Seetharama ; ವಠಾರಕ್ಕೆ ಬಂದ ಸಿಹಿ ಕುಟುಂಬ : ಹಣಕ್ಕೆ ಬೇಡಿಕೆ ಇಟ್ಟ ಸುಲೋಚನಾ..!
ಸೀತಾರಾಮ ಧಾರಾವಾಹಿಯಲ್ಲಿ ಪ್ರಿಯಾ ಫುಲ್ ಬ್ಲಶಿಂಗ್ ನಲ್ಲಿ ಇದ್ದಾಳೆ. ಅಶೋಕ್ ಜೊತೆಗೆ ಮದುವೆಯಾಗುವ ಸಂದರ್ಭದಲ್ಲೂ ಪ್ರಿಯಾ ಇಷ್ಟು ನಾಚಿಕೆ ಹೊಂದಿರಲಿಲ್ಲ.ಆದರೆ, ಈಗ ನಾಚಿಕೊಂಡಿರುವ ಪ್ರಿಯಾ, ತಾನು ತಾಯಿ ಆಗುತ್ತಿದ್ದೇನೆ ಎಂಬ ಖುಷಿಯಲ್ಲಿದ್ದಾಳೆ. ಅವರ ತಾಯಿ ಪ್ರೇಮಾ ಕೂಡ ಅದೇ ಖುಷಿಯಲ್ಲಿ ಮಗಳಿಗೆ ಆರತಿ ಮಾಡಲು ಮುಂದಾಗಿದ್ದಾಳೆ.ಅಂಜಲಿ ಮೊದಲು ಚೆಕ್ ಅಪ್ ಮಾಡಿ ಬಳಿಕ ಟೆಸ್ಟ್ ಮಾಡುವುದು ಒಳ್ಳೆಯದು ಎಂದು ಹೇಳಿದರೂ ಕೇಳಿದೆಯೇ, ಪ್ರಿಯಾ ಮತ್ತು ಪ್ರೇಮಾ ತಮ್ಮದೇ ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದಾರೆ.
ಸಿಹಿ ಡಯಾಬಿಟೀಸ್ ಬಗ್ಗೆ ತಿಳಿದು ಬೇಸರ
ಸಿಹಿ ಮತ್ತು ರಾಮ್ ಗೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಲು ಎರಡು ರೀತಿಯ ಕೇಕ್ ಗಳನ್ನು ಭಾರ್ಗವಿ ತರಿಸಿದ್ದಾಳೆ. ಇನ್ನು ಸೀತಾ ಉಟ್ಟಿರುವ ಸೀರೆ ಸಾಧಾರಣವಾಗಿದೆ ಎಂದು ಹೇಳಿ, ಜರಿ ಸೀರೆಯನ್ನು ನೀಡಿದ್ದಾಳೆ. ಸೀತಾಳಿಗೆ ಈ ಆಡಂಬರ ಇಷ್ಟವಿಲ್ಲದಿದ್ದರೂ ದೇಸಾಯಿ ಕುಟುಂಬದ ಸೊಸೆಯಾಗಿರುವುದರಿಂದ ಅನಿವಾರ್ಯವಾಗಿದೆ. ಇನ್ನು ಸಿಹಿ ಇವತ್ತು ಒಂದೇ ದಿನ ತಾನು ಸಿಹಿ ತಿನ್ನುವುದು ಎಂದು ಹೇಳುತ್ತಾಳೆ. ಎಲ್ಲರೂ ಕಾರಣ ಕೇಳಿದಾಗ ತನಗೆ ಡಯಾಬಿಟೀಸ್ ಇದ್ದು, ನಿತ್ಯ ಇನ್ಸುಲಿನ್ ತೆಗೆದುಕೊಳ್ಳುವ ಬಗ್ಗೆ ಅರಾಮಾಗಿ ಹೇಳಿದ್ದಾಳೆ. ಈ ಮಾತನ್ನು ಕೇಳಿದ ರಾಮ್ ಮನೆಯವರೆಲ್ಲಾ ಶಾಕ್ ಆಗಿದ್ದಾರೆ.

