Seetha Rama; ಅಪ್ಪ-ಮಗಳ ಹುಟ್ಟುಹಬ್ಬ ಒಂದೇ ದಿನ : ಸಾಧನಾಳಿಗೆ ಬೆಣ್ಣೆ ಹಚ್ಚಿದ ಭಾರ್ಗವಿ..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಪ್ರಿಯಾಳಿಗೆ ವಾಂತಿಯಾಗಿದೆ. ಇದನ್ನು ಕಂಡ ಪ್ರೇಮಾ ಫುಲ್ ಹ್ಯಾಪಿ ಆಗಿದ್ದಾಳೆ. ಮಗಳು ಗರ್ಭಿಣಿ ಎಂದು ಭಾವಿಸಿದ್ದಾಳೆ.ಪ್ರಿಯಾ ಕೂಡ ತಾನು ಗರ್ಭಿಣಿ ಆಗಿರಬೇಕು ಎಂದು ಖುಷಿ ಪಟ್ಟಿದ್ದು, ಈ ಸಮಯದಲ್ಲಿ ಅಶೋಕ್ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ. ಇನ್ನು ಅಂಜಲಿ ಒಂದು ಸಲ ಚೆಕಪ್ ಮಾಡಿಸೋಣ ಎಂದಿದ್ದಾಳೆ. ಇನ್ನು ಸೂರಿ ತಾತ ಅಶೋಕನಿಗೆ ಫೋನ್ ಮಾಡಿದ್ದು, ನಿನ್ನಿಂದ ನನ್ನ ಕನಸು ನನಸಾಯ್ತು. ರಾಮನ ಮದುವೆ ಅದ್ಧೂರಿಯಾಗಿ ನಡೆಯಿತು. ಆದರೂ ಈ ಸಂದರ್ಭದಲ್ಲಿ ನೀನು ಇಲ್ಲದಿರುವುದೇ ಬೇಸರ, ಬೇಗ ಬಾ ಎಂದು ಹೇಳುತ್ತಾನೆ.


ಮಗಳ ಜೊತೆಗೆ ಮಲಗಿದ ಹೊಸ ಜೋಡಿಗಳು

ಸಿಹಿ ಒಬ್ಬಳೇ ಮಲಗಬೇಕು ಎಂದು ಭಾರ್ಗವಿ ಹೆದರಿಸುತ್ತಾಳೆ. ಆದರೆ, ಸಿಹಿಯನ್ನು ತಮ್ಮ ಜೊತೆಗೆ ಇರುವಂತೆ ರಾಮ್ ಹೇಳುತ್ತಾನೆ. ಆಗ ಸಿಹಿಗೆ ಸಮಾಧಾನವಾಗುತ್ತದೆ. ಇನ್ನು ಸೀತಾ ಮತ್ತು ರಾಮ್ ಇಬ್ಬರೂ ಬಾಲ್ಕನಿಯಲ್ಲಿ ನಿಂತು ರಾತ್ರಿ ಮಾತನಾಡುತ್ತಿರುತ್ತಾರೆ. ತಮ್ಮ ಮೊದಲ ದಿನದ ಭೇಟಿ, ಪ್ರೀತಿ ವಿಚಾರ ಚರ್ಚೆ ಮಾಡುತ್ತಿರುತ್ತಾರೆ. ರಾಮ್ ಸೀತಾಳಿಗೆ ಅವಳ ವಠಾರದ ಮನೆಯನ್ನು ವಾಪಸ್ ಸೀತಾ ಹೆಸರಿಗೆ ಬರೆದು ಗಿಫ್ಟ್ ಮಾಡುತ್ತಾನೆ. ಇದನ್ನು ನೋಡಿದ ಸೀತಾಳಿಗೂ ಖುಷಿಯಾಗುತ್ತದೆ. ಇನ್ನು ರಾಮ್ ಹುಟ್ಟುಹಬ್ಬಕ್ಕೆ ಸೀತಾ ಪೆಂಡೆಂಟ್ ಕೊಟ್ಟು ವಿಶ್ ಮಾಡುತ್ತಾಳೆ. ರಾಮ್ ಸಿಹಿಗೆ ಚಿಟ್ಟೆಯ ಕಥೆ ಹೇಳಿ ಮಲಗಿಸುತ್ತಾನೆ.

