Seetha Rama ; ಸಿಹಿಯೇ ನಿಮ್ಮ ಮಗಳು ಎಂದ ಚಾಂದಿನಿ ಮಾತನ್ನು ನಂಬದೇ ಹೋದ ಶ್ಯಾಮ್..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಡಾ.ಅನಂತಲಕ್ಷ್ಮೀ ಶ್ಯಾಮ್ ಗೆ ಬೈದಿದ್ದಲ್ಲದೇ, ರಾಮ್ ಗೂ ಬುದ್ಧಿ ಹೇಳಿದ್ದಾರೆ. ಇವರ ಸಹವಾಸ ಮಾಡಿ ನಿಮ್ಮ ಲೈಫ್ ಹಾಳು ಮಾಡಿಕೊಳ್ಳಬೇಡಿ ಎಂದಿದ್ದಾರೆ.ಅಲ್ಲದೇ ಶ್ಯಾಮ್ ಗೆ ಯಾವುದೇ ಕಾರಣಕ್ಕೂ ಮತ್ತೆ ಮಗುವನ್ನು ಕೇಳಿಕೊಂಡು ನನ್ನ ಬಳಿ ಬರಬೇಡಿ. ನೀವಿಬ್ಬರು ಮಾಡಿರುವ ಮೋಸಕ್ಕೆ ನಾನು ಯಾವತ್ತೂ ಸಪೋರ್ಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಮತ್ತೆ ಬಂದರೆ ನಾನು ಪೊಲೀಸರಿಗೆ ದೂರು ನೀಡಬೇಕಾಗುತ್ತದೆ ಎಂದು ಶ್ಯಾಮ್ ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಆದರೆ, ರಾಮ್ ಲಾಯರ್ ಗೆ ಫೋನ್ ಮಾಡಿ ಕೇಸ್ ಹಾಕಲು ಮುಂದಾಗಿದ್ದಾನೆ.

ಸುಲೋಚನಾ ಪ್ಲಾನ್ ಸಕ್ಸಸ್ ಆಗುತ್ತಾ..?

ಸೀತಾ ಈಗಾಗಲೇ ತನ್ನ ಮತ್ತು ವೈದ್ಯರ ಮಧ್ಯೆ ಇದ್ದ ಗುಟ್ಟು, ಈಗ ರುದ್ರಪ್ರತಾಪ್ ಮತ್ತು ಅಣ್ಣ-ಅತ್ತಿಗೆಗೆಗೊತ್ತಾಗಿದೆ. ಇದು ಹೀಗೆ ಆದರೆ, ಮುಂದೊಂದು ದಿನ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಆತಂಕವಿದೆ. ಹೀಗಾಗಿ ಆದಷ್ಟು ಬೇಗ ರಾಮ್ ಗೆ ಸತ್ಯ ಹೇಳಬೇಕು. ತಾನು ತಾಯಿ ಆಗಿದ್ದು ಹೇಗೆ, ಸಿಹಿ ಹೇಗೆ ತನ್ನ ಬಳಿ ಉಳಿದುಕೊಂಡಳು, ಶ್ಯಾಮ್ ಮತ್ತು ಶಾಲಿನಿ ಮಾಡಿದ ಮೋಸದ ಬಗ್ಗೆ ಹೇಳಬೇಕು. ತನ್ನ ಮಗಳನ್ನು ಉಳಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಾಳೆ. ಇದೇ ವೇಳೆಯಲ್ಲಿ ಸುಲೋಚನಾ ರಾಮ್ ಮತ್ತು ಸೀತಾಳಿಗೆ ಫಸ್ಟ್ ನೈಟ್ ಆಗಿಲ್ಲ ಎಂಬ ಮಾತು ಕೇಳಿ, ಶೋಭನಾ ಮಾಡಲು ಮುಂದಾಗಿದ್ದಾಳೆ. ಸುಲೋಚನಾಳ ಈ ಪ್ಲಾನ್ ಸಕ್ಸಸ್ ಆಗುತ್ತಾ ಎಂಬ ಕುತೂಹಲ ಮೂಡಿದೆ.

