್ತಾನೆ. ಇತ್ತ ಚಾಂದಿನಿ ಕೂಡ ಸಂಜೀವಿನಿ ಆಶ್ರಮಕ್ಕೆ ಬಂದಿದ್ದಾಳೆ. ಅಲ್ಲಿ ಸೀತಾ ಬಗ್ಗೆ ವಿಚಾರಿಸಿದ್ದು, ಆಶ್ರಮದವರು ಸೀತಾ ಗೊತ್ತಿಲ್ಲ. ಆದರೆ, ಈ ಆಶ್ರಮವನ್ನು ನೋಡಿಕೊಳ್ಳುತ್ತಿರುವುದು ಡಾ> ಅನಂತಲಕ್ಷ್ಮೀ ಎಂದು ಹೇಳಿದ್ದಾರೆ.

ಡಾ. ಅನಂತಲಕ್ಷ್ಮೀ ಹಿಂದೆ ಮೂವರು

ಈ ಮಾತನ್ನು ಕೇಳಿದ್ದೇ ತಡ ಚಾಂದಿನಿ ವೈದ್ಯರನ್ನು ಭೇಟಿಯಾಗಲು ಯತ್ನಿಸಿದ್ದಾಳೆ. ಆದರೆ ಅಪಾಯಿಂಟ್ ಮೆಂಟ್ ಇಲ್ಲದೇ, ವೈದ್ಯರ ಭೇಟಿ ಸಾಧ್ಯವಾಗಿಲ್ಲ. ಇನ್ನು ಭಾರ್ಗವಿ ವಿಶ್ವನಿಗೆ ಫೋನ್ ಮಾಡಿ ಡಾ.ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಲು ಹೇಳಿದ್ದಾಳೆ. ವಿಶಶ್ವ ಅವರು ಕುಟುಂಬಕ್ಕೆ ವೈದ್ಯರು ಮೊದಲಿನಿಂದಲೂ ತಿಳಿದಿರುವುದರಿಂದ ಇಬ್ಬರೂ ಭೇಟಿಯಾಗಿದ್ದು, ವಿಶ್ವ ಬೇಕಂತಲೇ ಪದೇ ಪದೇ ಸೀತಾ ಹೆಸರನ್ನು ಹೇಳಿ ಮನೆಗೆ ಆಹ್ವಾನ ನೀಡಿದ್ದಾನೆ. ರಾಮ್ ಮದುವೆಯಾಗಿರುವುದು ಸೀತಾ ಎಂಬಾಕೆ ಎಂದು ಒತ್ತಿ ಒತ್ತಿ ಹೇಳಿದ್ದಾನೆ. ಆದರೆ ವೈದ್ಯರಿಗೆ ವಿಶ್ವ ಮಾತನಾಡಿದ ರೀತಿಯಲ್ಲಿ ವಿಶೇಷವೇನು ಗಮನಿಸಿಲ್ಲ. ಒಟ್ನಲ್ಲಿ ಡಾ. ಅನಂತಲಕ್ಷ್ಮೀ ವೈದ್ಯರ ಹಿಂದೆ ಸದ್ಯ ಮೂವರು ಇದ್ದು, ಎಲ್ಲರೂ ಸಿಹಿ ಮಾಹಿತಿ ಪಡೆಯಲು ಕಾತುರರಾಗಿದ್ದಾರೆ.

seetharama-serial-15-august-episode-written-update

ಸೀತಾಳನ್ನು ಕಾಡುತ್ತಿರುವ ಬೊಂಬೆ ಶಾಸ್ತ್ರ

ಸಾಧನಾಳಿಗೆ ಇಷ್ಟ ಎಂದು ಸೀತಾ ಮತ್ತು ಸಿಹಿ ಜೀನ್ಸ್ ತಂದುಕೊಟ್ಟಿದ್ದಾರೆ. ಸಾಧನಾ ಇಷ್ಟಪಟ್ಟು ಧರಿಸಿದ್ದಾಳೆ. ಆದರೆ, ಸೂರಿ ಸಾಧನಾಳನ್ನು ಜೀನ್ಸ್ ನಲ್ಲಿ ನೋಡಿ ಬೈಯುತ್ತಾನೆ. ಇದರಿಂದ ಮನೆಯವರಿಗೆಲ್ಲಾ ಗಾಬರಿಯಾಗುತ್ತದೆ. ಇನ್ನು ಸಿಹಿ ಬೊಂಬೆ ಶಾಸ್ತ್ರ ಹೇಳುವವರ ಬಳಿ ಭವಿಷ್ಯ ಕೇಳಿದ್ದು, ಸೀತಾಳಿಗೆ ಎಚ್ಚರವಾಗಿರುವಂತೆ ಹೇಳಿದ್ದಾರೆ. ಇದು ಸೀತಾಳನ್ನು ಆತಂಕಕ್ಕೆ ದೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X