ಸಿಕ್ಕ ಅವಕಾಶವನ್ನು ಬಿಡದ ಭಾರ್ಗವಿ
ಸೀತಾ ಈ ವಿಚಾರವನ್ನು ಬೇಕಂತ ಮುಚ್ಚಿಟ್ಟಿಲ್ಲ. ನಾನೇ ಮೊದಲೇ ಹೇಳಬೇಕಿತ್ತು. ಹೇಳದೇ ಇರುವುದಕ್ಕೆ ಕ್ಷಮಿಸಿ ಎನ್ನುತ್ತಾಳೆ. ಆಗ ಮನೆಯವರೆಲ್ಲಾ ಒರವಾಗಿಲ್ಲ. ಅವಳು ನಮ್ಮ ಮನೆಯ ಮಗಳು ಎಂದು ಸಮಾಧಾನದಿಂದ ಮಾತನಾಡುತ್ತಾರೆ. ಅದೇ ಭಾರ್ಗವಿ ರಾಮನಿಗೆ ಮನದಲ್ಲೇ ಹೇಳುತ್ತಾಳೆ. ನಿನ್ನ ಗುಂಡಿಯನ್ನು ನೀನೇ ತೆಗೆದುಕೊಳ್ಳುತ್ತಿದ್ದೀಯಾ. ಈದರಿಂದ ನನ್ನ ಕೆಲಸ ಸುಲಭವಾಗುತ್ತಿದೆ ಎಂದು ಹೇಳಿಕೊಳ್ಳುತ್ತಾಳೆ. ಸೂರಿ ಸಿಹಿಗೆ ಸಕ್ಕರೆ ಖಾಯಿಲೆ ಇದೆ ಎಂದು ಯೋಚಿಸುತ್ತಿರುವಾಗ ಭಾರ್ಗವಿ ಬಂದು ಸೀತಾ ಇಂತಹ ವಿಚಾರವನ್ನೆಲ್ಲಾ ಮುಚ್ಚಿಟ್ಟಿದ್ದು ತಪ್ಪು ಎಂಬಂತೆ ಮಾತನಾಡುತ್ತಾಳೆ.
ವಠಾರಕ್ಕೆ ಬಂದ ಸಿಹಿ ಕುಟುಂಬ
ಸಿಹಿ ಮತ್ತು ಸೀತಾಳಿಗೆ ಸರ್ಪ್ರೈಸ್ ಕೊಡಲು ರಾಮ್ ವಠಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾನೆ. ಸಿಹಿಯೂ ಕೂಡ ವಠಾರಕ್ಕೆ ಬಂದು ಖುಷಿ ಪಟ್ಟಿದ್ದು, ಮೊದಲು ಸಿಹಿ ಮೂರ್ತಿ ಅಜ್ಜನ ಬಳಿ ಹೋಗುತ್ತಾಳೆ. ಶಾಂತಜ್ಜಿ ಮತ್ತು ಮೂರ್ತಿ ತಾತ ಸಿಹಿ ಅನ್ನು ತಬ್ಬಿಕೊಂಡು ಮುದ್ದಾಡುತ್ತಾರೆ. ಇದು ಕನಸಾ ನನಸಾ ಎಂದು ಮಾತನಾಡುತ್ತಾ ಖುಷಿಪಡುತ್ತಾರೆ. ಸಿಹಿ ಮತ್ತು ಸೀತಾ ತಮ್ಮ ಮನೆಯನ್ನು ನೋಡಲೆಂದು ಅವರ ಮನೆಗೆ ಹೋಗುತ್ತಾರೆ. ಆಗ ಸೀತಾ ಆ ಮನೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಆ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಾಲೆ. ರಾಮ್ ಕೂಡ ಈ ಮನೆಯನ್ನು ನಾನೂ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಸಿಹಿ ಗೆಳೆಯರೊಂದಿಗೆ ಆಟವಾಡಲು ಹೋಗುತ್ತಾಳೆ.

ರಾಮ್ ಬಳಿ ಹಣ ಕೇಳಿದ ಸುಲೋಚನಾ
ವಠಾರಕ್ಕೆ ಸುಲೋಚನಾ ಬರುತ್ತಾಳೆ. ಅಜ್ಜಿ ತಾತನನ್ನು ಮಾತನಾಡಿಸುವಾಗ, ಅಜ್ಜಿ ಬಾಯಿತಪ್ಪಿ ಸೀತಾ ಹೆಸರಿಗೆ ರಾಮ್ ಮನೆಯನ್ನು ಬರೆದ ಬಗ್ಗೆ ಹೇಳುತ್ತಾಳೆ. ತಕ್ಷಣವೇ ಸುಲೋಚನಾ ಆ ಮನೆಯನ್ನು ತನಗೆ ಕೇಳಿ ಪಡೆಯಬೇಕು ಎಂದು ಸೀತಾ ಇರುವ ಕಡೆಗೆ ಹೋಗುತ್ತಾಳೆ. ಆಗ ರಾಮ್ ಬಳಿ ಬೇಕಂತಲೇ ನಾವು ಈ ಮನೆಯಲ್ಲಿ ಇದ್ದಿದ್ದರೆ, ಚೆನ್ನಾಗಿರುತ್ತಿತ್ತು. ಈಗ ಬಾಡಿಗೆ ಜಾಸ್ತಿ ಮಾಡಿದ್ದಾರೆ ಎಂದು ನೊಂದುಕೊಂಡವಳಂತೆ ನಟಿಸುತ್ತಾಳೆ. ರಾಮ್ ಏನಾದರೂ ಸಹಾಯ ಬೇಕಿದ್ದರೆ ಕೇಳಿ ಎಂದಕೂಡಲೇ ಐವತ್ತು ಸಾವಿರ ಬೇಕು ಎನ್ನುತ್ತಾಳೆ. ಇದಕ್ಕೆ ರಾಮ್ ಒಪ್ಪುತ್ತಾನೆ. ಆದರೆ, ಸೀತಾಳಿಗೆ ಇಷ್ಟವಾಗುವುದಿಲ್ಲ.


Click it and Unblock the Notifications