seetharama-serial-15-october-episode-written-update

ಸಿಹಿ ಬಗ್ಗೆ ಸತ್ಯ ಹೇಳಿದ ಚಾಂದಿನಿ

ಇನ್ನು ಶಾಲಿನಿಗೆ ಚಾಂದಿನಿ ಫೊನ್ ಮಾಡಿದಾಗ, ಶಾಲಿನಿ ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರೂ ಕಷ್ಟ ಸುಖ ಮಾತನಾಡುತ್ತಾ ಇರುತ್ತಾರೆ. ಇದೇ ವೇಳೆಗೆ ಶ್ಯಾಮ್ ಮನೆಗೆ ಬಂದ ಕಾರಣ ಚಾಂದಿನಿ ಬಚ್ಚಿಟ್ಟುಕೊಳ್ಳುತ್ತಾಳೆ. ಶ್ಯಾಮ್ ಆಗ ಶಾಲಿನಿಗೆ ಬೈಯ್ಯಲು ಶುರು ಮಾಡುತ್ತಾನೆ. ನೀನು ಮಾಡಿದ ತಪ್ಪಿನಿಂದ ವೈದ್ಯರು ತಮಗೆ ಮಗುವಿನ ಬಗ್ಗೆ ಯಾವುದೇ ಮಾಹಿತಿಯನ್ನು ಕೊಡುತ್ತಿಲ್ಲ. ನಿನಗೆ ಮಗು ನೋಡಿಕೊಳ್ಳಲು ಕಷ್ಟವಾಗುತ್ತೆ ಎನ್ನುವುದಾಗಿದ್ದರೆ ನನಗೆ ಹೇಳಬೇಕಿತ್ತು. ಆದರೆ, ನೀನು ಮಾಡಿದ ಕೆಲಸದಿಂದ ಈಗ ನಮ್ಮ ಮಗು ಬದುಕಿದ್ದರೂ, ಅದರೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ನೊಂದುಕೊಳ್ಳುತ್ತಾಳೆ. ಆಗ ಚಾಂದಿನಿ ಬಂದು ಸತ್ಯವನ್ನು ಹೇಳುತ್ತಾಳೆ.

ಚಾಂದಿನಿ ಮಾತನ್ನು ನಂಬದ ಶ್ಯಾಮ್

ಸೀತಾಳ ಬಳಿ ಇರುವ ಸಿಹಿಯೇ ನಿಮ್ಮ ಮಗು. ಸೀತಾ ನಮ್ಮ ಮನೆ ವಿಳಾಸಕ್ಕೆ ಮಗುನ ಬಂದು ಕರೆದುಕೊಂಡು ಹೋಗಿ ಎಂದು ಪತ್ರ ಬರೆದಿದ್ದಳು. ಅದರ ಬಗ್ಗೆ ಮಾಹಿತಿ ಪಡೆಯೋಕೆ ಎನ್ನುತ್ತಲೇ ನಾನು ಡಾ.ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಿದ್ದು. ಸೀತಾ ಬಾಡಿಗೆ ತಾಯಿ ಆಗಿ ನಿಮ್ಮ ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಆ ಮಗು ಸೀತಾ ಬಳಿಯೇ ಇದೆ ಎಂದು ಚಾಂದಿನಿ ಹೇಳುತ್ತಾಳೆ. ಆದರೆ ಶ್ಯಾಮ್ ಚಾಂದಿನಿ ಮಾತನ್ನು ನಂಬಲು ತಯಾರಿರುವುದಿಲ್ಲ. ಫೊರ್ಜರಿ ಮಾಡಿದವಳು ನೀನು ಮೊದಲು ಲೆಟರ್ ತೋರಿಸು ಎಂದು ಶ್ಯಾಮ್ ಕೇಳುತ್ತಾನೆ. ಆಗ ಚಾಂದಿನಿ ತನ್ನ ಬಳಿ ಲೆಟರ್ ಇರುವುದಿಲ್ಲ. ಹೀಗಾಗಿ ಶ್ಯಾಮ್ ಚಾಂದಿನಿಗೆ ಬೈದು ಕಳಿಸುತ್ತಾನೆ.

ಶಾಲಿನಿ ಮನದಲ್ಲಿ ಅನುಮಾನ..!!

ಚಾಂದಿನಿ ಇವತ್ತಲ್ಲ ನಾಳೆ ನನ್ನ ಮಾತು ಸತ್ಯ ಎಂಬುದು ನಿಮಗೇ ಅರ್ಥವಾಗುತ್ತದೆ ಎಂದು ಹೇಳಿ ಹೊರಡುತ್ತಾಳೆ. ಶ್ಯಾಮ್ ಚಾಂದಿನಿ ಸುಳ್ಳು ಹೇಳಿದ್ದಾಳೆ ಎಂದುಕೊಂಡು ಸುಮ್ಮನಾಗುತ್ತಾನೆ. ಆದರೆ, ಶಾಲಿನಿ ಮನದಲ್ಲಿ ಚಾಂದಿನಿ ಹೇಳಿದ್ದು ನಿಜ ಇರಬಹುದು. ಸಿಹಿ ತಮ್ಮ ಮಗು ಇರಬಹುದು ಎಂಬ ಅನುಮಾನ ಶುರುವಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X