Seetharama ; ಸೀತಾಳನ್ನು ಬೆಚ್ಚಿ ಬೀಳಿಸಿದ ಡಾ.ಅನಂತಲಕ್ಷ್ಮೀ ಹೆಸರು..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸಾಧನಾಳನ್ನು ಜೀನ್ಸ್ ನಲ್ಲಿ ಸೂರಿ ಬೈಯುತ್ತಾರೆ ಎಂದುಕೊಂಡಿದ್ದರು. ಆದರೆ, ಸೂರಿ ಸೊಸೆಗೆ ಏನೂ ಹೇಳದೇ ಚೆನ್ನಾಗಿ ಕಾಣಿಸುತ್ತಿದ್ದೀಯಾ ಎಂದು ಹೇಳುತ್ತಾರೆ. ಅಲ್ಲದೇ, ಸಾಧನಾಳ ಆಸೆಯನ್ನು ಕೇಳಿ ನಿನ್ನ ಆಸೆಯನ್ನು ನೆರವೇರಿಸಿಕೋ ಎನ್ನುತ್ತಾರೆ. ವಿಶ್ವ ಅದಕ್ಕೆ ಪ್ರಶ್ನೆ ಮಾಡುತ್ತಾನೆ. ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳ ಬಗ್ಗೆ ನಿಮ್ಮ ರೂಲ್ಸ್ ಇದಿಯಲ್ಲ ಎಂದು ಕೇಳುತ್ತಾನೆ. ಆಗ ಸೂರಿ, ಜವಾಬ್ದಾರಿ ಇಲ್ಲದೇ ಇರೋರಿಗೂ ಒಂದೇ ತರ ಅಲ್ಲ ಎಂದು ಹೇಳುತ್ತಾನೆ. ಇದರಿಂದ ವಿಶ್ವನಿಗೆ ಅವಮಾನವಾಗುತ್ತದೆ. ಇನ್ನು ಸಾಧನಾ ಕೇಕ್ ಕಟ್ಟ ಮಾಡಿ ಖುಷಿ ಪಡುತ್ತಾಳೆ.

ಮಗು ಬಗ್ಗೆ ಮತ್ತೆ ಆಸೆ ತೋರಿದ ಸೂರಿ

ಅನಿಕೇತನ್ ಕೇಕ್ ತಿನ್ನದೇ ಮತ್ತೆ ಕಿರಿಕ್ ಮಾಡುತ್ತಾನೆ. ಮೊದಲ ಬಾರಿಗೆ ಹುಟ್ಟುಹಬ್ಬವನ್ನು ಆಚರಿಸಿದ್ದಕ್ಕೆ ಸಾಧನಾ ಸೀತಾಳನ್ನು ಅಪ್ಪಿಕೊಂಡು ಕಣ್ಣೀರು ಹಾಕುತ್ತಾಳೆ. ಇನ್ನು ಸೂರಿ ಮತ್ತು ರಾಮ್ ಇಬ್ಬರೂ ವರಮಹಾಲಕ್ಷ್ಮೀ ಹಬ್ಬದ ದಿನ ಮಾತನಾಡುತ್ತಿರುತ್ತಾರೆ. ಈ ವೇಳೆ ಸಿಹಿಯನ್ನು ಇಂದು ಸ್ಕೂಲ್ ಗೆ ಬಿಟ್ಟು ನೀವಿಬ್ಬರು ಎಲ್ಲೆಲ್ಲಿ ಸುತ್ತಾಡಿಕೊಂಡು ಬರುತ್ತೀರಾ ಎಂದು ಕೇಳುತ್ತಾರೆ. ರಾಮ್ ಗೆ ಇರಿಟೇಟ್ ಆಗುತ್ತದೆ. ಎಲ್ಲಿಗೆ ಹೋಗಬೇಕು ನಾನು ಸೀತಾ ಚೆನ್ನಾಗಿಯೇ ಇದ್ದೀವಿ ಎಂದೆಲ್ಲಾ ಮಾತನಾಡುತ್ತಾನೆ. ಆಗ ಸೂರಿ ತಾತ ನೀವಿಬ್ಬರು ಒಬ್ಬರಿಗೊಬ್ಬರು ಮರಿಯಾದೆ ಕೊಟ್ಟುಕೊಂಡು ಹೋಗಿ ಬನ್ನಿ ಎನ್ನುವುದರಲ್ಲೇ ನಿಮ್ಮ ಸಂಸಾರ ಹೇಗಿದೆ ಎಂಬುದು ಗೊತ್ತಾಗುತ್ತದೆ. ನನಗೆ ಮರಿಮೊಮ್ಮಗ ಬೇಕು ಅಷ್ಟೇ ಎಂದು ಹೇಳುತ್ತಾರೆ. ಇದು ರಾಮ್ ಗೆ ಬೇಸರವನ್ನು ತರುತ್ತದೆ.

