Seetharama ; ಶಾಲಿನಿಗೆ ಬೇಡದ ತಾಯ್ತನ : ಗೆಳೆಯನಿಗಾಗಿ ಮಗು ಹುಡುಕಾಟದಲ್ಲಿ ರಾಮ್..!

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಗಣೇಶ ಹಬ್ಬಕ್ಕೆಂದು ಶಾಲಿನಿ ಮತ್ತು ಮೇಘಶ್ಯಾಮ್ ರಾಮ್ ಮನೆಗೆ ಬಂದಿದ್ದು, ಈಗ ಅಲ್ಲೇ ಉಳಿದುಕೊಳ್ಳುವಂತಾಗಿದೆ.ಕೋಪದಲ್ಲಿ ಅಕ್ಕ-ಭಾವನನ್ನು ಮನೆಯಿಂದ ಹೊರಗೆ ಕಳಿಸಿದ ಚಾಂದಿನಿ ಈಗ ಒಬ್ಬಳೇ ಮನೆಯಲ್ಲಿ ಹೆದರಿಕೊಂಡಿದ್ದಾಳೆ. ರುದ್ರಪ್ರತಾಪ್ ಬೇರೆ ಚಾಂದಿನಿ ಮನೆಯ ಬಳಿಯೇ ಸುತ್ತಾಡುತ್ತಿದ್ದು, ಚಾಂದಿನಿ ಮತ್ತಷ್ಟು ಗಾಬರಿಯಾಗಿದ್ದಾಳೆ. ರುದ್ರಪ್ರತಾಪ್ ಸೀತಾ ಪತ್ರ ಬರೆದಿರುವ ಈ ಮನೆಯಲ್ಲಿ ಯಾರು ಯಾರು ಇದ್ದಾರೆ. ಈ ಮನೆಯವರಿಗೂ ಸೀಥಾ ಮತ್ತು ಅವಳ ಮಗು ಸಿಹಿಗೂ ಸಂಬಂಧವಿದೆಯಾ ಎಂದು ಯೋಚಿಸುತ್ತಿದ್ದಾನೆ.

ಸೀತಮ್ಮನನ್ನೇ ಮರೆತ ಸಿಹಿ

ಆದರೆ, ಚಾಂದಿನಿ ಕಡೆಯಿಂದ ರುದ್ರಪ್ರತಾಪ್ ಗೆ ಯಾವುದೇ ಅರ್ಥಭರಿತ ಉತ್ತರಗಳು ಸಿಗುತ್ತಿಲ್ಲ. ಇದರಿಂದ ರುದ್ರಪ್ರತಾಪ್ ಸಿಹಿ ತಂದೆಯನ್ನು ಹುಡುಕುವ ಕೆಲಸವನ್ನು ಭಾರ್ಗವಿಗೇ ಒಪ್ಪಿಸಿದ್ದಾನೆ. ಇನ್ನು ಸಿಹಿಗೆ ಶ್ಯಾಮ್ ಡಾಕ್ಟರ್ ಮನೆಯಲ್ಲಿರುವುದು ಖುಷಿ ಕೊಟ್ಟಿದೆ. ಹೀಗಾಗಿ ಅವರ ಬಳಿಯೇ ಇನ್ಸುಲಿನ್ ಪಡೆದುಕೊಂಡಿದ್ದಾಳೆ. ಇದು ಸೀಥಾಳಿಗೆ ಬೇಸರವನ್ನು ತಂದಿದೆ. ಅಲ್ಲದೇ ಶಾಲೆಗೆ ಹೋಗುವ ಆತುರದಲ್ಲಿ ಶ್ಯಾಮ್ ಮತ್ತು ಶಾಲಿನಿಗೆ ಮುತ್ತು ಕೊಟ್ಟಿದ್ದು, ಸೀತಮ್ಮನನ್ನೇ ಮರೆತಿದ್ದಾಳೆ. ಇದರಿಂದ ಬೇಸರ ಮಾಡಿಕೊಂಡ ಸೀತಾ ರೂಮಿಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ರಾಮ್ ಸೀತಾಳಿಗೆ ಸಮಾಧಾನ ಮಾಡಿದ್ದಾನೆ.

