Seetharama ; ಸಿಹಿ ತನ್ನ ಮಗಳು ಎಂದು ತಿಳಿದ ಶ್ಯಾಮ್ : ಸೀತಾ ಬಾಡಿಗೆ ತಾಯಿ ಎಂದು ಅರಿತ ರಾಮ್

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಶ್ಯಾಮ್ ಮಗು ಬಗ್ಗೆ ಗೊತ್ತಾಗಬೇಕೆಂದರೆ ರಾಮ್ ಡಾ. ಅನಂತಲಕ್ಷ್ಮೀ ಅವರ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಿದ್ದಾನೆ. ಇತ್ತ ಸೀತಾ ತಮ್ಮ ಜೀವನದಲ್ಲಿ ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದ್ದು, ತನ್ನ ಬದುಕಿನ ಎಲ್ಲಾ ಸತ್ಯವನ್ನು ಹೇಳಬೇಕು ಎಂದು ನಿರ್ಧರಿಸಿದ್ದಾಳೆ. ರಾಮ್ ಬರುತ್ತಿದ್ದಂತೆ ಭಾರ್ಗವಿ ನಿದ್ದೆ ಮಾತ್ರೆ ಹಾಕಿದ ಹಾಲು ಕೊಡುತ್ತಾಳೆ. ಇದನ್ನು ಕುಡಿದ ರಾಮ್ ನಿದ್ದೆಗೆ ಜಾರಿರುತ್ತಾನೆ. ಆಗ ಸೀತಾ ಸಿಹಿ ಹುಟ್ಟಿದ್ದು ಹೇಗೆ ಎಂಬುದನ್ನು ವಿವರವಾಗಿ ಹೇಳುತ್ತಾಳೆ.


ಸತ್ಯ ಹೇಳಿದ ಡಾ.ಅನಂತಲಕ್ಷ್ಮೀ

ತನಗೆ ಕಷ್ಟವಿತ್ತು ಎಂಬ ಕಾರಣಕ್ಕೆ ಬಾಡಿಗೆ ತಾಯಿ ಆದ ಸೀತಾ ಮಗುವಿಗೆ ಜನ್ಮ ನೀಡಿದಾಗ ಶ್ಯಾಮ್ ಮನೆಯವರು ಬಾರದೇ ಹೋದರು. ನಿನ್ನೆಯವರೆಗೂ ಸಿಹಿ ಅವರ ಮಗುವೇ ಎಂಬ ಸತ್ಯ ಗೊತ್ತಿರಲಿಲ್ಲ. ಆದರೆ, ಸಿಹಿಯನ್ನು ಅವರಿಗೆ ಕೊಡುವುದು ತನಗೆ ಇಷ್ಟವಿಲ್ಲ ಎಂದು ಹೇಳಿರುತ್ತಾಲೆ. ಆದರೆ, ರಾಮ್ ಗೆ ಇದ್ಯಾವುದೂ ಕೇಳಿಸಿರುವುದಿಲ್ಲ. ಬೆಳಗ್ಗೆದ್ದು ರಾಮ್ ಶ್ಯಾಮ್ ನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿ ಡಾ.ಅನಂತಲಕ್ಷ್ಮೀ ಅವರನ್ನು ಶ್ಯಾಮ್ ಕುಟುಂಬಕ್ಕೆ ನಿಮ್ಮಿಂದ ಅನ್ಯಾಯವಾಗಿರುವುದಾಗಿ ದೂರ ಬಂದ ಕಾರಣ ಎಂಕ್ವೈರಿ ನಡೆಸುತ್ತಿರುತ್ತಾರೆ. ಆಗ ವೈದ್ಯರು ಬೇರೆ ದಾರಿ ಇಲ್ಲದೇ, ಸೀತಾ ಬಗ್ಗೆ ಹೇಳುತ್ತಿರುತ್ತಾರೆ. ಇದನ್ನೆಲ್ಲಾ ಶ್ಯಾಮ್ ಕೇಳಿಸಿಕೊಳ್ಳುತ್ತಾನೆ.

