Seetha Rama ; ಸೀತಾ ಮತ್ತು ಸಿಹಿಯ ರಹಸ್ಯ ಬಯಲು ಮಾಡ್ತಾಳಾ ಅನಂತ ಲಕ್ಷ್ಮೀ ?

By ಪ್ರಿಯಾ ದೊರೆ

ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಹಾಗೂ ರಾಮ್ ಮನೆಯವರು ಶಾಪಿಂಗ್ ಗೆ ಎಂದು ಬಂದಿದ್ದಾರೆ. ಕಾಸ್ಟ್ಲಿ ಸೀರೆಗಳನ್ನು ನೋಡಿ ಸೀತಾ ಗೊಂದಲಗೊಂಡಿದ್ದಾಳೆ. ಬಳಿಕ ದೇಸಾಯಿ ಕುಟುಂಬಕ್ಕೆ ಹೊಂದುವಂತಹ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ರಾಮ್ ಗೆ ಸೀತಾ, ಸೀತಾಳಿಗೆ ರಾಮ್ ಬಟ್ಟೆಯನ್ನು ಸೆಲೆಕ್ಟ್ ಮಾಡುತ್ತಾರೆ. ಸೀತಾ ಖುಷಿಯಾಗಿರುವ ಸಂದರ್ಭದಲ್ಲೇ ಆತಂಕವೊಂದು ಎದುರಾಗಿದೆ. ಬಟ್ಟೆ ಅಂಗಡಿಯಲ್ಲಿ ಭಾರ್ಗವಿ ಕುಟುಂಬಕ್ಕೆ ಪರಿಚಯ ಇರುವವರನ್ನು ಕಂಡು ನಿಬ್ಬೆರಗಾಗಿದ್ದಾಳೆ.


ಅನಂತ ಲಕ್ಷ್ಮೀ ನೋಡಿ ಗಾಬರಿಯಾದ ಸೀತಾ

ಡಾಕ್ಟರ್ ಅನಂತಲಕ್ಷ್ಮೀ ಭಾರ್ಗವಿ ಮನೆಯವರಿಗೆ ಬಹಳ ಪರಿಚಯವಿದೆ. ಬಟ್ಟೆ ಅಂಗಡಿಯಲ್ಲಿ ಅಕಸ್ಮಾತ್ ಆಗಿ ಭೇಟಿ ಆಗುತ್ತಾರೆ. ಆದರೆ, ಸೀತಾಳಿಗೆ ಅವರನ್ನು ಕಂಡು ಗಾಬರಿಯಾಗುತ್ತದೆ. ವಾಶ್ ರೂಮ್ ಗೆ ಹೋಗಿ ಬಚ್ಚಿಟ್ಟುಕೊಳ್ಳುತ್ತಾಳೆ. ತನ್ನ ಹಾಗೂ ಸಿಹಿಯ ರಹಸ್ಯ ಇವರಿಂದ ಬಯಲಾಗಬಹುದು ಎಂದು ಆತಂಕಕ್ಕೆ ಒಳಗಾಗುತ್ತಾಳೆ. ಸೀತಾಳಲ್ಲಿ ಬದಲಾವಣೆ ಆಗಿದ್ದನ್ನು ಕಂಡ ರಾಮ್ ಏನಾಯ್ತು ಎಂದು ಕೇಳುತ್ತಾನೆ. ಆದರೆ, ಸೀತಾ ಸತ್ಯ ಹೇಳುವುದಿಲ್ಲ. ಅಲ್ಲಿಂದ ಇಬ್ಬರೂ ಒಡವೆ ಅಂಗಡಿಗೆ ಹೋಗಿ ಮಾಂಗಲ್ಯ ಸರ ಹಾಗೂ ಒಡವೆಗಳನ್ನು ಖರೀದಿ ಮಾಡುತ್ತಾರೆ. ನಂತರ ಮನೆಗೆ ಬಂದು ಸೀತಾ ರೆಸ್ಟ್ ಮಾಡುತ್ತಾಳೆ.

Seetharama Serial 19 June episode written update

ಗ್ರ್ಯಾಂಡ್ ಇನ್ವಿಟೇಷನ್ ರೆಡಿ

ಇನ್ನು ಭಾರ್ಗವಿ ಮನೆಯಲ್ಲಿ ಇನ್ವಿಟೇಷನ್ ಸಿದ್ಧವಾಗಿದೆ. ಒಂದು ಬಾಕ್ಸ್ ನಲ್ಲಿ ಬಾದಾಮಿ, ಗೋಡಂಬಿ, ದ್ರಾಕ್ಷಿಯನ್ನು ತುಂಬಿ, ಅದರ ಜೊತೆಗೆ ಇನ್ವಿಟೇಷನ್ ಇಟ್ಟು, ಸೀರೆ, ಪಂಚೆ, ಬೆಳ್ಳಿ ಅರಿಶಿನ-ಕುಂಕುಮದ ಬಟ್ಟಲು, ಒಂದು ಚಿನ್ನದ ನಾಣ್ಯವನ್ನು ಇಟ್ಟು ರಾಮ್ ಮದುವೆಗೆ ಆಹ್ವಾನಿಸಲು ತಯಾರಿ ನಡೆಸಿರುತ್ತಾರೆ. ದೇಸಾಯಿ ಕುಟುಂಬದ ಮೊಮ್ಮಗನ ಮದುವೆಗೆ ಅದ್ಧೂರಿ ತಯಾರಿಯನ್ನೇ ಭಾರ್ಗವಿ ಮಾಡಿದ್ದಾಳೆ. ವೈಭೋಗದಿಂದ ರಾಮ್ ಮದುವೆ ಮಾಡಬೇಕು. ವಾಣಿ ಇದ್ದಿದ್ದರೆ, ತನ್ನ ಮಗನ ಮದುವೆಯನ್ನು ಹೇಗೆ ಮಾಡಲು ಬಯಸಿರುತ್ತಿದ್ದಳೊ ಅದಕ್ಕಿಂತಲೂ ಅಧಿಕವಾಗಿ ರಾಮ್ ಮದುವೆಯನ್ನು ನೆರವೇರಿಸಬೇಕು ಎಂಬುದು ಭಾರ್ಗವಿಯ ಆಲೋಚನೆ.

