Seetha Rama ; ಸಿಹಿ ಮತ್ತು ಸುಬ್ಬಿ ಇಬ್ಬರ ಗುಟ್ಟನ್ನು ರಟ್ಟು ಮಾಡ್ತಾಳಾ ಪ್ರಿಯಾ..?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಭಾರ್ಗವಿ ಹೇಗಾದರೂ ಮಾಡಿ ಸುಬ್ಬಿ ಬಣ್ಣವನ್ನು ಬಯಲು ಮಾಡಬೇಕು ಎಂದು ಪ್ರತೀ ಹಂತದಲ್ಲೂ ಪ್ರಯತ್ನ ಪಡುತ್ತಲೇ ಇದ್ದಾಳೆ. ಆದರೆ, ಸಿಹಿ ಜೊತೆಗಿರುವ ಕಾರಣ ಪ್ರತೀ ಸಲವೂ ಸುಬ್ಬಿ ಎಸ್ಕೇಪ್ ಆಗುತ್ತಿದ್ದಾಳೆ. ಹಾಗಾಗಿ ಭಾರ್ಗವಿ ಪಾರ್ಟಿಯ ನೆಪ ಮಾಡಿ ಸುಬ್ಬಿ ಬಣ್ಣ ಕಳಚಲು ಮುಂದಾಗಿದ್ದಾಳೆ.

ಮನೆಯವರ ಬಳಿ ಸ್ಪೆಷಲ್ ದಿನಗಳ ನೆಪವೊಡ್ಡಿ ಎಲ್ಲರ ಬಾಯಲ್ಲೂ ಹಳೆ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದಾಳೆ. ಈ ಮೂಲಕ ಸುಬ್ಬಿಗೆ ಈ ಮನೆಗೆ ಬಂದ ದಿನಗಳ ಬಗ್ಗೆ ತಿಳಿಸಲು ಹೇಳಿದ್ದಾಳೆ.

seetharama-serial-17-march-episode-written-update

ಭಾರ್ಗವಿಯ ಬಗ್ಗೆ ಹೇಳಿದ ಸುಬ್ಬಿ

ಈ ಮನೆಗೆ ಸಿಹಿ ಬಂದ ದಿನವನ್ನು ನಾನು ಯಾವತ್ತೂ ಮರೆಯೊಲ್ಲ ಎಂದು ಭಾರ್ಗವಿ ಎಲ್ಲರ ಮುಂದೆ ಹೇಳಿದ್ದು, ಸುಬ್ಬಿಗೆ ನಿನಗೆ ನೆನಪಿದೆಯಾ ಎಂದು ಪ್ರಶ್ನೆ ಮಾಡಿದ್ದಾಳೆ. ಆಗ ಸುಬ್ಬಿಯ ಸಹಾಯಕ್ಕೆ ಸಿಹಿ ಬಂದು ತಾನು ಈ ಮನೆಗೆ ಬಂದಿದ್ದು, ರಾಮ್ ಗೆ ಆಕ್ಸಿಡೆಂಟ್ ಆದಾಗ ಎಂಬ ನೆನಪುಗಳ ಬುತ್ತಿಯನ್ನು ತೆರೆದಿಟ್ಟಿದ್ದಾಳೆ. ಅಲ್ಲದೇ, ಭಾರ್ಗವಿಯ ಜೊತೆಗಿನ ಕಹಿ ನೆನಪುಗಳನ್ನು ಹೇಳಿಕೊಂಡಿದ್ದು, ಸೀತಾಳಿಂದ ತನ್ನನ್ನು ದೂರ ಮಾಡಲು ಪ್ರಯತ್ನ ಪಟ್ಟ ಬಗ್ಗೆಯೂ ಹೇಳಿದ್ದಾಳೆ. ಸುಬ್ಬಿ ಬಾಯಲ್ಲಿ ಬಂದ ಸತ್ಯವನ್ನು ಕೇಳಿದ ಮನೆಯವರಿಗೆಲ್ಲಾ ಅಚ್ಚರಿಯಾಗಿದ್ದು, ಭಾರ್ಗವಿಗೆ ಶಾಕ್ ಆಗಿದೆ.

ಸುಬ್ಬಿ ಮಾತಿಗೆ ರಾಮ್-ಅಶೋಕ್ ಶಾಕ್

ಸುಬ್ಬಿಗೆ ಈ ಮನೆಯವರ ಬಗ್ಗೆ ಪರಿಚಯವಿದೆ ಬಿಟ್ಟರೆ, ಬೇರೆ ಯಾವ ವಿಚಾರವೂ ಗೊತ್ತಿಲ್ಲ. ಹಾಗಿದ್ದರೂ ಸುಬ್ಬಿ ಹೇಗೆ ಸಿಹಿಯಂತೆಯೇ ಮಾತನಾಡುತ್ತಿದ್ದಾಳೆ ಎಂದು ರಾಮ್ ಮತ್ತು ಅಶೋಕ್ ಇಬ್ಬರೂ ಶಾಕ್ ಆಗುತ್ತಾರೆ. ರಾಮ್, ಸುಬ್ಬಿ ಜೊತೆಗೆ ಕುಳಿತು ಪ್ರಶ್ನೆ ಮಾಡುತ್ತಾನೆ. ನಿನಗೆ ಇದನ್ನೆಲ್ಲಾ ಯಾರು ಹೇಳಿಕೊಟ್ಟಿದ್ದು. ಸಿಹಿಯ ನೆನಪುಗಳನ್ನು ನೀನು ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಕ್ಕೆ ಉತ್ತರ ಕೊಡದೇ ಯಾಮಾರಿಸಿದ್ದಾಳೆ. ಅಶೋಕ್ ಮಾಡಿದ ಪ್ರಶ್ನೆಗೂ ಉತ್ತರಿಸಿದೇ ತನ್ನ ಮತ್ತು ಸಿಹಿ ನಡುವಿನ ರಹಸ್ಯವನ್ನು ಬಚ್ಚಿಟ್ಟುಕೊಂಡಿದ್ದಾಳೆ.

