Seetharama ; ಭಾರ್ಗವಿಗೆ ಜ್ಯೂಸ್ ಕೊಟ್ಟು ಬಡ್ಡಿ ತೀರಿಸಿದ ಸುಬ್ಬಿ, ಸಿಹಿ..!
ಸೀತಾರಾಮ ಧಾರಾವಾಹಿಯಲ್ಲಿ ಸುಬ್ಬಿಗೆ ರಾಮ್ ಎಂದರೆ ಆಗುವುದಿಲ್ಲ. ಆದರೂ ರಾಮ್ ಇಂಜೆಕ್ಷನ್ ಕೊಡುವುದಾಗಿ ಹೇಳಿ ಸೀತಾಳನ್ನು ಯಾಮಾರಿಸಿದ್ದು, ಸುಬ್ಬಿ ತನ್ನ ತಪ್ಪು ತಿಳುವಳಿಕೆಯನ್ನು ಸರಿ ಮಾಡಿಕೊಳ್ಳಬಹುದು. ಸೀತಾ ಸುಬ್ಬಿಗೆ ಸ್ನಾನ ಮಾಡಿಸಿ, ಡ್ರೆಸ್ ಹಾಕಿ ರೆಡಿ ಮಾಡುತ್ತಾಳೆ. ಈಗ ಸೀತಾ ಮೊದಲಿನಂತೆಯೇ ಆಗಿದ್ದಾಳೆ. ಮಗಳೊಂದಿಗೆ ತನ್ನ ಪಾಡಿಗೆ ತಾನಿದ್ದು, ಮನೆಯ ಕೆಲಸವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ. ಬೆಳಗ್ಗೆ ಅಮ್ಮ ಮತ್ತು ಮಗಳು ಇಬ್ಬರೂ ಸ್ನಾನ ಮಾಡಿ ದೇವರ ಮನೆಗೆ ಹೋಗಿದ್ದಾರೆ. ದೇವರಿಗೆ ಕರ್ಪೂರ ಬೆಳಗಿ ಮಾಡಿ ಸುಬ್ಬಿ ಮನೆಯವರಿಗೆಲ್ಲಾ ಆರತಿ ನೀಡಿದ್ದಾಳೆ.
ಸಿಹಿಯನ್ನು ಪರೀಕ್ಷೆ ಮಾಡಿದ ವಿಶ್ವಜಿತ್
ಸಿಹಿ ಮನೆಗೆ ವಾಪಸ್ ಬಂದ ಮೇಲೆ ಸೀತಾ ಮೊದಲಿನಂತೆ ಆಗಿದ್ದಾಳೆ. ಮನೆಯನ್ನು ನೀಟ್ ಆಗಿ ನಿಭಾಯಿಸುತ್ತಿದ್ದಾಳೆ ಎಂದು ಸೂರಿ ತಾತ ಖುಷಿ ಪಟ್ಟಿದ್ದಾರೆ. ಆದರೆ, ವಿಶ್ವನಿಗೆ ಇನ್ನೂ ಸಿಹಿಯ ಜಾಗಕ್ಕೆ ಬಂದಿರುವ ಸುಬ್ಬಿಯ ಮೇಲೆ ಅನುಮಾನವಿದೆ. ಹಾಗಾಗಿ ಸಿಹಿ ಬಳಿ ನೀನು ಕೇಳಿಕೊಂಡ ಬೇಡಿಕೆ ಯಾವುದು ಎಂದು ಹೇಳು ಅಂತ ಕೇಳಿದ್ದಾರೆ. ಆಗ ಸುಬ್ಬಿ ಕಕ್ಕಾಬಿಕ್ಕಿಯಾಗಿದ್ದು, ಸಿಹಿ ಹೇಳಿಕೊಟ್ಟಿದ್ದಾಳೆ. ತಮ್ಮ ಪಾಪು ಬಗ್ಗೆ ತಾನೆ, ದಿನಾ ದೇವರ ಬಳಿ ಅದನ್ನೇ ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಡುತ್ತಾಳೆ. ಆಗ ಸುಬ್ಬಿ ಅದೇ ಮಾತುಗಳನ್ನು ಆಡಿದಾಗ ವಿಶ್ವ ಸುಮ್ಮನಾಗುತ್ತಾನೆ. ಆದರೆ, ರಾಮ್ ಗೆ ಇದೆಲ್ಲಾ ಸುಬ್ಬಿಗೆ ಹೇಗೆ ಗೊತ್ತು ಎಂದು ಒಂದು ಕ್ಷಣ ಶಾಕ್ ಆಗಿದ್ದಾನೆ.

ಸಿಹಿ ಜೊತೆ ಸೇರಿ ಸುಬ್ಬಿ ಮಾಡಿದ್ದೇನು..?