Seetharama Serial 16 August episode written update


ಕೋಪ ಮಾಡಿಕೊಂಡಿರುವ ರಾಮ್

ಅಶೋಕ್ ಮತ್ತು ಪ್ರಿಯಾ ಕೂಡ ಸೀತಾ ಮನೆಯ ಲಕ್ಷ್ಮೀ ಹಬ್ಬಕ್ಕೆ ಬಂದಿರುತ್ತಾರೆ. ಸಾಧನಾ ಪೂಜೆ ಮಾಡಬೇಕು ಎಂದು ಆಸೆ ಪಟ್ಟಿರುತ್ತಾಲೆ. ಆದರೆ, ಸೂರಿ ತಾತ ಈ ಮನೆಯ ಮುದ್ದು ಸೊಸೆಯಾಗಿರುವ ಸೀತಾಳಿಗೆ ಆರತಿ ಮಾಡಲು ಹೇಳುತ್ತಾರೆ. ಇದು ಸಾಧನಾಳಿಗೆ ಬೇಸರವಾಗುತ್ತದೆ. ಇನ್ನು ಅಶೋಕ್ ಮಂಗಳಾರತಿಯಾದ ಬಳಿಕ ರಾಮ್ ನನ್ನು ಸೈಡ್ ಗೆ ಕರೆದು ಮಾತನಾಡುತ್ತಾನೆ. ನಿನ್ನ ಮತ್ತು ಸೀತಾಳನ್ನು ಒಂದು ಮಾಡಿದ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್ ಗೆ ಯಾಕೆ ಕಳಿಸುತ್ತಿದ್ದೀಯಾ ಎಂದು ಕೇಳುತ್ತಾನೆ. ರಾಮ್ ಗೆ ಇರಿಟೇಟ್ ಆಗಿ ನನಗೂ ಇಷ್ಟ ಇಲ್ಲ. ಸಿಹಿ ಹಠ ಮಾಡುತ್ತಿದ್ದಾಳೆ ಎಂದು ಕಿರುಚುತ್ತಾನೆ.

ಸಿಹಿ ಬಗ್ಗೆ ಕೇಳಿ ಸುಲೋಚನಾ ಶಾಕ್

ಇತ್ತ ವರಮಹಾಲಕ್ಷ್ಮೀ ಹಿನ್ನೆಲೆ ಶಾಂತಜ್ಜಿ ಮನೆಯಲ್ಲಿ ಹಬ್ಬ ನಡೆಯುತ್ತಿರುತ್ತದೆ. ಆದರೆ ಸಿಹಿ ಇಲ್ಲದ ಕಾರಣ ಅವರಿಗೂ ಬೇಸರವಿರುತ್ತದೆ. ಇದೇ ವೇಳೆಗೆ ಸುಲೋಚನಾ ಬರುತ್ತಾಳೆ ಆಗ ಶಾಂತಜ್ಜಿ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್ ಗೆ ಸೇರಿಸುತ್ತಿರುವ ವಿಚಾರವನ್ನು ಹೇಳುತ್ತಾರೆ. ಈ ಮಾತನ್ನು ಕೇಳಿದ ಸುಲೋಚನಾ ಮತ್ತು ಸುದೇಶ್, ರುದ್ರಪ್ರತಾಪ್ ಹೇಳಿದ್ದು ನಿಜ ಈಗ ಸಿಹಿ ಆಮೇಲೆ ಸೀತಾಳನ್ನು ಮೆಯಿಂದ ಆಚೆ ಹಾಕುವುದು ಗ್ಯಾರೆಂಟಿ. ಅಷ್ಟರಲ್ಲಿ ತಮ್ಮ ಕೆಲಸಗಳನ್ನು ತಾವು ಸಾಧಿಸಿಕೊಳ್ಳಬೇಕು ಎಂದು ಮಾತನಾಡಿಕೊಳ್ಳುತ್ತಾರೆ.

seetharama-serial-16-august-episode-written-update

ಅನಂತಲಕ್ಷ್ಮೀ ಎಂದು ಕೇಳಿ ಸೀತಾ ಶಾಕ್

ಪ್ರಿಯಾ ಸೀತಾ ಬಳಿ ತನ್ನ ಪ್ರೆಗ್ನೆನ್ಸಿ ಬಗ್ಗೆ ಹೇಳುತ್ತಿರುತ್ತಾಳೆ. ಆಗ ಸೀತಾ ಹೀಗೆ ಸುಮ್ಮನೇ ಏನೇನೋ ಅಂದುಕೊಳ್ಳುವ ಬದಲು ಒಮ್ಮೆ ವೈದ್ಯರ ಬಳಿ ತೋರಿಸಿಕೋ ಎಂದು ಹೇಳುತ್ತಾಳೆ. ಪ್ರಿಯಾ ತನಗೆ ಯಾರೂ ಸ್ತ್ರೀ ರೋಗ ತಜ್ಞೆ ಗೊತ್ತಿಲ್ಲ ಎಂದು ಹೇಳುತ್ತಾಳೆ. ಆಗ ವಿಶ್ವ ಬಂದು ಡಾ.ಅನಂತಲಕ್ಷ್ಮೀ ನಮ್ಮ ಫ್ಯಾಮಿಲಿ ಡಾಕ್ಟರ್ ಅವರ ಬಳಿ ಹೋಗಬಹುದು ಎಂದು ಹೇಳುತ್ತಾನೆ. ಇದನ್ನು ಕೇಳುತ್ತಿದ್ದಂತೆ ಸೀತಾ ಕೈ ಕಟ್ ಮಾಡಿಕೊಂಡಿದ್ದು ಗಾಬರಿಯಾಗಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X