ಭಾರ್ಗವಿಗೆ ಅರ್ಥವಾಗದ ಪರಿಸ್ಥಿತಿ

ಭಾರ್ಗವಿಗೆ ಕನ್ಫೂಸ್ ಆಗಿದೆ. ಈ ಹುಡುಗಿ ಯಾರು. ಸಿಹಿ ಸತ್ತು ಕಾಲವೇ ಕಳೆದಿದೆ. ಸಿಹಿಯಂತೆಯೇ ಇರುವ ಈ ಹುಡುಗಿ ತನ್ನ ಬಗ್ಗೆ ಹೇಗೆ ಎಲ್ಲಾ ವಿಚಾರವನ್ನು ಹೇಳಲು ಸಾಧ್ಯ ಎಂದು ಭಾರ್ಗವಿ ತಲೆಕೆಡಿಸಿಕೊಂಡಿದ್ದಾಳೆ. ಅಲ್ಲದೇ, ತಾನು ಮಾಡಿರುವ ಕೆಟ್ಟ ಕೆಲಸಗಳ ಬಗ್ಗೆ ಮನೆಯವರಿಗೆ ಗೊತ್ತಾದರೆ, ತನ್ನ ಪಾಡು ಏನಾಗಬಹುದು ಎಂದು ಕೂಡ ಆತಂಕಗೊಂಡಿದ್ದಾಳೆ. ಸುಬ್ಬಿ ಮತ್ತು ಭಾರ್ಗವಿಯ ನಡುವೆ ನಿಧಾನವಾಗಿ ದ್ವೇಷ ಹುಟ್ಟಿಕೊಂಡಿದೆ. ಮುಂದಿನ ದಿನಗಳಲ್ಲಿ ಭಾರ್ಗವಿಯ ಕೋಪಕ್ಕೆ ಸುಬ್ಬಿ ತುತ್ತಾಗುವ ಸಾಧ್ಯತೆಗಳು ಬಹಳಷ್ಟಿದೆ.

ಪ್ರಿಯಾಳಿಂದ ಎಲ್ಲಾ ಗುಟ್ಟು ರಟ್ಟಾಗುತ್ತಾ..?

ಇನ್ನು ಮನೆಗೆ ಪ್ರಿಯಾಳ ಎಂಟ್ರಿಯಾಗಿದೆ. ಸುಬ್ಬಿಗೆ ಸಿಹಿ ಬಗ್ಗೆ ಯಾವ ವಿಚಾರವೂ ಗೊತ್ತಿರಲು ಸಾಧ್ಯವಿಲ್ಲ ಎಂಬುದು ಆಕೆಗೂ ಗೊತ್ತಿದೆ. ಹಾಗಿದ್ದರೂ ಪ್ರಿಯಾ ಬಂದ ಕೂಡಲೇ ಸುಬ್ಬಿ ಹಾಯ್ ಪ್ರೀ ಎಂದು ಹೇಳಿ ತಬ್ಬಿಕೊಂಡಿದ್ದಾಳೆ. ಇದೆಲ್ಲವನ್ನು ಕಂಡು ಮತ್ತೆ ರಾಮ್, ಅಶೋಕ್ ಹಾಗೂ ಪ್ರಿಯಾ ಶಾಕ್ ಆಗಿದ್ದಾರೆ. ಪ್ರಿಯಾ ಸುಬ್ಬಿಗೆ ಸಿಹಿ ಸಹಾಯ ಮಾಡುತ್ತಿರಬಹುದು. ಸಿಹಿಯೇ ಸುಬ್ಬಿಗೆ ಎಲ್ಲವನ್ನೂ ಹೇಳಿಕೊಡುತ್ತಿರಬಹುದು ಎಂದು ಹೇಳಿದ್ದು. ಈಗ ಪ್ರಿಯಾ ರಾಮ್ ಮತ್ತು ಅಶೋಕ್ ತಲೆಗೆ ಮತ್ತೊಂದು ಹುಳವನ್ನು ಬಿಟ್ಟಿದ್ದಾಳೆ. ಪ್ರಿಯಾಳ ಈ ಮಾತಿನಿಂದ ಸಿಹಿಯ ಆತ್ಮ ನಮ್ಮ ಸುತ್ತ ಇರಬಹುದು ಎಂದು ಗೆಸ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X