Seetharama ; ಸೀತಾಳನ್ನು ಮನೆಗೆ ಕರೆ ತಂದ ರಾಮ್ : ಸಿಹಿಗಾಗಿ ಹೋರಾಡಿ ಎಂದ ಸೂರಿ..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಶಾಲಿನಿ ಶ್ಯಾಮ್ ತಲೆ ತಿನ್ನುತ್ತಿದ್ದಾಲೆ. ಸೀತಾ ಜೈಲಿನಿಂದ ಹೊರಗೆ ಬಂದರೆ, ಸಿಹಿ ನಮ್ಮ ಮಗಳು ಆಗುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಹಾಗಾಗಿ ನಾವು ಈಗಲೇ ಪಾಸ್ ಪೋರ್ಟ್ ಆಫೀಸಿಗೆ ಹೋಗಿ, ಸಿಹಿ ಜೊತೆಗೆ ಕೆನಡಾಗೆ ಹಾರಿ ಹೋಗಬೇಕು ಎಂದು ಹೇಳುತ್ತಾಳೆ. ಚಾಂದಿನಿ ಕೂಡ ಶಾಲಿನಿಯನ್ನು ಸಪೋರ್ಟ್ ಮಾಡಿದ್ದಾಳೆ. ಶ್ಯಾಮ್ ಈಗ ಸಿಹಿಗೆ ಮಾತು ಕೊಟ್ಟಿದ್ದು, ಸೀತಾಳನ್ನು ಜೈಲಿನಿಂದ ಬಿಡಿಸಬೇಕು ಎಂದು ಆಲೋಚಿಸುತ್ತಿದ್ದಾನೆ. ಸಿಹಿ ಕೂಡ ಸೀತಮ್ಮ ಮನೆಗೆ ವಾಪಸ್ ಬರಲಿ ಎಂದು ಬಯಸುತ್ತಿದ್ದಾಳೆ.

ಜೈಲಿನಿಂದ ಬಿಡುಗಡೆಯಾದ ಸೀತಾ

ರಾಮ್ ಮಿನಿಸ್ಟರ್ ಸಹಾಯ ಪಡೆದು ಸೀತಾಳನ್ನು ಜೈಲಿನಿಂದ ಬಿಡಿಸಿದ್ದಾನೆ. ಸೀತಾ ಮನೆಗೆ ವಾಪಸ್ ಬಂದಿದ್ದಾಳೆ. ಇಂತಹ ಸಂದರ್ಭದಲ್ಲಿ ಶ್ಯಾಮ್ ರಾಮನಿಗೆ ಫೋನ್ ಮಾಡಿ ಸೀತಾಳನ್ನು ಬಿಡುತ್ತೇನೆ ಎಂದು ಹೇಳಿದ್ದಕ್ಕೆ ರಾಮ್ ಬೈಯುತ್ತಾನೆ. ಸೀತಾ ಅದಾಗಲೇ ಮನೆಗೆ ಬಂದಿದ್ದಾಯ್ತು ಎಂದು ಹೇಳುತ್ತಾನೆ. ನಿನಗೆ ನಿಜವಾಗಲೂ ನಮಗೆ ನ್ಯಾಯ ಕೊಡಿಸಬೇಕು ಎಂದು ನಿನ್ನ ಮನಸಲ್ಲಿ ಇದ್ದರೆ, ಸಿಹಿಯನ್ನು ನಮಗೆ ಬಿಟ್ಟುಕೊಡು ಎಂದು ಕೇಳುತ್ತಾನೆ. ಅಷ್ಟರಲ್ಲಿ ಶಾಲಿನಿ ಫೋನ್ ಕಿತ್ತುಕೊಂಡು ಕಟ್ ಮಾಡುತ್ತಾಳೆ. ಫೋನ್ ಕಟ್ಟಾಗಿದ್ದಕ್ಕೆ ರಾಮ್ ಮತ್ತೆ ಶ್ಯಾಮ್ ನನ್ನು ಅಪಾರ್ಥ ಮಾಡಿಕೊಳ್ಳುತ್ತಾನೆ.