Seetharama Serial 17 October episode written update

ರಾಮ್ ಕಾಲರ್ ಪಟ್ಟಿ ಹಿಡಿದು ಬೈದ ಶ್ಯಾಮ್

ವೈದ್ಯರು ಸೀತಾ ಮಗುವಿಗೆ ಜನ್ಮ ಕೊಟ್ಟಾಗ ಶ್ಯಾಮ್ ಮನೆಯವರು ಬರಲಿಲ್ಲ. ಹೀಗಾಗಿ ಮಗುವನ್ನು ಅನಾಥಾಶ್ರಮಕ್ಕೆ ಕೊಡಬೇಕು ಎಂದುಕೊಂಡೆವು. ಆದರೆ, ಸೀತಾ ತಾನೇ ಮಗುವನ್ನು ಸಾಕಿದಳು. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಶ್ಯಾಮ್ ಅವರೇ ಮೋಸ ಮಾಡಿದ್ದು ಎಂದು ಹೇಳುತ್ತಾಳೆ. ಆಗ ಶ್ಯಾಮ್ ಗೆ ಚಾಂದಿನಿ ಹೇಳಿದ್ದೇ ಸತ್ಯ ಎಂಬ ಅರಿವಾಗುತ್ತದೆ. ಆದರೆ, ಶ್ಯಾಮ್ ತಾವು ಬಾರದೇ ಹೋಗಿದ್ದಕ್ಕೆ ಮಗು ಸೀತಾ ಬಳಿ ಉಳಿದುಕೊಂಡಿದೆ ಎಂಬ ಸತ್ಯವನ್ನು ಮರೆತಿದ್ದು, ರಾಮ್ ಮೇಲೆ ಕೋಪ ಮಾಡಿಕೊಳ್ಳುತ್ತಾನೆ. ತನ್ನ ಮಗುವನ್ನು ನಿಮ್ಮ ಮನೆಯಲ್ಲೇ ಇಟ್ಟುಕೊಂಡು ನಾನು ಮಗುವಿಗಾಗಿ ಪರದಾಡುವುದನ್ನು ನೋಡುತ್ತಾ ಸುಮ್ಮನಿದ್ದೆಯಾ ಎಂದು ಹೇಳುತ್ತಾನೆ. ಸೀತಾನೇ ಬಾಡಿಗೆ ತಾಯಿ ಎಂದು ಕೂಗಾಡುತ್ತಾನೆ.

ಸಿಹಿ ಶ್ಯಾಮ್ ಮಗು ಎಂದು ತಿಳಿದ ರಾಮ್

ರಾಮ್ ಗೆ ಶ್ಯಾಮ್ ಮಾತುಗಳು ಸರಿಯಾಗಿ ಅರ್ಥವಾಗುವುದಿಲ್ಲ. ಸಿಹಿ ಹೇಗೆ ಶ್ಯಾಮ್ ಮಗುವಾಗುತ್ತಾಳೆ ಎಂದು ಶಾಕ್ ನಲ್ಲಿ ಇರುವಾಗಲೇ ಡಾ.ಅನಂತಲಕ್ಷ್ಮೀ ಬಂದು ಶ್ಯಾಮ್ ಹೇಳಿದ್ದೆಲ್ಲಾ ಸತ್ಯ. ನಾನು ಇಷ್ಟು ದಿನ ಬಾಡಿಗೆ ತಾಯಿ ಬಗ್ಗೆ ಹೇಳದೇ ಇರುವುದಕ್ಕೆ ಇದೇ ಕಾರಣ. ಸೀತಾ ಬಾಡಿಗೆ ತಾಯಿ. ಅವಳಿಗೆ ಜನಿಸಿದ ಮಗು ಸಿಹಿಯೇ ಶ್ಯಾಮ್ ಮತ್ತು ಶಾಲಿನಿ ಮಗು ಎಂದು ಹೇಳುತ್ತಾಳೆ. ಈಗ ರಾಮ್ ಸಂಪೂರ್ಣ ಶಾಕ್ ನಲ್ಲಿದ್ದಾನೆ.

ಸಿಹಿ ಯಾರ ಪಾಲಾಗುತ್ತಾಳೆ..?

ಶ್ಯಾಮ್ ಸೀದಾ ಮನೆಗೆ ಹೋಗಿ ಶಾಲಿನಿ ಬಳಿ ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಾನೆ. ಸಿಹಿಯೇ ತಮ್ಮ ಮಗು. ಈಗಲೇ ಹೋಗಿ ನಾನು ನಮ್ಮ ಮಗುವನ್ನು ಕರೆದುಕೊಂಡು ಬರುತ್ತೇನೆ. ಚಾಮದಿನಿ ಹೇಳಿದ ಮಾತುಗಳೆಲ್ಲವೂ ಸತ್ಯ ಎಂದು ಹೇಳುತ್ತಾನೆ. ಆದರೆ, ಶಾಲಿನಿ ಈ ಮಾತನ್ನು ಕೇಳಿ ಶಾಕ್ ಆಗುತ್ತಾನೆ. ಇನ್ನು ಈಗ ಸೀತಾ ಮಗುವನ್ನು ಬಿಟ್ಟು ಕೊಡುತ್ತಾಳಾ..? ಶ್ಯಾಮ್ ಸಿಹಿಯನ್ನು ಪಡೆದುಕೊಳ್ಳುತ್ತಾನಾ..? ರಾಮ್ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾನೆ..? ಸಿಹಿ ಯಾರನ್ನು ಒಪ್ಪಿಕೊಳ್ಳುತ್ತಾಳೆ ಎಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X