seetharama-serial-16-july-episode-written-update

ಸಿಹಿ ಹುಟ್ಟುಹಬ್ಬದಂದೇ ರಾಮ್ ಬರ್ತ ಡೇ

ರಾಮ್ ಮತ್ತು ಸೀತಾ ಕೂಡ ತಡರಾತ್ರಿ ಮಲಗುತ್ತಾರೆ. ಮೊದಲು ಎದ್ದೇಳುವ ರಾಮ್ ಸಿಹಿ ಮತ್ತು ಸೀತಾಳನ್ನು ಕಂಡು ಖುಷಿ ಪಡುತ್ತಾನೆ. ಸೀತಾ ಮತ್ತು ರಾಮ್ ಪ್ರೀತಿ ಬಗ್ಗೆ ಮಾತನಾಡುವ ಕಥೆಯನ್ನು ಕೇಳಿ ಎದ್ದೇಳುವ ಸಿಹಿ, ಈ ಕಥೆಯೇ ಚೆನ್ನಾಗಿದೆ ಎಂದು ರೇಗಿಸುತ್ತಾಳೆ. ಸಿಹಿ ಮತ್ತು ರಾಮ್ ಗೆ ಹುಟ್ಟುಹಬ್ಬದ ವಿಶ್ ಮಾಡುವ ಸೀತಾ, ಇಬ್ಬರಿಗೂ ಆರತಿ ತೆಗೆಯುತ್ತಾಳೆ. ಇನ್ನು ಸಿಹಿ ಎಲ್ಲರ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾಳೆ. ಸಿಹಿಯ ಈ ಒಳ್ಳೆಯ ಗುಣವನ್ನು ನೋಡಿದ ವಿಶ್ವ ಭಾರ್ಗವಿಯನ್ನು ಹೀಯಾಳಿಸುತ್ತಾನೆ. ಸಿಹಿಗೆ ಎಷ್ಟು ಒಳ್ಳೆಯ ಬುದ್ಧಿ ಇದೆ ಎಂದು ಹೇಳುತ್ತಾನೆ. ಇದರಿಂದ ಭಾರ್ಗವಿ ಕೋಪ ಮಾಡಿಕೊಳ್ಳುತ್ತಾಳೆ.


ಸಿಹಿಯನ್ನು ಮಿಸ್ ಮಾಡಿಕೊಂಡ ಅಜ್ಜಿ-ತಾತ

ಇತ್ತ ಅಜ್ಜಿ ದೇವರ ದೀಪ ಹಚ್ಚುತ್ತಿರುತ್ತಾರೆ. ಇವತ್ತು ಸಿಹಿ ಹುಟ್ಟುಹಬ್ಬ. ತನ್ನ ಹೊಸ ಮನೆಯಲ್ಲಿ, ಹೊಸ ಕುಟುಂಬದ ಜೊತೆಗೆ ಎಂಜಾಯ್ ಮಾಡುತ್ತಿರುತ್ತಾಳೆ ಎಂದು ಮಾತನಾಡಿಕೊಳ್ಳುತ್ತಾರೆ. ಅಜ್ಜಿ ಮತ್ತು ಸಿಹಿ ಇಬ್ಬರಿಗೂ ಸಿಹಿ ಕಾಣಿಸಿಕೊಂಡಂತೆ ಆಗುತ್ತದೆ. ಆಗ ಇಬ್ಬರೂ ಬೇಸರ ಮಾಡಿಕೊಳ್ಳುತ್ತಾರೆ. ಸದಾ ಇಲ್ಲೇ ಆಟವಾಡಿಕೊಂಡು ಇರುತ್ತಿದ್ದ ಸಿಹಿ ಈಗ ತಮ್ಮಿಂದ ಬಹಳ ದೂರ ಹೋಗಿದ್ದಾಳೆ ಎಂದು ನೊಂದುಕೊಳ್ಳುತ್ತಾರೆ. ಆದರೆ, ಸಿಹಿಗೆ ಸಿಕ್ಕಿರುವ ಹೊಸ ಬದುಕನ್ನು ಹಾಳು ಮಾಡುವುದು ಇಷ್ಟವಿರುವುದಿಲ್ಲ.

seetharama-serial-16-july-episode-written-update


ಸಾಧನಾಳಿಗೆ ಸಮಾಧಾನ ಮಾಡಿದ ಭಾರ್ಗವಿ

ಸಾಧನಾ ಸತ್ಯಜಿತ್ ಮನೆಗೆ ಬಂದಿಲ್ಲ ಎಂದು ನೊಂದುಕೊಂಡಿರುತ್ತಾಳೆ. ದೇವರ ಮನೆಯ ಮುಂದೆ ಅಳುತ್ತಿರುತ್ತಾಳೆ. ಭಾರ್ಗವಿ ಯಾರು ಇಲ್ಲದ ಸಮಯವನ್ನು ಕಂಡು ಸಧಾನಾ ಜೊತೆಗೆ ಮಾತನಾಡುತ್ತಾಳೆ. ಮದುವೆ ಮನೆಯಲ್ಲಿ ಮಾವ ಮತ್ತು ಸತ್ಯ ಜೋರಾಗಿ ಜಗಳ ಮಾಡುತ್ತಿದ್ದರು. ಮಾವ ಸತ್ಯನನ್ನು ಮನೆಯಿಂದ ಹೊರಗೆ ಹೋಗು ಎಂದರು. ಆಗ ಪರೀಸ್ಥಿತಿಯನ್ನು ನಿಭಾಯಿಸುವುದು ನನಗೂ ಕಷ್ಟವಾಯ್ತು. ಹಾಗಾಘಿ ನಾನೇ ಸತ್ಯನನ್ನು ಫಾರ್ಮ್ ಹೌಸ್ ಗೆ ಕಳಿಸಿದೆ. ಸತ್ಯ ಅಲ್ಲೇ ಇದ್ದಾನೆ ಯೋಚಿಸಬೇಡ ಎಂದು ಹೇಳಿ ಸಮಾಧಾನ ಮಾಡುತ್ತಾಳೆ. ಸಾಧನಾ ಕೂಡ ಭಾರ್ಗವಿ ಮಾತನ್ನು ಸತ್ಯ ಎಂದು ನಂಬಿದ್ದಾಳೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X