ಇತ್ತ ಭಾರ್ಗವಿ ಸೀತಾ ಸರಿ ಹೋದರೆ ತನಗೆ ಕಷ್ಟ ಎಂದು ಮತ್ತೆ ಜ್ಯೂಸ್ ನಲ್ಲಿ ಮತ್ತು ಬರುವ ಪೌಡರ್ ಅನ್ನು ಬೆರೆಸಿದ್ದಾಳೆ. ಇದನ್ನು ಸಿಹಿ ಗಮನಿಸಿದ್ದು, ಸುಬ್ಬಿ ಬಳಿ ಹೇಳಿದ್ದಾಳೆ. ಬಡ್ಡಿ ಬಂಗಾರಮ್ಮ ಸೀತಮ್ಮನಿಗೆ ಕೊಡುವ ಜ್ಯೂಸ್ ನಲ್ಲಿ ಏನೋ ಮಿಕ್ಸ್ ಆಗಿರುತ್ತದೆ, ತಿಂಡಿ ತಿನ್ನುವಾಗ ಜ್ಯೂಸ್‌ನ ಸೀತಾಳಿಗೆ ನೀಡಿದಾಗ, ಸುಬ್ಬಿ ಇದು ನನಗೆ ಬೇಕು. ಎಲ್ಲರಿಗೂ ಜ್ಯೂಸ್ ಮಾಡಿ ಕೊಡಿ ಎಂದು ಕೇಳುತ್ತಾಳೆ. ಆಗ ಬೇರೆ ಜ್ಯೂಸ್ ಗ್ಲಾಸ್ ಗಳ ಜೊತೆಗೆ ಬಡ್ಡಿ ಬಂಗಾರಮ್ಮ ಕೊಟ್ಟ ಜ್ಯೂಸ್ ಅನ್ನು ಮಿಕ್ಸ್ ಮಾಡಿ ಅದನ್ನು ಭಾರ್ಗವಿಯೇ ಕುಡಿಯುವಂತೆ ಮಾಡಿದ್ದಾಳೆ. ಭಾರ್ಗವಿಗೆ ತಲೆ ತಿರುಗಿದ್ದು, ಇದನ್ನು ಕಂಡ ಸಿಹಿ ಇನ್ಮುಂದೆ ನಾನು ಮತ್ತೆ ಸುಬ್ಬಿ ಸೇರಿಕೊಂಡು ಏನೆಲ್ಲಾ ಮಾಡುತ್ತೇವೆ ನೋಡಿ ಎಂದು ತಮಾಷೆ ಮಾಡಿದ್ದಾಳೆ.
ತಲೆ ತಿರುಗಿ ಬಿದ್ದ ಭಾರ್ಗವಿ
ಭಾರ್ಗವಿಗೆ ಕೂರಲಾಗದ ಕಾರಣ, ಸೀದಾ ಎದ್ದು ಹೋಗಿದ್ದಾಳೆ. ಮಧ್ಯೆ ಹೋಗಿ ಭಾರ್ಗವಿಯನ್ನು ನಿಲ್ಲಿಸಿದ ಸುಬ್ಬಿ ನಿಮಗೊಂದು ಕಥೆಯನ್ನು ಹೇಳುತ್ತೇನೆ ಎಂದಿದ್ದಾಳೆ. ಆಗ ಜ್ಯೂಸ್ ಬಗ್ಗೆ ಕಥೆ ಹೇಳಿ ಭಾರ್ಗವಿಗೆ ಶಾಕ್ ಆಗುವಂತೆ ಮಾಡಿದ್ದಾಳೆ. ಭಾರ್ಗವಿ ಮಾತ್ರೆಯ ಮತ್ತಿಗೆ ಸುಸ್ತಾಗಿ ನಿಂತಲ್ಲೇ ಕುಸಿದು ಬಿದ್ದಿದ್ದು, ರಾಮ್ ಹಾಗೂ ಮನೆಯವರು ಗಾಬರಿಯಾಗುತ್ತಾರೆ.
ಸುಬ್ಬಿ ಇಲ್ಲದೇ ಕಂಗಾಲಾದ ಸ್ವಾಮಿ ತಾತ
ಇನ್ನು ಮನೆಯಲ್ಲಿ ಸುಬ್ಬಿ ಇಲ್ಲದ ಕಾರಣ ಸ್ವಾಮಿ ಡಲ್ ಆಗಿದ್ದಾನೆ. ಪುಟ್ಲಿಂಗು ಶಾಲೆಗೆ ಹೊರಟಿದ್ದಾನೆ. ಜಾಕಿಗೆ ಹೊಸ ಗ್ಯಾರೇಜ್ ತೆರೆದಿದ್ದು, ಕೆಲಸಕ್ಕೆ ಹೊರಟಿದ್ದಾನೆ. ಇನ್ನು ಕಾವೇರಿ ಟೈಲರಿಂಗ್ ಕ್ಲಾಸ್ ಗೆ ಸಿದ್ಧವಾಗಿದ್ದಾಳೆ. ಎಲ್ಲರ ಮೊಗದಲ್ಲೂ ಸಂಭ್ರಮ ತುಂಬಿ ತುಳುಕುತ್ತಿದೆ. ಆದರೆ, ಸ್ವಾಮಿ ಮಾತ್ರ ಡಲ್ ಆಗಿದ್ದಾನೆ. ಸ್ವಾಮಿ ಸುಬ್ಬಿಗಾಗಿ ಎಡವಟ್ಟು ಮಾಡುತ್ತಾನಾ ಎಂಬ ಅನುಮಾನ ಮೂಡಿದೆ.


Click it and Unblock the Notifications











