Seetharama ; ಕಣ್ಮುಂದೆಯೇ ಇರುವ ಸುಬ್ಬಿಯನ್ನು ಗುರುತಿಸಲಿಲ್ಲ ರಾಮ, ಅಶೋಕನ ಬಾಯಿಂದ ಸತ್ಯ ಹೊರ ಬರುತ್ತಾ ?
ಸೀತಾರಾಮ ಧಾರಾವಾಹಿಯಲ್ಲಿ ಸೀತಾಳ ಹುಚ್ಚು ಹೆಚ್ಚಾಗುತ್ತಿದೆ. ಸುಬ್ಬಿ ಮರೆಯಲ್ಲಿ ಮಾಡುವ ಕೆಲಸಗಳನ್ನೆಲ್ಲಾ ಸೀತಾ ತನ್ನ ಮಗಳೇ ಮಾಡಿದ್ದಾಳೆ ಎಂದುಕೊಂಡು ಎಲ್ಲರಿಗೂ ಹೇಳುತ್ತಿದ್ದಾಳೆ. ಸಿಹಿ ಅಮ್ಮ ಎಂದು ಬರೆದಳು, ಸಿಹಿ ನನಗೆ ನೀರು ಕೊಟ್ಟಳು ಎಂದೆಲ್ಲಾ ಹೇಳುತ್ತಿದ್ದಾಳೆ. ಇದರಿಂದ ರಾಮ್ ಗೆ ಏನು ಮಾಡಬೇಕು, ಯಾರಿಗೆ ಏನು ಹೇಳಬೇಕು ಎಂಬುದೇ ಅರ್ಥವಾಗದೇ ಮೌನಕ್ಕೆ ಜಾರಿದ್ದಾನೆ. ಇನ್ನು ಸಿಹಿಯ ಶಾಲೆಯಲ್ಲಿ ಸಿಹಿ ಸಾವನ್ನಪ್ಪಿದ ಕಾರಣ ಸ್ಮರರ್ಣಾರ್ಥ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದು ಸಿಹಿ ಶಾಲೆಯಲ್ಲಿ ನಡೆಯುತ್ತಿರುವ ಆನ್ಯುವಲ್ ಡೇ ಎಂದು ತಿಳಿದು ಸೀತಾ ಕೂಡ ಶಾಲೆಗೆ ಬಂದಿದ್ದಾಳೆ.
ಮಗಳನ್ನು ನೋಡುತ್ತಾನಾ ಶ್ರೀರಾಮ್ ?
ಇದೇ ಸಮಯಕ್ಕೆ ಸರಿಯಾಗಿ ಸುಬ್ಬಿಯನ್ನು ಸಿಹಿ ಶಾಲೆಗೆ ಕರೆದುಕೊಂಡು ಬಂದಿದ್ದಾಳೆ. ಸುಬ್ಬಿಯನ್ನು ಸೀತಾ ಕಂಡು ಸಿಹಿ ಎಂದು ತಿಳಿದು ಅವಳಿಗೆ ಫ್ರಾಕ್ ಹಾಕಿ ರೆಡಿ ಮಾಡಿದ್ದಾಳೆ. ಸುಬ್ಬಿ ಅಮ್ಮನ ಆರೈಕೆಗೆ ಮರುಳಾಗಿದ್ದಾಳೆ. ಸುಬ್ಬಿಗೆ ಸಿಹಿ ಧೈರ್ಯ ತುಂಬಿ ಶಾಲೆಯಲ್ಲಿ ಎಲ್ಲರೊಂದಿಗೆ ಡ್ಯಾನ್ಸ್ ಮಾಡಲು ಉತ್ತೇಜಿಸಿದ್ದಾಳೆ. ಮಕ್ಕಳೆಲ್ಲಾ ಸಿಹಿಯ ಮುಖವಾಡ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ನೋಡಿದ ಸೀತಾ ಖುಷಿ ಪಟ್ಟಿದ್ದಾಳೆ. ಆದರೆ, ಡ್ಯಾನ್ಸ್ ನಲ್ಲಿ ಸುಬ್ಬಿ ಮುಖವಾಡವಿಲ್ಲದೇ ಕುಣಿದಿದ್ದರೂ ಇಡೀ ಶಾಲೆ ಆಕೆಯನ್ನು ಗಮನಿಸಿಲ್ಲ. ಸೀತಾ ಒಬ್ಬಳೇ ಗುರುತು ಹಿಡಿದಿದ್ದಾಳೆ.