ಸೀತಾ ಮನೆಯವರನ್ನು ಆಹ್ವಾನಿಸಿದ ಭಾರ್ಗವಿ

ಸೀತಾ ಮನೆಗೆ ಮೊದಲ ಆಹ್ವಾನ ಪತ್ರಿಕೆಯನ್ನು ನೀಡಬೇಕು ಎಂದು ಭಾರ್ಗವಿ ಮತ್ತು ಸಾಧನಾ ಬರುತ್ತಾರೆ. ಮೊದಲು ಶಾಂತಜ್ಜಿ ಹಾಗೂ ಮೂರ್ಗತಿ ತಾತನಿಗೆ ಪತ್ರಿಕೆ ನೀಡಿ ಆಹ್ವಾನಿಸುತ್ತಾರೆ. ಬಳಿಕ ಸಲೋಚನಾಳಿಗೆ ನೀಡುತ್ತಾರೆ. ಅಷ್ಟೇ ಅಲ್ಲದೇ, ಸೀತಾಳ ವಠಾರದಲ್ಲಿರುವವರಿಗೆಲ್ಲಾ ಆಹ್ವಾನ ಪತ್ರಿಕೆಯನ್ನು ಇಷ್ಟೇ ಅದ್ಧೂರಿಯಾಗಿ ನೀಡಿ ಆಹ್ವಾನ ಮಾಡುತ್ತಾರೆ. ಇದನ್ನು ನೋಡಿದವರೆಲ್ಲಾ ಖುಷಿ ಪಡುತ್ತಾರೆ.

Seetharama Serial 19 June episode written update


ಅಣ್ಣ ಮತ್ತು ಪ್ರೀತಿ ನಡುವೆ ಸಿಲುಕಿದ ಅಂಜಲಿ

ಅಂಜಲಿ ಮನೆಗೆ ಪೇಪರ್ ಬಿಲ್ ಎಂದು ಹೇಳಿಕೊಂಡು ರುದ್ರಪ್ರತಾಪ್ ಬರುತ್ತಾನೆ. ಅಂಜಲಿ ಬಾಗಿಲು ತೆಗೆದಾಗ ನಾಳೆ ಶುಕ್ರವಾರವೇ ನನ್ನ ನಿನ್ನ ಮದುವೆ. ದೇವಸ್ಥಾನಕ್ಕೆ ತಪ್ಪದೇ ಬಂದು ಬಿಡು. ಬಾರದೇ ಹೋದರೆ, ನನ್ನನ್ನು ಹಾಗೂ ನನ್ನ ಪ್ರೀತಿಯನ್ನು ಮರೆತು ಬಿಡು ಎಂದು ಹೇಳುತ್ತಾನೆ. ಅಂಜಲಿ ರುದ್ರಪ್ರತಾಪ್ ಮಾತನ್ನು ಕೇಳಿ ಶಾಕ್ ಆಗುತ್ತಾಳೆ. ಆರ್ ಪಿ ಬೇಕಂತಲೇ ಫೋನ್ ಮಾಡಿಯೂ ಕೂಡ ಅಂಜಲಿಗೆ ಶುಕ್ರವಾರ ಮರೆಯದೇ ಬಾ ಎಂದು ಕರೆಯುತ್ತಾನೆ. ಇದು ಅಂಜಲಿಗೆ ಗೊಂದಲವನ್ನುಂಟು ಮಾಡುತ್ತದೆ. ಶುಕ್ರವಾರ ಮನೆಯವರಿಗೆ ಹೇಳದೇ ಪ್ರೀತಿ ಉಳಿಸಿಕೊಳ್ಳು ಮದುವೆಯಾಗಬೇಕಾ ಇಲ್ಲ ಅಣ್ಣನ ಮದುವೆಗೆ ಹೋಗಿ ಸಂಬಂಧ ಉಳಿಸಿಕೊಳ್ಳಬೇಕಾ ಎಂದು ಆತಂಕಕ್ಕೆ ಒಳಗಾಗಿದ್ದಾಳೆ. ರುದ್ರಪ್ರತಾಪ್ ಸೀತಾ ಮತ್ತು ರಾಮ್ ಮದುವೆ ನಡೆಯಬಾರದು, ಅಂಜಲಿಗೆ ತಾಳಿ ಕಟ್ಟಿದರೆ, ರಾಮ್ ಮದುವೆ ನಿಂತು ಹೋಗುತ್ತೆ ಎಂದು ಭಾವಿಸಿ ಈ ತೀರ್ಮಾನಕ್ಕೆ ಬಂದಿದ್ದಾನೆ.

More from Filmibeat

English summary
rudraprathap talks with anjali to marry and warns her
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X