seetharama-serial-17-september-episode-written-update

ಫ್ರೆಂಡ್ ಮನೆಯಲ್ಲೂ ಶಾಲಿನಿ ಡಯಟ್ ಫುಡ್

ಇನ್ನು ಶಾಲಿನಿ ಗಂಡನ ಗೆಳೆಯನ ಮನೆಯಲ್ಲಿ ಇದ್ದರೂ ಕೂಡ ತನಗೆ ಡಯಟ್ ಬ್ರೇಕ್ ಫಾಸ್ಟ್ ಬೇಕು ಎಂದು ಬಯಸಿದ್ದಾಳೆ. ರಾಮ್ ಮನೆಯ ಕಿಚನ್ ಗೆ ಹೋಗಿ ತನಗೆ ಏನು ಬೇಕೋ ಅದನ್ನೇ ಮಾಡಿಕೊಂಡಿದ್ದಾಳೆ. ಇನ್ನು ಸಾಧನಾ ಕುತೂಹಲಕ್ಕೆ ನೀವ್ಯಾಕೆ ಬಾಡಿಗೆ ತಾಯಿಯಿಂದ ಮಕ್ಕಳನ್ನು ಮಾಡಿಕೊಂಡಿದ್ದು, ನಿಮಗೆ ಯಾವ ಸಮಸ್ಯೆ ಇತ್ತು ಎಂದು ಪ್ರಶ್ನಿಸಿದ್ದಾಳೆ. ಸಾಧನಾ ಪ್ರಶ್ನೆ ಕೇಳಿ ಶಾಲಿನಿಗೆ ಕೋಪ ಬಂದಿದ್ದು, ಒಂದು ಮಗುವಿಗೋಸ್ಕರ ನನ್ನ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಹಾಗಾಗಿ ನಾನು ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಮುಂದಾದೆ ಎಂದು ಹೇಳುತ್ತಾಳೆ.

ಮಗು ಇಲ್ಲ ಎಂದು ಸಾಧನಾ ಬೇಸರ

ಶಾಲಿನಿ ಮಾತನ್ನು ಕೇಳಿದ ಸಾಧನಾಳಿಗೆ ಶಾಕ್ ಆಗುತ್ತದೆ. ನಾವೆಲ್ಲಾ ಮಗು ಬೇಕು ಎಂದು ಎಷ್ಟು ಬಯಸುತ್ತೇವೆ. ಆದರೆ ದೇವರು ನಮಗೆ ಮಕ್ಕಳನ್ನು ಕರುಣಿಸಿಲ್ಲ. ಆದರೆ, ನಿನಗೆ ಎಲ್ಲಾ ಸರಿ ಇದ್ದರೂ ನೀನೇ ಮಗು ಬೇಡ ಎನ್ನುತ್ತಿದ್ದೀಯಾ. ದೇವರ ಆಟವೇ ಆಟ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಅಲ್ಲದೇ, ಮಗು ಆಗುವುದರಿಂದ ಆರೋಗ್ಯಕ್ಕಾಗಲಿ ದೇಹದ ಫಿಟ್ನೆಸ್ ಗಾಗಲೀ ಏನೂ ಸಮಸ್ಯೆ ಆಗುವುದಿಲ್ಲ. ಉದಾಹರಣಗೆ ಸೀತಾಳನ್ನೇ ನೋಡು ಎಂದಾಗ ಸೀತಾ ಕೂಡ ತಾಯ್ತನದ ಬಗ್ಗೆ ಮಾತನಾಡುತ್ತಾಳೆ. ತಾಯಿ ಆಗುವುದು ಒಂದು ಅದೃಷ್ಟ ಎಂದು ಹೇಳುತ್ತಾಳೆ. ಈ ಮಾತು ಶಾಲಿನಿಗೆ ಇರಿಟೇಟ್ ಮಾಡುತ್ತದೆ.

seetharama-serial-17-september-episode-written-update

ಸ್ನೇಹಿತನ ಮಗುಗಾಗಿ ರಾಮ್ ಹುಡುಕಾಟ

ಶ್ಯಾಮ್ ಬಳಿ ಹೋಗಿ ಶಾಲಿನಿ ಆದಷ್ಟು ಬೇಗ ಇಲ್ಲಿಂದ ಹೊರಡೋಣ ಎನ್ನುತ್ತಾಳೆ. ಆಗ ಶ್ಯಾಮ್ ಅಗ್ರಿಮೆಂಟ್ ಪೇಪರ್ ಬೇಕು ಎಂದಿದ್ದಕ್ಕೆ, ಚಾಮದಿನಿ ಮನೆಗೆ ತಾನೇ ಹೋಗಿ ತರುವುದಾಗಿ ಒಪ್ಪಿಕೊಂಡಿದ್ದಾಳೆ. ಈಗ ಶಾಲಿನಿ ಅಗ್ರಿಮೆಂಟ್ ಅನ್ನು ಮುಚ್ಚಿಡುತ್ತಾಳೋ, ಇಲ್ಲ ಸತ್ಯ ತಿಳಿದು ಏನು ಮಾಡುತ್ತಾಳೋ ಗೊತ್ತಿಲ್ಲ. ಆದರೆ ರಾಮ್ ಮಾತ್ರ ಗೆಳೆಯನಿಗೆ ಮಗು ಸಿಗಲೇ ಬೇಕು. ನ್ಯಾಯ ಕೊಡಿಸಬೇಕು ಎಂದು ಸಾಕಷ್ಟು ಪ್ರಯತ್ನ ಪಡುತ್ತಿದ್ದಾನೆ. ಸತ್ಯ ತಿಳಿದರೆ ರಾಮ್ ಬದುಕು ಮೂರಾಬಟ್ಟೆ ಆಗುವುದಂತೂ ಖಂಡಿತ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X