ಜಸ್ಟ್ ಮಿಸ್ ಆದ ಸುಬ್ಬಿ
ಇನ್ನು ರಾಮ್ ಗೆ ಸುಬ್ಬಿಯನ್ನು ನೋಡುವಂತೆ ಹೇಳಿದರೂ ರಾಮ್ ನಿರ್ಲಕ್ಷ್ಯ ಮಾಡಿದ್ದಾನೆ. ಕೊನೆಗೆ ಸುಬ್ಬಿ ರಾಮ್ ಕಾರಿನಲ್ಲೇ ಮನೆಗೆ ಡ್ರಾಪ್ ತೆಗೆದುಕೊಂಡಿದ್ದು, ಸೀತಾ ಇವಳೇ ಸಿಹಿ ಎಂದರೂ ಮುಖವಾಡ ಹಾಕಿರುವುದಕ್ಕೆ ಹಾಗೆನ್ನಬಹುದು ಎಂದು ತಪ್ಪಾಗಿ ಭಾವಿಸಿದ್ದಾನೆ. ಸುಬ್ಬಿಗೆ ಸೀತಾ ಮೇಲೆ ಪ್ರೀತಿ ಇದ್ದರೂ ರಾಮ್ ಬಗ್ಗೆ ಬೇಸರ ಹೊಂದಿದ್ದಾಳೆ. ಸಿಹಿಯ ಆತ್ಮ ಸುಬ್ಬಿ ಸೀತಮ್ಮನ ಮಡಿಲು ಸೇರಲಿ ಎಂದು ಬಯಸಿದ್ದಾಳೆ. ಆದರೆ, ಮಗಳೊಬ್ಬಳು ಕಣ್ಣೆದುರೇ ಇದ್ದರೂ ಸೀತಾ ಏನೂ ಮಾಡಲಾಗಲಿಲ್ಲ. ರಾಮ್ ಗುರುತಿಸಲಿಲ್ಲ.
ಸೀತಾಳನ್ನು ಹೊರಗೆ ಕಳಿಸಲು ಭಾರ್ಗವಿ ಪ್ಲಾನ್
ಇತ್ತ ಸಮಯಕ್ಕೆ ಸರಿಯಾಗಿ ಬದಲಾಗುವ ಭಾರ್ಗವಿ ಒಮ್ಮೊಮ್ಮೆ ಒಂದೊಂದು ಪ್ಲಾನ್ ಗಳನ್ನು ಮಾಡುತ್ತಿದ್ದಾಳೆ. ಸದ್ಯ ಸೀತಾಳನ್ನು ಮನೆಯಿಂದ ಹೊರಗೆ ಕಳಿಸುವ ಆಲೋಚನೆಯನ್ನು ಮಾಡಿದ್ದಾಳೆ. ಹಾಗಾಗಿ ಭಾರ್ಗವಿ ಸೂರಿ ಬಳಿ ಮಾತನಾಡಿದ್ದಾಳೆ. ಸೀತಾ ಎಲ್ಲೇ ಹೋದರೂ ಸಿಹಿ ಬದುಕಿರುವಂತೆ ಗೊಭೆ ಹಿಡಿದು ಮಾತನಾಡುತ್ತಿದ್ದಾಳೆ. ಇದರಿಂದ ಎಲ್ಲಾ ಕಡೆ ದೇಸಾಯಿ ಕುಟುಂಬದ ಮರಿಯಾದೆ ಹೋಗುತ್ತಿದೆ. ಸೀತಾಳಿಗೆ ಬೇರೆ ಕಡೆ ಟ್ರೀಟ್ ಮೆಂಟ್ ಕೊಡಿಸಬೇಕು ಎಂದು ಹೇಳಿದ್ದಾಳೆ.
ರಾಮನಿಗೆ ಸತ್ಯ ಹೇಳುತ್ತಾನಾ ಅಶೋಕ್ ?
ಅಶೋಕ್ ಗೆ ಸಿಕ್ಕ ಹಾರ್ಡ್ ಡಿಸ್ಕ್ ನಿಂದ ಸಿಹಿಗೆ ಅಪಘಾತ ಮಾಡಿದ ಕಾರ್ ನಂಬರ್ ಸಿಕ್ಕಿದೆ. ಈ ವಿಚಾರವನ್ನು ರಾಮ್ ಗೆ ಹೇಳಲು ಮನೆಗೆ ಬಂದಿದ್ದಾನೆ. ಇತ್ತ ಸೂರಿ ರಾಮ್ ನನ್ನು ಕರೆದು ಸೀತಾಳಿಗೆ ಟ್ರೀಟ್ ಮೆಂಟ್ ಕೊಡಿಸುವ ಬಗ್ಗೆ ಮಾತನಾಡಿದ್ದಾನೆ. ಹೇಗಾದರೂ ಮಾಡಿ ಸಿಹಿಯ ವಯಸ್ಸಿನ ಮಗುವನ್ನು ಕರೆದುಕೊಂಢೂ ಭಂದು ಸೀತಾಳ ಹುಚ್ಚನ್ನು ಬಿಡಿಸಬೇಕು ಎಂದು ಸೂರಿ ಆಲೋಚಿಸಿದ್ದಾನೆ. ಈ ಮಾತನ್ನು ಕೇಳಿ ಮನೆಯವರೆಲ್ಲಾ ಖುಷಿ ಪಟ್ಟಿದ್ದಾರೆ. ಆದರೆ, ಭಾರ್ಗವಿಗೆ ತಾನು ಏನೇ ಪ್ಲಾನ್ ಮಾಡಿದರೂ ಉಲ್ಟಾ ಆಗುತ್ತಿದೆ ಎಂದು ಕೋಪ ಮಾಡಿಕೊಳ್ಳುವಂತಾಗಿದೆ. ಸಿಹಿ ಸುಬ್ಬಿಯನ್ನೇ ಈ ಮನೆಗೆ ಕರೆದುಕೊಂಡು ಬರಬೇಕು ಎಂದು ಯೋಚಿಸುತ್ತಿದ್ದು, ಮುಂದೆ ಹೇಗೆ ಕಥೆ ನಡೆಯುತ್ತದೆ ಎಂಬುದನ್ನು ನೋಡಬೇಕಿದೆ.


Click it and Unblock the Notifications