Seetharama Serial 15 November episode written update

ದೇಶ ಬಿಟ್ಟು ಹೊರಟ ಸಿಹಿ

ಇನ್ನು ಮನೆಗೆ ಸುಲೋಚನಾ, ಶಾಂತಜ್ಜಿ ಹಾಗೂ ಮೂರ್ತಿ ತಾತ ಬಂದಿದ್ದು, ಯಾಕೆ ನಮ್ಮ ಮಗಳು ಸೀತಾಳಿಗೆ ಅನ್ಯಾಯ ಮಾಡುತ್ತಿದ್ದೀರಾ. ಸಿಹಿಯನ್ನು ಅದು ಹೇಗೆ ಬೇರೆಯವರಿಗೆ ಬಿಟ್ಟು ಕೊಟ್ಟಿದ್ದೀರಾ ಎಂದು ಪ್ರಶ್ನೆ ಮಾಡುತ್ತಾರೆ. ಮನೆಯಲ್ಲಿ ಎಲ್ಲರೂ ಕೂಡ ನಾವೇ ಹೋಗಿ ಸಿಹಿಯನ್ನು ಕರೆದುಕೊಂಡು ಬರೋಣ ಎಂದು ತೀರ್ಮಾನಿಸುತ್ತಾರೆ. ಎಲ್ಲರೂ ಸೀತಾ ಮತ್ತು ರಾಮ್ ಜೊತೆಗೆ ಶಾಲಿನಿ ಮನೆ ಕಡೆಗೆ ತೆರಳುತ್ತಾರೆ. ಅಷ್ಟರಲ್ಲಿ ರಾಮ್ ಗೆ ಫೋನ್ ಒಂದು ಬರುತ್ತದೆ. ಆ ಫೋನ್ ನಲ್ಲಿ ಸಿಹಿ ಅನ್ನು ಪಾಸ್ ಪೋರ್ಟ್ ಆಫೀಸಿಗೆ ಕರೆದುಕೊಂಡು ಹೋಗಿದ್ದು, ಅವರು ಕೆನಡಾಗೆ ಹೋಗಲು ತೀರ್ಮಾನಿಸಿದ್ದಾರೆ ಎಂಬ ಸತ್ಯ ಗೊತ್ತಾಗುತ್ತದೆ.


ಸೀತಾ ಪರ ನಿಂತ ಸೂರಿ

ಸೀತಾ ಈ ಮಾತನ್ನು ಕೇಳಿ ಶಾಕ್ ಆಗುತ್ತಾಳೆ. ನನ್ನ ಮಗಳು ನನ್ನಿಂದ ಶಾಶ್ವತವಾಗಿ ದೂರಾಗುತ್ತಾಳಾ ಎಂದು ಹೆದರಿ ಪ್ರಜ್ಞೆ ತಪ್ಪುತ್ತಾಳೆ. ಮನೆಗೆ ಸೀತಾಳನ್ನು ಕರೆದುಕೊಂಡ ಬಳಿಕ ಸೀತಾ ಎಚ್ಚರವಾಗಿ ಎಲ್ಲರಲ್ಲೂ ಬೇಡಿಕೊಳ್ಳುತ್ತಾಳೆ. ಹೇಗಾದರೂ ಮಾಡಿ ನನ್ನ ಮಗಳನ್ನು ನನಗೆ ಉಳಿಸಿ ಕೊಡಿ ಎಂದು ಬೇಡಿಕೊಳ್ಳುತ್ತಾಳೆ. ಸೀತಾ ಬಳಿಕ ರಾಮ್, ಅಶೋಕ್, ಪ್ರಿಯಾ, ಸಾಧನಾ ಪ್ರತಿಯೊಬ್ಬರೂ ಕೂಡ ಸೂರಿ ತಾತನ ಬಳಿ ಕೇಳಿಕೊಳ್ಳುತ್ತಾರೆ. ಸಿಹಿ ಈ ಮನೆಯಲ್ಲಿ ಇರಬೇಕು. ಅವಳು ಸೀತಾ ಜೊತೆಗೆ ಇರುವುದೇ ಸರಿ ಎಂದು ಹೇಳುತ್ತಾರೆ. ಅಲ್ಲದೇ, ಶಾಲಿನಿ ಸಿಹಿಗೆ ಕೊಡುತ್ತಿರುವ ಹಿಂಸೆಯ ಬಗ್ಗೆಯೂ ಮಾತನಾಡುತ್ತಾರೆ. ಎಲ್ಲರ ಮಾತು ಕೇಳಿದ ಸೂರಿ ಸೀತಾ ಪರ ನಿಲ್ಲುತ್ತಾರೆ.


ಶ್ಯಾಮ್ ಮನಸ್ಸು ಬದಲಿಸುತ್ತಾನಾ..?

ರಾಮ್ ಗೆ ಕೋರ್ಟ್ ನಲ್ಲಿ ಕೇಸ್ ಹಾಕು. ನ್ಯಾಯ ಗೆಲ್ಲುತ್ತದೆ. ಸಿಹಿ ನಮ್ಮ ಮನೆಗೆ ಬರಬೇಕು ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿ ಎಲ್ಲರೂ ಖುಷಿ ಪಡುತ್ತಾರೆ. ಇತ್ತ ಶ್ಯಾಮ್ ಗೆ ಸತ್ಯ ಅರ್ಥವಾಗಿದೆ. ಶಾಲಿನಿಗೆ ಸಿಹಿ ಬೇಕಿಲ್ಲ. ಸೀತಾಳ ಮೇಲಿನ ಧ್ವೇಷಕ್ಕೆ ಹೀಗೆಲ್ಲಾ ಮಾಡುತ್ತಿದ್ದಾಳೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಶ್ಯಾಮ್ ತನ್ನ ಮನಸ್ಸನ್ನು ಬದಲಿಸುತ್ತಾನಾ..? ಸೀಹಿಯನ್ನು ಸೀತಾಳಿಗೆ ಒಪ್ಪಿಸುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X